ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

Written By:

ಐಷಾರಾಮಿ ಎಸ್‌ಯುವಿ ವಿಭಾಗಕ್ಕೆ ಮತ್ತೊಂದು ವಿನೂತನ ಕಾರು ಮಾದರಿಯನ್ನು ಪರಿಚಯಿಸಿರುವ ರೇಂಜ್ ರೋವರ್, ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ವೆಲರ್ ಎಸ್‌ಯುವಿ ಆವೃತ್ತಿಯನ್ನು ಬಿಡುಗಡೆ ಮಾಡುತ್ತಿದೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪೆಟ್ರೋಲ್ ಮತ್ತು ಡೀಸೆಲ್ ಎರಡೂ ಆವೃತ್ತಿಯಲ್ಲೂ ಲಭ್ಯವಿರಲಿರುವ ರೇಂಜ್ ರೋವರ್ ವೆಲರ್ ಕಾರುಗಳು, ಈಗಾಗಲೇ ಸಾಕಷ್ಟು ಪ್ರಮಾಣದ ಬುಕ್ಕಿಂಗ್ ಕೂಡಾ ಪಡೆದುಕೊಳ್ಳುವ ಮೂಲಕ ಭಾರೀ ನೀರಿಕ್ಷೆ ಹುಟ್ಟುಹಾಕಿವೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ಆದ್ರೆ ಬಿಡುಗಡೆಗೊಳ್ಳಲಿರುವ ವೆಲರ್ ಕಾರು ಖರೀದಿಗೆ ಸೆಪ್ಟಂಬರ್ ತನಕ ಕಾಯಬೇಕಿದ್ದು, ತದನಂತರವಷ್ಟೇ ಹೊಸ ಕಾರು ಗ್ರಾಹಕರ ಕೈ ಸೇರಲಿವೆ. ಇದಕ್ಕೆ ಕಾರಣ ಬೆಲೆಗಳನ್ನು ನಿಗದಿ ಮಾಡುವ ವಿಚಾರದಲ್ಲಿ ಕೆಲವು ತಾಂತ್ರಿಕ ಅಡಚಣೆ ಉಂಟಾಗಿದ್ದು,ಬುಕ್ಕಿಂಗ್ ಮುಂದುವರಿಸಲಾಗಿದೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ಉನ್ನತ ಶ್ರೇಣಿಯಲ್ಲಿ 3-ಲೀಟರ್ ವಿ6 ಡೀಸೆಲ್ ಎಂಜಿನ್ ಸಾಮರ್ಥ್ಯ ಹೊಂದಿರುವ ರೇಂಜ್ ರೋವರ್ ವೆರಲ್ ಆವೃತ್ತಿಯು 296-ಬಿಎಚ್‌ಪಿ ಮತ್ತು ಗರಿಷ್ಠ ಮಟ್ಟದ 700-ಎನ್ಎಂ ಟಾರ್ಕ್ ಉತ್ಪಾದನಾ ಶಕ್ತಿಯನ್ನು ಕೂಡಾ ಹೊಂದಿದೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ಅದೇ ರೀತಿಯಾಗಿ 2.0-ಲೀಟರ್ ಡಿಸೇಲ್ ಎಂಜಿನ್ ಮತ್ತು 2.0-ಲೀಟರ್ ಪೆಟ್ರೋಲ್ ಎಂಜಿನ್ ಆವೃತ್ತಿ ಕೂಡಾ ಲಭ್ಯವಿರಲಿದ್ದು, ಡೀಸೆಲ್ ಆವೃತ್ತಿಯು 177-ಬಿಎಚ್‌ಪಿ, 430ಎನ್ಎಂ ಟಾರ್ಕ್ ಮತ್ತು ಪೆಟ್ರೋಲ್ ಆವೃತ್ತಿ 246ಎನ್ಎಂ, 265ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ವೆಲರ್ ಪ್ರತಿ ಮಾದರಿಯಲ್ಲೂ 8-ಸ್ಪೀಡ್ ಗೇರ್‌ಬಾಕ್ಸ್ ವ್ಯವಸ್ಥೆ ಅಳವಡಿಸಲಾಗಿದ್ದು, ಆಲ್ ವೀಲ್ಹ್ ಡ್ರೈವ್‌ಟ್ರೈನ್, ಡ್ಯುಯಲ್ ಟೊನ್ಡ್ ಎಕ್ಸ್‌ಟಿರಿರ್ ಮತ್ತು ಎಬಿಎಸ್ ಸೇರಿದಂತೆ ಹಲವಾರು ತಂತ್ರಜ್ಞಾನ ವ್ಯವಸ್ಥೆಗಳನ್ನು ನೀಡಲಾಗಿದೆ.

ರೇಂಜ್ ರೋವರ್ ವೆಲರ್ ಎಸ್‌ಯುವಿ ಬಿಡುಗಡೆಗೆ ದಿನಗಣನೆ

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಸ್ಪೋರ್ಟ್ ಲುಕ್‌ನೊಂದಿಗೆ ಬಿಡುಗಡೆಗೊಳ್ಳಲಿರುವ ರೇಂಜ್ ರೋವರ್ ವೆಲರ್ ಆವೃತ್ತಿಯು ಆಡಿ ಕ್ಯೂ 7, ಬಿಎಂಡಬ್ಲ್ಯು ಎಕ್ಸ್5, ಮರ್ಸಿಡಿಸ್ ಬೆಂಝ್ ಜಿಎಲ್ಎ ಮತ್ತು ವೊಲ್ವೋ ಎಕ್ಸ್‌ಸಿ90 ಕಾರುಗಳಿಗೆ ಪ್ರತಿಸ್ಪರ್ಧಿಯಾಗಲಿದ್ದು, ಮೂಲಗಳ ಪ್ರಕಾರಗಳ ವೆಲರ್ ಕಾರುಗಳ ಬೆಲೆ ರೂ.1 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.

English summary
Read in Kannada about Range Rover Velar Launch in India.
Story first published: Tuesday, August 1, 2017, 12:45 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark