ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಜೀಪ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳತ್ತಾ ಬಂದಿದ್ದು, ಜೀಪ್ ಕಂಪಾಸ್ ಕಾರುಗಳು ಬಿಡುಗಡೆಗೊಂಡಾಗಿನಿಂದಲೂ 30,000 ಯೂನಿಟ್ ಮಾರಾಟ ಮಾಡಿದೆ.

By Rahul Ts

ಜೀಪ್ ಸಂಸ್ಥೆಯು ಭಾರತೀಯ ಮಾರುಕಟ್ಟೆಯಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳತ್ತಾ ಬಂದಿದ್ದು, ಜೀಪ್ ಕಂಪಾಸ್ ಕಾರುಗಳು ಬಿಡುಗಡೆಗೊಂಡಾಗಿನಿಂದಲೂ 30,000 ಯೂನಿಟ್ ಮಾರಾಟ ಮಾಡಿದೆ. ಮಾರಾಟವು ಅಧಿಕಗೊಳ್ಳುತ್ತಿರುವ ಸಲುವಾಗಿ ಜೀಪ್ ಸಂಸ್ಥೆಯು ತಮ್ಮ ಕಂಪಾಸ್ ಕಾರಿನ ಬ್ಲಾಕ್ ನೈಟ್ ಎಡಿಷನ್ ಅನ್ನು ಮುಂದಿನ ತಿಂಗಳು ದೇಶಿಯ ಮಾರುಕಟ್ಟೆಗೆ ಪರಿಚಯಿಸಲಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ದೀಪಾವಳಿ ಹಬ್ಬಕ್ಕೆ ಹೊಸ ಕಾರನ್ನು ಖರೀದಿಸಲು ಇಚ್ಛಿಸುವವರಿಗೆ ಈ ಕಾರು ಕೂಡಾ ಪಟ್ಟಿಯಲಿರಲಿದ್ದು, ಪ್ರಸ್ಥುತ ಈ ಕಾರು ಬ್ರೇಜಿಲ್‍ ದೇಷದಲ್ಲಿ ನೈಟ್ ಈಗಲ್ ಎಂಬ ಹೆಸರಿನಲ್ಲಿ ಮಾರಾಟಗೊಳ್ಳುತ್ತಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಜೀಪ್ ಕಂಪಾಸ್ ಬ್ಲಾಕ್ ನೈಟ್ ಎಡಿಷನ್ ಕಾರು ಒಂದು ಲಿಮಿಟೆಡ್ ಟ್ರಿಮ್ ಎಡಿಷನ್ ಕಾರಾಗಿದ್ದು, ವಿನ್ಯಾಸದಲ್ಲಿ ಕೆಲವು ಗುರುತರ ಬದಲಾವಣೆಗಳನ್ನು ಪಡೆದುಕೊಂಡಿದೆ. ಬ್ಲಾಕ್ ನೈಟ್ ಎಡಿಷನ್ ಜೀಪ್ ಕಂಪಾಸ್ ಕಾರಿನಲ್ಲಿ 18 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಳ್ಳಲಿದ್ದು, ಮೆಟಾಲಿಕ್ ಕಾರ್ಬನ್ ಬ್ಲಾಕ್ ಮತ್ತು ಶಾಡೋ ಬ್ಲಾಕ್ ಎಂಬ ಎರಡು ಬಣ್ಣಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ಜೀಪ್ ಕಂಪಾಸ್‍ನ ಡಾರ್ಕ್ ಈಗಲ್ ಮತ್ತು ಟ್ರೈಲ್‍‍ಹಾವ್ಕ್ ಕಾರುಗಳು ಆಧುನಿಕ 9 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಜೋದಣೆ ಹೊಂದಿದ್ದು, ಭಾರತದಲ್ಲಿ ಬಿಡುಗಡೆಗೊಳ್ಳಲಿರುವ ಬ್ಲಾಕ್ ನೈಟ್ ಎಡಿಷನ್ ಕಾರಿನಲ್ಲಿಯು ಸಹ ಇದೇ ಎಂಜಿನ್ ಅನ್ನು ಅಳವಡಿಸಲಿದೆ ಎಂದು ಹೇಳಲಾಗಿತ್ತಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಜೀಪ್ ಕಂಪಾಸ್ ಬ್ಲಾಕ್ ನೈಟ್ ಎಡಿಷನ್ ಕಾರನ್ನು ಹೊರತು ಪಡಿಸಿ, ಮಾರುಕಟ್ಟೆಯಲ್ಲಿ ಟ್ರೈಲ್‍‍ಹಾವ್ಕ್ 4x4 ಎಡಿಷನ್ ಕೂಡಾ ಖರೀದಿಗೆ ಲಭ್ಯವಿರಲಿದ್ದು, ಇದು ಮುಂದಿನ ವರ್ಷ ಬಿಡುಗಡೆಗೊಳ್ಳಲಿದೆ. ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರು ತಮ್ಮ ಸರಣಿಯಲ್ಲಿನ ಕಾರುಗಳಲ್ಲಿನ ಕಾರುಗಳಿಗಿಂತಾ ವಿಭಿನ್ನವಾದ ಡಿಸೈನ್ ಅನ್ನು ಹೊಂದಿರಲಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಜೀಪ್ ಕಂಪಾಸ್ ಟ್ರೈಲ್‍‍ಹಾವ್ಕ್ ಕಾರುಗಳು ಕೂಡಾ ಲಿಮಿಟೆಡ್ ಟ್ರಿಮ್ ಕಾರಾಗಿರಲಿದು, ಈ ಕಾರಿನಲ್ಲಿ ಆಧುನಿಕ ವೈಶಿಷ್ಟ್ಯತೆಯಾದ ರಾಕ್ ಮೋಡ್ ಅನ್ನು ಒದಗಿಸಲಾಗಿದೆ. ಇದು ಜೀಪ್ ಸಂಸ್ಥೆಯ ಆಕ್ಟೀವ್ ಡ್ರೈವ್ ಲೋ-ರೇಂಜ್ 4x4 ಸಿಸ್ಟಂ ಅನ್ನು ಬಳಸಿಕೊಳ್ಳಲಿದ್ದು, ಹೊಸ ಕಾರುಗಳು ಜೀಪ್ ಸಂಸ್ಥೆಯ ಮಾರಾಟವನ್ನು ಹೆಚ್ಚಿಸುವಲ್ಲಿ ಯಾವುದೇ ಅನುಮಾನವಿಲ್ಲ ಎನ್ನಬಹುದು.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಜೀಪ್ ಕಂಪಾಸ್ ಪೆಟ್ರೋಲ್ ಹಾಗು ಡೀಸೆಲ್ ವೇರಿಯಂಟ್‍‍ಗಳಲ್ಲಿ ಲಭ್ಯವಿದೆ. ಪೆಟ್ರೋಲ್ ಆಧಾರಿತ ಕಾರುಗಳು 1.4 ಲೀಟರ್ ಮಲ್ಟಿಏರ್ ಟರ್ಬೋಚಾರ್ಜ್ಡ್ ಎಂಜಿನ್ ಸಹಾಯದಿಂದ 160ಬಿಹೆಚ್‍‍ಪಿ ಮತ್ತು 250ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಎಂಜಿನ್ ಅನ್ನು 7 ಸ್ಪೀಡ್ ಆಟೋಮ್ಯಾಟಿಕ್ ಅಥವಾ 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಇನ್ನು ಡೀಸೆಲ್ ಅಧಾರಿತ ಜೀಪ್ ಕಂಪಾಸ್ ಕಾರುಗಳು 2.0 ಲೀಟರ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 170ಬಿಹೆಚ್‍ಪಿ ಮತ್ತು 350ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಡಿಗೆ ಜೋಡಿಸಲಾಗಿದೆ. ಮತ್ತು ಡೀಸೆಲ್ ವೇರಿಯಂಟ್ ಕಾರುಗಳಲ್ಲಿ ಆಲ್ ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಒದಗಿಸಲಾಗಿದೆ.

ಬರಲಿದೆ ಜೀಪ್ ಕಂಪಾಸ್‍‍ನ ಹೊಸ ಬ್ಲಾಕ್ ನೈಟ್ ಎಡಿಷನ್ ಕಾರು..

ಪ್ರಸ್ಥುತ ಮಾರುಕಟ್ಟೆಯಲ್ಲಿ ಪೆಟ್ರೋಲ್ ಆಧಾರಿತ ಜೀಪ್ ಕಂಪಾಸ್ ಕಾರುಗಳ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.15.30 ಲಕ್ಷಕ್ಕೆ ಮತ್ತು ಡೀಸೆಲ್ ವೇರಿಯಂಟ್ ಕಾರುಗಳ ಬೆಲೆಯು ರೂ.16.55 ಲಕ್ಷಕ್ಕೆ ನಿಗದಿಪಡಿಸಲಾಗಿದ್ದು, ಭವಿಷ್ಯದಲ್ಲಿ ಬಿಡುಗಡೆಗೊಳ್ಳಲಿರುವ ವೇರಿಯಂಟ್ ಕಾರುಗಳು ಇನ್ನು ಹೆಚ್ಚಿನ ಬೆಲೆಯನ್ನು ಪಡೆದುಕೊಳ್ಳಲಿದೆ ಎನ್ನಲಾಗಿದೆ.

Most Read Articles

Kannada
Read more on jeep suv
English summary
2018 Jeep Compass Black Night Edition India launch before Diwali 2018
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X