ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

Written By:

ಜರ್ಮನ್ ತಯಾರಕ ಫೋಕ್ಸ್‌ವ್ಯಾಗನ್ ಭವಿಷ್ಯದಲ್ಲಿ ನೂತನ ವಿದ್ಯುತ್ ವಾಹನಗಳನ್ನು ಪರಿಚಯಿಸುವ ಉದ್ದೇಶ ಹೊಂದಿದ್ದು, ಪ್ರಸ್ತುತ ಜೆನ್ ಬೀಟಲ್ ಎಂಬ ಹೆಸರಿನ ಎಲೆಕ್ಟ್ರಿಕ್ ಕಾರಿನ ಮೇಲೆ ತನ್ನ ಸಂಶೋಧನೆಯನ್ನು ಮುಂದುವರೆಸಿದೆ.

ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

ಹೌದು, ಫೋಕ್ಸ್‌ವ್ಯಾಗನ್ ಬೀಟಲ್ ವಿದ್ಯುತ್ ರೂಪಾಂತರವನ್ನು ನಿರ್ಮಿಸಲು ನಿರ್ಧರಿಸಿದೆ. ಈ ಕಾರು ಕಂಪನಿಯ ಎಂಇಬಿ(ಮಾಡ್ಯುಲರ್ ಇಲೆಕ್ಟ್ರಿಕ್ ಬಾಕಾಸ್ಟೆನ್) ಪ್ಲಾಟ್‌ಫಾರಂ ಆಧಾರದ ಮೇಲೆ ನಿರ್ಮಾಣವಾಗಲಿದ್ದು, ಶೂನ್ಯ-ಹೊರಸೂಸುವಿಕೆ ಮಾದರಿಗಳ ವಿಭಾಗಕ್ಕೆ ಸೇರ್ಪಡೆಯಾಗಲಿದೆ.

ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

2017 ಡೆಟ್ರಾಯಿಟ್ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶನಗೊಂಡ ಎಲೆಕ್ಟ್ರಿಕ್ ಐಡಿಬಿ ಬಝ್ ಪರಿಕಲ್ಪನೆಯ ಮೈಕ್ರೊಬಸ್ ವಾಹನದ ಸಹೋದರಿಯ ಮಾದರಿಯಾಗಿ ಫೋಕ್ಸ್‌ವ್ಯಾಗನ್ ಬೀಟಲ್ ಅನಾವರಣಗೊಳ್ಳಲಿದೆ.

ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

ವಿದ್ಯುತ್ ವಾಹನಗಳನ್ನು ಉತ್ಪಾದಿಸಲು ಎಂಇಬಿ(ಮಾಡ್ಯುಲರ್ ಇಲೆಕ್ಟ್ರಿಕ್ ಬಾಕಾಸ್ಟೆನ್) ಪ್ಲಾಟ್‌ಫಾರಂ ಹೇಳಿ ಮಾಡಿಸಿದ ವೇದಿಕೆಯಾಗಿದೆ ಎಂಬ ವಿಚಾರವನ್ನು ಕಂಪನಿ ತಿಳಿಸಿದೆ. ಈ ಪ್ಲಾಟ್‌ಫಾರಂ, ಹೊಂದಿಕೊಳ್ಳುವ ಚಾರ್ಸಿ, ಹಿಂಬದಿಯ ಚಕ್ರ ಡ್ರೈವ್, ಮುಂಭಾಗದ ಚಕ್ರ ಚಾಲನೆಯ ಮತ್ತು ಆಲ್-ವೀಲ್ ಡ್ರೈವ್ ಅನುಮತಿಸುತ್ತದೆ.

ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

ಹೊಸ ಬೀಟಲ್ ಎಲೆಕ್ಟ್ರಿಕ್ ಕಾರು ಹಿಂಭಾಗದ ಚಕ್ರ-ಡ್ರೈವ್ ಮಾದರಿಯಾಗಿದ್ದು, ಇದು 2016 ಪ್ಯಾರಿಸ್ ಮೋಟಾರ್ ಪ್ರದರ್ಶನದಲ್ಲಿ ಪ್ರದರ್ಶಿಸಲಾದ ID ಹ್ಯಾಚ್‌ಬ್ಯಾಕ್ ಪರಿಕಲ್ಪನೆಯನ್ನು ಆಧರಿಸಿದೆ.

ಭಾರತಕ್ಕೆ ಬೀಟಲ್ ಎಲೆಕ್ಟ್ರಿಕ್ ವಾಹನ ಅಭಿವೃದ್ಧಿಪಡಿಸುತ್ತಿದೆ ಫೋಕ್ಸ್‌ವ್ಯಾಗನ್

ಡೀಸೆಲ್ ಗೇಟ್ ಹಗರಣದ ಕಾರಣ ಕಳೆದುಕೊಂಡಿರುವ ಮಾರುಕಟ್ಟೆಯನ್ನು ಮತ್ತೆ ಪಡೆಯಲು ಫೋಕ್ಸ್‌ವ್ಯಾಗನ್ ಸಂಸ್ಥೆಯು ನೂತನ ವಿದ್ಯುತ್ ಮಾದರಿಗಳನ್ನು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಹೊಂದಿದೆ. ಸದ್ಯ ಸುದ್ದಿಯಲ್ಲಿರುವ ಬೀಟಲ್ ಎಲೆಕ್ಟ್ರಿಕ್ ವಾಹನ ಇದಕ್ಕೆ ತಾಜಾ ಉದಾಹರಣೆಯಾಗಿದೆ.

English summary
German automaker Volkswagen aims to introduce a slew of new electric vehicles in the future. the current-gen Beetle will also get the same treatment.
Story first published: Tuesday, November 14, 2017, 12:29 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark