ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟಗೊಂಡ 10 ಅತ್ಯುತ್ತಮ ಕಾರುಗಳು ಯಾವವು?

Written By:

ಜಿಎಸ್‌ಟಿ ಜಾರಿ ನಂತರ ಭಾರತೀಯ ಆಟೋ ಉದ್ಯಮ ವಲಯ ಚೇತರಿಸಿಕೊಂಡಿದ್ದು, ವಾಹನಗಳ ಮಾರಾಟ ಮತ್ತು ಉತ್ಪಾದನೆ ಪ್ರಮಾಣದಲ್ಲಿ ಭಾರೀ ಏರಿಕೆ ಕಂಡಿದೆ. ಈ ಅವಧಿಯಲ್ಲಿ ಅತಿ ಹೆಚ್ಚು ಮಾರಾಟಗೊಂಡ ಪ್ರಮುಖ 10 ಕಾರುಗಳ ಮಾಹಿತಿ ಇಲ್ಲಿದೆ.

ಜಿಎಸ್‌ಟಿ ನಂತರ ಬೆಲೆ ವಿಚಾರವಾಗಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದ ಪ್ರಮುಖ ಹತ್ತುಕಾರು ಮಾದರಿಗಳ ಮಾಹಿತಿ ಇಲ್ಲಿದ್ದು, ಜಿಎಸ್‌ಟಿ ಹೊಸ ತೆರಿಗೆ ಪದ್ಧತಿಯು ಕಾರು ಮಾರಾಟ ಸಾಕಷ್ಟು ಪರಿಣಾಮ ಬೀರಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

10. ಹ್ಯುಂಡೈ ಕ್ರೇಟಾ

ಜಿಎಸ್‌ಟಿ ಜಾರಿ ನಂತರ ಹ್ಯುಂಡೈ ಮಾರಾಟದಲ್ಲಿ ಚೇತರಿಕೆ ಕಂಡಿದ್ದು, ಜುಲೈ ಅವಧಿಯಲ್ಲಿ ದೇಶಾದ್ಯಂತ 7,981 ಕಾರುಗಳು ಮಾರಾಟವಾಗುವ ಮೂಲಕ ಜೂನ್ ಅವಧಿಗಿಂತ ಶೇ.32ರಷ್ಟು ಪ್ರಗತಿ ಕಂಡಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

09. ಮಾರುತಿ ಸುಜುಕಿ ಸೆಲೆರಿಯೊ

ಜೂನ್ ಅವಧಿಗಿಂತ ಜುಲೈನಲ್ಲಿ ಶೇ.42ರಷ್ಟು ಏರಿಕೆ ಕಂಡಿದ್ದು, ದೇಶ್ಯಾಂದ್ಯಂತ 11, 087 ಕಾರುಗಳು ಮಾರಾಟಗೊಂಡಿವೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

08. ಹ್ಯುಂಡೈ ಐ20

ಪ್ರಿಮಿಯಂ ಹ್ಯಾಚ್‍‌ಬ್ಯಾಕ್ ಆವೃತ್ತಿಗಳಲ್ಲಿ ಅತಿಹೆಚ್ಚು ಬೇಡಿಕೆ ಹೊಂದಿರುವ ಹ್ಯುಂಡೈ ಐ20, ಜುಲೈ ಅವಧಿಯಲ್ಲಿ 11,390 ಕಾರುಗಳು ಮಾರಾಟಗೊಳ್ಳುವ ಮೂಲಕ ಟಾಪ್ 10ರಲ್ಲಿ 8ನೇ ಸ್ಥಾನ ಪಡೆದಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

07. ಹ್ಯುಂಡೈ ಐ10

ಸಣ್ಣ ಪ್ರಮಾಣದ ಕಾರು ಮಾದರಿಗಳಲ್ಲಿ ಜನಪ್ರಿಯತೆ ಗಳಿಸಿರುವ ಹ್ಯುಂಡೈ ಐ10 ಆವೃತ್ತಿಯು ಜುಲೈ ಅವಧಿಯಲ್ಲಿ 12,002 ಕಾರುಗಳು ಮಾರಾಟಗೊಂಡಿವೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

06. ಮಾರುತಿ ಸ್ವಿಫ್ಟ್

ಹ್ಯಾಚ್‌ಬ್ಯಾಕ್ ಆವೃತ್ತಿಗಳಲ್ಲೇ ಎರಡನೇ ಸ್ಥಾನ ಹೊಂದಿರುವ ಮಾರುತಿ ಸ್ವಿಫ್ಟ್ ಆವೃತ್ತಿಯು ಜುಲೈ ಅವಧಿಯಲ್ಲಿ 13,738 ಕಾರುಗಳು ಮಾರಾಟಗೊಂಡಿದ್ದು, ಶೇ.18ರಷ್ಟು ಮಾರಾಟ ಏರಿಕೆ ಕಂಡಿದೆ.

Recommended Video - Watch Now!
TVS Jupiter Classic Launched In India - DriveSpark
ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

05. ಮಾರುತಿ ಸ್ವಿಫ್ಟ್ ಡಿಜೈರ್

ಸೆಡಾನ್ ಆವೃತ್ತಿಗಳಲ್ಲಿ ಮುಂಚೂಣಿಯಲ್ಲಿರುವ ಮಾರುತಿ ಸ್ವಿಫ್ಟ್ ಡಿಜೈರ್ ಆವೃತ್ತಿಯು ಜುಲೈ ಅವಧಿಯಲ್ಲಿ 14,703 ಕಾರುಗಳು ಮಾರಾಟಗೊಂಡಿವೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

04. ಮಾರುತಿ ವಿತ್ರಾ ಬ್ರೇಝಾ

ಕಂಪ್ಯಾಕ್ಟ್ ಎಸ್‌ಯುವಿಗಳಲ್ಲಿ ನಂ.1 ಸ್ಥಾನದಲ್ಲಿರುವ ಮಾರುತಿ ವಿತ್ರಾ ಬ್ರೇಝಾ ಆವೃತ್ತಿಯು ಜುಲೈ ಅವಧಿಯಲ್ಲಿ 15,243 ಕಾರುಗಳು ಮಾರಾಟಗೊಳ್ಳುವ ಮೂಲಕ ಕಳೆದ ವರ್ಷಕ್ಕಿಂತ ಶೇ.42ರಷ್ಟು ಮಾರಾಟ ಏರಿಕೆ ಕಂಡಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

03. ಮಾರುತಿ ಸುಜುಕಿ ವ್ಯಾಗನರ್

ಜೂನ್ ಅವಧಿಗಿಂತ ಜುಲೈನಲ್ಲಿ ಶೇ.7ರಷ್ಟು ಮಾರಾಟ ಏರಿಕೆ ಕಂಡಿರುವ ವ್ಯಾಗನರ್ ಆವೃತ್ತಿಯು 16,301 ಕಾರುಗಳನ್ನು ಮಾರಾಟಗೊಳಿಸುವ ಮೂಲಕ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

02. ಮಾರುತಿ ಬಲೆನೋ

ಪ್ರಿಯಿಯಂ ಹ್ಯಾಚ್‌ಬ್ಯಾಕ್ ಅತಿಹೆಚ್ಚು ಬೇಡಿಕೆಯನ್ನು ಪಡೆದುಕೊಳ್ಳಲ್ಲಿ ಯಶಸ್ವಿಯಾಗಿರೋ ಮಾರುತಿ ಬಲೆನೋ ಆವೃತ್ತಿಯು ಜುಲೈ ಅವಧಿಯಲ್ಲಿ 19,153 ಕಾರುಗಳ ಮಾರಾಟಗೊಳಿಸುವ ಮೂಲಕ ಶೇ.110 ಏರಿಕೆ ಕಂಡಿದೆ.

ಜುಲೈ ತಿಂಗಳಲ್ಲಿ ಅತಿಹೆಚ್ಚು ಮಾರಾಟವಾದ 10ಅತ್ಯುತ್ತಮ ಕಾರುಗಳು ಯಾವವು?

01. ಮಾರುತಿ ಆಲ್ಟೋ

ಹೊಸತನದೊಂದಿಗೆ ಮಾರುಕಟ್ಟೆಯಲ್ಲಿ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿರೋ ಮಾರುತಿ ಸಂಸ್ಥೆಯು ಜುಲೈ ಅವಧಿಯಲ್ಲಿ ಆಲ್ಟೋ ಕಾರುಗಳ ಮಾರಾಟದಲ್ಲಿ ಶೇ.31ರಷ್ಟು ಏರಿಕೆ ಕಂಡಿದ್ದು, 19,844 ಕಾರುಗಳನ್ನು ಮಾರಾಟ ಮಾಡಿದೆ.

Read more on ಟಾಪ್ 10 top 10
English summary
Read in Kannada about Top 10 Best Selling Cars July 2017 In India.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark