ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

ಜರ್ಮನ್ ಕಾರು ತಯಾರಕ ಕಂಪೆನಿಯಾದ ಫೋಕ್ಸ್‌‌ವ್ಯಾಗನ್, ತನ್ನ ಕಾರುಗಳ ಬೆಲೆಯನ್ನು 2018ರ ಜನವರಿ 20ರಿಂದ ಹೆಚ್ಚಿಗೆ ಮಾಡುವ ನಿರ್ದಾರ ತೆಗೆದುಕೊಂಡಿದೆ. ಕಾರುಗಳಿಗನುಗುಣವಾಗಿ ಬೆಲೆ ಏರಿಕೆಯು ನಿರ್ಧಾರವಾಗಲಿದೆ.

By Girish

ಫೋಕ್ಸ್‌‌ವ್ಯಾಗನ್ ಇಂಡಿಯಾ ಸಂಸ್ಥೆಯ ಪ್ರವೇಶ ಮಟ್ಟದ ಫೋಕ್ಸ್‌‌ವ್ಯಾಗನ್ ಪೊಲೊ, ವೆಂಟೊ, ಟಿಗ್ವಾನ್ ಎಸ್‌ಯುವಿ ಮತ್ತು ಹೊಸದಾಗಿ ಬಿಡುಗಡೆಯಾದ ಪಸಾಟ್ ಸೆಡಾನ್ ಕಾರುಗಳ ಬೆಲೆ ಏರಿಕೆ ಮಾಡುವುದಾಗಿ ಕಂಪನಿ ಹೇಳಿಕೊಂಡಿದ್ದ, ಅಧಿಕೃತ ಮಾಹಿತಿ ಸದ್ಯದರಲ್ಲಿಯೇ ಹೊರ ಬೀಳಲಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

ಆರ್ಥಿಕ ಅಂಶಗಳು ಮತ್ತು ಜಾಗತಿಕ ಮಟ್ಟದಲ್ಲಿ ಕಾರಿನ ಕಚ್ಚಾ ವಸ್ತುಗಳ ಬೆಲೆ ಏರಿಳಿತ ಮತ್ತು ಸ್ಥಳೀಯವಾಗಿ ಭರಿಸಬೇಕಾದ ವೆಚ್ಚ ಸೇರಿದಂತೆ ಅನೇಕ ಕಾರಣಗಳಿಂದಾಗಿ ಬೆಲೆ ಹೆಚ್ಚಳ ಮಾಡಲು ಕಂಪನಿ ಮುಂದಾಗಿದೆ ಎನ್ನಲಾಗಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

ಇತ್ತೀಚಿಗೆ, ಸ್ಕೋಡಾ ಆಟೋ, ಟೊಯೊಟಾ, ಮಾರುತಿ ಇಝುಸು ಸೇರಿದಂತೆ ಇತರ ಕಂಪನಿಗಳೂ ಸಹ 2018ರ ಜನವರಿಯಿಂದ ತಮ್ಮ ಕಂಪನಿಗಳ ಉತ್ಪನ್ನಗಳ ಬೆಲೆ ಏರಿಕೆ ಮಾಡುವುದಾಗಿ ಘೋಷಿಸಿದ್ದವು.

ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

"ಹಲವಾರು ಆರ್ಥಿಕ ಅಂಶಗಳ ಕಾರಣದಿಂದಾಗಿ ಬೆಲೆ ಹೆಚ್ಚಳವು ಅನಿವಾರ್ಯವಾಗಿದೆ. ಈ ಕಾರಣದಿಂದಾಗಿ ಭಾರತದಲ್ಲಿ ನಮ್ಮ ಉತ್ಪನ್ನಗಳ ಬೆಲೆಗಳನ್ನು ಕೊಂಚ ಮಟ್ಟಿಗೆ ಏರಿಕೆ ಮಾಡಲಿದ್ದೇವೆ" ಎಂದು ಫೋಕ್ಸ್‌ವ್ಯಾಗನ್ ಸಂಸ್ಥೆಯ ಪ್ಯಾಸಂಜರ್ ವಿಭಾಗದ ನಿರ್ದೇಶಕ ಸ್ಟೀಫನ್ ನ್ಯಾಪ್ ಪ್ರಕಟಣೆಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

ಕಾರು ಕಂಪನಿಗಳು ಡಿಸೆಂಬರ್‌ನಲ್ಲಿ ತಮ್ಮ ಉಳಿದಿರುವ ಕಾರುಗಳನ್ನು ಮಾರಾಟ ಮಾಡುವ ಸಲುವಾಗಿ ಈ ರೀತಿಯ ಜನವರಿ ತಿಂಗಳಿನಲ್ಲಿ ಬೆಲೆ ಹೆಚ್ಚಿಸುವ ತಂತ್ರಗಳನ್ನು ಉಪಯೋಗಿಸುವುದು ಸರ್ವೇಸಾಮಾನ್ಯವಾಗಿದೆ.

ತನ್ನ ಕಾರುಗಳ ಬೆಲೆ ಹೆಚ್ಚಳಕ್ಕೆ ಮುಂದಾದ ಫೋಕ್ಸ್‌ವ್ಯಾಗನ್

ಗ್ರಾಹಕರ ದೃಷ್ಟಿಕೋನದಿಂದ ಡಿಸೆಂಬರ್ ತಿಂಗಳಲ್ಲಿ ಕಾರುಗಳ ಬೆಲೆ ಕಡಿಮೆಯಾದರೂ ಸಹ, ಒಂದು ತಿಂಗಳ ವ್ಯತ್ಯಾಸವು ಉತ್ಪಾದನಾ ವರ್ಷವನ್ನೇ ಬದಲಿಸಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕಾರು ಖರೀದಿಗೆ ಗ್ರಾಹಕರು ಮುಂದಾಗಬೇಕು.

Most Read Articles

Kannada
English summary
Read in Kannada about Volkswagen Car Prices To Increase.
Story first published: Friday, December 15, 2017, 11:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X