ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಜಪಾನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಇಸುಜು ದೇಶಿಯ ಮಾರುಕಟ್ಟೆಯಲ್ಲಿ ತಮ್ಮ ಎಂಯು-ಎಕ್ಸ್ ಫೇಸ್‍ಲಿಫ್ಟ್ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸಲಾಗಿದ್ದು, ಎಕ್ಸ್ ಶೋರಂ ಪ್ರಕಾರ ರೂ. 26.26 ಲಕ್ಷದ ಪ್ರಾರಂಭಿಕ ಬೆಲೆಯನ್ನು ನಿಗದಿಗೊಳಿಸಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಬಿಡುಗಡೊಗೊಂಡ ಹೊಸ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು 4x2 ಮತ್ತು 4x4 ಎಂಬ ಎರಡು ವೇರಿಯಂಟ್ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿದ್ದು, 4x2 ವೇರಿಯಂಟ್ ಕಾರು ರೂ. 26.26 ಲಕ್ಷದ ಬೆಲೆ ಮತ್ತು 4x4 ವೇರಿಯಂಟ್ ರೂ. 28.22 ಲಕ್ಷದ ಮಾರಾಟದ ಬೆಲೆಯನ್ನು ಪಡೆದುಕೊಂಡಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಕಾರಿನ ಮುಂಭಾಗದಲ್ಲಿ ಹಲವಾರು ನವೀಕರಣಗಳನ್ನು ಪಡೆದುಕೊಂಡಿದ್ದು, ಮರುವಿನ್ಯಾಸಗೊಳಿಸಲಾದ ಗ್ರಿಲ್, ಬೈ-ಎಲ್ಇಡಿ ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಎಲ್ಇಡಿ ಡೇಟೈಮ್ ರನ್ನಿಂಗ್ ಲೈಟ್ಸ್, ಅಗಲವಾದ ಫಾಗ್ ಲ್ಯಾಂಪ್ಸ್, ಮತ್ತು ರಿವ್ಯಾಂಪ್ಡ್ ಬಂಪರ್‍‍ಗಳನ್ನು ನೀಡಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಕಾರಿನ ಹಿಂಭಾಗದಲ್ಲಿ ಮರುವಿನ್ಯಾಸಗೊಳಿಸಲಾದ ಟೈಲ್ ಗೇಟ್ ಕ್ಲಸ್ಟರ್ ಮತ್ತು ರಿವ್ಯಾಂಪ್ಡ್ ಬಂಪರ್ ಅನ್ನು ನೀಡಲಾಗಿದೆ. ಇದಲ್ಲದೇ ಲಾರ್ಜ್ ಸ್ಪಾಯ್ಲರ್ ಮತ್ತು ರೂಫ್ ರೈಲ್ ಅನ್ನು ಒದಗಿಸಲಾಗಿದೆ. ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು ಡೈಮಂಡ್ ಕಟ್ 18 ಇಂಚಿನ ಅಲಾಯ್ ಚಕ್ರಗಳನ್ನು ನೀಡಲಾಗಿದ್ದು, ಇವನ್ನು ಹೊರತುಪಡಿಸಿ ಬೇರಾವ ಬದಲಾವಣೆಗಳನ್ನು ಪಡೆದಿರುವುದಿಲ್ಲ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಆಲ್ ಬ್ಲಾಕ್ ಥೀಮ್ ಹಾಗು ಪಿಯಾನೊ ಬ್ಲಾಕ್‍ನಿಂದ ಡ್ಯಾಶ್‍ಬೋರ್ಡ್ ಅನ್ನು ಸಜ್ಜುಗೊಳಿಸಲಾಗಿದ್ದು, 7 ಇಂಚಿನ ಇಂಫೋಟೈನ್ಮೆಂಟ್ ಸಿಸ್ಟಮ್, ಹೊಸ ಮಲ್ಟಿ ಇನ್ಫಾರ್ಮೇಷನ್ ಡಿಸ್ಪ್ಲೇ ಇಂಸ್ಟ್ರೂಮೆಂಟ್ ಕ್ಲಸ್ಟರ್, ಲೆಧರ್‍‍ನಿಂದ ಸಜ್ಜುಗೊಳಿಸಲಾದ ಸ್ಟೀರಿಂಗ್ ವ್ಹೀಲ್ ಮತ್ತು ಸೀಟ್‍‍ಗಳನ್ನು ಒದಗಿಸಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಇವುಗಳಲ್ಲದೆ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ ಕ್ರೂಸ್ ಕಂಟ್ರೋಲ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ವಿದ್ಯುತ್‍ನಿಂದ ಮಡಿಚಬಹುದಾದ ಮತ್ತು ಅಡ್ಜಸ್ಟ್ ಮಾಡಬಹುದಾದ ಒಆರ್‍‍ವಿಎಂ, ಸ್ಟೀರಿಂಗ್ ಮೌಂಟೆಡ್ ಕಂಟ್ರೋಲ್ಸ್ ಮತ್ತು ಆರು ವಿಧಗಳಲ್ಲಿ ಅಡ್ಜಸ್ಟ್ ಮಾಡಬಹುದಾದ ಡ್ರೈವರ್ ಸೀಟ್ ಅನ್ನು ಅಳವಡಿಸಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಪ್ರಯಾಣಿಕರ ಸುರಕ್ಷತೆಗಾಗಿ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರಿನಲ್ಲಿ 6 ಏರ್‍‍ಬ್ಯಾಗ್‍‍ಗಳು, ಎಬಿಎಸ್, ಇಬಿಡಿ, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್, ಟ್ರಾಕ್ಷನ್ ಕಂಟ್ರೋಲ್, ಹಿಲ್ ಸ್ಟಾರ್ಟ್ ಅಸ್ಸಿಸ್ಟ್, ಹಿಲ್ ಡೆಸ್ಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೇಫ್ಟಿ ಮೌಂಟ್‍ಗಳನ್ನು ನೀಡಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಎಂಜಿನ್ ಸಾಮರ್ಥ್ಯ

ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಕಾರು 3 ಲೀಟರ್, 4 ಸಿಲೆಂಡರ್ ಡೀಸೆಲ್ ಎಂಜಿನ್ ಸಹಾಯದಿಂದ 174ಬಿಹೆಚ್‍ಪಿ ಮತ್ತು 380ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 5 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಫಾರ್ಚ್ಯುನರ್ ಕಾರುಗಳಿಗೆ ಪೈಪೋಟಿ ನೀಡಲು ಬಿಡುಗಡೆಗೊಂಡ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್

ಡ್ರೈವ್‍ಸ್ಪಾರ್ಕ್ ಅಭಿಪ್ರಾಯ

ಇಸುಜು ಸಂಸ್ಥೆಯು ಭಾರತದಲ್ಲಿ ಬಹುದಿನಗಳ ನಂತರ ತಮ್ಮ ವಾಹನವನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದೆ. ಈ ಬಾರಿ ಹಲವಾರು ನವೀಕರಣಗಳನ್ನು ಪಡೆದು ಲಗ್ಗೆಯಿಟ್ಟ ಇಸುಜು ಎಂಯು-ಎಕ್ಸ್ ಫೇಸ್‍ಲಿಫ್ಟ್ ಎಸ್‍ಯುವಿ ಕಾರು ಮಾರುಕಟ್ಟೆಯಲ್ಲಿ ಟೊಯೊಟಾ ಫಾರ್ಚ್ಯುನರ್, ಫೋರ್ಡ್ ಎಂಡೀವರ್, ಸ್ಕೋಡಾ ಕೋಡಿಯಾಕ್ ಮತ್ತ್ ಹೊಸ ಹೋಂಡಾ ಸಿಆರ್‍‍ವಿ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Isuzu MU-X Facelift Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X