ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಹೀಂದ್ರಾ ಇದೇ ವರ್ಷದ ತ್ರೈಮಾಸಿಕ ಅವಧಿಯಲ್ಲಿ ತಮ್ಮ ಹೊಸ ಯು321 ಎಮ್‍ಪಿವಿ ಕಾರನ್ನು ಬಿಡುಗಡೆಗೊಳಿಸುವ ಯೋಜನೆಯಲಿದ್ದು, ಜುಲೈ 31ರಂದು ಈ ಕಾರಿನ ಅಧಿಕೃತ ಹೆಸರನ್ನು ಬಹಿರಂಗಗೊಳಿಸಲಿದೆ.

By Rahul Ts

ಮಹೀಂದ್ರಾ ಯು321ಎಮ್‍ಪಿವಿ ಕಾರಿನ ಅಧಿಕೃತ ಹೆಸರನ್ನು ಮಹೀಂದ್ರಾ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪವನ್ ಗೊಯೆಂಕಾ ಜುಲೈ 31ರಂದು ಮುಂಬೈನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಬಹಿರಂಗಗೊಳಿಸಲಿದ್ದಾರೆ. ಅಲ್ಲದೇ ಇದರ ಜೊತೆಗೆ ಸಂಸ್ಥೆಯು ಈ ಕಾರಿನ ಕುರಿತಾದ ಹೆಚ್ಚು ಮಾಹಿತಿಯನ್ನು ನೀಡಲಿದ್ದಾರೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಈ ಹಿಂದೆ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳಲ್ಲೊಂದು ಯು081 ಮತ್ತು ಇನ್ನೊಂದು ಕಾರು ಯು-079 ಬ್ಯಾಡ್ಜಿಂಗ್ ಅನ್ನು ಪಡೆದುಕೊಂಡಿದೆ. ಹೊಸ ಯು321 ಎಂಪಿವಿ ಕಾರು ಮಹಿಂದ್ರಾ ಸಂಸ್ಥೆಯ ಮೊದಲ ಮೊನೊಕ್ಯೂ ಬಾಡಿ ಕಿಟ್ ಹೊಂದಿರುವ ಕಾರಾಗಿದ್ದು, ಪ್ರಸ್ತುತ ಜೈಲೋ ಕಾರುಗಳಲ್ಲಿ ಬಳಸಲಾಗಿರುವ ಬಾಡಿ ಆನ್ ಫ್ರೇಮ್ ಶೈಲಿಗಿಂತ ವಿಭಿನ್ನವಾಗಿರಲಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರುಗಳು 6 ಸ್ಪ್ಲಿಟ್ ಸ್ಪೋಕ್ ಎರಡು ಟೋನ್‍‍ಗಳುಳ್ಳ ಅಲಾಯ್ ಚಕ್ರಗಳು, ಕಪ್ಪು ಹೆಡ್‍‍ಲ್ಯಾಂಪ್ ಬೆಜೆಲ್ಸ್ ಮತ್ತು ಮುಂಭಾಗದ ಗ್ರೀಲ್‍‍ನಲ್ಲಿ ಮಹಿಂದ್ರಾ ಸಂಸ್ಥೆಯ ಸಿಗ್ನೇಚರ್‍‍ನಿಂದ ಸಜ್ಜುಗೊಂಡಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಮಹೀಂದ್ರಾ ಯು321 ಎಂಪಿವಿ ಕಾರು ಏಳು ಲಂಬಾಕಾರದ ಗ್ರಿಲ್, ಪ್ರೊಜೆಕ್ಟರ್ ಹೆಡ್‍ಲ್ಯಾಂಪ್ಸ್, ಹೊಸ ಬಂಪರ್, ಫಾಗ್ ಲ್ಯಾಂಪ್ಸ್, ಬೂಮರಾಂಗ್ ಆಕಾರದ ಎಲ್ಇಡಿ ಡೇ ಟೈಮ್ ರನ್ನಿಂಗ್ ಲ್ಯಾಂಪ್ಸ್ ವೈಶಿಷ್ಟ್ಯತೆಗಳನ್ನು ಪಡೆದಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಕಾರಿನ ಒಳವಿನ್ಯಾಸದ ಬಗ್ಗೆ ಹೇಳುವುದಾದರೇ, ಎತ್ತರವಾದ ಏಳು ಲೆದರ್ ಸೀಟ್‍‍ಗಳು, ಆಂಡ್ರಾಯ್ಡ್ ಆಟೋ ಆಪ್ ಕನೆಕ್ಟಿವಿಟಿ ಆಯ್ಕೆಯನ್ನು ಪಡೆದ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಮತ್ತು ಅನಲಾಗ್ ಡಿಜಿಟಲ್ ಇನ್ಸ್ಟ್ರೂಮೆಂಟಲ್ ಕ್ಲಸ್ಟರ್ ಅನ್ನು ಪಡೆದಿರಲಿವೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಎಂಜಿನ್ ಸಾಮರ್ಥ್ಯ

