ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದೆ.

By Rahul Ts

ಕಂಪ್ಯಾಕ್ಟ್ ಸೆಡಾನ್ ಆವೃತ್ತಿಗಳಲ್ಲಿ ಉತ್ತಮ ಬೇಡಿಕೆ ಗಳಿಸುವಲ್ಲಿ ಯಶಸ್ವಿಯಾಗಿರುವ ಹೋಂಡಾ ಅಮೇಜ್ ಹೊಸತನದೊಂದಿಗೆ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಜ್ಜಾಗುತ್ತಿದ್ದು, ಹೊಸ ಕಾರಿನಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳನ್ನು ಪಡೆದು ನಾಳೆ ಮಾರುಕಟ್ಟೆಗೆ ಭರ್ಜರಿಯಾಗಿ ಬಿಡುಗಡೆಗೊಳ್ಳಲಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಈ ಹಿಂದೆ 2018ರ ದೆಹಲಿ ಆಟೋ ಎಕ್ಸ್‌ಪೋ ಪ್ರದರ್ಶನಗೊಳ್ಳುವ ಮೂಲಕ ಕಾರು ಉತ್ಪಾದಕರಲ್ಲಿ ಕುತೂಹಲ ಹುಟ್ಟುಹಾಕಿದ್ದ ನ್ಯೂ ಹೋಂಡಾ ಅಮೇಜ್ ಕಾರುಗಳು ಮುಂದಿನ ತಿಂಗಳು ಖರೀದಿಗೆ ಲಭ್ಯವಾಗುತ್ತಿದ್ದು, ಇದರ ಜೊತೆಗೆ ಹೊಸ ಕಾರಿನ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಿರುವುದಲ್ಲದೇ ಹೊಸ ಕಾರು ಖರೀದಿಸುವ ಮೊದಲ 20 ಸಾವಿರ ಗ್ರಾಹಕರಿಗೆ ಹೋಂಡಾ ಸಂಸ್ಥೆ ಭರ್ಜರಿ ಆಫರ್ ಕೂಡಾ ನೀಡಲಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಈ ಬಗ್ಗೆ ಸ್ವತಃ ಹೋಂಡಾ ಸಂಸ್ಥೆಯೇ ಮಾಹಿತಿ ನೀಡಿದ್ದು, ಕಾರು ಖರೀದಿಗಾಗಿ ಬುಕ್ ಮಾಡುವ ಮೊದಲ 20 ಸಾವಿರ ಗ್ರಾಹಕರಿಗೆ ಕಾರು ಖರೀದಿಯಲ್ಲಿ ಡಿಸ್ಕೌಂಟ್ ನೀಡುವುದಾಗಿ ಘೋಷಿಸಿದೆ. ಇದರಿಂದ ನಿಗದಿತ ಅವಧಿಯಲ್ಲಿ ಅಮೇಜ್ ಕಾರು ಖರೀದಿಸುವ ಗ್ರಾಹಕರಿಗೆ ಕಾರಿನ ಬೆಲೆಗಳಲ್ಲಿ ರಿಯಾಯಿತಿ ಸಿಗಲಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

2018ರ ಹೊಸ ಹೋಂಡಾ ಅಮೇಜ್ ಕಾರುಗಳು ಇ, ಎಸ್, ವಿ ಮತ್ತು ವಿಎಕ್ಸ್ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ದೊರೆಯಲಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಹೊಸ ಹೋಂಡಾ ಅಮೇಜ್ ಇ ಟ್ರಿಮ್ ವೇರಿಯಂಟ್‍ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಟ್ವಿನ್ ಏರ್‍‍ಬ್ಯಾಗ್ಸ್, ಎಬಿಎಸ್ ಬ್ರೇಕಿಂಗ್ ಸಿಸ್ಟಂ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಇನ್ನು 2018ರ ಹೋಂಡಾ ಅಮೇಜ್ ಕಾರುಗಳು ಹೋಂಡಾ ಸಿಟಿ ಕಾರಿನ ವಿನ್ಯಾಸವನ್ನೇ ಹೋಲಲಿದ್ದು, ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍‍ಲ್ಯಾಂಪ್‍‍ಗಳನ್ನು ಪಡೆದುಕೊಂಡಿವೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಕಾಂಪ್ಯಾಕ್ಟ್ ಸೆಡಾನ್ ಆದ ಹೋಂಡಾ ಅಮೇಜ್ ಕಾರು 15 ಇಂಚಿನ ವೀಲ್‍‍ಗಳನ್ನು ಪಡೆದಿದೆ. ಕಾರಿನ ಹಿಂಭಾಗವು ದಪ್ಪದಾದ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್‍ ಲೈಟ್ಸ್ ಗಳನ್ನು ಪಡೆದಿದ್ದು, ಇನ್ನಷ್ಟು ಆಕರ್ಷಕವಾದ ವಿನ್ಯಾಸದಿಂದ ಸಜ್ಜುಗೊಂಡಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಎಂಜಿನ್ ಸಾಮರ್ಥ್ಯ

ಬಿಡುಗಡೆಗೊಳ್ಳುತ್ತಿರುವ ಹೊಸ ಹೋಂಡಾ ಅಮೇಜ್ ಕಾರು ಪೆಟ್ರೋಲ್ ಹಾಗು ಡೀಸೆಲ್ ಆವೃತ್ತಿಗಳಲ್ಲಿ ಲಭ್ಯವಿರಲಿದ್ದು, ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ 88ಬಿಹೆಚ್‍ಪಿ ಹಾಗು 108ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಪಡೆದಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಹೋಂಡಾ ಅಮೇಜ್ ಕಾರಿನ ವಿನ್ಯಾಸಗಳ ಬಗ್ಗೆ ಹೇಳುವುದಾದರೇ ಎಲ್ಇಡಿ ಡಿಎಲ್‍ಆರ್, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್, ಆಪಲ್ ಕಾರ್ ಪ್ಲೇ ಹಾಗೂ ಆಂಡ್ರಾಯ್ಡ್ ಆಟೋ ಅನ್ನು ಒಳಗೊಂಡ ಟಚ್ ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, ಕ್ಲೈಮೆಟ್ ಕಂಟ್ರೋಲರ್, ಸ್ಟೀರಿಂಗ್ ಮೌಟೆಂಡ್ ಕಂಟ್ರೋಲರ್ ಮತ್ತು ಪೆಡಲ್ ಶಿಫ್ಟರ್ಸ್ ಅನ್ನು ಅಳವಡಿಸಲಾಗಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಜೊತೆಗೆ ಕೀ ಲೇಸ್ ಎಂಟ್ರಿ, ಕ್ರೂಸ್ ಕಂಟ್ರೋಲರ್, ರಿವರ್ಸ್ ಪಾರ್ಕಿಂಗ್ ಕ್ಯಾಮೆರಾ ಜೊತೆ ಸೆನ್ಸಾರ್ ಒದಗಿಸಲಾಗಿದ್ದು, ಮಾರುತಿ ಡಿಜೈರ್, ಹ್ಯುಂಡೈ ಎಕ್ಸ್ಸೆಂಟ್ ಮತ್ತು ಟಾಟಾ ಟಿಗೋರ್ ಕಾರುಗಳಿಗೆ ತ್ರೀವ ಪೈಪೋಟಿ ನೀಡಲಿದೆ.

ಹೊಸ ಹೋಂಡಾ ಅಮೇಜ್ ಕಾರು ಬಿಡುಗಡೆಗೆ ಕ್ಷಣಗಣನೆ..

ಒಟ್ಟಿನಲ್ಲಿ ಹೋಂಡಾ ಸಂಸ್ಥೆಯು ತಮ್ಮ ಸೆಡಾನ್ ಕಾರುಗಳ ಸಣಿಯಲ್ಲಿ ಮಾರಾಟಗಳನ್ನು ಇನ್ನಷ್ಟು ಹೆಚ್ಚಿಸಲು ಅಮೇಜ್ ಕಾರನ್ನು ಬಿಡುಗಡೆಗೊಳಿಸುತ್ತಿದ್ದು, ಹೊಸ ಕಾರಿನ ಬೆಲೆಗಳು ಎಕ್ಸ್‌ಶೋರಂ ಪ್ರಕಾರ 6.50 ಲಕ್ಷದಿಂದ ರೂ.9 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

Source : Rushlane

Most Read Articles

Kannada
Read more on honda amaze sedan new launches
English summary
2018 Honda Amaze launch tomorrow.
Story first published: Tuesday, May 15, 2018, 16:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X