ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಡ್ರೈವ್ ಸ್ಪಾರ್ಕ್ ತಂಡವು ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟದ ವೇಳೆ ಗಮನಹರಿಸಬೇಕಾದ ಅಂಶಗಳ ಬಗ್ಗೆ ಮಾಹಿತಿ ನೀಡುತ್ತಿದೆ.

By Praveen

ನಮ್ಮಲ್ಲಿ ಬಳಸಿದ ಕಾರುಗಳ ಮಾರುಕಟ್ಟೆ ಬಹಳ ಜೋರಾಗಿದೆ. ಕಷ್ಟಪಟ್ಟು ಕೂಡಿಟ್ಟ ಹಣದಲ್ಲಿ ತಮ್ಮ ಓಡಾಟಕ್ಕೆ ಎಂದು ಒಂದು ಕಾರು ಕೊಳ್ಳುವವರ ಸಾಲು ದೊಡ್ಡದಿದೆ. ಕನಿಷ್ಠ ಒಂದೆರಡು ವರ್ಷಗಳ ಬಳಕೆಗಾದರೂ ಸೆಕೆಂಡ್‌ ಹಾಂಡೆಲ್‌ ಕಾರು ಕೊಳ್ಳಬೇಕೆನ್ನುವವರೂ ಸಾಕಷ್ಟು ಮಂದಿ ಇದ್ದಾರೆ. ಇದಕ್ಕೆ ಕಾರಣ ಹಲವಾರು. ಈ ಹಿನ್ನೆಲೆ ನಿಮ್ಮ ಡ್ರೈವ್ ಸ್ಪಾರ್ಕ್ ತಂಡವು ಬಳಸಿದ ಕಾರುಗಳ ಖರೀದಿ ಮತ್ತು ಮಾರಾಟದ ವೇಳೆ ಗಮನಹರಿಸಬೇಕಾದ ಅಂಶಗಳ ಬಗ್ಗೆ ಸಲಹೆ ನೀಡುತ್ತಿದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹೊಸ ಕಾರುಗಳನ್ನು ಹೋಲಿಸಿದರೆ ಬಳಕೆಯಾದ ಕಾರುಗಳನ್ನು ಖರೀದಿಸುವುದು ತುಂಬಾನೇ ಕಷ್ಟಕರ. ಹೊಸ ಕಾರು ಖರೀದಿಸುವಾಗ ನಮಗೆ ನೈಜ ಮಾಹಿತಿ ಗಿಟ್ಟಿಸಿಕೊಳ್ಳುವುದು ತುಂಬಾನೇ ಸುಲಭ. ಆದರೆ ಹಳೆ ಕಾರು ಖರೀದಿ ವಿಚಾರಕ್ಕೆ ಬಂದಾಗ ಅನೇಕ ಅಂಶಗಳ ಬಗ್ಗೆ ಗಮನ ಹರಿಸಬೇಕಾಗುತ್ತದೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಈ ನಿಟ್ಟಿನಲ್ಲಿ ತುಂಬಾನೇ ಜಾಗರೂಕರಾಗಿರಬೇಕಾಗುತ್ತದೆ. ಇಂದಿನ ಈ ಲೇಖನದ ಮೂಲಕ ಹಳೆ ಕಾರು ಖರೀದಿಸುವಾಗ ಗಮನಹರಿಸಬೇಕಾದ ಮಹತ್ವಪೂರ್ಣ ಮಾಹಿತಿ ಕೊಡುವ ಪ್ರಯತ್ನ ಮಾಡಲಾಗಿದೆ.

Recommended Video

TVS Apache RR 310 Launched In India - DriveSpark
ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಬಟೆಟ್

ಹೊಸ ಕಾರಿನಂತೆ ಹಳೆ ಕಾರು ಖರೀದಿ ವಿಚಾರದಲ್ಲೂ ಮೊದಲು ನೀವು ಕೊಂಡುಕೊಳ್ಳುವ ಕಾರಿನ ಬಜೆಟ್ ಬಗ್ಗೆ ಸ್ಪಷ್ಟ ಅರಿವನ್ನು ಹೊಂದಿರಬೇಕಾಗುತ್ತದೆ. ನಿಮ್ಮದ್ದು ಸಣ್ಣ ಕುಟುಂಬವಾಗಿದ್ದು, ನಾಲ್ಕು ಪ್ರಯಾಣಿಕರನ್ನಷ್ಟೇ ಹೊಂದಿದ್ದಲ್ಲಿ ಹ್ಯಾಚ್‌ಬ್ಯಾಕ್ ಕಾರು ಹೆಚ್ಚು ಸೂಕ್ತವೆನಿಸುವುದು. ಅದೇ ಹೊತ್ತಿಗೆ ದೀರ್ಘ ಪಯಣ ಬಯಸುವುದಾದ್ದಲ್ಲಿ ಹಾಗೆಯೇ 5ಕ್ಕಿಂತ ಹೆಚ್ಚು ಸದಸ್ಯರನ್ನು ನಿಮ್ಮ ಕುಟುಂಬ ಹೊಂದಿರುವುದಲ್ಲಿ ಸೆಡಾನ್, ಎಸ್‌ಯುವಿ ಅಥವಾ ಎಂಪಿವಿ ಆಯ್ಕೆ ಮಾಡಿಕೊಳ್ಳಬಹುದು.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಅವಲೋಕನ

