ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ಪ್ಯಾಸ್ಸೆಂಜರ್ ವಾಹನಗಳಲ್ಲಿ ಮಾತ್ರವಲ್ಲದೇ ರೈತರಿಗೆ ಸಹಕಾರಿಯಾಗುವಂತೆ ಹಲವಾರು ಟ್ರ್ಯಾಕ್ಟರ್ ಮಾದರಿಗಳನ್ನು ಈಗಾಗಲೇ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ್ದು, ಇದೀಗ ಮಹೀಂದ್ರಾ ಸಂಸ್ಥೆಯು ಪ್ರತಿ ರೈತನು ಖರೀದಿಸಬಹುದಾದ ಅಗ್ಗದ ಬೆಲೆಯ ಟ್ರ್ಯಾಕ್ಟರ್‍‍‍ಗಳನ್ನು ಪರಿಚಯಿಸಲು ಮುಂದಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಹೌದು, ಮಹೀಂದ್ರಾ ಆಂಡ್ ಮಹೀಂದ್ರಾ ಸಂಸ್ಥೆಯು ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್‍‍ಗಳನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಈ ಟ್ರ್ಯಾಕ್ಟರ್ ಬಿಡುಗಡೆಗೊಂಡಲ್ಲಿ ದೇಶದಲ್ಲಿನ ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಬಹು ಉಪಕಾರಿಯಾಗುತ್ತದೆ ಎಂದು ಹೇಳಲಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಭಾರತದಲ್ಲಿ ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಶೇಕಡಾ 90% ರಷ್ಟು 5 ಎಕರೆಗಿಂತ ಕಡಿಮೆ ಭೂಮಿಯನ್ನು ಹೊಂದಿರುವವರಾಗಿದ್ದು, ಇದರಲ್ಲಿ ಹಲವರು ಇನ್ನೂ ಮಾನವ ಸಂಪನ್ಮೂಲ ಕೃಷಿ ವಿಧಾನಗಳನ್ನು ಬಳಸುತ್ತಿದ್ದಾರೆಂದು ಅಂದಾಜಿಸಲಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಅಂತಹ ರೈತರಿಗೆ ಯಾಂತ್ರೀಕೃತ ವ್ಯವಸಾಯದ ಒಂದು ಮೂಲಭೂತ ಅಂಶವೆಂದರೆ ಟ್ರ್ಯಾಕ್ಟರ್. ಆದ್ರೆ ಅವರು ಟ್ರ್ಯಾಕ್ಟರ್ ಕೊಳ್ಳಲೂ ಅಷ್ಟು ಆರ್ಥಿಕವಾಗಿ ಬಲಿಷ್ಠರಾಗಿಲ್ಲ. ಈ ಹಿನ್ನೆಲೆಯಲ್ಲಿ ಈ ವಿಭಾಗದ ರೈತರನ್ನು ಸೆಳೆಯಲು ಮಹಿಂದ್ರಾ ರೂ.2 ಲಕ್ಷಕ್ಕಿಂತ ಕಡಿಮೆ ಬೆಲೆಯಲ್ಲಿ ಟ್ರ್ಯಾಕ್ಟರ್ ಅಭಿವೃದ್ದಿಗೊಳಿಸುವ ಯೋಜನೆಗೆ ಚಾಲನೆ ನೀಡಿದೆ.

MOST READ: ಭಾರತೀಯ ಸೇನೆಗಾಗಿ ವಿಶೇಷವಾಗಿ ಸಿದ್ದಗೊಂಡಿರುವ ಈ ಬೈಕ್ ವಿಶೇಷ ಏನು ಗೊತ್ತಾ?

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಈ ವರ್ಷದ ಆರಂಭದಲ್ಲಿ, ಮಹೀಂದ್ರಾ ಅದರ ಅಂಗಸಂಸ್ಥೆಯಾದ ಮಹೀಂದ್ರಾ ಗುಜರಾತ್ ಟ್ರ್ಯಾಕ್ಟರ್ಸ್ ಲಿಮಿಟೆಡ್ ಅನ್ನು ಗ್ರೊಮ್ಯಾಕ್ಸ್ ಅಗ್ರಿ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಿದೆ ಎಂದು ಘೋಷಿಸಿದ್ದು, ಈ ಹೆಸರಿನ ಅಡಿಯಲ್ಲಿ ಹೊಸ ಟ್ರ್ಯಾಕ್‌ಸ್ಟಾರ್ ಎನ್ನುವ ಬ್ರಾಂಡ್ ಅನ್ನು ಪ್ರಾರಂಭಿಸಲಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಇದು ಸದ್ಯ ಮಾರುಕಟ್ಟೆಯಲ್ಲಿ ಲಭ್ಯವಿರುವ 30 ಹೆಚ್‍ಪಿಯಿಂದ 50 ಹೆಚ್‍ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳಂತೆ ವಿನ್ಯಾಸ ಹೊಂದಿದ್ದರೂ, ಸಣ್ಣ ಹಿಡುವಳಿದಾರರಿಗೆ ಅನುಕೂಲಕರವಾಗಬಹುದಾದ 5ಹೆಚ್‌ಪಿ 10ಹೆಚ್‌ಪಿ ಸಾಮರ್ಥ್ಯದ ಟ್ರ್ಯಾಕ್ಟರ್‌ಗಳ ಹೊರತರುವ ಇರಾದೆಯಲ್ಲಿ ಇದೆಯೆಂತೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಮಹೀಂದ್ರಾ ಸಂಸ್ಥೆಯು ತಯಾರು ಮಾಡಲಿರುವ ರೂ.2 ಲಕ್ಷದೊಳಗಿನ ಹೊಸ ಟ್ರ್ಯಾಕ್ಟರ್‍‍‍ಗಳು ಮಹೀಂದ್ರಾ ಟ್ರ್ಯಾಕ್ಟರ್ ರೇಂಜ್‌ನಲ್ಲಿ ತಯಾರು ಆಗಲಿದ್ದು, ನೀಡಿದ ಹಣಕ್ಕೆ ಎಲ್ಲಾ ಸೌವಲತ್ತುಗಳನ್ನು ಒದಗಿಸುವ ರೀತಿಯಲ್ಲಿ ಇದನ್ನು ತಯಾರು ಮಾಡಲಿದೆ. ಮತ್ತು ಇದು ರೂ. 3 ರಿಂದ 4 ಲಕ್ಷದಲ್ಲಿ ದೊರೆಯುವ ಸಾಂಪ್ರದಾಯಿಕ ಟ್ರ್ಯಾಕ್ಟರ್‍‍ಗಳಿಗಿಂತಾ ಕಡಿಮೆ ಬೆಲೆಯನ್ನು ಹೊಂದಿರಲಿದೆ.

MOST READ: ಬರೋಬ್ಬರಿ 1 ಲಕ್ಷ ರೂಪಾಯಿ ಕೊಟ್ಟು ರೈಲ್ವೆ ಹಾರ್ನ್ ಹಾಕಿಸಿದ್ದ ಮಾಡಿಫೈ ಕಾರು ಮಾಲೀಕನಿಗೆ ಸಂಕಷ್ಟ

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಈ ಮೂಲಕ ಮಹೀಂದ್ರಾ ಸಂಸ್ಥೆಯು ಭಾರತದಲ್ಲಿ ಶೇಕಡಾ 50 ರಷ್ಟನ್ನು ಮಾರುಕಟ್ಟೆ ಪಾಲನ್ನು ಹೊಂದಲು ಮುಂದಾಗಿದ್ದು, ಜೊತೆಗೆ ಮಹೀಂದ್ರಾ ಸಂಸ್ಥೆಯು ಈ ವರ್ಷ 3,17,531 ಯೂನಿಟ್‍ ಟ್ರ್ಯಾಕ್ಟರ್ ಮಾರಾಟ ಮಾಡಿ ದೇಶಿಯ ಟ್ರ್ಯಾಕ್ಟರ್ ಬ್ರಾಂಡ್ ವಿಭಾಗದಲ್ಲಿ ಶೇ. 43% ಪಾಲನ್ನು ತನ್ನದಾಗಿಸಿಕೊಂಡಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಇನ್ನು ದೇಶದ ಎರಡನೇ ಅತಿದೊಡ್ಡ ಟ್ರ್ಯಾಕ್ಟರ್ ಉತ್ಪಾದನಾ ಸಂಸ್ಥೆಯಾಗಿರುವ ಟಫೆ ಇದೀಗ ರೈತರ ಕೃಷಿಯೇತರ ಆದಾಯ ಹೆಚ್ಚಿಸಲು ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ರೈತರ ನಡುವೆ ಸಂವಹನ ಹೆಚ್ಚಿಸುವ ಮತ್ತು ಆದಾಯ ಗಳಿಕೆ ಮಾಡಬಹುದಾದ ಆ್ಯಪ್‌ಯೊಂದನ್ನು ಬಿಡುಗಡೆ ಮಾಡಿರುವುದು ಭಾರೀ ಜನಪ್ರಿಯತೆ ಗಳಿಸುತ್ತಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಟಫೆ ಇಂಡಿಯಾ ಸಂಸ್ಥೆಯು ಬಿಡುಗಡೆ ಮಾಡಿರುವ ಆ್ಯಪ್ ಸಹಾಯದಿಂದ ರೈತರು ತಮ್ಮ ಕೃಷಿ ಉಪಕರಣಗಳನ್ನು ಹಂಚಿಕೊಳ್ಳುವ ವ್ಯವಸ್ಥೆ ಇದಾಗಿದ್ದು, ರೈತರ ಆದಾಯಕ್ಕೆ ಹೊಸ ಮಾರ್ಗ ಇದಾಗಿದೆ. ಹಾಗಾದ್ರೆ ಟಫೆ ಸಂಸ್ಥೆಯು ಬಿಡುಗಡೆ ಆ್ಯಪ್ ಯಾವುದು? ಅದರಿಂದ ರೈತರಿಗೆ ಹೇಗೆ ಲಾಭವಾಗುತ್ತೆ ಎನ್ನುವ ಸಂಪೂರ್ಣ ವಿವರವನ್ನು ಈ ಲೇಖನದಲ್ಲಿ ನಾವು ತಿಳಿಸಿಕೊಡಲಿದ್ದೇವೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ರೈತರಿಂದ ರೈತರಿಗಾಗಿ..!

ಟಫೆ ಸಂಸ್ಥೆಯು ತೆರೆದಿರುವ ಹೊಸ ಆ್ಯಪ್ ಇದೀಗ ದೇಶದ ಪ್ರಮುಖ 7 ರಾಜ್ಯದಲ್ಲಿ ಕಾರ್ಯನಿರ್ವಹಣೆಯಲ್ಲಿದ್ದು, ರೈತರಿಗಾಗಿ ರೈತರಿಗಾಗಿ ಧ್ಯೇಯದೊಂದಿಗೆ ಈ ವಿನೂತನ ಯೋಜನೆಗಳನ್ನು ತೆರೆಯಲಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಜೆಫಾರ್ಮ್ ಸರ್ವಿಸ್.!

ರೈತರು ತಮ್ಮಲ್ಲಿರುವ ಕೃಷಿ ಉಪಕರಣಗಳನ್ನು "ಜೆಫಾರ್ಮ್ ಸರ್ವಿಸ್"( JFarm Service) ಆ್ಯಪ್ ಮೂಲಕ ಅಗತ್ಯವಿರುವ ರೈತರೊಂದಿಗೆ ಹಂಚಿಕೊಳ್ಳುವ ಜೊತೆಗೆ ಆದಾಯ ಗಳಿಕೆ ಮಾಡಬಹುದಾದ ವೇದಿಕೆ ಇದಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಅಂದ್ರೆ, ರೈತರು ಜೆಫಾರ್ಮ್ ಸರ್ವಿಸ್ ಮೂಲಕ ಅಗತ್ಯವಿರುವ ರೈತರೊಂದಿಗೆ ತಮ್ಮಲ್ಲಿರುವ ಕೃಷಿ ಉಪಕರಣಗಳಾದ ಟ್ರ್ಯಾಕ್ಟರ್‌ ಮತ್ತು ಸಣ್ಣಗಾತ್ರದ ಜೆಸಿಬಿ ಮಾಡೆಲ್‌ಗಳನ್ನು ಬಾಡಿಗೆ ರೂಪದಲ್ಲಿ ಹಂಚಿಕೊಳ್ಳಬಹುದಾಗಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಇದಲ್ಲದೆ, ಅಗತ್ಯವಿರುವ ರೈತರು ತಮಗೆ ಬೇಕಾದ ಉಪಕರಣಗಳಿಗಳಿಗಾಗಿ ಇಲ್ಲಿ ಹೆಸರು ನೋಂದಾಯಿಸಿದ್ದಲ್ಲಿ ಟಫೆ ಸಂಸ್ಥೆಯೇ ಮಧ್ಯಸ್ಥಿಕೆ ವಹಿಸಿ ಅಗತ್ಯ ಕೃಷಿ ಉಪಕರಣಗಳನ್ನು ಒದಗಿಸುವ ವ್ಯವಸ್ಥೆ ಮಾಡುವುದಲ್ಲದೆ ರೈತರಿಗೆ ಆದಾಯ ಗಳಿಸಲು ಅವಕಾಶ ನೀಡುತ್ತೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಬಹುತೇಕ ರೈತರು ತಮ್ಮ ಕೃಷಿ ಚಟುವಟಿಕೆಗಳು ಮುಗಿದ ನಂತರ ಟ್ರ್ಯಾಕ್ಟರ್‌ ಮತ್ತು ಕೆಲವು ಕೃಷಿ ಉಪಕರಣಗಳನ್ನು ಇತರೆ ರೈತರಿಗೆ ಬಾಡಿಗೆಗಾಗಿ ಬಿಡುವುದು ಮಾಮೂಲಿ. ಆದ್ರೆ ಎಲ್ಲಾ ರೈತರಿಗೆ ಈ ಅವಕಾಶ ಸಿಗುವುದಿಲ್ಲ. ಇದರಿಂದಾಗಿ ಕೃಷಿ ಉಪಕರಣಗಳಿಗೆ ಕೆಲಸವಿಲ್ಲದೆ ಕೆಲವೊಮ್ಮೆ ಆರ್ಥಿಕವಾಗಿ ನಷ್ಟವಾಗುವ ಸಾಧ್ಯತೆಗಳಿರುತ್ತವೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಹೀಗಾಗಿ ಟಫೆ ಸಂಸ್ಥೆಯು ಪರಿಚಯಿಸಿರುವ ಜೆಫಾರ್ಮ್ ಸರ್ವಿಸ್ ಆ್ಯಪ್ ಸೇವೆಯು ಟ್ರ್ಯಾಕ್ಟರ್ ಖರೀದಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸಾಲದ ಸುಳಿಯಲ್ಲಿ ಸಿಲುಕಿರುವ ರೈತರಿಗೆ ಹೊಸ ಆದಾಯದ ಮಾರ್ಗವಾಗಲಿದ್ದು, ಮಧ್ಯವರ್ತಿಗಳ ಹಾವಳಿಯು ತಪ್ಪಲಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಗಂಟೆಗೆ ರೂ. 600 ಬಾಡಿಗೆ ಫಿಕ್ಸ್..!

ಟಫೆ ಸಂಸ್ಥೆಯು ರೈತರ ಬಳಿಯಿರುವ ಟ್ರ್ಯಾಕ್ಟರ್ ಮತ್ತು ಕೆಲವು ಕೃಷಿ ಉಪಕರಣಗಳನ್ನು ಅಗತ್ಯವಿರುವ ರೈತರಿಗೆ ಒದಗಿಸುವ ಆದಾಯ ಗಳಿಸಲು ಅವಕಾಶ ನೀಡಲಿದ್ದು, ಟ್ರ್ಯಾಕ್ಟರ್ ಒಂದಕ್ಕೆ ಗಂಟೆಗೆ ರೂ.600 ಬಾಡಿಗೆ ಪಾವತಿಸುತ್ತೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಈ ವೇಳೆ ಟ್ರ್ಯಾಕ್ಟರ್ ಹೊಂದಿರುವ ರೈತರು ಮತ್ತು ಟ್ರ್ಯಾಕ್ಟರ್ ಅಗತ್ಯವಿರುವ ರೈತರ ಮಧ್ಯೆ ಸೇತುವೆ ಕಾರ್ಯನಿರ್ವಹಿಸುವ ಟಫೆ ಸಂಸ್ಥೆಯು ಇಂತಿಷ್ಟು ಪ್ರಮಾಣದಲ್ಲಿ ಶುಲ್ಕು ತೆಗೆದುಕೊಳ್ಳಲಿದ್ದು, ರೈತರು ತಮ್ಮ ಟ್ರ್ಯಾಕ್ಟರ್ ಸಾಲಗಳ ಮರುಪಾವತಿಗೆ ಸಹಕಾರಿಯಾಗಲಿದೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಹೊಸ ಆ್ಯಪ್‌ನಿಂದ 45 ಲಕ್ಷ ರೈತರಿಗೆ ಸಹಾಯ!

