ಸದ್ಯದಲ್ಲೇ ಗುಂಡಿ ಮುಕ್ತವಾಗಲಿದೆ ನಮ್ಮ ಬೆಂಗಳೂರು..

By Rahul Ts

ಸಿಲಿಕಾನ್ ಸಿಟಿ ಬೆಂಗಳೂರಿನ ಯಾವುದೇ ಭಾಗಕ್ಕೂ ಹೋದ್ರು ರಸ್ತೆ ಗುಂಡಿಗಳ ಗೋಳು ತಪ್ಪುತ್ತಿಲ್ಲ. ಇದಕ್ಕೆ ಪರಿಹಾರ ನೀಡಲು ಮುಂದಾಗಿರುವ ಬಿಬಿಎಂಪಿಯು ನಗರದ ಪ್ರಮುಖ ರಸ್ತೆಗಳನ್ನು ಕಾಂಕ್ರೀಟ್‌ಕರಣ ಮಾಡಲು ಯೋಜಿಸಿದ್ದು, ವಾಹನ ಸವಾರರಿಗೆ ಸಿಹಿ ಸುದ್ಧಿ ನೀಡಲು ಮುಂದಾಗಿದೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಸಿಲಿಕಾನ್ ಸಿಟಿ ಎಂದ್ರೆ ಜನಪ್ರಿಯವಾಗಿರುವ ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದಾಗುವ ಅವಾಂತರ ಅಷ್ಟಿಷ್ಟಲ್ಲ. ದಿನಂಪ್ರತಿ ಒಂದಿಲ್ಲಾ ಒಂದು ಕಡೆ ದುರಂತಗಳಿಗೆ ಕಾರಣವಾಗುತ್ತಿರುವ ಹಳ್ಳದಂತಿರುವ ರಸ್ತೆಗಳು ವಾಹನ ಸವಾರರ ಬಲಿ ಪಡೆಯಲು ಕಾಯ್ದು ಕುಳಿತಿವೆ. ಹೀಗಿರುವಾಗ ಅಸಮಾಧಾನ ಸಂಗತಿಯೊಂದನ್ನು ತಿಳಿಸಿರುವ ಬಿಬಿಎಂಪಿಯು ನಗರ ಪ್ರಮುಖ ರಸ್ತೆಗಳಿಗೆ ಶಾಶ್ವತ ಪರಿಹಾರ ನೀಡಲು ಮುಂದಾಗಿರುವುದೇ ಸಮಧಾನಕರ ಸಂಗತಿ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ರೂ.641 ಕೋಟಿಯ ವೆಚ್ಚದಲ್ಲಿ ಬೆಂಗಳೂರಿನಲ್ಲಿರುವ ಸುಮಾರು 42 ರಸ್ತೆಗಳನ್ನು ಕಾಂಕ್ರೀಟಿನಿಂದ ಮರುನಿರ್ಮಾಣ ಮಾಡುವುದಾಗಿ ತೀರ್ಮಾನಿಸಿದ್ದಾರೆ. ಈ ಕಾರ್ಯಕ್ಕಾಗಿ ಬಿಬಿಎಂಪಿ ಅಧಿಕಾರಿಗಳು ಟೆಂಡರ್‍ ಆಹ್ವಾನಿಸಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

2016-17 ರ ಅನುದಾನದಲ್ಲಿ ಬಿಬಿಎಂಪಿ ಗುರುತಿಸಲ್ಪಟ್ಟಿರುವ ರಸ್ತೆಗಳಲ್ಲಿ 15 ಪ್ರತಿಶತದಷ್ಟನ್ನೂ ಪೂರ್ಣಗೊಳಿಸದಿದ್ದರೂ, 2017-18 ರ ಬಜೆಟ್‍ನ ಅನುದಾನದಲ್ಲಿ 42 ರಸ್ತೆಗಳಲ್ಲಿ ಕಾಂಕ್ರೀಟ್ ಮಾಡುವುದಾಗಿ ಹೇಳಿಕೊಂಡಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಕಳೆದ ವರ್ಷ 2017-18ರಲ್ಲಿ ಬಿಬಿಎಂಪಿಯು ಸುಮಾರು 93 ಕಿಲೋಮೀಟರ್ ಉದ್ದದ ರಸ್ತೆಯನ್ನು ಕಾಂಕ್ರೀಟ್‍‍ನಿಂದ ನಿರ್ಮಾಣ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ ಕೆಲವು ತಿಂಗಳುಗಳ ಹಿಂದೆ ಬೆಂಗಳೂರು ಟ್ರಾಫಿಕ್ ಪೊಲೀಸರು ಬಿಬಿಎಂಪಿಯವರಿಗೆ ತಾವು ತೆಗೆದುಕೊಂಡ ಸಮಯದಲ್ಲಿ ಯೋಜನೆ ಪೂರ್ಣಗೊಳಿಸದ ಕಾರಣ ಕಾಮಗಾರಿ ನಿಲ್ಲಿಸಲು ಆದೇಶಿಸಿದ್ದರು.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಈ ಬಾರಿ ಬಿಬಿಎಂಪಿ ಬೆಂಗಳೂರು ನಗರದಲ್ಲಿ ಆಯ್ಕೆ ಮಾಡಲಾದ 42 ರಸ್ತೆಗಳನ್ನು ಕಾಂಕ್ರೀಟ್‍‍ನಿಂದ ನಿರ್ಮಾಣ ಮಾಡುಲು ನೀಡಿದ ಗಡುವಿನೊಳಗೆ ಕಾಂಟ್ರ್ಯಾಕ್ಟರ್‍‍ಗಳು ಪೂರ್ಣಗೊಳಿಸಬೇಕಿದೆ. ಕಳೆದ ಬಾರಿ ಆದ ಘಟನೆಯಿಂದ ಎಚ್ಚೆತ್ತುಕೊಂಡ ಬಿಬಿಎಂಪಿ 15 ತಿಂಗಳುಗಳ ಒಳಗೆ ಕೈಗೆತ್ತಿಕೊಂಡ ಕಾರ್ಯವನ್ನು ಪೂರ್ಣಗೊಳಿಸುವಂತೆ ಸೂಚನೆ ನೀಡಿದೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಟೆಂಡರ್ ಅನ್ನು ಸಲ್ಲಿಸಲು ಸೆಪ್ಟೆಂಬರ್ 20ರಂದು ಕೊನೆಯ ದಿನಾಂಕವಾಗಿದ್ದು, ಒಮ್ಮೆ ಕೆಲಸದ ಆದೇಶವನ್ನು ನೀಡಿದಾಗ 42 ಸ್ಥಳಗಳಲ್ಲಿ ಕಾರ್ಯವನ್ನು ಪ್ರಾರಂಭಿಸಲು ಬಿಬಿಎಂಪಿ ಆದೇಶಿಸಿದೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಕೊಟ್ಟ ಅವಧಿಯಲ್ಲಿ ಕಾರ್ಯವನ್ನು ಮುಗಿಸುತ್ತೇವೆ.

ಕಳೆದ ಬಾರಿ ಕೈಗೆತ್ತಿಕೊಂಡ ಕಾರ್ಯದಲ್ಲಿ ಕಾರ್ಮಿಕರು ಕಾಂಕ್ರೀಟ್ ರಸ್ತೆ ನಿರ್ಮಿಸಲು ಬಹಳ ಸಮಯ ತೆಗೆದುಕೊಂಡ ಕಾರಣದಿಂದ ಸಾರ್ವಜನಿಕರಿಂದಲೂ ಮತ್ತು ಇನ್ನಿತರೆ ಇಲಾಖೆಗಳಿಂದ ನಾವು ಸರಿಯಾದ ಪಾಠವನ್ನು ಕಲಿತ್ತಿದ್ದೇವೆ. ಆದರೆ ಈ ಬಾರಿ ಎಚ್ಚೆತ್ತುಕ್ಕೊಂಡು ಬಿಡ್ಡರ್‍‍ಗಳಿಗೆ ಕೊಟ್ಟ ಸಮಯದೊಳಗೆ ಕಡ್ಡಾಯವಾಗಿ ಕಾರ್ಯವನ್ನು ಮುಗಿಸಬೇಕೆಂದು ಆದೇಶವನ್ನು ನೀಡುತ್ತೇವೆ ಎಂದು ಬಿಬಿಎಂಪಿಯ ಪ್ರಾಜೆಕ್ಟ್ ಸೆಂಟ್ರೈಲ್ ಚೀಫ್ ಎಂಜಿನಿಯರ್ ಆದ ಕೆ.ಟಿ ನಾಗರಾಜ್ ಹೆಳಿಕೊಂಡಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಟ್ರಾಫಿಕ್ ಪೊಲೀಸರ ಸಮಸ್ಯೆ.?

ಇನ್ನು ಟ್ರಾಫಿಕ್ ಪೊಲೀಸರ ಅನುಮತಿಯ ಬಗ್ಗೆ ಮಾತನಾಡುತ್ತಾ 'ಈಗಾಗಲೇ ಮುಖ್ಯ ಕಾರ್ಯದರ್ಶಿ ಅವರು ಈ ಕುರಿತಾಗಿ ಟ್ರಾಫಿಕ್ ಪೋಲಿಸರಿಗೆ ಸೂಚನೆಯನ್ನು ನೀಡಿದ್ದಾರೆ ಆದ್ದರಿಂದ ಅವರು ನಮ್ಮ ಕಾರ್ಯಕ್ಕೆ ಅಡ್ಡಿಯಾಗುವುದಿಲ್ಲ. ಸಮಯವನ್ನು ನಿಗದಿ ಪಡಿಸಿ ಆಯ್ಕೆ ಮಾಡಿಕೊಂಡ 42 ರಸ್ತೆಗಳಲ್ಲಿ ಒಂದೇ ಬಾರಿಗೆ ಕಾಮಗಾರಿ ಶುರುಮಾಡಲಿದ್ದೇವೆ ಎಂದು ಕೂಡ ಹೇಳಿಕೊಂಡಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಈಗಾಗಲೇ ರಾಜ್ಯ ಸರ್ಕಾರವು ನಗರಗಳಲ್ಲಿನ ಪ್ರಮುಖ ರಸ್ತೆಗಳ ದೀರ್ಘಾಯುಷ್ಯವನ್ನು ಹೆಚ್ಚಿಸಲು ಕಾಂಕ್ರೀಟ್‍‍ನಿಂದ ನಿರ್ಮಿಸಲು ಆದೇಶಿಸಿದೆ. 2016-17ರ ಬಡ್ಜೆಟ್ ವೇಳೆ ಕೈಗೆತ್ತಿಕೊಂಡು ಕಳೆದುಕೊಂಡ ಅವಕಾಶದಿಂದ ನಾವು ಪಾಠವನ್ನು ಕಲಿತ್ತಿದ್ದೇವೆ. ಈ ಬಾರಿ ನಾವು ಮಾಡಿದ ತಪ್ಪನ್ನೆಲ್ಲಾ ತಿದ್ದುಕೊಳ್ಳಲು ನಾವು ಮುಂದಾಗಿದ್ದೇವೆ ಎಂದಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಮೊದಲ ಹಂತದ ಕೆಲಸವು ದೊಡ್ಡ ಸಮಸ್ಯೆಗಳನ್ನು ಉಂಟುಮಾಡಿತು. ಏಕೆಂದರೆ ಆ ರಸ್ತೆಗಳು ಸದಾ ಕಾರ್ಯನಿರತವಾಗಿವೆ ಮತ್ತು ಹೆಚ್ಚಿನ ಸಾಂದ್ರತೆಯ ಸಂಚಾರ ರಸ್ತೆಗಳಾಗಿವೆ. ಆದರೆ ಈ ಬಾರಿ, ಈ ಮಾರ್ಗಗಳು ಪರ್ಯಾಯ ರಸ್ತೆಗಳನ್ನು ಹೊಂದಿರುವ ಪ್ರಮುಖ ರಸ್ತೆಗಳಾಗಿರುತ್ತವೆ. ಕೆಲಸ ಶೀಘ್ರವಾಗಿ ಪೂರ್ಣಗೊಳಿಸುವುದಾಗಿ ಎಂದು ನಾವು ಖಚಿತಪಡಿಸುತ್ತೇವೆ. ಎಂದು ಬಿಬಿಎಂಪಿ ಆಯುಕ್ತ ಎನ್ ಮಂಜುನಾಥ್ ಪ್ರಸಾದ್ ಹೇಳಿಕೊಂಡಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಸುಮಾರು 840 ಕೋಟಿಯ ಬಜೆಟ್‍‍ನಲ್ಲಿ ಬಿಬಿಎಂಪಿ 2016-17ರಲ್ಲಿ 93 ಕಿಲೋಮೀಟರ್‍‍ನಷ್ಟು ರಸ್ತೆಗಳನ್ನು ಕಾಂಕ್ರೀಟ್‍‍ನಿಂದ ತಯಾರು ಮಾಡಬೇಕಾಗಿತ್ತು, ಆದರೆ ಕೊಟ್ಟ ಸಮಯದಲ್ಲಿ ಕೇವಲ 53 ರಸ್ತೆಗಳನ್ನು ಮಾತ್ರ ಕಾಂಕ್ರೀಟ್‍‍ನಿಂದ ನಿರ್ಮಾಣಗೊಳಿಸಿದ್ದಾರೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಅದರ ಹೊರತಾಗಿ, ಬಿಬಿಎಂಪಿ ತಾವು ಮಾಡುವೆವು ಎಂದು ಕೈಗೆತ್ತಿಕೊಂಡ ಕಾರ್ಯದಲ್ಲಿ ಶೇಕಡಾ 15ರಷ್ಟನ್ನು ಮುಗಿಸಲು ಸಾಧ್ಯವಾಗಲಿಲ್ಲ. ನಗರದಲ್ಲಿನ ಮೈಸೂರು ರಸ್ತೆ, ಕೋರಮಂಗಲ, ಕನಕಪುರ ರಸ್ತೆ, ಕಾಡುಗೋಡಿ, ಆನೆಪಾಳ್ಯ ಮತ್ತು ಗೋರುಗುಂಟೆ ಪಾಳ್ಯ ರಸ್ತೆಗಳಲ್ಲಿ ನಿಧಾನಗತಿಯಲ್ಲಿ ಕಾರ್ಯಗಳು ಆಗುತ್ತಿದ್ದು, ಇದರಿಂದ ಸ್ಥಳಿಯರು ಮತ್ತು ಪ್ರಯಾಣಿಕರಿಂದ ತೀಕ್ಷ ವಿಮರ್ಶೆಯನ್ನು ಮತ್ತು ಹೆಚ್ಚು ಪರಿಣಾಮವನ್ನು ನೀಡಿತ್ತು.ಬಿಬಿಎಂಪಿ ಪ್ರಕಾರ, ಮಾನ್ಸೂನ್ ಕಾರಣದಿಂದಾಗಿ ವೈಟ್ ಟ್ಯಾಪಿಂಗ್ ಮಾಡುವುದನ್ನು ನಗರದಲ್ಲಿ ನಿಲ್ಲಿಸಲಾಗಿದೆ.

ಸಧ್ಯದಲ್ಲೆ ಗುಂಡಿಮುಕ್ತವಾಗಲಿದೆ ನಮ್ಮ ಬೆಂಗಳೂರು..

ಬಿಬಿಎಂಪಿ ಶೀಘ್ರದಲ್ಲೇ ಕಾಂಕ್ರೀಟ್ ರಸ್ತೆ ಮಾಡಲಿರುವ ನಗರದಮುಖ್ಯರಸ್ತೆಗಳಿವು..

ಜಯನಗರದ ಶಾಪಿಂಗ್ ಕಾಂಪ್ಲೆಕ್ಸ್ ಮತ್ತು ಆಸುಪಾಸು

ಈಸ್ಟ್ ಎಂಡ್ ರಸ್ತೆಯಿಂದ ಇನ್ನರ್ ರಿಂಗ್ ರೋಡ್

ಬಿಟಿಎಂ 29ನೇ ಮುಖ್ಯರಸ್ತೆಯಿಂದ ಔಟರ್‍‍ರಿಂಗ್ ರೋಡ್

5ನೇ ಮತ್ತು 7ನೇ ಕ್ರಾಸ್ ಕೋರಮಂಗಲದಿಂದ ವಿಪ್ರೋ ಗೇಟ್

1ನೇ ಕ್ರಾಸ್ ಎಂಪೈರ್ ರಸ್ತೆ, ಕೋರಮಂಗಲ 5ನೇ ಬ್ಲಾಕ್

ಸರ್ಜಾಪುರ್ ರೋಡ್‍ನಿಂದ 100ಫೀಟ್ ಕೋರಮಂಗಲ ರಸ್ತೆ ಸೇರಿದಂತೆ ಪ್ರಮುಖ 41 ರಸ್ತೆಗಳು ಸದ್ಯದಲ್ಲೇ ಕಾಂಟ್ರಿಕ್ ರಸ್ತೆಗಳಾಗಲಿವೆ.

Kannada
Read more on auto news bangalore
English summary
Bangalore white topping 42 new roads bbmp koramangala jayanagar.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more