ಜಿಎಸ್‌ಟಿ ಬೆಲೆಗಳನ್ನು ಪಡೆದುಕೊಂಡ ರೆನಾಲ್ಟ್ ಕ್ವಿಡ್ ಕಾರು

Written By:

ಭಾರತದ ಇತರೆ ವಾಹನ ತಯಾರಕರು ಅನುಸರಿಸಿದ ಪ್ರವೃತ್ತಿಯನ್ನು ಅನುಸರಿಸಲು ಮುಂದಾಗಿರುವ ರೆನಾಲ್ಟ್ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಕಡಿತಗೊಳಿಸಿದೆ.

ಭಾರತದಲ್ಲಿ ಹೊಸ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಧಾರದ ಮೇಲೆ ರೆನಾಲ್ಟ್ ಇಂಡಿಯಾ ತನ್ನ ವಾಹನಗಳ ಬೆಲೆಯನ್ನು ಶೇಕಡಾ 7% ರಷ್ಟು ಕಡಿತಗೊಳಿಸಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ.

ಕಾರುಗಳ ಬೆಲೆ ರಾಜ್ಯದಿಂದ ರಾಜ್ಯಕ್ಕೆ, ಕಾರಿನ ಮಾದರಿ ಮತ್ತು ಖರೀದಿಸುವ ರೂಪಾಂತರವನ್ನು ಅವಲಂಬಿಸಿ ನಿಗದಿಪಡಿಸಲಾಗುತ್ತದೆ.

ಗ್ರಾಹಕರಿಗೆ ಜಿಎಸ್‌ಟಿ ಪ್ರಯೋಜನಗಳನ್ನು ನೀಡುವ ದೃಷ್ಟಿ ಇಂದ ಈ ರೀತಿಯ ಕ್ರಮ ಕೈಗೊಳ್ಳಲು ಫ್ರೆಂಚ್ ಕಾರು ತಯಾರಕ ಕಂಪೆನಿ ಮುಂದಾಗಿದ್ದು, ತನ್ನ ಅತ್ಯುತ್ತಮ ಮಾರಾಟವಾಗುವ ಕ್ವಿಡ್ ಕಾರಿನ ಬೆಲೆಯನ್ನು ಕಡಿಮೆಗೊಳಿಸಿದೆ.

"ಜುಲೈ 1ರಿಂದ ಸರಕು ಮತ್ತು ಸೇವಾ ತೆರಿಗೆ ಜಾರಿಗೆ ಬಂದಿರುವುದು ಸರ್ಕಾರದ ಅತಿದೊಡ್ಡ ಸಾಧನೆಯಾಗಿದೆ, ಇದು 'ಒಂದು ದೇಶ-ಒಂದು ತೆರಿಗೆ' ವ್ಯವಸ್ಥೆಗೆ ಅನುಕೂಲ ಕಲ್ಪಿಸುತ್ತದೆ, ಕಾರುಗಳ ಬೆಲೆಗಳನ್ನು ಪರಿಷ್ಕರಿಸುವ ಮೂಲಕ ರೆನಾಲ್ಟ್ ಸಂಸ್ಥೆ ಸಂಪೂರ್ಣವಾಗಿ ಸಹಮತ ಸೂಚಿಸುತ್ತದೆ" ಎಂದು ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಸುಮಿತ್ ಸಾಹ್ನಿ ತಿಳಿಸಿದ್ದಾರೆ.

ಜಿಎಸ್ಟಿಯ ನಂತರ ರೆನಾಲ್ಟ್ ಕ್ವಿಡ್ ಬೆಲೆಗಳು :
ಮಾದರಿ                            ಬೆಲೆ ವ್ಯತ್ಯಾಸ (ಅಗ್ಗ)
ರೆನಾಲ್ಟ್ ಕ್ವಿಡ್ ಕ್ಲೈoಬರ್ ಎಎಂಟಿ -  ರೂ. 5,200 ರಿಂದ Rs 29,500

ರೆನಾಲ್ಟ್ ಕೆವಿಡ್ ಕಾರು 800ಸಿಸಿ ಮತ್ತು 1,000ಸಿಸಿ ಮಾದರಿಗಳಲ್ಲಿ ಲಭ್ಯವಿದೆ. ಆದರೆ, 800ಸಿಸಿ 5 ಸ್ಪೀಡ್ ಮ್ಯಾನ್ಯುವಲ್ ಗೇರ್ ಬಾಕ್ಸ್ ಹೊಂದಿರಲಿದೆ.

ಹಿಂದಿನ ತೆರಿಗೆ ವ್ಯವಸ್ಥೆಗೆ ಹೋಲಿಸಿದರೆ ರೆನಾಲ್ಟ್ ಕ್ವಿಡ್ ಅಗ್ಗವಾಗಿದ್ದು, ನೀವು ಕ್ವಿಡ್ ಖರೀದಿಸಲು ಬಯಸಿದರೆ, ಅದು ಸರಿಯಾದ ಸಮಯ ಎನ್ನಬಹುದು.

English summary
Renault India has announced a price reduction of its vehicles by 7 percent based on the new Goods and Services Tax (GST) in India.
Please Wait while comments are loading...

Latest Photos