ಸದ್ಯ ಕರ್ನಾಟಕ ಸೇರಿದಂತೆ ಮಧ್ಯಪ್ರದೇಶ, ಆಂಧ್ರಪ್ರದೇಶ, ಬಿಹಾರ್, ತಮಿಳುನಾಡು ಅಸ್ಸಾಂ ರಾಜ್ಯಗಳಲ್ಲಿ ಈ ಆ್ಯಪ್ ಸೇವೆ ಕಾರ್ಯನಿರ್ವಹಣೆಯಲ್ಲಿದ್ದು, ಮಧ್ಯಪ್ರದೇಶದಲ್ಲಿ ಈ ಹೊಸ ಯೋಜನೆಯು ಪರಿಣಾಮಕಾರಿಯಾಗಿ ಜಾರಿಯಾದ ಪರಿಣಾಮ ಲಕ್ಷಾಂತರ ರೈತರು ಇದೀಗ ಲಾಭ ಪಡೆಯುತ್ತಿದ್ದಾರೆ.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಕೃಷಿ ಚಟುವಟಿಕೆಯ ದಿನಗಳನ್ನು ಹೊರತುಪಡಿಸಿ ಖಾಲಿ ದಿನಗಳಲ್ಲಿ ಆದಾಯ ಗಳಿಕೆ ಇದು ಸಹಕಾರಿಯಾಗಲಿದ್ದು, ಆಸಕ್ತ ರೈತರು ತಮ್ಮ ಕೃಷಿ ಉಪಕರಣಗಳನ್ನು ಜೆಫಾರ್ಮ್ ಸರ್ವಿಸ್ ಮೂಲಕ ಪರಸ್ಪರ ಹಂಚಿಕೊಳ್ಳುವ ಮೂಲಕ ಸಾಲದ ಸುಳಿಯಿಂದ ಹೊರಬರಲು ಇದೊಂದು ಉತ್ತಮ ಮಾರ್ಗ ಎನ್ನಬಹುದು.

ರೈತರಿಗಾಗಿ ಅಗ್ಗದ ಬೆಲೆಯಲ್ಲಿ ಟ್ರ್ಯಾಕ್ಟರ್‍‍‍ಗಳನ್ನು ತಯಾರು ಮಾಡಲು ಮುಂದಾದ ಮಹೀಂದ್ರಾ

ಇದಕ್ಕಾಗಿ ರೈತರು ಜೆಫಾರ್ಮ್ ಸರ್ವಿಸ್ ಆ್ಯಪ್ ಬಳಕೆ ಮಾಡಲು ನೋಂದಣಿ ಮಾಡಿಕೊಳ್ಳಬೇಕಾಗುತ್ತೆ. ಇದಕ್ಕೂ ವ್ಯವಸ್ಥೆ ಮಾಡಿರುವ ಟಫೆ ಸಂಸ್ಥೆಯು ಫೀಲ್ಡ್ ಆಫೀರ್ಸ್‌ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ರೈತರ ಉಪಕರಣಗಳನ್ನು ಹಂಚಿಕೆ ಮಾಡಿ ಹೊಸ ಆದಾಯದ ಮಾರ್ಗವನ್ನು ಕಂಡುಕೊಂಡಿದೆ.

Most Read Articles

Kannada
Read more on mahindra tractor
English summary
Mahindra & Mahindra working on tractor that costs less than Rs 2 lakh.

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more