2017 ವೊಲ್ವೊ ವಿ90 ಕ್ರಾಸ್ ಕಂಟ್ರಿ ಕಾರು ಭಾರತದಲ್ಲಿ ಬಿಡುಗಡೆ; ಬೆಲೆ ರೂ. 60 ಲಕ್ಷ

Written By:

ವೊಲ್ವೊ ವಿ90 ಕ್ರಾಸ್ ಕಂಟ್ರಿ ಭಾರತದಲ್ಲಿ ಅನಾವರಣಗೊಂಡಿದೆ. ಈ ಹೊಸ ವೊಲ್ವೊ ವಿ90 ಕ್ರಾಸ್ ಕಾರಿನ ಬೆಲೆ ರೂ. 60 ಲಕ್ಷ ಎಕ್ಸ್ ಷೋ ರೂಂ(ಭಾರತ) ದರ ಹೊಂದಿದೆ.

ಭಾರತದ ಮೊದಲ ಐಷಾರಾಮಿ ಕ್ರಾಸ್ಒವರ್ ಸ್ಟೇಶನ್ ವ್ಯಾಗನ್ ಎಂಬ ಖ್ಯಾತಿ ಪಡೆದಿರುವ ವಿ90 ಕ್ರಾಸ್ ವೊಲ್ವೊ ಕಾರು ಭಾರತದದಲ್ಲಿ ಅಮೋಘವಾಗಿ ಬಿಡುಗಡೆಗೊಂಡಿದ್ದು, ಸದ್ಯ ಭಾರತದಲ್ಲಿ ಮಾರಾಟವಾಗುತ್ತಿರುವ ಎಸ್90 ಸೆಡಾನ್ ಕಾರಿನ ಆಧಾರವನ್ನು ಪಡೆದುಕೊಂಡಿದೆ.

ಭಾರತದಲ್ಲಿ ವೊಲ್ವೊ ವಿ90 ಕ್ರಾಸ್ ಕಾರು, 2.0 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ ಮತ್ತು ಡಿ5 ವಿಶೇಷತೆಯೊಂದಿಗೆ 430 ಎನ್‌ಎಂ ತಿರುಗುಬಲದಲ್ಲಿ 235ರಷ್ಟು ಅಶ್ವಶಕ್ತಿ ಉತ್ಪಾದಿಸಲಿದೆ.

ಈ ಹೊಚ್ಚ ಹೊಸ ಕಾರು 8 ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಸಂಯೋಜನೆಯೊಂದಿಗೆ ಬರಲಿದ್ದು, ವಿ90 ಕ್ರಾಸ್ ಕಾರು ಆಲ್-ವೀಲ್ ಡ್ರೈವ್(ಎ.ಡಬ್ಲ್ಯೂ.ಡಿ) ಮತ್ತು ಏರ್ ರೈಡ್ ಸಸ್ಪೆನ್‌ಷನ್ ಪಡೆಯುತ್ತದೆ.

ವೊಲ್ವೊ ವಿ90 ಕ್ರಾಸ್ ಕಂಟ್ರಿ ಸಸ್ಪೆನ್‌ಷನ್     2.0 ಡೀಸೆಲ್
ಎಂಜಿನ್                                      1,969 ಸಿಸಿ
ಪವರ್                                        235 ಬಿಎಚ್‌ಪಿ
ಪೀಕ್ ಟಾರ್ಕ್                                 430 ಏನ್‌ಎಂ
ಗೇರ್‌ಬಾಕ್ಸ್                                   8-ಸ್ಪೀಡ್ ಆಟೋಮ್ಯಾಟಿಕ್

ವೊಲ್ವೊ ವಿ90 ಕ್ರಾಸ್ ಕಂಟ್ರಿ ಕಾರು ಎಸ್90 ಸೆಡಾನ್ ಕಾರಿಗೆ ಹೋಲಿಕೆ ಹೊಂದಿದ್ದು, ಮುಂಭಾಗದಲ್ಲಿ ಲೋಹದ ಸಣ್ಣ ಗ್ರಿಲ್ ಪಡೆದುಕೊಳ್ಳಲಿದೆ ಮತ್ತು 'ಥಾರ್ ಹ್ಯಾಮರ್' ಎಲ್ಇಡಿ ಹೆಡ್‌ಲ್ಯಾಂಪ್ ಸೆಟಪ್ ಒಳಗೊಂಡಿರಲಿದೆ.

ಕ್ಯಾಬಿನ್ ಒಳಗೆ, ದೊಡ್ಡ 12.3-ಇಂಚಿನ ಟಚ್‌ಸ್ಕ್ರೀನ್ ಪರದೆ ಹೊಂದಿದ್ದು, ಉನ್ನತ ಗುಣಮಟ್ಟದ ವಸ್ತುಗಳನ್ನು ಡ್ಯಾಶ್‌ಬೋರ್ಡ್ ಪಡೆದುಕೊಂಡಿದೆ ಮತ್ತು ಮರದ ಪದರನ್ನು ಪಡೆದುಕೊಂಡಿದೆ.

ಪಾರ್ಕಿಂಗ್ ಸಹಾಯ, ಲೇನ್ ಸಹಾಯ, ಬ್ಲೈಂಡ್ ಸ್ಪಾಟ್ ಮಾಹಿತಿ ಘಟಕ, ನಗರ ಸುರಕ್ಷತೆ, ಹಿಲ್-ಸ್ಟಾರ್ಟ್ ಸಹಾಯ, ಹಿಲ್ ಡಿಸೆಂಟ್ ಕಂಟ್ರೊಲ್ ಮತ್ತು 7 ಏರ್‌ಬ್ಯಾಗ್‌ಗಳನ್ನು ವೈಶಿಷ್ಟ್ಯಗಳನ್ನು ವಿ90 ಕ್ರಾಸ್ ಕಂಟ್ರಿ ಕಾರು ಪಡೆದುಕೊಂಡಿದೆ.

ವೊಲ್ವೊ ವಿ90 ಕ್ರಾಸ್ ಕಂಟ್ರಿ ಕಾರು ಬಿಎಂಡಬ್ಲ್ಯೂ ಎಕ್ಸ್3, ಆಡಿ ಕ್ಯೂ3 ಮತ್ತು ಮರ್ಸಿಡಿಸ್ ಬೆಂಜ್ ಜಿಎಲ್ಇ ಕಾರುಗಳ ಜೊತೆ ಸ್ಪರ್ಧಿಸಲಿದೆ.

Read more on ವೊಲ್ವೊ volvo
English summary
Read in Kannada about Volvo V90 Cross Country launched in India. The new Volvo V90 Cross Country is priced at Rs 60 lakh ex-showroom (India).
Story first published: Wednesday, July 12, 2017, 18:11 [IST]
Please Wait while comments are loading...

Latest Photos