ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

Written By:

ಟಾಟಾ ಗ್ರೂಪ್‌ನೊಂದಿಗೆ ಭಾವನಾತ್ಮಕ ಸಂಪರ್ಕ ಹೊಂದಿರುವ ಕಾರಣ ತನ್ನ ನ್ಯಾನೋ ಮಿನಿ ಹ್ಯಾಚ್‌ಬ್ಯಾಕ್ ಕಾರಿನ ಉತ್ಪಾದನೆಯನ್ನು ಮುಂದುವರಿಸುವುದಾಗಿ ಭಾರತೀಯ ವಾಹನ ತಯಾರಕ ಟಾಟಾ ಮೋಟರ್ಸ್ ತಿಳಿಸಿದೆ.

ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

ಭಾರತದಲ್ಲಿನ ಅತ್ಯಂತ ಅಗ್ಗವಾದ ಕಾರು ಎಂಬ ಖ್ಯಾತಿಗೆ ಪಾತ್ರವಾಗಿರುವ ನ್ಯಾನೋ ಕಾರು ಟಾಟಾ ಕಂಪನಿಯ ಮುಖ್ಯಸ್ಥರಾದ ರತನ್ ಟಾಟಾ ಅವರ ಕನಸಿನ ಕೂಸು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಹೀಗಿರುವಾಗ, ಕಂಪನಿಯು ಈ ಕಾರಿನ ಉತ್ಪಾದನೆಯನ್ನು ಥಟ್ಟನೆ ಕೊನೆಗೊಳಿಸಲು ಬಯಸುವುದಿಲ್ಲ ಎಂದು ಹೇಳಿಕೆ ನೀಡಿದೆ.

ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

ಟಾಟಾ ಮೋಟರ್ಸ್ ನಿಯಮಿತವಾಗಿ ತನ್ನ ಉತ್ಪನ್ನದ ಕೌಶಲ್ಯವನ್ನು ಪರಿಶೀಲಿಸುತ್ತಿದ್ದು, ಮುಂಬರುವ ತಿಂಗಳುಗಳಲ್ಲಿ ನವೀಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.

ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

ಇತ್ತೀಚಿನ ದಿನಗಳಲ್ಲಿ, ಭಾರತದಲ್ಲಿ ನ್ಯಾನೊ ಕಾರಿನ ಭವಿಷ್ಯದ ಬಗ್ಗೆ ಬಹಳಷ್ಟು ಚರ್ಚೆಗಳು ನೆಡೆಯುತ್ತಿದ್ದು, ಪ್ರಯಾಣಿಕರ ವಾಹನದ ತಂತ್ರವನ್ನು ಪರಿಗಣಿಸುವ ಮೂಲಕ ಉತ್ಪನ್ನದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದರು.

ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

ಟಾಟಾ ಮೋಟಾರ್ಸ್ ನ್ಯಾನೋ ಕಾರಿನ ಭವಿಷ್ಯವನ್ನು ರೂಪಾಂತರಿಸಲು ಸಾಕಷ್ಟು ರೀತಿಯಲ್ಲಿ ಶ್ರಮಿಸುತ್ತಿದ್ದು, ಇತ್ತೀಚೆಗೆ ಕೊಯಮತ್ತೂರು ಬಳಿ ನ್ಯಾನೋ ಕಾರಿನ ಎಲೆಕ್ಟ್ರಿಕ್ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದ್ದನ್ನು ಈ ಹಿಂದೆ ನಾವು ವರದಿ ಮಾಡಿದ್ದೆವು.

ನ್ಯಾನೋ ಕಾರಿನ ಭವಿಷ್ಯದ ಬಗ್ಗೆ ಮಾಹಿತಿ ನೀಡಿದ ಟಾಟಾ

"ನಮ್ಮ ಪಿವಿ(ಪ್ಯಾಸೆಂಜರ್ ವಾಹನ) ತಂತ್ರಗಾರಿಕೆಯಲ್ಲಿ ನ್ಯಾನೋ ಕಾರು ಪ್ರಮುಖ ಪಾತ್ರ ವಹಿಸುತ್ತದೆ, ಏಕೆಂದರೆ ಇದು ಮಿನಿ ಹ್ಯಾಚ್‌ಬ್ಯಾಕ್ ವಿಭಾಗದಲ್ಲಿ ನಮ್ಮ ಏಕೈಕ ಉತ್ಪನ್ನವಾಗಿದ್ದು, ಖರೀದಿದಾರನ ದೃಷ್ಟಿಕೋನದಿಂದ ಬಹಳ ಮುಖ್ಯವಾದ ವಾಹನವಾಗಿದೆ" ಎಂದು ಟಾಟಾ ಮೋಟಾರ್ಸ್ ವಕ್ತಾರರು ಹೇಳಿದರು.

English summary
Indian automaker Tata Motors has stated that it will continue the production of its mini hatchback, the Nano for some more time as it has an emotional connect with the Tata Group.
Story first published: Wednesday, September 27, 2017, 12:00 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark