ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

Written By:

ಹೊಚ್ಚ ಹೊಸ ಔಟ್‌ಲ್ಯಾಂಡರ್ ಕಾರನ್ನು ಮಿಟ್ಸುಬಿಷಿ ಇಂಡಿಯಾ ಕಂಪನಿಯು ತನ್ನ ಅಧಿಕೃತ ವೆಬ್‌ಸೈಟ್‌ನ ಮಾರಾಟ ಪಟ್ಟಿಯಲ್ಲಿ ನಮೂದಿಸಿದ್ದು, ಈ ಕಾರಿನ ಬಿಡುಗಡೆಯು ಸನ್ನಿಹಿತವಾಗಿದೆಯೇ ಎಂಬ ಊಹಾಪೋಹ ವ್ಯಕ್ತವಾಗಿದೆ.

To Follow DriveSpark On Facebook, Click The Like Button
ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಮಿಟ್ಸುಬಿಷಿ ಇಂಡಿಯಾ ಕಂಪನಿಯು ಈ ಔಟ್‌ಲ್ಯಾಂಡರ್ ಕಾರನ್ನು"ಡೈನಮಿಕ್ ಶೀಲ್ಡ್" ಫ್ರಂಟ್ ಪ್ರೊಫೈಲ್ ಡಿಸೈನ್ ಭಾಷೆಯಡಿಯಲ್ಲಿ ನಿರ್ಮಿಸಲಾಗಿದ್ದು, ಕಾರಿನ ಮುಂಭಾಗವು ಏರೊಡೈನಮಿಕ್ ಆಕೃತಿ ಪಡೆದುಕೊಂಡಿದೆ ಮತ್ತು ಮೇಲ್ಛಾವಣಿಯು ಡ್ರ್ಯಾಗ್ ಆಗುವ ಸಂಭವವನ್ನು ಶೇಕಡಾ 7% ರಷ್ಟು ಕಡಿಮೆಗೊಳಿಸುವ ಹಾಗೆ ವಿನ್ಯಾಸಗೊಳಿಸಲಾಗಿದೆ.

ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಈ ಕಾರು ಕ್ರೋಮ್ ವಿನ್ಯಾಸ ಪಡೆದುಕೊಂಡಿರುವ ಟ್ವಿನ್-ಸ್ಲಾಟ್ ಫ್ರಂಟ್ ಗ್ರಿಲ್ ಹೊಂದಿದೆ ಹಾಗು ಈ ಗ್ರಿಲ್‌ನ ತುದಿಯಲ್ಲಿ ಪರಿಷ್ಕೃತ ಹೆಡ್‌ಲ್ಯಾಂಪ್‌ಗಳನ್ನು ಕಾಣಬಹುದಾಗಿದೆ.

ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಸೆಂಟರ್ ಕನ್ಸೋಲ್ ಸುತ್ತಲೂ ಇರುವಂತಹ ಹೊಸ ಔಟ್ಲ್ಯಾಂಡರ್ ಪಿಯಾನೊ ಕಪ್ಪು ಟ್ರಿಮ್ ಪಡೆದಿರುವ ಈ ಕಾರು, ಒಳಭಾಗದಲ್ಲಿ ಹೆಚ್ಚು ಬದಲಾವಣೆಗಳನ್ನು ಹೊಂದಿರಲಿದೆ ಎಂಬ ಮಾಹಿತಿ ಡ್ರೈವ್ ಸ್ಪಾರ್ಕ್‌ಗೆ ಲಭ್ಯವಾಗಿದೆ.

ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಸಿವಿಟಿ ಗೇರ್‌ಬಾಕ್ಸ್, ಪೆಡಲ್ ಶಿಫ್ಟರ್ ಹಾಗು ಹೊಸ ರೀತಿಯ ಕ್ರೀಡಾ ಪ್ರವೃತಿ ಪಡೆದುಕೊಂಡಿರುವ ಈ ಕಾರಿನ ಕೆಲವೊಂದು ಮಾಹಿತಿಗಳನ್ನು ಅಥವಾ ವೈಶಿಷ್ಟ್ಯಗಳನ್ನು ಈಗಾಗಲೇ ಕಂಪನಿಯು ಬಹಿರಂಗಪಡಿಸಿದೆ.

ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಇದಲ್ಲದೆ, ಈ ಹೊಸ ಎಸ್‌ಯುವಿ ಕಾರು ವಿದ್ಯುತ್ ಸಹಾಯದಿಂದ ನಿಯಂತ್ರಣ ಮಾಡಬಹುದಾದ ನಾಲ್ಕು ಚಕ್ರ ಚಾಲನಾ ವ್ಯವಸ್ಥೆ, ಎಬಿಎಸ್ ಜೊತೆ ಇಬಿಡಿ, ಸಕ್ರಿಯ ಸ್ಥಿರತೆಯ ನಿಯಂತ್ರಣ, ಹಿಲ್ ಸ್ಟಾರ್ಟ್ ಸಹಾಯ, ಎಲೆಕ್ಟ್ರಾನಿಕ್ ಪಾರ್ಕಿಂಗ್ ಬ್ರೇಕ್ ಹಾಗು ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು ಎನ್ನಲಾಗಿದೆ.

ಮಿಟ್ಸುಬಿಷಿ ಇಂಡಿಯಾ ಅಧಿಕೃತ ವೆಬ್‌ಸೈಟ್‌ನ ಪಟ್ಟಿಯಲ್ಲಿ ಸ್ಥಾನ ಪಡೆದ ಔಟ್‌ಲ್ಯಾಂಡರ್

ಹೆಚ್ಚುವರಿಯಾಗಿ, ಔಟ್‌ಲ್ಯಾಂಡರ್ ಕಾರು ಸ್ವಯಂಚಾಲಿತ ಹೆಡ್‌ಲ್ಯಾಂಪ್‌ಗಳು, ಮಳೆ ಸಂವೇದಕ ವೈಪರ್‌ಗಳು, ಎಲ್ಇಡಿ ಹೆಡ್ ಲ್ಯಾಂಪ್‌ಗಳು, ಫಾಗ್ ದೀಪಗಳು, 6.1-ಇಂಚಿನ ಟಚ್‌ಸ್ಕ್ರೀನ್, ಡ್ಯುಯಲ್-ಝೋನ್ ಸ್ವಯಂಚಾಲಿತ ಹವಾಮಾನ ನಿಯಂತ್ರಣ ಮತ್ತು ಕೀಲಿರಹಿತ ಪ್ರವೇಶ ಮತ್ತು 6.1-ಇಂಚಿನ ಟಚ್‌ಸ್ಕ್ರೀನ್ ಪರದೆ ಜೊತೆಗೆ ರೋಕ್ಫೊರ್ಡ್ ಫೋಸ್‌ಗೇಟ್ ಆಡಿಯೋ ಸಿಸ್ಟಮ್ ಸೌಲಭ್ಯ ಹೊಂದಿದೆ.

English summary
Mitsubishi India has listed the new Outlander SUV on its website giving rise to the speculation of its imminent launch in India.
Story first published: Tuesday, August 22, 2017, 17:30 [IST]
Please Wait while comments are loading...

Latest Photos