ಮಾರುಕಟ್ಟೆ ಪರಿಸ್ಥಿತಿಯನ್ನು ಸರಿಯಾಗಿ ಅವಲೋಕನ ಮಾಡಿಕೊಳ್ಳುವುದು ತುಂಬಾ ಮುಖ್ಯ. ಸದ್ಯದ ಮಾರುಕಟ್ಟೆ ಪರಿಸ್ಥಿತಿ ಹೇಗಿದೆ ಇತ್ಯಾದಿ ವಿಚಾರಗಳ ಬಗ್ಗೆ ಗಮನಹರಿಸಬೇಕಾಗುತ್ತದೆ. ಸದ್ಯ ಕಾರಿನ ಮಾಡೆಲ್ ಕುರಿತು ಸರಿಯಾದ ಮಾಹಿತಿ ಪಡೆಯಲು ಇಂಟರ್ ನೆಟ್ ನಿಮ್ಮ ನೆರವಿಗೆ ಬರಲಿದೆ. ಹಾಗಾಗಿ ಸ್ವಲ್ಪ ಹೊತ್ತು ಅಂತರ್ಜಾಲದಲ್ಲಿ ಜಾಲಾಡಿದರೆ ಒಳಿತು.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಸರಿಯಾದ ಡೀಲರ್‌ಗಳ ಆಯ್ಕೆ

ಇನ್ನೊಂದು ಮಹತ್ವಪೂರ್ಣ ಕೆಲಸವೆಂದರೆ ಹಳೆ ಕಾರು ಖರೀದಿ ವೇಳೆ ಸರಿಯಾದ ವಿತರಕರನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ ಡೀಲರುಗಳು ತಮ್ಮ ವ್ಯಾಪಾರ ಕುದುರಿಸಿಕೊಳ್ಳುವ ನಿಟ್ಟಿನಲ್ಲಿ ಮೋಸ ಮಾಡುವ ಸಾಧ್ಯತೆಯಿದ್ದು, ಹಾಗಾಗಿ ಸ್ಟಾಂಡರ್ಡ್ ಡೀಲರುಗಳನ್ನು ಆಯ್ಕೆ ಮಾಡಿಕೊಳ್ಳಿರಿ...

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹಣಕಾಸಿನ ನೆರವು

ನಿಮ್ಮ ಕಾರು ಖರೀದಿ ಆಸೆಯನ್ನು ಪೂರೈಸಲು ಮಾರುಕಟ್ಟೆಯಲ್ಲಿ ಹಲವಾರು ಫಿನಾನ್ಸ್ ಅಥವಾ ಬ್ಯಾಂಕ್‌ಗಳು ಸಾಲ ನೀಡಲು ಮುಂದಾಗುತ್ತವೆ. ಹಾಗಿರುವಾಗ ಹಳೆ ಕಾರು ಖರೀದಿಗೆ ಯಾವ ಸ್ಕೀಮ್ ಸರಿಹೊಂದುತ್ತದೆ ಎಂಬುದನ್ನು ತಜ್ಞರಿಂದ ಅರಿತುಕೊಳ್ಳುವುದು ಉತ್ತಮ. ಉದಾಹರಣೆಗೆ ನಿಮ್ಮ ಆದಾಯಕ್ಕೆ ಅನುಸರಿಸಿ ಹೆಚ್ಚು ನಂಬಿಕೆಗ್ರಸ್ಥ ಫಿನಾನ್ಸ್‌ಗಳಿಂದ ಸ್ಪಷ್ಟ ಮಾಹಿತಿ ಪಡೆದು ಸಾಲ ಪಡೆದುಕೊಳ್ಳಿರಿ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಫಿಟ್‌ನೆಸ್ ಸರ್ಟಿಫಿಕೇಟ್

ಕಾರಿನ ಎಫ್‌ಸಿ ಅರ್ಥಾತ್ ಫಿಟ್‌ನೆಸ್ ಸರ್ಟಿಫಿಕೇಟ್ ಚಾಲ್ತಿಯಲ್ಲಿರಬೇಕು. 15 ವರ್ಷಕ್ಕಿಂತ ಹೆಚ್ಚು ವಯಸ್ಸಾದ ಕಾರುಗಳನ್ನು ಕೊಳ್ಳುವಾಗ ಇದನ್ನು ಗಮನಿಸುವುದು ಒಳಿತು. ಎಫ್‌ಸಿ ಇಲ್ಲದ ಕಾರುಗಳನ್ನು, ವಾಹನಗಳನ್ನು ರಸ್ತೆಗೆ ಇಳಿಸುವುದು ದಂಡಾರ್ಹ ಅಪರಾಧ. ಎಫ್‌ಸಿ ರದ್ದಾಗಿರುವುದರಿಂದ ಒಂದೆರಡು ಸಾವಿರದಷ್ಟು ಬೆಲೆ ಇಳಿಸಬಹುದು ಅಥವಾ ನಗಣ್ಯ ಎಂದು ಬಿಡಬಹುದು. ಇದರಿಂದ ಎಚ್ಚರ ವಹಿಸಿ..

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಟೆಸ್ಟ್ ಡ್ರೈವ್

ನೀವು ಖರೀದಿಸುವ ಹಳೆ ಕಾರು ನೋಡಲು ತುಂಬಾನೇ ಅಂದವಾಗಿರಬಹುದು. ಆದರೆ ಅದರ ಎಂಜಿನ್ ಅಥವಾ ಬಿಡಿಭಾಗಗಳ ದೌರ್ಬಲ್ಯ ಬಗ್ಗೆ ಅರಿಯಲು ನಿಮ್ಮಿಂದ ಹೇಗೆ ಸಾಧ್ಯ? ಹಾಗಿರುವಾಗ ಹಳೆ ಕಾರುಗಳನ್ನು ಸಹ ಒಂದೆರಡು ಬಾರಿ ಓಡಿಸಿ ನೋಡುವುದು ಹೆಚ್ಚು ಸೂಕ್ತ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ನೀವು, ನಿಮಗೆ ಪರಿಚಯಿವಿರುವ ಮೆಕ್ಯಾನಿಕ್ ಅಥವಾ ಡ್ರೈವಿಂಗ್ ಮತ್ತು ಕಾರಿನ ಬಗ್ಗೆ ಹೆಚ್ಚು ತಿಳುವಳಿಕೆಯನ್ನು ಹೊಂದಿರುವ ನಿಮ್ಮ ಆಪ್ತ ಸ್ನೇಹಿತರ ನೆರವು ಪಡೆದುಕೊಳ್ಳಬಹುದು. ಈ ಮೂಲಕ ಕಾರು ಎಷ್ಟು ಕೀ.ಮೀ. ಓಡಾಟ ನಡೆಸಿದೆ, ಆಕ್ಸಿಡೆಂಟ್ ಏನಾದರೂ ಸಂಭವಿಸಿದೆಯೇ, ಬಿಡಿಭಾಗ ಡ್ಯಾಮೇಜ್ ಆಗಿದೆಯೇ ಹೀಗೆ ಹಲವಾರು ವಿಚಾರಗಳ ಬಗ್ಗೆ ಸ್ಪಷ್ಟ ಮಾಹಿತಿ ಪಡೆದುಕೊಳ್ಳತಕ್ಕದ್ದು.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹಳೆ ಕಾರಿನ ದಾಖಲೆ ಪತ್ರ

ಇನ್ನು ಕಾರಿನ ಆರ್‌ಸಿ ಬುಕ್, ಎಮಿಷನ್ ಟೆಸ್ಟ್ ಕಾರ್ಡ್, ವಿಮಾ ಕಾರ್ಡ್ ಎಲ್ಲವೂ ಸರಿಯಾಗಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿರಿ. ಹಾಗೆಯೇ ಕಾರಿನ ಮಾಡೆಲ್ ಯಾವುದು? ಲೋನ್ ಕ್ಲಿಯರ್ ಆಗಿದೆಯೇ? ಎಂಬುದರ ಬಗ್ಗೆಯೂ ಮಾಹಿತಿ ಪಡೆದುಕೊಳ್ಳಿರಿ. ಇನ್ನೊಂದು ವಿಚಾರ ಎನೆಂದರೇ ಕಳವಾದ ಕಾರು ಮಾರಾಟ ಮಾಡುವ ಸಾಧ್ಯತೆ ಜಾಸ್ತಿಯಾಗಿದ್ದು, ಹಾಗಾಗಿ ಕಾರು ಸರ್ವಿಸ್ ಬುಕ್ ಬಗ್ಗೆಯೂ ಸರಿಯಾದ ಮಾಹಿತಿ ಪಡೆಯಿರಿ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಚೌಕಾಶಿ, ಕಾರ್ ಡೀಲ್

ಮೇಲೆ ತಿಳಿಸಿದ ಎಲ್ಲ ವಿಷಯವೂ ಓಕೆ ಆಗಿದ್ದಲ್ಲಿ ಕಾರು ಉತ್ತಮ ಕಂಡೀಷನ್‌ನಲ್ಲಿದ್ದು, ಖರೀದಿಗೆ ಸೂಕ್ತ ಎಂಬ ವಿಚಾರ ಮನಗಂಡಲ್ಲಿ ಮಾತ್ರ ಡೀಲ್‌ಗೆ ಸಿದ್ಧರಾಗಿರಿ. ಆದರೆ ಡೀಲರುಗಳು ಮುಂದಿಡುವ ಆಫರ್‌ಗೆ ಮುಂದಾಗದೇ ಆದಷ್ಟು ಚೌಕಾಶಿ ಮಾಡಿಕೊಂಡು ಡೀಲ್ ಮುಗಿಸಿ...

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಅಂತಿಮವಾಗಿ ವ್ಯವಹಾರ ಮುಗಿದ ನಂತರ ನಿಗದಿತ ಅವಧಿಯಲ್ಲಿ ಖರೀದಿಸಿದ ಕಾರನ್ನು ನಿಮ್ಮ ಹೆಸರಿಗೆ ಬದಲಾಯಿಸಿಕೊಳ್ಳಿರಿ. ಒಟ್ಟಿನಲ್ಲಿ ಹೊಸ ಕಾರಿನಂತೆ ಹಳೆ ಕಾರು ಖರೀದಿ ವೇಳೆಯೂ ಹೆಚ್ಚು ಜಾಗರೂಕರಾಗಬೇಕಾಗಿರುವುದು ಅಷ್ಟೇ ಮುಖ್ಯ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದಿರಿ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಇನ್ನು ಬಳಸಿದ ಕಾರುಗಳ ಮಾರಾಟ ಕುರಿತು ಹೇಳುವುದಾರರೇ ಇತ್ತೀಚೆಗೆ ಬಳಸಿದ ಕಾರುಗಳ ಮಾರಾಟಕ್ಕೆ ಆನ್‌ಲೈನ್‌ನ ದಾರಿ ರೆಕ್ಕೆಪುಕ್ಕ ಹಚ್ಚಿದೆ. ಮೊದಲು ಬಾರಿ ಕಾರು ಕೊಳ್ಳುವ ಅನೇಕರು ಕೈಪಳಗಿಸಿಕೊಳ್ಳಲು ಸೆಕೆಂಡ್‌ ಹ್ಯಾಂಡ್‌ ವಾಹನದತ್ತ ದೃಷ್ಟಿ ಹರಿಸುತ್ತಾರೆ.

ಸೇಕೆಂಡ್ ಹ್ಯಾಂಡ್ ಕಾರುಗಳ ಖರೀದಿ ಮತ್ತು ಮಾರಾಟಕ್ಕೂ ಮುನ್ನ ಈ ವಿಚಾರಗಳನ್ನು ತಪ್ಪದೇ ತಿಳಿಯಿರಿ..

ಹೀಗಾಗಿ ಅಧಿಕೃತ ಡೀಲರ್‌ಗಳ ಮೂಲಕ ಕಾರು ಮಾರಾಟ ಮಾಡುವುದು ಒಳಿತು. ಜೊತೆಗೆ ನೀವು ಕಾರು ಮಾರಾಟ ಮಾಡುವ ಮುನ್ನ ಅಗತ್ಯ ದಾಖಲೆಗಳನ್ನು ನೀಡಿದ್ದಲ್ಲಿ ಮೂಲಕ ಉತ್ತಮ ಬೆಲೆಯನ್ನು ಗಿಟ್ಟಿಸಿಕೊಳ್ಳಬಹುದು.

ಹ್ಯಾಪಿ ಡ್ರೈವಿಂಗ್..

Most Read Articles

Kannada
English summary
Keep this checklist in mind for second-hand car if you want to have a hassle-free ride.
Story first published: Monday, December 11, 2017, 13:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X