ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

Written By:

ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಟ್ರಕ್ ಹರಿದು 9 ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಂಜಾಬ್‍ನ ಬತಿಂಡಾ ಜಿಲ್ಲೆಯಲ್ಲಿ ನಡೆದಿದ್ದು, ದಟ್ಟ ಮಂಜು ಹಿನ್ನೆಲೆ ಈ ದುರಂತ ಸಂಭವಿಸಿದೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ದಟ್ಟವಾದ ಮಂಜು ಕವಿದಿದ್ದರಿಂದ ಟ್ರಕ್‍ನ ಚಾಲಕನಿಗೆ ರಸ್ತೆ ಬದಿಯಲ್ಲಿ ನಿಂತಿದ್ದ 16 ವಿದ್ಯಾರ್ಥಿಗಳನ್ನ ಗುರುತಿಸಲು ಸಾಧ್ಯವಾದ ಹಿನ್ನೆಲೆ ವಿದ್ಯಾರ್ಥಿಗಳ ಮೇಲೆಯೇ ಟ್ರಕ್ ಹರಿಸಿದ್ದಾನೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಪರಿಣಾಮ 9 ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಈ ಭೀಕರ ಅಪಘಾತವು ಪಂಜಾಬ್‌ನ ಬಾತಿಂಡ-ಬರ್ನಾಲಾ ಹೆದ್ದಾರಿಯ ಬಚ್ಚೊ ಮಂಡಿ ಟೌನ್‍ನಲ್ಲಿ ಸಂಭವಿಸಿದೆ.

Recommended Video - Watch Now!
[Kannada] Tata Tiago XTA AMT Launched In India - DriveSpark
ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಇನ್ನು ಅಪಘಾತದಲ್ಲಿ 7 ವಿದ್ಯಾರ್ಥಿಗಳು ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ನಡೆದ ಸಮಯದಲ್ಲಿ ದಟ್ಟ ಮಂಜು ಇದ್ದ ಕಾರಣದಿಂದ ರಕ್ಷಣಾ ಕಾರ್ಯಾಚರಣೆ ಮಾಡಲು ಅಡ್ಡಿಯಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಇತ್ತ ದಟ್ಟ ಮಂಜು ಹಿನ್ನೆಲೆ ಆಗ್ರಾ-ನೋಯ್ಡಾ ಸಂಪರ್ಕಿಸುವ ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ 18 ವಾಹನಗಳು ಒಂದರ ಹಿಂದೆ ಒಂದು ಡಿಕ್ಕಿ ಹೊಡೆದ ಪರಿಣಾಮ ಭೀಕರ ಅಪಘಾತಕ್ಕೀಡಾದ ಘಟನೆ ನಡೆದಿದ್ದು, ಸರಣಿ ಅಪಘಾತದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಉತ್ತರ ಪ್ರದೇಶದ ಮಥುರಾ ಹಾಗೂ ಆಗ್ರಾ ಬಳಿಯ ಬಲ​ದೇವ್​ ಮಂದಿರದ ಬಳಿ ಈ ಭೀಕರ ದೃಶ್ಯ ಕಂಡುಬಂದಿದ್ದು, ಕಾರ್‌ ಚಾಲಕನೋರ್ವನ ಬೇಕಾಬಿಟ್ಟಿ ಚಾಲನೆಯಿಂದ ಸಂಭವಿಸಿದ ಅಪಘಾತದಲ್ಲಿ 18 ವಾಹನಗಳು ಒಂದರ ಹಿಂದೆ ಒಂದಂತೆ ಡಿಕ್ಕಿಯಾಗಿದೆ.

ತಪ್ಪದೇ ಓದಿ- ಸ್ಪ್ಲೆಂಡರ್ ಪ್ಲಸ್ ಬೈಕಿಗೆ 10,800 ರೂ ದಂಡ ಹಾಕಿದ್ರು !! ನಗರದಲ್ಲಿ ನಡೀತಿದೆ 'ಆಪರೇಷನ್‌ ಚೀತಾ'

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಘಟನೆಯಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು ಸ್ಥಳಕ್ಕೆ ಪೊಲೀಸರು ಆಗಮಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್‌ ಆಗಿದೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಇದಲ್ಲದೇ ದಟ್ಟ ಮಂಜಿನಿಂದಾಗಿ ದಿಲ್ಲಿಯಲ್ಲಿ 30 ರೈಲು ಹಾಗೂ 30 ವಿಮಾನಗಳ ಹಾರಾಟದ ಸಮಯದಲ್ಲಿ ವ್ಯತ್ಯಯ ಕಂಡು ಬಂದಿದ್ದು, ಮುಂದಿನ 48 ಗಂಟೆಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆಗಳಿವೆ ಎನ್ನಲಾಗಿದೆ.

ದಟ್ಟ ಮಂಜು- ಟ್ರಕ್ ಹರಿದು 9 ವಿದ್ಯಾರ್ಥಿಗಳು ಸ್ಥಳದಲ್ಲೇ ದುರ್ಮರಣ

ಪಂಜಾಬ್‌, ಹರಿಯಾಣ, ಚಂಧೀಗಢ, ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲೂ ಹವಾಮಾನ ವೈಪರೀತ್ಯ ಉಂಟಾಗಿದ್ದು, ಹೆದ್ದಾರಿಗಳಲ್ಲಿ ವಾಹನಗಳ ಓಡಾಟವೇ ದುಸ್ತರವಾಗಿದೆ.

Trending On DriveSpark Kannada:

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಡಿಸೆಂಬರ್ 1ರ ನಂತರ ಟೋಲ್‌ಗಳಲ್ಲಿ ಕಾರುಗಳು ಕಾಯುವ ಹಾಗಿಲ್ಲ !!

100 ಸಿಸಿ ಬೈಕ್ ವಿಚಾರದಲ್ಲಿ ಕೊನೆಗೂ ಸಾರ್ವಜನಿಕರ ವಿರೋಧಕ್ಕೆ ಮಣಿದ ರಾಜ್ಯ ಸರ್ಕಾರ..!!

Read more on accident ಅಪಘಾತ
English summary
Read in Kannada: Nine Students Killed as Truck Crushes Them in Punjabs Bathinda District.
Story first published: Wednesday, November 8, 2017, 18:23 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark