ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರುಗಳ ಬೇಡಿಕೆಗೆ ಅನುಗುಣವಾಗಿ ಹೊಸ ಎಸ್‍ಯುವಿ ಕಾರನ್ನು ಪರಿಚಯಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಸಂಸ್ಥೆಯು ಟೆರ್ರಾ ಎಸ್‍‍ಯುವಿ ಕಾರನ್ನು ಮಾ

By Rahul Ts

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ನಿಸ್ಸಾನ್ ದೇಶಿಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರುಗಳ ಬೇಡಿಕೆಗೆ ಅನುಗುಣವಾಗಿ ಹೊಸ ಎಸ್‍ಯುವಿ ಕಾರನ್ನು ಪರಿಚಯಿಸಲಿದೆ. ಭಾರತೀಯ ಮಾರುಕಟ್ಟೆಯಲ್ಲಿ ನಿಸ್ಸಾನ್ ಸಂಸ್ಥೆಯು ಟೆರ್ರಾ ಎಸ್‍‍ಯುವಿ ಕಾರನ್ನು ಮಾತ್ರ ಮಾರಾಟ ಮಾಡುತ್ತಿದ್ದು, ಇದೀಗ ಸಂಸ್ಥೆಯು ತಮ್ಮ ಎರಡನೆಯ ಎಸ್‍‍ಯುವಿ ಕಾರನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ನಿಸ್ಸಾನ್ ಪರಿಚಯಿಸಲಿರುವ ತಮ್ಮ ಎರಡನೆಯ ಎಸ್‍ಯುವಿ ಕಾರಿನ ಹೆಸರನ್ನು ಕಿಕ್ಸ್ ಎಂದು ಕರೆಯಲಾಗುತ್ತಿದ್ದು, ಮಾರುಕಟ್ಟೆಯಲ್ಲಿ ಈ ಕಾರು ಮಾರುತಿ ಸುಜುಕಿ ಎಸ್‍-ಕ್ರಾಸ್, ಹ್ಯುಂಡೈ ಕ್ರೆಟಾ ಮತ್ತು ರೆನಾಲ್ಟ್ ಕ್ಯಾಪ್ಚುರ್ ಕಾರುಗಳಿಗೆ ಪೈಪೋಟಿ ನೀಡಲಿದೆ. ಬಿಡುಗಡೆಗೆ ಸಜ್ಜುಗೊಳ್ಳುತ್ತಿರುವ ಈ ಕಾರು ಈಗಾಗಲೆ ಹಲವಾರು ಬಾರಿ ಭಾರತೀಯ ರಸ್ಥೆಗಳಲ್ಲಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಈ ಬಾರಿ ಕಾರಿನ ಒಳಭಾಗದ ಚಿತ್ರಗಳು ಸೋರಿಕೆಯಾಗಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಸೆರೆಹಿಡಿಯಲಾದ ನಿಸ್ಸಾನ್ ಕಿಕ್ಸ್ ಕಾರಿನ ಒಳಭಾಗದ ಚಿತ್ರಗಳಲ್ಲಿ, ಹೊಸ ನಿಸ್ಸಾನ್ ಕಾರು 7 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಪಡೆದಿರಲಿದ್ದು, ಬ್ಲೂಟೂತ್ ಮತ್ತು ಆಡಿಯೊ ಕಂಟೋಲ್‍‍ಗಳನ್ನು ಹೊಂದಿರುವ 3 ಸ್ಪೀಕ್ ಸ್ಟೀರಿಂಗ್ ವ್ಹೀಲ್‍‍ಗಳನ್ನು ಅಳವಡಿಸಲಾಗಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ನಿಸ್ಸಾನ್ ಕಿಕ್ಸ್ ಈಗಾಗಲೆ ಜಾಗತಿಕ ಮಾರುಕಟ್ಟೆಯಲ್ಲಿ ವಿ-ಪ್ಲಾಟ್‍‍ಫಾರ್ಮ್ ಆಧಾರಿತ ಕ್ರಾಸ್ಓವರ್ ಎಸ್‍ಯುವಿ ಕಾರಿನ ರೂಪದಲ್ಲಿ ಮಾರಾಟಗೊಳ್ಳುತ್ತಿದೆ. ಆದರೆ ಭಾರತಕ್ಕೆ ಬರಲಿರುವ ಕಿಕ್ಸ್ ಕಾರುಗಳು ರೆನಾಲ್ಟ್ ಡಸ್ಟರ್ ಬಿ0 ಪ್ಲಾಟ್‍‍ಫಾರ್ಮ್ ಅನ್ನು ಆಧರಿಸಲಿದೆ ಎನ್ನಲಾಗಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ರೆನಾಲ್ಟ್ ಕ್ಯಾಪ್ಚುರ್ ಕಾರಿನಲ್ಲಿ ಬಳಸಿರುವ 1.5 ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಅನ್ನು ಪಡೆದುಕೊಂಡಿರಲಿದೆ. 1.5 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 104 ಬಿಹೆಚ್‍‍ಪಿ ಮತ್ತು 142ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಇನ್ನು 1.5 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 108ಬಿಹೆಚ್‍‍ಪಿ ಮತ್ತು 240ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ಮತ್ತು ಡೀಸೆಲ್ ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂಗಿದೆ ಜೋಡಿಸಲಾಗಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಇನ್ನು ಕಾರಿನ ವಿನ್ಯಾಸದ ಬಗ್ಗೆ ಹೇಳುವುದಾದರೆ ಕ್ರೋಮ್ ಆಕ್ಸೆಂಟ್‍‍ನೊಂದಿಗೆ ಹನಿಕಾಂಬ್ ಫ್ರಂಟ್ ಗ್ರಿಲ್, ಬೋಲ್ಡ್ ಬಂಪಅರ್ ಮತ್ತು ಎಲ್ಇಡಿ ಹೆಡ್‍‍ಲ್ಯಾಂಪ್‍ಗಳನ್ನು ಪಡೆದುಕೊಂಡಿದ್ದು, ಡ್ಯುಯಲ್ ಪೆಯಿಂಟ್ ಸ್ಕೀಮ್‍‍ನಲ್ಲಿ ಫ್ಲೋಟಿಂಗ್ ರೂಫ್ ಅನ್ನು ಒದಗಿಸಲಾಗಿದೆ.

