ಟಾಟಾ ಮೋಟಾರ್ಸ್‌ನ 30 ಹೊಸ ಬಸ್‌ಗಳನ್ನು ಖರೀದಿಸಿದ ಬಿಎಂಟಿಸಿ
ಬೆಂಗಳೂರಿನಲ್ಲಿ ಬಿಎಂಟಿಸಿ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಖರೀದಿ ಮಾಡಲಾಗಿದೆ.
ಬೆಂಗಳೂರಿನಲ್ಲಿ ಬಿಎಂಟಿಸಿ ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮತ್ತಷ್ಟು ಹೊಸ ಖರೀದಿ ಮಾಡಲಾಗಿದೆ.

ಬೆಂಗಳೂರಿನ ಜನರಿಗೆ ಬಿಎಂಟಿಸಿ ಬಸ್‌ಗಳೇ ಜೀವಾಳ. ಹೀಗಾಗಿ ಬಿಎಂಟಿಸಿ ಸಂಸ್ಥೆಯು ಬೆಂಗಳೂರಿನ ಮೂಲೆ ಮೂಲೆಗೂ ಸಮಯಕ್ಕೆ ಸರಿಯಾಗಿ ಬಸ್ ಸಂಪರ್ಕ ಕಲ್ಪಿಸುವುದು ಹರಸಾಹಸವೇ ಸರಿ.

ಈ ಹಿನ್ನೆಲೆ ಟಾಟಾ ಮೋಟಾರ್ಸ್ ಉತ್ಪಾದಿತ 30 ಹೊಸ ಬಸ್‌ಗಳನ್ನು ಖರೀದಿ ಮಾಡಿರುವ ಬಿಎಂಟಿಸಿ ಸಂಸ್ಥೆಯು, ಸದ್ಯದಲ್ಲೇ ಅಗತ್ಯ ಪ್ರದೇಶಗಳಿಗೆ ಹೊಸ ಬಸ್ ಬಿಡುಗಡೆ ಮಾಡಲಿದೆ.

ಬೇಡಿಕೆ ಅನುಗುಣವಾಗಿ ಬಿಎಂಟಿಸಿ ಸಂಸ್ಥೆಗೆ ಹೊಸ ಬಸ್‌ಗಳನ್ನು ಹಸ್ತಾಂತರ ಮಾಡಿರುವ ಟಾಟಾ ಮೋಟಾರ್ಸ್, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಉಪಸ್ಥಿತಿಯಲ್ಲಿ ಅಧಿಕೃತವಾಗಿ ಹೊಸ ಬಸ್‌ಗಳಿಗೆ ಚಾಲನೆ ನೀಡಲಾಯಿತು.

ಸುಧಾರಿತ ತಂತ್ರಜ್ಞಾನೊಂದಿಗೆ ಅಭಿವೃದ್ಧಿ ಹೊಂದಿರುವ ಟಾಟಾ ಬಸ್‌ಗಳು, ನಗರಪ್ರದೇಶಗಳಲ್ಲಿನ ಜನತೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಒಳವಿನ್ಯಾಸ ಕೈಗೊಳ್ಳಲಾಗಿದೆ.

ಟಾಟಾ ಅಭಿವೃದ್ಧಿ ಮಾಡಿರುವ ಹೊಸ ಬಸ್‌ಗಳು ಬಿಎಸ್-4 ಹಾಗೂ ಎಎಚ್ಓ ತಂತ್ರಜ್ಞಾನ ಹೊಂದಿದ್ದು, ಅತ್ಯುತ್ತಮ ಇಂಧನ ಕಾರ್ಯಕ್ಷಮತೆ ಪಡೆದುಕೊಂಡಿವೆ.

ಹೊಸ ಬಸ್‌ಗಳು 30 ಸೀಟುಗಳ ಸಾಮರ್ಥ್ಯ ಹೊಂದಿದ್ದು, ಬಸ್ ಒಳಭಾಗದಲ್ಲಿ ಹೆಚ್ಚುವರಿ ಪ್ರಯಾಣಿಕರು ನಿಂತುಕೊಳ್ಳಲು ಅನುಕೂಲಕರವಾಗುವಂತೆ ಸಾಕಷ್ಟು ಸ್ಪೇಸ್ ಬಿಡಲಾಗಿದೆ.

ಇನ್ನು ಮಹಿಳಾ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಿರಲಿ ಎಂಬ ಉದ್ದೇಶದಿಂದ ಸಿಸಿಟಿವಿ ಕಣ್ಗಾವಲು ಇರಿಸಲಾಗಿದ್ದು, ಪ್ರತಿ ನಿಲ್ದಾಣದ ಬಗ್ಗೆ ಡಿಜಿಟಲ್ ಬೋರ್ಡ್‌ಗಳಲ್ಲಿ ಮಾಹಿತಿ ಲಭ್ಯವಿರಲಿದೆ.

ಒಟ್ಟಿನಲ್ಲಿ ಪ್ರಯಾಣಿಕರಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ಹೊಸ ಬಸ್ ಖರೀದಿಸಿರುವ ಬಿಎಂಟಿಸಿ ನಿರ್ಧಾರ ಸ್ವಾಗತಾರ್ಹ, ಆದ್ರೆ ಸದ್ಯ ಸೇವೆ ಒದಗಿಸುತ್ತಿರುವ ಸಾವಿರಾರು ಹಳೆಯ ಬಸ್‌ಗಳಲ್ಲಿ ಅವ್ಯವಸ್ಥೆಯನ್ನು ಸರಿ ಪಡಿಸುವುದು ಕೂಡಾ ಅಗತ್ಯವಿದೆ.


Click it and Unblock the Notifications








