ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಜಪಾನ್ ವಾಹನ ತಯಾರಕರ ಕಂಪನಿಯಯಾದ ನಿಸ್ಸಾನ್, ಭಾರತದಲ್ಲಿ ಮುಂದಿನ ವರ್ಷದ ಜನವರಿಯಿಂದ ಭಾರತದಲ್ಲಿ ತನ್ನ ಎಲ್ಲಾ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

By Girish

ನಿಸ್ಸಾನ್ ಇಂಡಿಯಾ ಸಂಸ್ಥೆಯು ತನ್ನ ಎಲ್ಲಾ ಮಾದರಿಗಳ ಬೆಲೆಗಳನ್ನು ನಿಸ್ಸಾನ್ ಮತ್ತು ಡಾಟ್ಸನ್ ಬ್ರಾಂಡಿನಡಿಯಲ್ಲಿ ಸುಮಾರು ರೂ.15,000 ಗಳಷ್ಟು ಹೆಚ್ಚಿಸುತ್ತದೆ. ಈ ಬೆಲೆ ಹೆಚ್ಚಳವು ಮುಂದಿನ ವರ್ಷದ ಜನವರಿಯಿಂದ ಜಾರಿಗೆ ಬರಲಿದೆ. ಬೆಲೆಯ ಹೆಚ್ಚಳವು ಮಾದರಿ ಮತ್ತು ಆವೃತಿಗಳ ಮೇಲೆ ಅವಲಂಬಿತವಾಗಿರುತ್ತದೆ.

ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಹೆಚ್ಚುತ್ತಿರುವ ಇನ್‌ಪುಟ್ ಮತ್ತು ಉತ್ಪಾದನಾ ವೆಚ್ಚದ ಆಧಾರದ ಮೇಲೆ ಈ ಬೆಲೆಗಳನ್ನು ಹೆಚ್ಚಿಸಲು ನಿಸ್ಸಾನ್ ಸಂಸ್ಥೆಯು ನಿರ್ಧರಿಸಿದೆ. ನಿಖರ ಬೆಲೆ ತಿಳಿದುಕೊಳ್ಳಲು ಜನವರಿಯವರೆಗೆ ಕಾಯಬೇಕಿದೆ.

ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಪ್ರಸ್ತುತ, ನಿಸ್ಸಾನ್ ಕಂಪನಿಯು ಹ್ಯಾಚ್ ಬ್ಯಾಕ್‌‌ನ ಮೈಕ್ರಾ, ಸೆಡಾನ್ ವಿಭಾಗದಲ್ಲಿ ಸನ್ನಿ ಮತ್ತು ಕಾಂಪ್ಯಾಕ್ಟ್ ಎಸ್‌ಯುವಿ ಟೆರಾನೊ ಸೇರಿದಂತೆ ಹಲವಾರು ಕಾರುಗಳನ್ನು ಭಾರತದಲ್ಲಿ ನಿಸ್ಸಾನ್ ಕಾರು ಚಿಲ್ಲರೆ ಮಾರಾಟ ಮಾಡುತ್ತಿದೆ.

ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಇದಲ್ಲದೆ, ಭಾರತದಲ್ಲಿ ನಿಸ್ಸಾನ್ ತನ್ನ ಪ್ರಮುಖ ಮಾದರಿಯಾದ ಜಿಟಿ-ಆರ್ ವಾಹನವನ್ನು ರಿಟೇಲ್ ಮಾಡುತ್ತದೆ. ಈ ಕಾರು ಭಾರತದಲ್ಲಿ ರೂ. 2 ಕೋಟಿ ಬೆಲೆಯಲ್ಲಿ ಮೂರ್ತವಾಗುತ್ತಿದೆ. ಡಾಟ್ಸನ್ ಬ್ರಾಂಡ್ ಅಡಿಯಲ್ಲಿ, ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಗೋ, ಗೋ+ ಮತ್ತು ರೆಡಿ-ಗೋ ಹ್ಯಾಚ್ ಬ್ಯಾಕ್‌ಗಳನ್ನು ಮಾರಾಟ ಮಾಡುತ್ತದೆ.

ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಕೇವಲ ನಿಸ್ಸಾನ್ ಸಂಸ್ಥೆಯೊಂದೇ ಈ ರೀತಿಯ ಬೆಲೆ ಏರಿಕೆ ಮಾಡುವ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮಹೀಂದ್ರಾ, ಸ್ಕೋಡಾ, ಫೋರ್ಡ್, ಜೀಪ್, ವೋಕ್ಸ್‌ವ್ಯಾಗನ್, ಟಾಟಾ ಮೋಟಾರ್ಸ್, ಇಝುಸು ಮತ್ತು ಟೊಯೊಟಾದಂತಹ ದೊಡ್ಡ ವಾಹನ ತಯಾರಕರು ಜನವರಿ 2018ರಿಂದ ಬೆಲೆಗಳನ್ನು ಹೆಚ್ಚಿಸಲಿವೆ.

ಜನವರಿಯಿಂದ ಕಾರುಗಳ ಬೆಲೆಯನ್ನು ಹೆಚ್ಚಿಸಲಿದ್ದೇವೆ; ನಿಸ್ಸಾನ್ ಇಂಡಿಯಾ

ಬಹುತೇಕ ವಾಹನ ಕಾರು ತಯಾರಕರು ವರ್ಷಾಂತ್ಯದ ರಿಯಾಯಿತಿಯನ್ನು ನೀಡುತ್ತಿರುವುದರಿಂದ ಗ್ರಹಕರು ಡಿಸೆಂಬರ್ ತಿಂಗಳಿನಲ್ಲಿ ತಮಗಿಷ್ಟವಾದ ಕಾರು ಖರೀದಿಸುವ ಮೂಲಕ ಬೆಲೆ ಹೆಚ್ಚಳವನ್ನು ತಪ್ಪಿಸಬಹುದು.

Most Read Articles

Kannada
English summary
Nissan India To Hike Prices Across The Range From 2018.
Story first published: Wednesday, December 20, 2017, 13:29 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X