ಬಿಡುಗಡೆಗು ಮುನ್ನವೇ ಸ್ಪಾಟ್ ಟೆಸ್ಟಿಂಗ್‍‍ನಲ್ಲಿ ಕಾಣಿಸಿಕೊಂಡ ನಿಸ್ಸಾನ್ ಕಿಕ್ಸ್..

ಇದಲ್ಲದೇ ಈ ಕಾರು ಫ್ಲೇರ್ಡ್ ವ್ಹೀಲ್ ಆರ್ಚೆಸ್, ಬಾಡಿ ಕ್ಲೇಡಿಂಗ್, ಅಗಲವಾದ ಅಲಾಯ್ ಚಕ್ರಗಳು ಮತ್ತು ಎತ್ತರವಾದ ಗ್ರೌಂಡ್ ಕ್ಲಿಯರೆನ್ಸ್, ಬೂಮರಂಗ್ ಆಕಾರದಲ್ಲಿರುವ ಟೈಲ್ ಲ್ಯಾಂಪ್ಸ್ ಅನ್ನು ಅಳವಡಿಸಲಾಗಿದೆ. ಜಾಗತಿಕವಾಗಿ ನಿಸ್ಸಾನ್ ಕಿಕ್ಸ್ ಆಲ್ ವೀಲ್ ಡ್ರೈವ್ ಅನ್ನು ಪಡೆದಿದ್ದು, ಭಾರತಕ್ಕೆ ಬರಲಿರುವ ನಿಸ್ಸಾನ್ ಕಿಕ್ಸ್ ಕಾರು ಕೂಡ ಆಲ್ ವೀಲ್ ಡ್ರೈವ್ ಅನ್ನು ಪಡೆದುಕೊಂಡಿರಲಿದೆ.

ಬರಲಿರುವ ನಿಸ್ಸಾನ್ ಕಿಕ್ಸ್ ಕಾರಿನ ಬೆಲೆಯು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 9.5 ಲಕ್ಷದಿಂದ ರೂ. 14.5 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಹ್ಯುಂಡೈ ಕ್ರೆಟಾ, ಮಾರುತಿ ಎಸ್-ಕ್ರಾಸ್ಓವರ್, ಹೋಂಡಾ ಬಿಆರ್- ವಿ ಮತ್ತು ರೆನಾಲ್ಟ್ ಕ್ಯಾಪ್ಚುರ್ ಕಾರುಗಳಿಗೆ ತೀವ್ರ ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on nissan suv new car
English summary
India-spec Nissan Kicks interior spied.
Story first published: Thursday, August 23, 2018, 13:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X