ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

Written By:

ಫೋಕ್ಸ್‌ವ್ಯಾಗೆನ್ ಸಂಸ್ಥೆಯು ತನ್ನ ಐಷಾರಾಮಿ ಪ್ರೀಮಿಯಂ ಸೆಡಾನ್ ಕಾರಿನ ಉತ್ಪಾದನೆಯನ್ನು ಮಹಾರಾಷ್ಟ್ರದ ಔರಂಗಾಬಾದ್ ಘಟಕದಲ್ಲಿ ಪ್ರಾರಂಭಿಸಿದೆ, ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

ಜಾಗತಿಕ ಮಟ್ಟದ ಕಾರುಗಳನ್ನು ಭಾರತದಲ್ಲಿ ಪರಿಚಯಿಸುವ ಆವೇಗವನ್ನು ಮುಂದುವರೆಸಿಕೊಂಡು ಹೋಗುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಫೋಕ್ಸ್‌ವ್ಯಾಗೆನ್ ಸಂಸ್ಥೆ, ಈ ವರ್ಷ ತನ್ನ ಹೊಚ್ಚ ಹೊಸ ಪಸ್ಸಾಟ್ ಕಾರನ್ನು ಅನಾವರಣಗೊಳಿಸಿದ್ದು, ಎಂಕ್ಯೂಬಿ ಪ್ಲಾಟ್‌ಫಾರಂ ಆಧಾರಿತ ಮೊದಲ ಸೆಡಾನ್ ಎಂಬ ಶೆಯಸ್ಸನ್ನು ತನ್ನದಾಗಿಸಿಕೊಂಡಿದೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

ಸೆಡಾನ್ ವಿಭಾಗದಲ್ಲಿ ಪ್ರೀಮಿಯಂ ಡ್ರೈವಿಂಗ್ ಅನುಭವವನ್ನು ನೀಡುವ ಮೂಲಕ ಐಷಾರಾಮಿ ಸಮಸ್ಕೃತಿಗೆ ಮರುಜೀವಕೊಡಲು ಪಸ್ಸಾಟ್ ಭಾರತಕ್ಕೆ ಬರಲಿದ್ದು, ಬ್ರ್ಯಾಂಡ್ ಪರಂಪರೆಯನ್ನು ಎತ್ತಿ ಹಿಡಿಯಲಿದೆ ಎನ್ನಲಾಗಿದೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

ಪಸ್ಸಾಟ್ ಸೆಡಾನ್ ಕಾರು 2-ಲೀಟರ್ ಡೀಸಲ್ ಎಂಜಿನ್ ಬಲದೊಂದಿಗೆ 174 ಬಿಎಚ್‌ಪಿ ಶಕ್ತಿ ಉತ್ಪಾದಿಸಲಿದ್ದು, ಈ ಕಾರಿನ ಎಂಜಿನ್ 6-ಸ್ಪೀಡ್ ಡಿಎಸ್‌ಜಿ ಸ್ವಯಂಚಾಲಿತ ಗೇರ್ ಬಾಕ್ಸ್ ಅಳವಡಿಕೆಯೊಂದಿಗೆ ಬಿಡುಗಡೆಯಾಗಲಿದೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

ಹೊಸ ಪಸ್ಸಾಟ್ ಕಾರು, ಕಾರ್ಯಕ್ಷಮತೆ, ದಕ್ಷತೆ, ಐಷಾರಾಮಿ ಮತ್ತು ಅತ್ಯಂತ ಮುಖ್ಯವಾಗಿ ಸುರಕ್ಷತೆಯ ಒಂದು ಪರಿಪೂರ್ಣ ಮಿಶ್ರಣದ ಅನುಭವ ನೀಡಲಿದೆ ಎನ್ನುವುದು ಕಂಪನಿಯ ವಿವರಣೆಯಾಗಿದೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

"ಅತ್ಯಂತ ಯಶಸ್ವಿ ಪ್ರೀಮಿಯಂ ಐಷಾರಾಮಿ ಉತ್ಪನ್ನಗಳಲ್ಲಿ ಒಂದಾಗಿರುವ ಪಸ್ಸಾಟ್ ಕಾರನ್ನು ಭಾರತೀಯ ಮಾರುಕಟ್ಟೆಗೆ ಮರಳಿ ಪರಿಚಯಿಸಲು ಹೆಚ್ಚು ಉತ್ಸುಕರಾಗಿದ್ದು, ಈ ಕಾರಿನ ಪರಿಚಯದೊಂದಿಗೆ ನಾವು ನಮ್ಮ ಪೋರ್ಟ್‌ಫೋಲಿಯೋವನ್ನು ವಿಸ್ತರಿಸಲು ಇಚ್ಛಿಸುತ್ತೇವೆ" ಎಂದು ಫೋಕ್ಸ್‌ವ್ಯಾಗೆನ್ ಇಂಡಿಯಾದ ಪ್ಯಾಸೆಂಜರ್ ಕಾರುಗಳ ನಿರ್ದೇಶಕ, ಸ್ಟೆಫೆನ್ ನ್ಯಾಪ್ ತಿಳಿಸಿದ್ದಾರೆ.

ಮತ್ತೆ ಬರ್ತಿದೆ ಫೋಕ್ಸ್‌ವ್ಯಾಗೆನ್ ಸಂಸ್ಥೆಯ ಐಷಾರಾಮಿ ಸೆಡಾನ್ 'ಪಸ್ಸಾಟ್'

ಅಂತಿಮವಾಗಿ, ಹೊಸ ಪಸ್ಸಾಟ್ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸುವುದಾಗಿ ಫೋಕ್ಸ್‌ವ್ಯಾಗೆನ್ ಇಂಡಿಯಾ ಬಹಿರಂಗಪಡಿಸಿದೆ. ಎಂಕ್ಯೂಬಿ ಪ್ಲಾಟ್‌ಫಾರಂ ಆಧಾರಿತ ಮೊದಲ ಸೆಡಾನ್ ಇದಾಗಿದ್ದು, ಹೋಂಡಾ ಅಕಾರ್ಡ್, ಸ್ಕೋಡಾ ಸುಪರ್ಬ್ ಮತ್ತು ಟೊಯೋಟಾ ಕ್ಯಾಮ್ರಿ ಕಾರುಗಳೊಂದಿಗೆ ಸ್ಪರ್ಧೆ ನೆಡೆಸಲಿದೆ.

English summary
Volkswagen has announced the start of production of its premium luxury sedan, Passat at its Aurangabad facility in Maharashtra.
Story first published: Thursday, September 21, 2017, 11:07 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark