ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

Written By:

ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಸೇವೆಗಳನ್ನು ಒದಗಿಸಲು ಮುಂದಾಗಿರುವ ಫೋಕ್ಸ್‌ವ್ಯಾಗನ್ ಸಂಸ್ಥೆಯು ಬೆಂಗಳೂರಿನಲ್ಲಿ ಮತ್ತೆರಡು ಹೊಸ ಟಚ್ ಪಾಯಿಂಟ್‌ಗಳನ್ನು ತೆರೆದಿದ್ದು, ಹೊಸ ಸೇವಾ ಕೇಂದ್ರಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

To Follow DriveSpark On Facebook, Click The Like Button
ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಜೆಪಿ ನಗರ ಮೊದಲ ಹಂತ ಮತ್ತು ಮೈಸೂರು ರಸ್ತೆಯಲ್ಲಿರುವ ಕೆಂಚೆನಹಳ್ಳಿಯಲ್ಲಿ ಫೋಕ್ಸ್‌ವ್ಯಾಗನ್‌ನಿಂದ ನವಿಕೃತ ಮಾದರಿಯ ಟಚ್ ಪಾಯಿಂಟ್‌ಗಳನ್ನು ತೆರೆಯಲಾಗಿದ್ದು, ಫೋಕ್ಸ್‌ವ್ಯಾಗನ್ ಗ್ರಾಹಕರಿಗೆ ಮತ್ತಷ್ಟು ಸುಲಭವಾಗಿ ಸೇವೆಗಳು ಲಭ್ಯವಾಗಲಿವೆ.

ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಮೈಸೂರು ರಸ್ತೆಯಲ್ಲಿರುವ ಫೋಕ್ಸ್‌ವ್ಯಾಗನ್ ಶೋರಂನಲ್ಲಿ ಮಾರಾಟ ಮತ್ತು ಸೇವೆಗಳು ಎರಡು ಲಭ್ಯವಿದ್ದು, ವೃತ್ತಿ ಕೌಶಲ್ಯವನ್ನು ಹೊಂದಿರುವ 15ಕ್ಕೂ ಹೆಚ್ಚು ಸಿಬ್ಬಂದಿ ಮೂಲಕ ಸೇವೆ ಒದಗಿಸಲಿದೆ.

ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಜಸ್‌ಪ್ರೀತ್ ಸಿಂಗ್ ಮತ್ತು ಸುಜಯ್ ವಿ ಎಂಬುವರ ಒಡೆತನದಲ್ಲಿ ಹೊಸ ಕೇಂದ್ರಗಳು ಆರಂಭಗೊಂಡಿದ್ದು, ಐಷಾರಾಮಿ ಸೌಲಭ್ಯಗಳೊಂದಿಗೆ ಗುಣಮಟ್ಟದ ಸೇವೆಗಳನ್ನು ನೀಡುವ ಭರವಸೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಇನ್ನು ಜೆಪಿ ನಗರದ ಮೊದಲ ಹಂತದಲ್ಲಿರುವ ಸೇವಾ ಕೇಂದ್ರದಲ್ಲಿ ಹೊಸ ಕಾರುಗಳ ಮಾರಾಟ ಮತ್ತು ಸೇಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ವ್ಯವಸ್ಥೆಯಿದ್ದು, ವಿವಿಧ ಮಾದರಿಯ ಫೋಕ್ಸ್‌ವ್ಯಾಗನ್ ಉತ್ಪನ್ನ ಲಭ್ಯವಿರಲಿವೆ.

ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಹೊಸ ಸರ್ವಿಸ್ ಕೇಂದ್ರಗಳಲ್ಲಿ ಫೋಕ್ಸ್‌ವ್ಯಾಗನ್ ಕಾರು ಮಾದರಿಗಳಾದ ಟಿಗ್ವಾನ್, ಜಿಟಿಐ ಹಾಟ್ ಹ್ಯಾಚ್‌ಬ್ಯಾಕ್ ಮತ್ತು ಒಮಿಯೋ ಕಾರುಗಳು ಖರೀದಿಗೆ ಲಭ್ಯವಿದ್ದು, ಕೈಗೆಟುಕುವ ದರಗಳಲ್ಲಿ ಬೀಡಿಭಾಗಗಳ ಸೇವೆಗಳನ್ನು ನೀಡಲಿವೆ.

ಬೆಂಗಳೂರಿನಲ್ಲಿ ಮತ್ತೆರಡು ಟಚ್ ಪಾಯಿಂಟ್ ತೆರೆದ ಫೋಕ್ಸ್‌ವ್ಯಾಗನ್

ಡ್ರೈವ್ ಸ್ಪಾರ್ಕ್ ಅಭಿಪ್ರಾಯ

ಈಗಾಗಲೇ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಫೋಕ್ಸ್‌ವ್ಯಾಗನ್ ಶೋರಂಗಳಿಂದ ಗ್ರಾಹಕರಿಗೆ ಅಗತ್ಯ ಸೇವೆಗಳು ದೊರೆಯುತ್ತಿದ್ದು, ಗುಣಮಟ್ಟದ ಸೇವೆಗಳು ಮತ್ತು ಗ್ರಾಹಕರಿಗೆ ತುರ್ತು ಸೇವೆಗಳನ್ನು ಒದಗಿಸುವ ಹೊಸ ಟಚ್ ಪಾಯಿಂಟ್‌ಗಳನ್ನು ತೆರೆಯಲಾಗಿದೆ.

English summary
Read in Kannada about Volkswagen Inaugurates Two New Touch Points In Karnataka.
Story first published: Thursday, August 24, 2017, 14:51 [IST]
Please Wait while comments are loading...

Latest Photos