ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ವ್ಯಾಗನ್ ಆರ್ ಪರಿಚಯಿಸಲು ಮುಂದಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂ

By Rahul Ts

ಆಲ್ಟೋ 800ನಿಂದ ಎಸ್ ಕ್ರಾಸ್ ತನಕ ಅತ್ಯುತ್ತಮ ಬೇಡಿಕೆ ಸಾಧಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಇದೀಗ ವಿನೂತನ 7 ಸೀಟರ್ ವ್ಯಾಗನ್ ಆರ್ ಪರಿಚಯಿಸಲು ಮುಂದಾಗಿದೆ. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ವಾಣಿಜ್ಯ ಬಳಕೆಯ ಉದ್ದೇಶಗಳಿಗಾಗಿ 7 ಆಸನವುಳ್ಳ ಎಂಪಿವಿ ಕಾರುಗಳಿಗೆ ಉತ್ತಮ ಬೇಡಿಕೆಯಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಈ ಹಿನ್ನೆಲೆ ಯುರೋಪ್ ರಾಷ್ಟ್ರಗಳಲ್ಲಿ ಜನಪ್ರಿಯತೆ ಸಾಧಿಸಿರುವ ಸೊಲಿಯೊ ಕಾರು ಮಾದರಿಯಲ್ಲೇ 7 ಸೀಟರ್ ವ್ಯಾಗನ್ ಆರ್ ಆವೃತ್ತಿಯನ್ನು ಸಹ ಭಾರತದಲ್ಲಿ ಬಿಡುಗಡೆಗೊಳಿಸುವ ಉದ್ಧೇಶದಿಂದ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಈ ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಸೆರೆಹಿಡಿದ ಫೋಟೊನಲ್ಲಿ ಕಂಡುಬರುವ ಮಾರುತಿ ವ್ಯಾಗನ್ಆರ್ 7 ಆಸನವನ್ನು ಹೊಂದಿದ್ದು, ಪ್ರಸ್ತುತ ವ್ಯಾಗನಾರ್‍‍ಗಿಂತ ಹೆಚ್ಚು ಎತ್ತರದ ವಿನ್ಯಾಸವನ್ನು ಹೊಂದಿದೆ. ಇದು ರೂಫ್‍‍ನ ಮೇಲೆ ಒಂದು ಸ್ಪಾಯ್ಲರ್ ಮತ್ತು ಒಂದು ಶಾರ್ಕ್ ರೆಕ್ಕೆ ಆಂಟೆನಾವನ್ನು ಹೊಂದಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಹೊಸ ವ್ಯಾಗನಾರ್ ಕಾರುಗಳನ್ನು ವಿನೂತನ ಹಾರ್ಟ್‌ಟೆಕ್ ತಂತ್ರಜ್ಞಾನ ಪ್ರೇರಣೆಯೊಂದಿಗೆ ಅಭಿವೃದ್ಧಿಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಈಗಾಗಲೇ ಮಾರುತಿ ಸುಜುಕಿ ನಿರ್ಮಾಣದ ಸ್ವಿಫ್ಟ್, ಡಿಜೈರ್, ಎಸ್ ಕ್ರಾಸ್ ಕಾರುಗಳು ಕೂಡಾ ಹಾರ್ಟ್‌ಟೆಕ್ ತಂತ್ರಜ್ಞಾನ ಅಡಯಲ್ಲೇ ನಿರ್ಮಾಣವಾಗುತ್ತಿದ್ದು, ಈ ಹಿನ್ನೆಲೆ ವ್ಯಾಗನರ್ 7 ಸೀಟರ್ ಕಾರುಗಳು ಸಹ ಉತ್ತಮ ಬಾಡಿ ಕಿಟ್ ಪಡೆದುಕೊಂಡಿರಲಿವೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಸ್ಪಾಟ್ ಟೆಸ್ಟಿಂಗ್ ವೇಳೆ ಸಿಕ್ಕಿರುವ ಮಾಹಿತಿ ಪ್ರಕಾರ ಸುಜುಕಿ ನಿರ್ಮಾಣದ ವ್ಯಾಗನರ್ ಹೊಸ ಕಾರುಗಳು 5 ಪ್ಲಸ್ 2 ಆಸನ ಸೌಲಭ್ಯ ಹೊಂದಿದ್ದು, ಎರ್ಟಿಗಾ ಕಾರಿಗಿಂತ ಕಡಿಮೆ ಮತ್ತು ಇಕೋ ವಾಹನಗಿಂತ ಹೆಚ್ಚಿನ ಮಟ್ಟದ ಕಾರು ಮಾದರಿಯಾಗಿ ಜನಪ್ರಿಯತೆ ಹೊಂದಲಿದೆಯೆಂತೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಎಂಜಿನ್ ಸಾಮರ್ಥ್ಯ

7 ಸೀಟರ್ ವ್ಯಾಗನರ್ ಕಾರುಗಳು ಕೇವಲ ಪೆಟ್ರೋಲ್ ಎಂಜಿನ್ ಮಾದರಿಯಲ್ಲಿ ಮಾತ್ರ ಬರಲಿದ್ದು, ಇದರಲ್ಲಿ 1.2 ಲೀಟರ್ ಪೆಟ್ರೋಲ್ ಎಂಜಿನ್ ಅನ್ನು ಅಳವಡಿಸಲಾಗಿದೆ. ಮಾರುತಿ ಸ್ವಿಫ್ಟ್ ಕಾರಿನಿಂದ ಪಡೆದ ಈ ಎಂಜಿನ್ 82ಬಿಹೆಚ್‍‍ಪಿ ಮತ್ತು 113 ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿರಲಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಹೊಸದಾಗಿ ಬರಲಿರುವ ವ್ಯಾಗನಾರ್ 7 ಸೀಟರ್ ಕಾರಿನಲ್ಲಿ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಅನ್ನು ಪಡೆದಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್ ಹೊದಿರುವುದಲ್ಲದೆ ಸ್ವಯಂಚಾಲಿತ ಎಸಿ ಹಾಗು ಇನ್ನಿತರೆ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಕಾರಿನ ಬೆಲೆಗಳು (ಅಂದಾಜು)

ವಿನೂತನ ವಿನ್ಯಾಸಗಳನ್ನು ಹೊಂದಿರುವ 7 ಸೀಟರ್ ವ್ಯಾನಗರ್ ಕಾರುಗಳ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ.5.50 ಲಕ್ಷದಿಂದ 6.50 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ರೆನಾಲ್ಟ್ ಗೋ+ ಕಾರಿಗೆ ಟಾಂಗ್ ನೀಡಲು ಬರಲಿದೆ 7 ಸೀಟರ್ ವ್ಯಾಗನರ್...

ಒಂದು ವೇಳೆ ಸ್ಪಾಟ್ ಟೆಸ್ಟಿಂಗ್ ನಡೆಸುತ್ತಿರುವ 7 ಸೀಟರ್ ವ್ಯಾಗನರ್ ಮಾದರಿಗಳು ನಿಗದಿತ ಅವಧಿ ಒಳಗೆ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದೇ ಆದಲ್ಲಿ ಎಂಪಿವಿ ಕಾರುಗಳ ವಿಭಾಗದಲ್ಲಿ ಹೊಸ ಸಂಚಲಯ ಸೃಷ್ಠಿಸಲಿದ್ದು, ಡಟ್ಸನ್ ಗೋ ಮತ್ತು ಬಿಡುಗಡೆಗೊಳ್ಳಲಿರುವ ರೆನಾಲ್ಟ್ ಆರ್‍‍‍ಬಿಸಿ ಸಣ್ಣ ಎಮ್‍‍ಪಿವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on maruti suzuki wagonr mpv
English summary
Front of new Maruti WagonR 7 seat variant (Suzuki Solio) spied.
Story first published: Friday, June 29, 2018, 14:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X