ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

Written By:

ರೇಂಜ್ ರೋವರ್ ಕಂಪನಿಯು ತನ್ನ ಐಷಾರಾಮಿ ವೆಲಾರ್ ಕಾರನ್ನು ಭಾರತದಲ್ಲಿ ಬಿಡುಗಡೆಗೊಳಿಸಿದೆ. ಈ ಹೊಸ ರೇಂಜ್ ರೋವರ್ ವೆಲಾರ್ ಕಾರು ರೂ.78.83 ಲಕ್ಷ ಎಕ್ಸ್ ಶೋರೂಂ(ಇಂಡಿಯಾ) ಬೆಲೆಯೊಂದಿಗೆ ಆರಂಭವಾಗಲಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ಈಗಾಗಲೇ ಈ ಕಾರಿನ ಬುಕಿಂಗ್ ಆರಂಭವಾಗಿದ್ದು, ಬುಕ್ ಮಾಡುವ ಗ್ರಾಹಕರಿಗೆ ಜನವರಿ 2018ರ ಅಂತ್ಯದ ವೇಳೆಗೆ ಕಾರಿನ ವಿತರಣೆಯನ್ನು ಮಾಡುವುದಾಗಿ ಕಂಪನಿ ಹೇಳಿಕೊಂಡಿದೆ. ವೆಲಾರ್ ಕಾರು ರೇಂಜ್ ರೋವರ್ ಕುಟುಂಬದ ನಾಲ್ಕನೆಯ ಮಾದರಿಯಾಗಿದ್ದು, ಈ ಕಾರು ರೇಂಜ್ ರೋವರ್ ಇವೊಕ್ಯೂ ಮತ್ತು ಸ್ಪೋರ್ಟ್ ಕಾರುಗಳ ನಡುವೆ ಸ್ಥಾನ ಪಡೆಯಲಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ಹೊಸ ರೇಂಜ್ ರೋವರ್ ವೆಲಾರ್ ಕಾರು, 2.0 ಲೀಟರ್ ಡೀಸೆಲ್ ಮತ್ತು 2.0 ಲೀಟರ್ ಪೆಟ್ರೋಲ್ ಮತ್ತು 3.0 ಲೀಟರ್ ಡೀಸೆಲ್ ಎಂಬ ಮೂರು ಪವರ್‌ಟ್ರೇನ್ ಆಯ್ಕೆಗಳೊಂದಿಗೆ ಲಭ್ಯವಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ವೆಲಾರ್ ಕಾರು ಬಹುತೇಕ ಕೂಪೆ ರೀತಿಯ ರೋಫ್‌ಲೈನ್ ಹೊಂದುವ ಮೂಲಕ ವ್ಯಾಪಕವಾದ ನಿಲುಗಡೆಗೆ ಒಳಪಡಿಸುತ್ತದೆ. ಆದರೆ, ಈ ಎಸ್‌ಯುವಿ ಕಾರೂ ಕೂಡ ರೇಂಜ್ ರೋವರ್ ಡಿಸೈನ್ ಭಾಷೆಯನ್ನು ಪಡೆಯುತ್ತದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ಮೇಲೆ ಹೇಳಿದಂತೆ, ರೇಂಜ್ ರೋವರ್ ವೆಲಾರ್ ಕಾರು ಎರಡು ಡೀಸೆಲ್ ಮತ್ತು ಒಂದು ಪೆಟ್ರೋಲ್ ಇಂಜಿನ್ ಆಯ್ಕೆಗಳೊಂದಿಗೆ ಬರುತ್ತದೆ. 2.0-ಲೀಟರ್ ನಾಲ್ಕು-ಸಿಲಿಂಡರ್ ಡೀಸೆಲ್ ಎಂಜಿನ್ ಕಾರು, 177 ಬಿಎಚ್‌ಪಿ ಉತ್ಪಾದಿಸುತ್ತದೆ, 3.0-ಲೀಟರ್ ವಿ6 ಎಂಜಿನ್ 296 ಬಿಎಚ್‌ಪಿ ಹೊರತೆಗೆಯುತ್ತದೆ. ಇನ್ನು, 2.0-ಲೀಟರ್ ಪೆಟ್ರೋಲ್ ಇಂಜಿನ್ 247 ಬಿಎಚ್‌ಪಿ ಉತ್ಪಾದಿಸುತ್ತದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ರೇಂಜ್ ರೋವರ್ ವೆಲಾರ್ ಕಾರು ಮೊದಲ ಆವೃತ್ತಿಯಾದ ಆರ್-ಡೈನಾಮಿಕ್ ಜೊತೆ ಎಸ್, ಎಸ್ಇ ಮತ್ತು ಎಚ್ಎಸ್ಇ ರೂಪಾಂತರಗಳಲ್ಲಿ ಲಭ್ಯವಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ಒಳಭಾಗದಲ್ಲಿ ಈ ಎಸ್‌ಯುವಿ ಕಾರು ಎರಡು ದೊಡ್ಡ ಸೆಂಟರ್ ಟಚ್ ಸ್ಕ್ರೀನ್‌ ಪಡೆದ ಇನ್ಫೋಟೈನ್ಮೆಂಟ್ ಸಿಸ್ಟಮ್ ಮತ್ತು ನವೀನ ತಂತ್ರಜ್ಞಾನದ ಹವಾಮಾನ ನಿಯಂತ್ರಣದಂತಹ ಇತರ ಸೌಲಭ್ಯಗಳ ಜೊತೆ ಹೊಸ ವಿನ್ಯಾಸ ತತ್ತ್ವವನ್ನು ಹೊಂದಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ಇದಲ್ಲದೆ, ಒಳಭಾಗದಲ್ಲಿ ಹೊಸ ಸ್ಟ್ಯಾಂಡರ್ಡ್ ಚರ್ಮದ ಆಸನಗಳನ್ನು ಪಡೆದುಕೊಂಡಿದೆ. ಈ ಎಸ್‌ಯುವಿ ಕಾರು, ಆಡಿ ಕ್ಯೂ7, ಬಿಎಂಡಬ್ಲ್ಯೂ ಎಕ್ಸ್5, ಮರ್ಸಿಡಿಸ್-ಬೆಂಜ್ ಜಿಎಲ್‌ಇ ಮತ್ತು ವೊಲ್ವೊ ಎಕ್ಸ್‌ಸಿ 90 ಕಾರುಗಳೊಂದಿಗೆ ಸ್ಪರ್ಧಿಸಲಿದೆ.

ರೇಂಜ್ ರೋವರ್ ವೆಲಾರ್ ಭಾರತದಲ್ಲಿ ಬಿಡುಗಡೆ; ಬೆಲೆ ರೂ.78.83 ಲಕ್ಷ

ರೇಂಜ್ ರೋವರ್ ಎವೊಕ್ ಬದಲು ಹೊಸ ಆಯ್ಕೆ ಬಯಸುತ್ತಿರುವವರಿಗೆ ಈ ವೆಲಾರ್ ಕಾರು ಉತ್ತಮ ಕಾರು ಎನ್ನಬಹುದು. ಈ ವೆಲಾರ್ ಕಾರು ಅತ್ಯದ್ಭುತವಾಗಿದೆ ಮತ್ತು ಆಧುನಿಕತೆಯನ್ನು ತನ್ನ ರೇಂಜ್ ರೋವರ್ ವಂಶಾವಳಿಯಿಂದ ಪಡೆದುಕೊಂಡಿದೆ.

English summary
Range Rover Velar Launched In India; Prices Start At Rs 78.83 Lakh

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark