ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

Written By:

ಸ್ವೀಡನ್ ವಾಹನ ತಯಾರಕ ವೊಲ್ವೊ ಸಂಸ್ಥೆ, ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದ ನಂತರದ ಭಾರತದ ಹೈಬ್ರಿಡ್ ವಾಹನಗಳ ಯೋಜನೆಗಳನ್ನು ಬಹಿರಂಗಪಡಿಸಿದೆ.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ಹೊಸ ತೆರಿಗೆ ಪದ್ಧತಿ ಜಿಎಸ್‌ಟಿ ಅಡಿಯಲ್ಲಿ ಪರಿಸರ ಸ್ನೇಹಿ ವಾಹನಗಳ ಮೇಲಿನ ತೆರಿಗೆಯ ದರ ಏರಿಕೆಯಾಗಿದ್ದರೂ ಸಹ, ಭಾರತೀಯ ಮಾರುಕಟ್ಟೆಯಲ್ಲಿ ಹೈಬ್ರಿಡ್ ಮತ್ತು ವಿದ್ಯುತ್ ವಾಹನಗಳ ಮಾರಾಟ ಮುಂದುವರಿಯುತ್ತದೆ ಎಂದು ವೊಲ್ವೊ ಹೇಳಿದೆ.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

2019ರ ನಂತರ, ಇಂಟರ್ನಲ್ ಕಂಬಸ್ಷನ್ ಎಂಜಿನ್ ಹೊರತುಪಡಿಸಿ ತನ್ನೆಲ್ಲಾ ಹೊಸ ಮಾದರಿ ಕಾರುಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಅಳವಡಿಸುವುದಾಗಿ ಈ ಹಿಂದೆ ವೊಲ್ವೊ ಕಂಪನಿ ಹೇಳಿಕೊಂಡಿತ್ತು.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ಜಾಗತಿಕ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ಹೊಸ ವಾಹನಗಳನ್ನು ಭಾರತಕ್ಕೆ ತರುವುದಾಗಿ ವಾಹನ ತಯಾರಕ ಸಂಸ್ಥೆ ವೊಲ್ವೊ ಇಂಡಿಯಾ ತಿಳಿಸಿತ್ತು.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ಪ್ರತಿಯೊಬ್ಬರಿಗೂ ತಿಳಿದಿರುವಂತೆ, ಜಿಎಸ್‌ಟಿಯಿಂದಾಗಿ ಹೈಬ್ರಿಡ್ ಕಾರುಗಳ ಬೆಲೆಗಳು ಈಗಾಗಲೇ ಗಗನಕ್ಕೆ ಏರಿದ್ದು, ಆಗಿದ್ದರೂ ಸಹ ಹೈಬ್ರಿಡ್ ಕಾರುಗಳ ಮಾರಾಟ ಮುಂದುವರೆಸಲು ನಾವು ಇಚ್ಛಿಸುತ್ತೇವೆ, ಎಂದು ವೊಲ್ವೊ ಸ್ಪಷ್ಟಪಡಿಸಿದೆ.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ಜುಲೈ ತಿಂಗಳಿನಲ್ಲಿ ಅನುಷ್ಠಾನಕ್ಕೆ ಬಂದಿರುವ ಜಿ.ಎಸ್.ಟಿ ಪ್ರಕಾರ, ಹೈಬ್ರಿಡ್ ಕಾರುಗಳು ಭಾರತದಲ್ಲಿ ಐಷಾರಾಮಿ ಕಾರುಗಳಂತೆಯೇ ಶೇಕಡಾ 28% ರಷ್ಟು ಜಿಎಸ್‌ಟಿ ತೆರಿಗೆ ಮತ್ತು 15% ರಷ್ಟು ಸೆಸ್(ಒಟ್ಟು 43%) ಪಡೆದುಕೊಳ್ಳುತ್ತವೆ.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ವೊಲ್ವೊ ಸಂಸ್ಥೆಯು, 2019 ಮತ್ತು 2021ರ ನಡುವೆ ಸರಿ ಸುಮಾರು ಐದು ವಿದ್ಯುತ್ ಕಾರುಗಳನ್ನು ಪ್ರಾರಂಭಿಸಲು ಯೋಜನೆ ರೂಪಿಸಿದ್ದು, ಈ ಯೋಜನೆಯಲ್ಲಿ ಯಾವುದೇ ಬದಲಾವಣೆ ಎಲ್ಲ ಎಂದು ಘೋಷಿಸಿದೆ.

ಜಿಎಸ್‌ಟಿ ನಂತರ ಹೈಬ್ರಿಡ್ ಕಾರಿನ ಯೋಜನೆಗಳನ್ನು ಬಹಿರಂಗಪಡಿಸಿದ ವೊಲ್ವೊ

ಪ್ರಸ್ತುತ, ವೊಲ್ವೊ ಕಂಪನಿಯು ಪ್ಲಗ್-ಇನ್ ಹೈಬ್ರಿಡ್ ಎಸ್‌ಯುವಿ, ಎಕ್ಸ್‌ಸಿ90 ಎಕ್ಸೆಲೆನ್ಸ್ ಕಾರುಗಳನ್ನು ಮಾರಾಟ ಮಾಡುತ್ತಿದ್ದು, 2030ರ ವೇಳೆಗೆ ಸಂಪೂರ್ಣ ವಿದ್ಯುತ್ ಕಾರುಗಳ ಕಡೆಗೆ ಹೋಗಲು ಉದ್ದೇಶಿಸಿರುವುದರಿಂದ ಭಾರತೀಯ ಸರ್ಕಾರವು ತೆರಿಗೆ ದರವನ್ನು ಮರುಪರಿಶೀಲಿಸಲಿದೆ ಎಂದು ವೊಲ್ವೊ ನಿರೀಕ್ಷೆ ಹೊಂದಿದೆ.

Read more on ವೊಲ್ವೊ volvo
English summary
Swedish automaker Volvo has revealed its plans for hybrid vehicles in India after the implementation of Goods and Service Tax (GST).
Story first published: Thursday, July 13, 2017, 13:37 [IST]
Please Wait while comments are loading...

Latest Photos