ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ದೇಶದ ಜನಪ್ರಿಯ ಕಾರು ಉತ್ಪಾದನಾ ಸಂಸ್ಥೆಯಾದ ಮಹೀಂದ್ರಾ ಇದೇ ಮೊದಲ ಬಾರಿಗೆ ಐಷಾರಾಮಿ ಸೌಲಭ್ಯವುಳ್ಳ ಎಸ್‌ಯುವಿ ಮಾದರಿಯೊಂದನ್ನು ಭಾರತೀಯ ಮಾರುಕಟ್ಟೆಯಲ್ಲಿ ಪರಿಚಯಿಸಿದ್ದು, ಪ್ರೀಮಿಯಂ ಸೌಲಭ್ಯಗಳನ್ನು ಹೊತ್ತು ಬಂದಿರುವ ಅಲ್ಟುರಾಸ್ ಜಿ4 ಕಾರು ಎಸ್‌ಯುವಿ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ದಕ್ಷಿಣ ಕೊರಿಯಾದ ಮೂಲದ ಸ್ಯಾಂಗ್‌ಯಾಂಗ್‌ ಆಟೋ ಉತ್ಪಾದನಾ ಸಂಸ್ಥೆಯೊಂದಿಗೆ ಜೊತೆಗೂಡಿರುವ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಸುಧಾರಿತ ಮಾದರಿಯ ಎಸ್‌ಯುವಿ ಕಾರುಗಳ ನಿರ್ಮಾಣ ಯೋಜನೆಗೆ ಚಾಲನೆ ನೀಡಿದ್ದು, ಸ್ಯಾಂಗ್‌ಯ್ಯಾಂಗ್ ಸಂಸ್ಥೆಯ ಜಿ4 ಕಾರಿನ ಪ್ರೇರಣೆಯೊಂದಿಗೆ ಅಲ್ಟುರಾಸ್ ಜಿ4 ಎಸ್‌ಯುವಿ ಕಾರನ್ನು ನಿರ್ಮಾಣ ಮಾಡಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಮಹೀಂದ್ರಾ ಸಂಸ್ಥೆಯು ಬಿಡುಗಡೆಗೊಳಿಸಿರುವ ಅಲ್ಟುರಾಸ್ ಜಿ4 ಕಾರು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಪ್ರಮುಖ 2 ವೆರಿಯೆಂಟ್‌ಗಳಲ್ಲಿ ಬಿಡುಗಡೆಯಾಗಿದ್ದು, ಕಾರುಗಳಲ್ಲಿ ಒದಗಿಸಲಾಗಿರುವ ತಾಂತ್ರಿಕ ಸೌಲಭ್ಯಗಳ ಆಧಾರ ಮೇಲೆ ಕಾರಿನ ಬೆಲೆಯನ್ನು ದೆಹಲಿ ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 26.95 ಲಕ್ಷಕ್ಕೆ ಹಾಗೂ ಟಾಪ್ ಎಂಡ್ ಮಾದರಿಯನ್ನು ರೂ. 29.95 ಲಕ್ಷಕ್ಕೆ ನಿಗದಿಪಡಿಸಲಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಎಕ್ಸ್‌ಯುವಿ 500 ಕಾರಿಗಿಂತಲೂ ಹೆಚ್ಚಿನ ಮಟ್ಟದ ಐಷಾರಾಮಿ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ಧಿಗೊಂಡಿದ್ದು, ಪ್ರೀಮಿಯಂ ಸೌಲಭ್ಯಗಳೊಂದಿಗೆ 7 ಸೀಟರ್ ಐಷಾರಾಮಿ ಎಸ್‌ಯುವಿ ಕಾರು ಮಾದರಿಯಾಗಿದೆ ಮಾರಾಟಗೊಳ್ಳಲಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಡಿಸೈನ್ ಮತ್ತು ಸ್ಟೈಲ್

ಸುಧಾರಿತ ತಂತ್ರಜ್ಞಾನ ಪ್ರೇರಿತ ವಿಶ್ವದರ್ಜೆ ಸೌಲಭ್ಯಗಳನ್ನು ಹೊಂದಿರುವ ಅಲ್ಟುರಾಸ್ ಜಿ4 ಕಾರುಗಳು ಮುಂಭಾಗದಲ್ಲಿ ಆಕರ್ಷಕ ವಿನ್ಯಾಸವನ್ನು ಹೊಂದಿದ್ದು, ಮಹೀಂದ್ರಾ ಸಂಸ್ಥೆಯ ಆಕರ್ಷಕ ವರ್ಟಿಕಲ್ ಸಿಕ್ಸ್ ಸ್ಲಾಟ್ ಗ್ರಿಲ್ ಹೊಸ ಕಾರಿನ ಪ್ರಮುಖ ಆಕರ್ಷಣೆಯಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಕಾರಿನ ಡಿಸೈನ್‌ನಲ್ಲಿ ಈ ಹಿಂದಿನ ಸ್ಯಾಂಗ್‌ಯಾಂಗ್ ರೆಕ್ಸ್‌ಸ್ಟಾನ್ ಜಿ4 ಕಾರಿನ ಕೆಲವು ವಿನ್ಯಾಸಗಳನ್ನು ಎರವಲು ಪಡೆಯಲಾಗಿದ್ದು, ಎಲೆಕ್ಟ್ರಿಕ್ ಸನ್ ರೂಫ್, ಪವರ್ಡ್ ಟೈಲ್‌ಗೆಟ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ ಜೊತೆ ಎಲ್ಇಡಿ ಡಿಆರ್‌ಎಲ್, ಹೊಂದಾಣಿಕೆ ಮಾಡಿಕೊಳ್ಳಬಹುದಾದ ಹೈಬೀಮ್ ಮತ್ತು ಲೋ ಬೀಮ್ ಲೈಟ್ಸ್, 18-ಇಂಚಿನ ಫೈವ್ ಸ್ಪೋಕ್ ಅಲಾಯ್ ವೀಲ್ಹ್‌ಗಳು, ಫಾಗ್ ಲ್ಯಾಂಪ್ ಜೊತೆ ಕಾರ್ನರ್ ಲೈಟಿಂಗ್ ಸೌಲಭ್ಯ ಪಡೆದಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಹೊಸ ಕಾರಿನಲ್ಲಿ ಪ್ರಕಾಶಿತ ಹಿಂಬದಿಯ ನಂಬರ್ ಪ್ಲೇಟ್, ಬಿಸಿಯಾಗುವ ಒಆರ್‌ವಿಎಂಗಳು, ವಿಂಡ್ ಷೀಲ್ಡ್ ಮತ್ತು ಕಾರ್ನರಿಂಗ್ ಲೈಟ್ಸ್ ಸೌಲಭ್ಯವು ಕೂಡಾ ಮಹತ್ವ ಪಡೆದಿದ್ದು, ಪ್ರತಿ ಹಂತದಲ್ಲೂ ಕ್ರೋಮ್ ಬಳಿಕೆ ಮಾಡಿರುವುದು ಕಾರಿನ ಹೊರ ಭಾಗದ ಲುಕ್‌ ಹೆಚ್ಚಿಸುವಲ್ಲಿ ಪ್ಲಸ್ ಪಾಯಿಂಟ್ ಆಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಇನ್ನು ಕಾರಿನ ಹಿಂಭಾಗದ ಡಿಸೈನ್ ಕೂಡಾ ನೋಡಲು ಆಕರ್ಷಕವಾಗಿದ್ದು, ಎಲ್ಇಡಿ ಟೈಲ್ ಲ್ಯಾಂಪ್ಸ್, ಮಹೀಂದ್ರಾ ಲೊಗೊ ಜೊತೆಗೆ ಬೂಟ್‌ಸ್ಪೆಸ್ ಮಧ್ಯದಲ್ಲಿ ಜೋಡಣೆ ಮಾಡಲಾಗಿರುವ 'ALTURAS G4' ಬ್ಯಾಡ್ಜ್, ಬಂಪರ್ ಕ್ಲ್ಯಾಡಿಂಗ್ ಸೇರಿಸಲಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಕಾರಿನ ಒಳಾಂಗಣ ವಿನ್ಯಾಸ

ಅಲ್ಟುರಾಸ್ ಜಿ4 ಕಾರಿನ ಒಳಭಾಗದ ವಿನ್ಯಾಸವು ನಿಜಕ್ಕೂ ಎಸ್‌ಯುವಿ ಪ್ರಿಯರನ್ನು ಮೊದಲ ನೋಟದಲ್ಲೇ ಸೆಳೆಯದೆ ಇರಲಾರವು. ಯಾಕೆಂದ್ರೆ ಪ್ರೀಮಿಯಂ ಸೌಲಭ್ಯಗಳಾದ ಸ್ಟೀರಿಂಗ್ ಮೌಟೆಂಡ್ ಆಡಿಯೋ ಕಂಟ್ರೋಲ್, ಡಿಜಿಟಲ್ ಅನಲಾಗ್ ಇನ್‌ಸ್ಟ್ರುಮೆಂಟ್ ಕ್ಲಸ್ಟರ್ ಜೊತೆ 7-ಇಂಚಿನ ಟಿಎಫ್‌ಟಿ ಡಿಸ್‌ಪ್ಲೈ ಗಮನ ಸೆಳೆಯುತ್ತವೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಸಾಫ್ಟ್-ಟಚ್ ಮೆಟೀರಿಯಲ್ ಪ್ರೇರಿತ ಪ್ರೀಮಿಯಂ ಸೌಲಭ್ಯದ ಒಳಾಂಗಣದಲ್ಲಿ ಕಾರು ಚಾಲನೆಯು ಮತ್ತಷ್ಟು ಐಷಾರಾಮಿತನ ನೀಡಲಿದ್ದು, 8-ಇಂಚಿನ ಟಚ್‌ಸ್ಕ್ರೀನ್ ಇನ್ಫೆೋಟೈನ್‌ಮೆಂಟ್ ಸಿಸ್ಟಂ, ಅಂಡ್ರಾಯಿಡ್ ಸೌಲಭ್ಯ ಪ್ರೇರಿತ ಆ್ಯಪಲ್ ಕಾರ್‌ಪ್ಲೇ ಮತ್ತು ನ್ಯಾವಿಗೇಷನ್, ಮುಂಭಾಗದ ಆಸನಗಳಲ್ಲಿ ತಾಪಮಾನ ಏರಿಳಿತದ ಸೌಲಭ್ಯವಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಪ್ರಮುಖವಾಗಿ ಡ್ಯುಯಲ್ ಜೋನ್ ಕ್ಲೈಮೆಟ್ ಕಂಟ್ರೋಲ್ ಸಿಸ್ಟಂ, 8 ಹಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದಾದ ಚಾಲಕನ ಸೀಟು, ಎರಡನೇ ಸಾಲಿನಲ್ಲಿರುವ ಮಧ್ಯದ ಆಸನದಲ್ಲಿ ಆರ್ಮ್‌ರೆಸ್ಟ್ ಮತ್ತು ಕಪ್-ಹೋಲ್ಡ್ ಸೌಲಭ್ಯವು ಅಲ್ಟುರಾಸ್ ಜಿ4 ಕಾರಿನ ಆಯ್ಕೆಯ ಮಹತ್ವವನ್ನು ಹೆಚ್ಚಿಸುತ್ತವೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಅದಲ್ಲದೇ ಎರಡನೇ ಸಾಲಿನ ಆಸನಗಳು 60:40 ಅನುಪಾತದಲ್ಲಿ ಜೋಡಣೆ ಮಾಡಲಾಗಿದ್ದು, ಮೂರನೇ ಸಾಲಿನ ಆಸನಗಳನ್ನು 50:50 ಅನುಪಾತದಲ್ಲಿ ಸರಿದೂಗಿಸಬಹುದು. ಜೊತೆಗೆ ಅನಕೂಲಕರ ಲೆಗರೂಮ್ ಮತ್ತು ಹೆಡ್ ರೂಂ ಸೌಲಭ್ಯದೊಂದಿಗೆ 7 ಜನ ಆರಾಮದಾಯಕವಾಗಿ ಪ್ರಯಾಣಿಸಬಹುದ್ದು, ಬೂಟ್‌ಸ್ಪೆಸ್ ಕೂಡಾ ದೊಡ್ಡದಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಎಂಜಿನ್ ಸಾಮರ್ಥ್ಯ

ಹೊಸ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು 2.2-ಲೀಟರ್(2,200ಸಿಸಿ) 4 ಸಿಲಿಂಡರ್, ಟರ್ಬೋಚಾರ್ಜ್ಡ್ ಡೀಸೆಲ್ ಎಂಜಿನ್ ಪಡೆದುಕೊಂಡಿದ್ದು, 7 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ನೊಂದಿಗೆ 178-ಬಿಹೆಚ್‍‍ಪಿ ಮತ್ತು 420-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸಲಿವೆ. ಇವುಗಳಲ್ಲಿ ಪೆಟ್ರೋಲ್ ವರ್ಷನ್ ಮುಂದಿನ ಒದಗಿಸುವ ಬಗ್ಗೆ ಮಹೀಂದ್ರಾ ಸುಳಿವು ನೀಡಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಅಲ್ಟುರಾಸ್ ಜಿ4 ಕಾರುಗಳು ಕೇವಲ ಪ್ರೀಮಿಯಂ ಎಸ್‌ಯುವಿ ಮಾದರಿಯಷ್ಟೇ ಅಲ್ಲದೇ ಆಫ್ ರೋಡ್ ವೈಶಿಷ್ಟ್ಯತೆಯನ್ನು ಸಹ ಹೊಂದಿರುವ ಈ ಕಾರುಗಳಲ್ಲಿ ಹಿಂಬದಿ ಚಕ್ರಗಳಿಗೂ ಗೇರ್‌ಬಾಕ್ಸ್ ಶಕ್ತಿ ಪೂರೈಕೆಯ ಸೌಲಭ್ಯವಿದ್ದು, ಇದು ಕಠಿಣ ಪರಿಸ್ಥಿತಿಗಳಲ್ಲೂ ಸರಾಗವಾಗಿ ನುಗ್ಗಬಲ್ಲ ಬಲಿಷ್ಠ ಕಾರು ಮಾದರಿಯಾಗಲಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಹೀಗಾಗಿ ಗ್ರಾಹಕರು ತಮ್ಮ ಬೇಡಿಕೆ ಅನುಗುಣವಾಗಿ 4x4 ಮತ್ತು 2x4 ಡ್ರೈವ್‌ ಟೆಕ್ನಾಲಜಿ ಪ್ರೇರಿತ ಅಲ್ಟುರಾಸ್ ಜಿ4 ಕಾರನ್ನು ಆಯ್ಕೆ ಮಾಡಬಹುದಾಗಿದ್ದು, 225/60 ಆರ್18 ಟೈರ್ ಸೌಲಭ್ಯವು ಆಪ್ ರೋಡ್ ಕೌಶಲ್ಯಕ್ಕೂ ಅನುಕೂಲಕವಾಗಿವೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಸುರಕ್ಷಾ ಸೌಲಭ್ಯಗಳು

ಪ್ರಯಾಣಿಕರ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡಲಾಗಿದ್ದು, 9 ಏರ್‍‍ಬ್ಯಾಗ್, ಎಬಿಎಸ್, ಇಬಿಡಿ, ಎಲೆಕ್ಟ್ರಿಕ್ ಪಾರ್ಕಿಂಗ್ ಬ್ರೇಕ್, ಅಡ್ವಾನ್ಸ್ಡ್ ಎಮರ್ಜೆನ್ಸಿ ಬ್ರೇಕಿಂಗ್ ಸಿಸ್ಟಮ್, ಲೇನ್ ಡಿಪಾರ್ಚುರ್ ವಾರ್ನಿಂಗ್, ಲೇನ್ ಚೇಂಜ್ ಅಸ್ಸಿಸ್ಟ್, ಟ್ರಾಫಿಕ್ ಸೇಫ್ಟಿ ಅಸ್ಸಿಸ್ಟ್, ಐಎಸ್ಒಎಫ್ಐಎಕ್ಸ್ ಚೈಲ್ಡ್-ಸೀಟ್ ಮೌಂಟ್ ಸೀಟ್, ಹಿಲ್ ಕ್ಲೈಮ್ / ಡಿಸೆಂಟ್ ಅಸಿಸ್ಟ್ಸ್ ಮತ್ತು ಹೈ ಬೀಮ್ ಅಸ್ಸಿಸ್ಟ್ ಅನ್ನು ಅಳವಡಿಸಲಾಗಿದೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಲಭ್ಯವಿರುವ ಬಣ್ಣಗಳು

ಅಲ್ಟುರಾಸ್ ಜಿ4 ಕಾರುಗಳು ಒಟ್ಟು 5 ಬಣ್ಣಗಳಲ್ಲಿ ಖರೀದಿಗೆ ಲಭ್ಯವಿದ್ದು, ನ್ಯೂ ಪರ್ಲ್ ವೈಟ್, ನಪೊಲಿ ಬ್ಯಾಕ್, ಲೆಕ್ ಸೈಡ್ ಬ್ರೌನ್, ಡಸಾಟ್ ಸಿಲ್ವರ್ ಮತ್ತು ರಿಗಾಲ್ ಬ್ಲ್ಯೂ ಬಣ್ಣದಲ್ಲಿ ಖರೀದಿಸಬಹುದು.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಅಲ್ಟುರಾಸ್ ಜಿ4 ಪ್ರತಿಸ್ಪರ್ಧಿಗಳು

ಸದ್ಯ ಮಾರುಕಟ್ಟೆಯಲ್ಲಿ ಅಲ್ಟುರಾಸ್ ಜಿ4 ಕಾರಿಗೆ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್ ಕಾರುಗಳು ತೀವ್ರ ಪೈಪೋಟಿ ನೀಡಲಿದ್ದು, ಎಂಜಿನ್ ಸಾಮರ್ಥ್ಯದಲ್ಲಿ ಫಾರ್ಚೂನರ್ ಮತ್ತು ಎಂಡೀವರ್‌ಗಿಂತ ಕಡಿಮೆ ಸಾಮರ್ಥ್ಯವಿದ್ದರೂ ಸಹ ಅಲ್ಟುರಾಸ್ ಜಿ4 ಕಾರುಗಳು ಪರ್ಫಾಮೆನ್ಸ್ ಮತ್ತು ಇಂಧನ ದಕ್ಷತೆಯಲ್ಲಿ ಗಮನಸೆಳೆಯಲಿವೆ.

ಫಾರ್ಚೂನರ್ ಮತ್ತು ಎಂಡೀವರ್ ಪ್ರತಿಸ್ಪರ್ಧಿ ಮಹೀಂದ್ರಾ ಅಲ್ಟುರಾಸ್ ಜಿ4 ಕಾರು ಬಿಡುಗಡೆ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಸದ್ಯ ಕಾರು ಉತ್ಪಾದನೆಯಲ್ಲಿ ಹೊಸ ಸಂಚಲನ ಸೃಷ್ಠಿಸುತ್ತಿರುವ ಮಹೀಂದ್ರಾ ಸಂಸ್ಥೆಯು ಸ್ಯಾಂಗ್‌ಯಾಂಗ್‌ ಜೊತೆಗೂಡಿ ವಿವಿಧ ನಮೂನೆಯ ಹೊಸ ಕಾರುಗಳನ್ನು ಸಿದ್ದಗೊಳಿಸುತ್ತಿದ್ದು, ಮೊದಲ ಹಂತವಾಗಿ ಬಿಡುಗಡೆ ಮಾಡಲಾಗಿರುವ ಅಲ್ಟುರಾಸ್ ಜಿ4 ಕಾರು ಮಾರುಕಟ್ಟೆಯಲ್ಲಿ ಜನಪ್ರಿಯತೆ ಹೊಂದಿರುವ ಟೊಯೊಟಾ ಫಾರ್ಚೂನರ್ ಮತ್ತು ಫೋರ್ಡ್ ಎಂಡೀವರ್, ಇಸುಝು ಎಂಯುಎಕ್ಸ್ ಕಾರುಗಳಿಗೆ ಟಕ್ಕರ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Most Read Articles

Kannada
English summary
Mahindra Alturas G4 launched in India at a starting price of Rs 26.95 lakh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X