ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಪ್ರತಿ ಎರಡು ವರ್ಷಗಳಿಗೆ ಒಮ್ಮೆ ನಡೆಯುವ ಪ್ರತಿಷ್ಠಿತ ದೆಹಲಿ ಆಟೋ ಎಕ್ಸ್ ಪೋ ಗೆ ಭರ್ಜರಿ ಚಾಲನೆ ಸಿಕ್ಕಿದೆ. ಇಂದಿನಿಂದ 14ರ ತನಕ ಗ್ರೇಟರ್ ನೊಯಿಡಾದಲ್ಲಿ ನಡೆಯಲಿರುವ 2018 ದೆಹಲಿ ಆಟೋ ಎಕ್ಸ್ ಪೋ ಈಗಾಗಲೇ ಜಾಗತಿಕ ಆಕರ್ಷಣೆ ಪಡೆದುಕೊಂಡಿದ್ದು, ನಮ್ಮ ಡ್ರೈವ್ ಸ್ಪಾರ್ಕ್ 'ಆಟೋ ಎಕ್ಸ್ ಪೋ'ದ ಎಕ್ಸ್‌ಕ್ಲೂಸಿವ್ ಮಾಹಿತಿ ನೀಡಲಿದೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಈ ಬಾರಿಯ ಆಟೋ ಮೇಳದಲ್ಲಿ 37 ಆಟೋ ಉತ್ಪಾದಕರು ತಮ್ಮ ವಿವಿಧ ಹೊಸ ಕಾರು ನಮೂನೆಗಳು, ಬೈಕ್ ಮಾದರಿಗಳು, ವಾಣಿಜ್ಯ ವಾಹನಗಳನ್ನು ಮತ್ತು ಎಲೆಕ್ಟ್ರಿಕ್ ಕಾರುಗಳು ಪ್ರದರ್ಶನಗೊಳಿಸಲಿದ್ದು, ಫೆಬ್ರುವರಿ 14ರ ತನಕ ಆಟೋ ಎಕ್ಸ್ ಪೋ ವಿಕ್ಷಣೆ ಮಾಡಬಹುದಾಗಿದೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

2018ರ ಆಟೋ ಎಕ್ಸ್ ಪೋ ಹಲವು ಹೊಸತನಗಳಿಗೆ ಸಾಕ್ಷಿಯಾಗಲಿದ್ದು, ಆಟೋ ಉದ್ಯಮದಲ್ಲಿನ ಬದಲಾಣೆಗೆ ದಿಟ್ಟ ಹೆಜ್ಜೆಯಾದ ಎಲೆಕ್ಟ್ರಿಕ್ ವಾಹನಗಳೇ 2018 ಆಟೋ ಎಕ್ಸ್ ಪೋ ಕೇಂದ್ರ ಬಿಂದುವಾಗಲಿವೆ. ಇದರ ಜೊತೆಗೆ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಗಳಾದ ಮಾರುತಿ ನಿರ್ಮಾಣದ 2018 ಸ್ವಿಫ್ಟ್ ಹೊಸ ಭರವಸೆ ಹುಟ್ಟುಹಾಕಿದ್ದು, ನಮ್ಮ ಡ್ರೈವ್ ಸ್ಪಾರ್ಕ್ ತಂಡವು ಹೊಸ ವಾಹನಗಳ ಕುರಿತಾದ ಸಂಪೂರ್ಣ ಮಾಹಿತಿ ಒದಗಿಸಲಿದೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಕಾರುಗಳು

2018ರ ಅವಧಿಗೆ ಭಾರತ ಪ್ರವೇಶ ಪಡೆಯುತ್ತಿರುವ ಹೊಸ ಕಾರು ಮಾದರಿಗಳಾದ 2018 ಸ್ವಿಫ್ಟ್, ಟೊಯೊಟಾ ವಿಯೊಸ್, ಮಹೀಂದ್ರಾ ಟಿವೊಲಿ ಮತ್ತು ಪ್ರಥಮ ಬಾರಿಗೆ ದೇಶಿಯ ಮಾರುಕಟ್ಟೆಗೆ ಲಗ್ಗೆಯಿಡುತ್ತಿರುವ ಕಿಯಾ ಮೋಟಾರ್ಸ್, ಎಂಜಿ ಮೋಟಾರ್ಸ್ ಕುರಿತಾದ ಸಂಪೂರ್ಣ ಮಾಹಿತಿ ಲಭ್ಯಲಿರಲಿದೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಬೈಕ್ ಮತ್ತು ಸ್ಕೂಟರ್‌ಗಳು

2018 ಆಟೋ ಎಕ್ಸ್ ಪೋದಲ್ಲಿ ಹಲವಾರು ಮಾದರಿಯ ಬೈಕ್‌ಗಳು ಮತ್ತು ಸ್ಕೂಟರ್‌ಗಳು ಪ್ರದರ್ಶನಕ್ಕಾಗಿ ತುದಿಗಾಲ ಮೇಲೆ ನಿಂತಿದ್ದು, ಇವುಗಳಲ್ಲಿ ಹೀರೋ ಎಕ್ಸ್‌ಪಲ್ಸ್, ಬಿಎಂಡಬ್ಲ್ಯು ಜಿ310 ಆರ್, ಸುಜುಕಿ 125 ಸಿಸಿ ಮ್ಯಾಕ್ಸಿ ಸ್ಕೂಟರ್, ಬರ್ಗಮನ್ 125 ಜೊತೆಗೆ ಹೋಂಡಾ, ಟಿವಿಎಸ್, ಯುಎಂ ಮೋಟಾರ್ಸ್, ಒಕಿನೋವಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಪ್ರದರ್ಶನವಾಗಲಿವೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಪರಿಕಲ್ಪನೆಗಳು

ಆಟೋ ಉದ್ಯಮದಲ್ಲಿ ವಾಹನಗಳ ಪರಿಕಲ್ಪನೆ ಅತಿ ಮುಖ್ಯವಾಗಿದ್ದು, ಇವುಗಳು ಭವಿಷ್ಯದಲ್ಲಿ ಹೊಸ ಸಂಚಲನ ಸೃಷ್ಟಿಸುವ ಶಕ್ತಿಯನ್ನು ಹೊಂದಿರುತ್ತವೆ. ಹೀಗಾಗಿ ಜಗತ್ತಿನ ಎಲ್ಲಾ ಆಟೋ ಉತ್ಪಾದಕರು ಭವಿಷ್ಯದ ವಾಹನಗಳ ಬಗ್ಗೆ ವಿಶೇಷ ಒತ್ತು ನೀಡುವುದಲ್ಲದೇ ಅವುಗಳ ಅಭಿವೃದ್ಧಿ ಬೃಹತ್ ಪ್ರಮಾಣದ ಹೂಡಿಕೆ ಕೂಡಾ ಮಾಡಲಾಗುತ್ತದೆ.

ದೆಹಲಿಯಲ್ಲಿ ಭರ್ಜರಿ ಚಾಲನೆ ಪಡೆದುಕೊಂಡ '2018ರ ಆಟೋ ಎಕ್ಸ್ ಪೋ'

ಹಾಗಿಯೇ ಈ ಬಾರಿಯ 2018 ಆಟೋ ಎಕ್ಸ್ ಪೋದಲ್ಲಿ ಪ್ರಮುಖ ಸಂಸ್ಥೆಗಳು ತಮ್ಮ ಹತ್ತಾರು ಪರಿಕಲ್ಪನಾ ವಾಹನಗಳನ್ನು ಪ್ರದರ್ಶನ ಮಾಡಲಿವೆ.

Read more on auto expo 2018 bikes cars bus
English summary
Auto Expo 2018 LIVE Updates: New Car & Bike Launches, Unveils, Concepts, Showcases, Images & More.

Latest Photos

ಕರ್ನಾಟಕ ವಿಧಾನಸಭೆ ಚುನಾವಣೆ 2018

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark