ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಕಾರುಗಳ ಮಾರಾಟದಲ್ಲಿ ಭಾರೀ ಮುನ್ನಡೆ ಸಾಧಿಸುತ್ತಿದ್ದು, ಮುಂದಿನ ತಿಂಗಳಷ್ಟೇ ನ್ಯೂ ಜನರೇಷನ್ ಎರ್ಟಿಗಾ ಕಾರುಗಳನ್ನು ಸಹ ಪರಿಚಯಿಸುವ ತವಕದಲ್ಲಿದೆ.

By Praveen Sannamani

ಸದ್ಯ ಮಾರುತಿ ಸುಜುಕಿ ಸಂಸ್ಥೆಯು ಎರ್ಟಿಗಾ ಕಾರುಗಳ ಮಾರಾಟದಲ್ಲಿ ಭಾರೀ ಮುನ್ನಡೆ ಸಾಧಿಸುತ್ತಿದ್ದು, ಮುಂದಿನ ತಿಂಗಳಷ್ಟೇ ನ್ಯೂ ಜನರೇಷನ್ ಎರ್ಟಿಗಾ ಕಾರುಗಳನ್ನು ಸಹ ಪರಿಚಯಿಸುವ ತವಕದಲ್ಲಿದೆ. ಹೀಗಿರುವಾಗ ಹಳೆಯ ವರ್ಷನ್ ಎರ್ಟಿಗಾ ಮಾರಾಟ ಬಂದ್ ಆಗಲಿದೆ ಎಂದು ಕೊಂಡಿದ್ದ ಗ್ರಾಹಕರಿಗೆ ಇದೀಗ ಹೊಸ ಸುದ್ಧಿ ನೀಡಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಯಾವುದೇ ಒಂದು ಹೊಸ ಕಾರು ಮಾರುಕಟ್ಟೆಗೆ ಬಂದಾಗ ಅದೇ ಕಾರಿನ ಹಳೆಯ ವರ್ಷನ್‌ಗಳು ಇದ್ದಲ್ಲಿ ಸಾಮಾನ್ಯವಾಗಿ ಬಂದ್ ಆಗುವುದಲ್ಲದೇ ಹೊಸ ವರ್ಷನ್‌ಗಳ ಮಾರಾಟದ ಮೇಲೆ ಹೆಚ್ಚಿನ ಗಮನಹರಿಸಲಾಗುತ್ತದೆ. ಆದ್ರೆ ಮಾರುತಿ ಸುಜುಕಿ ಮಾತ್ರ ಹೊಸ ವರ್ಷನ್ ಎರ್ಟಿಗಾ ಜೊತೆ ಜೊತೆಗೆಯೇ ಹಳೆಯ ವರ್ಷನ್ ಎರ್ಟಿಗಾ ಕಾರುಗಳನ್ನು ಸಹ ಮಾರಾಟ ಮಾಡಲು ನಿರ್ಧರಿಸಲಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಹೌದು, ಮಾರುತಿ ಸುಜುಕಿ ಸಂಸ್ಥೆಯು ಹೊಸ ಜನರೇಷನ್ ಎರ್ಟಿಗಾ ಜೊತೆ ಜೊತೆಗೆ ಹಳೆಯ ಮಾದರಿಯ ಎರ್ಟಿಗಾ ಕಾರುಗಳನ್ನು ಸಹ ಮಾರಾಟ ಮಾಡಲಿದ್ದು, ಹೊಸ ವರ್ಷನ್ ಎರ್ಟಿಗಾ ಮಾತ್ರ ಈಗಿರುವ ಎರ್ಟಿಗಾ ಕಾರುಗಳಿಂತಲೂ ಸಾಕಷ್ಟು ವಿಭಿನ್ನತೆಯನ್ನು ಹೊಂದಿರಲಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಆದರೆ, ಮಾರುತಿ ಸುಜುಕಿ ಸಂಸ್ಥೆಯು ಹಳೆಯ ವರ್ಷನ್ ಎರ್ಟಿಗಾ ಕಾರುಗಳನ್ನು ಟೂರಿಸ್ಟ್ ಕಾರು ಮಾದರಿಯಾಗಿ ಮಾರಾಟ ಮಾಡುವ ಸಾಧ್ಯತೆಗಳಿವೆ ಎನ್ನಲಾಗಿದ್ದು, ಹೊಸ ಎರ್ಟಿಗಾ ಕಾರುಗಳಿಂತ ಇದು ತಾಂತ್ರಿಕವಾಗಿ ಕಡಿಮೆ ಗುಣಮಟ್ಟದ ಕಾರು ಮಾದರಿಯಾಗಿರಲಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಇದೇ ಕಾರಣಕ್ಕೆ ಟೂರಿಸ್ಟ್ ವಿಭಾಗಕ್ಕೆ ಪರಿಚಯಿಸುವ ಮಾರುತಿ ಸುಜುಕಿ ಸಂಸ್ಥೆಯು ವಾಣಿಜ್ಯ ಬಳಕೆಗೆ ಕಡಿಮೆ ಬೆಲೆಗಳಲ್ಲಿ ಹಳೆಯ ವರ್ಷನ್ ಎರ್ಟಿಗಾ ಮಾರಾಟವನ್ನು ಮುಂದುವರಿಸಲಿದ್ದು, ಹೊಸ ಕಾರುಗಳು ಯಥಾ ಪ್ರಕಾರವಾಗಿ ಮಾರಾಟಕ್ಕೆ ಲಭ್ಯವಿರಲಿವೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಎಂಜಿನ್ ಸಾಮರ್ಥ್ಯ

ಸದ್ಯ ಎರ್ಟಿಗಾ ಮಾದರಿಗಳು 1.4-ಲೀಟರ್ ಪೆಟ್ರೋಲ್ ಮತ್ತು 1.3-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಲಭ್ಯವಿದ್ದು, ಎರ್ಟಿಗಾ ಫೇಸ್‌ಲಿಫ್ಟ್ ಮಾದರಿಗಳು ಹೊಸದಾಗಿ ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಪ್ರೇರಿತ 1.5-ಲೀಟರ್ ಡೀಸೆಲ್ ಎಂಜಿನ್ ಪಡೆಯಲಿವೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಮೈಲ್ಡ್ ಹೈಬ್ರಿಡ್ ಟೆಕ್ನಾಲಜಿ ಬಳಕೆ ಹಿನ್ನೆಲೆ ಇಂಧನ ದಕ್ಷತೆ ಹೆಚ್ಚಲಿದ್ದು, 7 ಸೀಟರ್ ಎಂಪಿವಿ ಮಾದರಿಗಳನ್ನು ಪ್ಯಾಸೆಂಜರ್ ಕಾರುಗಳನ್ನಾಗಿ ಬಳಕೆ ಮಾಡುವ ಗ್ರಾಹಕರಿಗೆ ಹಾಗೂ ಕುಟುಂಬ ಸದಸ್ಯರು ಒಟ್ಟಾಗಿ ಹೊರಹೊಗಲು ಇನ್ನೊಂದು ಉತ್ತಮ ಆಯ್ಕೆ ಎನ್ನಬಹುದು.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಇನ್ನು ಇದೇ ವರ್ಷ ದೀಪಾವಳಿ ಹೊತ್ತಿಗೆ ಬಿಡುಗಡೆಗೆ ಸಜ್ಜಾದ ಹೊಸ ತಲೆಮಾರಿನ ಎರ್ಟಿಗಾ ಕಾರುಗಳು ಭಾರೀ ಆಕರ್ಷಣೆ ಕಾರಣವಾಗಿದ್ದು, ಪ್ರಿಮಿಯಂ ವಿನ್ಯಾಸಗಳ ಜೊತೆಗೆ ವಿಸ್ತರಿತ ಕ್ಯಾಬಿನ್ ವಿನ್ಯಾಸವು ಸುಖಕರ ಪ್ರಯಾಣಕ್ಕೆ ಪೂರಕವಾಗಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಕಾರಿನ ಡಿಸೈನ್ ಮತ್ತು ಎಂಜಿನ್ ವಿಭಾಗದಲ್ಲೂ ಸಹ ಸುಲಭ ಕಾರು ಚಾಲನೆಗಾಗಿ ಬದಲಾವಣೆ ತರಲಾಗಿದ್ದು, ಕಾರಿನ ಫ್ರಂಟ್ ಎಂಡ್‌‌ನಲ್ಲಿ ಗುರತರ ಬದಲಾವಣೆಗಾಗಿ ನ್ಯೂ ಗ್ರಿಲ್, ಹೊಸತನದ ಹೆಡ್‌ಲ್ಯಾಂಪ್, ಸ್ಪೋರ್ಟಿ ಬಂಪರ್, ಟ್ರೈಯಾಂಗಲ್ ಫಾಗ್ ಲ್ಯಾಂಪ್ ಮತ್ತು ಸೆಂಟ್ರಲ್ ಏರ್ ಡ್ಯಾಮ್ ಜೋಡಣೆ ಮಾಡಲಾಗಿದೆ.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಹಾಗೆಯೇ ಕಾರಿನ ಸೈಡ್ ಪ್ರೋಫೈಲ್‌ನಲ್ಲೂ ಬದಲಾವಣೆ ತರಲಾಗಿದ್ದು, ಶೋಲ್ಡರ್ ಲೈನ್, ಟೈಲ್ ಲ್ಯಾಂಪ್ ಕ್ಲಸ್ಟರ್, ಫ್ಲೋಟ್ರಿಂಗ್ ರೂಫ್ ಡಿಸೈನ್ ಸೇರಿಸಲಾಗಿದೆ. ಇದರಿಂದ ಎಂಪಿವಿ ಮಾದರಿಗಳಲ್ಲೇ ವಿಭಿನ್ನ ಗುಣಲಕ್ಷಣಗಳನ್ನು ಹೊಂದಿರುವ ಹೊಸ ಎರ್ಟಿಗಾ ಕಾರು ಹಳೆಯ ಎರ್ಟಿಗಾ ಕಾರಿಗಿಂತ ಸಾಕಷ್ಟು ಭಿನ್ನತೆ ಹೊಂದಿದೆ ಎನ್ನಬಹುದು.

ಎರ್ಟಿಗಾ ಕಾರುಗಳ ಮಾರಾಟ ವಿಚಾರದಲ್ಲಿ ಹೊಸ ನಿರ್ಧಾರ ಪ್ರಕಟಿಸಲಿದೆ ಮಾರುತಿ ಸುಜುಕಿ

ಜೊತೆಗೆ ಪ್ರಿಮಿಯಂ ಗುಣಲಕ್ಷಣಗಳಾದ ಸ್ಪ್ಲಿಟ್ ಎಲ್ ಶೇಪ್ ಟೈಲ್ ಲೈಟ್ ಕ್ಲಸ್ಟರ್, ಎಲ್ಇಡಿ ಹೈ ಮೌಂಟ್ ಸ್ಟಾಪ್ ಲ್ಯಾಂಪ್, ರೀ ಡಿಸೈನ್ ಟೈಲ್‌ಗೇಟ್ ಮತ್ತು ಬಂಪರ್ ಹೊಂದಿರಲಿವೆ. ಅದೇ ರೀತಿಯಾಗಿ ಕಾರಿನ ಒಳಭಾಗದಲ್ಲಿ ಫ್ಲಕ್ಸ್ ವುಡ್‌ನೊಂದಿಗೆ 6.8-ಇಂಚಿನ ಟಚ್ ಸ್ಟ್ರೀನ್ ಇನ್ಪೋಟೈನ್‌ಮೆಂಟ್, ಲೆದರ್ ವ್ಯಾರ್ಪ್ ಇರುವ ಸ್ಟೀರಿಂಗ್ ಮತ್ತು ನ್ಯೂ ಇನ್ಟ್ರುಮೆಂಟಲ್ ಕ್ಲಸ್ಟರ್ ಪಡೆದಿದೆ.

Most Read Articles

Kannada
Read more on maruti suzuki mpv
English summary
Current-Gen Maruti Ertiga Will Not Be Discontinued In India — Here’s Why.
Story first published: Monday, July 2, 2018, 17:58 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X