ಮಹಿಂದ್ರಾ ಯು321 ಕಾರುಗಳು 2.0 ಲೀಟರ್ ಎಂಜಿನ್ ಸಹಾಯದಿಂದ 140ಬಿಹೆಚ್‍ಪಿ ಮತ್ತು 320ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆಯಲಿದ್ದು, 6 ಸ್ಪೀಡ್ ಮ್ಯಾನುವಲ್ ಅಥವಾ 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್ ಮಿಷನ್‍‍ನೊಂದಿಗೆ ಜೋಡಿಸಲಾಗಿದೆ ಎನ್ನಲಾಗಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಇನ್ನು ಮಹೀಂದ್ರಾ ಯು321 ಎಂಪಿವಿ ಬೇಸ್ ಮಾಡಲ್ ಕಾರುಗಳಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್, ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳಲ್ಲಿ ಎರಡು ಬದಿಗಳಲ್ಲೂ ಡಿಸ್ಕ್ ಬ್ರೇಕ್ ಅನ್ನು ಅಳವಡಿಸಲಾಗಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಇದಲ್ಲದೆ ಎಬಿಎಸ್‍‍ನೊಂದಿಗೆ ಇಬಿಡಿ ಮತ್ತು ಡ್ಯುಯಲ್ ಏರ್‍‍ಬ್ಯಾಗ್‍‍ಗಳನ್ನು ಕಾರಿನ ಎಲ್ಲಾ ವೇರಿಯಂಟ್‍‍ನಲ್ಲಿ ಅಳವಡಿಸಲಾಗಿದ್ದು, ಇನ್ನು ಟಾಪ್ ಎಂಡ್ ವೇರಿಯಂಟ್ ಕಾರುಗಳು ಕರ್ಟೈನ್ ಏರ್‍‍ಬ್ಯಾಗ್‍‍ಗಳನ್ನು ಕೂಡಾ ಪಡೆದುಕೊಂಡಿರಲಿವೆ. ಇವುಗಳಲ್ಲದೆ ಪಾರ್ಕಿಂಗ್ ಅಸ್ಸಿಸ್ಟ್, ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ಪಾರ್ಕಿಂಗ್ ಕ್ಯಾಮೆರಾವನ್ನು ಸಹ ಅಳವಡಿಸಲಾಗಿದೆ.

ಶೀಘ್ರವೇ ತನ್ನ ಅಧಿಕೃತ ಹೆಸರನ್ನು ಪಡೆಯಲಿರುವ ಮಹೀಂದ್ರಾ ಯು321 ಎಮ್‍‍ಪಿವಿ ಕಾರು..

ಹೀಗಾಗಿ ಹೊಸ ಎಂಪಿವಿ ಕಾರು ಬಿಡಗಡೆಗೊಂಡಲ್ಲಿ ಮಾರುತಿ ಎರ್ಟಿಗಾ ಮತ್ತು ಟೊಯೊಟಾ ಇನೊವಾ ಕ್ರಿಸ್ಟಾ ಕಾರುಗಳಿಗೆ ಪೈಪೋಟಿಯನ್ನು ನೀಡಲಿದೆ. ಇನ್ನು ಕಾರಿನ ಬೆಲೆಯ ಬಗ್ಗೆ ಮಾಹಿತಿ ಬಹಿರಂಗವಾಗಿಲ್ಲವಾದರೂ ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 10 ರಿಂದ 15 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದೆ.

Most Read Articles

Kannada
Read more on mahindra mpv
English summary
Mahindra U321 MPV will get its official name soon
Story first published: Saturday, July 28, 2018, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X