ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

Written By:

ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಮೀತಿಯು ಭಾರತದಲ್ಲಿ ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ಮೇಲಿನ ತೆರಿಗೆಯನ್ನು ಹೆಚ್ಚಿಗೆ ಮಾಡಲು ಅಂಗೀಕರಿಸಿದೆ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಸದ್ಯ ವಿಧಿಸಲಾಗುತ್ತಿರುವ ಶೇಕಡಾ 15% ಸೆಸ್ ಬದಲಾಗಿ 25% ರಷ್ಟು ಸೆಸ್ಸ್ ತೆರಿಗೆ ಹೇರಿಕೆಗೆ ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಸಮೀತಿಯು ನಿರ್ಧರಿಸಿದೆ. ಈ ಹೊಸ ರೀತಿಯ ತೆರಿಗೆ ಪದ್ದತಿಯು ಜಿಎಸ್‌ಟಿ ಕಂಪೆನ್ಸಷನ್ ಕಾನೂನು ಅನುಷ್ಠಾನಕ್ಕೆ ಬಂದ ನಂತರ ಜಾರಿಗೆ ಬರಲಿದೆ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಅಧಿಕೃತ ಮಾಹಿತಿ ಪ್ರಕಾರ ಮಂಡಳಿಯ ಒಟ್ಟಾರೆ ನೋಟವು ಐಷಾರಾಮಿ ಕಾರುಗಳ ಬೆಲೆಯ ಮೇಲೆ ಬಿದ್ದಿದ್ದು, ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಹೇರಿಕೆಯಿಂದಾಗಿ ಹೆಚ್ಚು ವರಮಾನ ನಿರೀಕ್ಷೆ ಮಾಡುತ್ತಿದೆ ಎನ್ನಲಾಗಿದೆ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಸದ್ಯದ ಜಿಎಸ್‌ಟಿ ಸ್ಲ್ಯಾಬ್ ಪ್ರಕಾರ, ಐಷಾರಾಮಿ ಕಾರುಗಳ ಮೇಲಿನ ತೆರಿಗೆಯು 28ರಷ್ಟು ಇದ್ದು ಇದರ ಜೊತೆ 15%ರಷ್ಟು ಸೆಸ್ಸ್ ಒಳಗೊಂಡಿರಲಿದೆ. ಇದರ ಸಂಯೋಜನೆಯೊಂದಿಗೆ ಶೇಕಡಾ 43% ರಷ್ಟು ತೆರಿಗೆ ಹೇರಿಕೆಯಾಗಲಿದೆ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಮಂಡಳಿಯ ವಿಮರ್ಶೆ ಪೂರ್ಣಗೊಂಡ ನಂತರ, ಎಸ್‌ಯುವಿ ಕಾರುಗಳು ಮತ್ತು ಐಷಾರಾಮಿ ಕಾರುಗಳು ಪರಿಷ್ಕೃತ ಜಿಎಸ್‌ಟಿ ತೆರಿಗೆಯಾದ 28% ಜೊತೆ 25% ಸೆಸ್ಸ್ ತೆರಿಗೆ ಹೇರಿಕೆಯ ಬಿಸಿ ಅನುಭವಿಸಲಿವೆ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಜಿಎಸ್‌ಟಿ ಅನುಷ್ಠಾನಕ್ಕೂ ಮೊದಲು, ಎಸ್‌ಯುವಿ ಕಾರುಗಳು ಶೇಕಡಾ 55.30% ರಷ್ಟು ತೆರಿಗೆ ಹೇರಿಕೆ ಹೊಂದಿದ್ದವು ಎಂಬುದನ್ನು ನಾವು ಗಮನಿಸಬಹುದಾಗಿದೆ ಹಾಗು ಜಿಎಸ್‌ಟಿ ನಂತರ, ಐಷಾರಾಮಿ ಕಾರು ತಯಾರಕರು ಜಿಎಸ್‌ಟಿ ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಿದ್ದವು ಕೂಡ.

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳಕ್ಕೆ ಸರ್ಕಾರ ನಿರ್ಧಾರ

ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳ ತೆರಿಗೆ ಹೆಚ್ಚಳ ಮಾಡುವ ಮೂಲಕ ಹೈಬ್ರಿಡ್ ವಾಹನಗಳ ಮೇಲೆ ವಿಧಿಸಲಾಗುತ್ತಿರುವ ಜಿಎಸ್‌ಟಿ ಮತ್ತು ಸೆಸ್ ಸರಿದೂಗಿಸಲು ಸರ್ಕಾರ ಚಿಂತನೆ ನೆಡೆಸಿದೆ ಎನ್ನಲಾಗಿದೆ.

English summary
The Goods and Service Tax (GST) Council has approved to increase the prices of SUVs and luxury cars in India.
Story first published: Monday, August 7, 2017, 16:33 [IST]
Please Wait while comments are loading...

Latest Photos