ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

Written By: Rahul TS

ದೇಶಿಯ ಮಾರುಕಟ್ಟೆಯಲ್ಲಿ ಹಲವು ವರ್ಷಗಳಿಂದ ತನ್ನದೆಯಾದ ಜನಪ್ರಿಯತೆಯನ್ನು ಪಡೆದಿರುವಂತಹ ಮಾರುತಿ ಸುಜುಕಿ ಸಂಸ್ಥೆಯು ತಮ್ಮ ಇಗ್ನಿಸ್ ಹಾಗು ಬಲೆನೊ ಕಾರುಗಳಿಗೆ ಹೊಸ ಬಣ್ಣದ ಆಯ್ಕೆಯನ್ನು ನೀಡಿದ್ದು, ಗ್ರಾಹಕರ ಆಯ್ಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಹೊಸ ಉಪಾಯವನ್ನು ಮಾಡಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಸದ್ಯ ಮಾರುಕಟ್ಟೆಯಲ್ಲಿರುವ ಅರ್ಬನ್ ಬ್ಲೂ ಬಣ್ಣಗಳನ್ನು ತೆಗೆದು ಹಾಕಲು ನಿರ್ಧರಿಸಿರುವ ಮಾರುತಿ ಸುಜುಕಿ ಸಂಸ್ಥೆಯು ಈಗಾಗಲೇ ಅರ್ಬನ್ ಬ್ಲ್ಯೂ ಬಣ್ಣದ ಕಾರುಗಳ ಉತ್ಪಾದನೆಯನ್ನು ಸಹ ನಿಲಿಸಿದೆ. ಅದರ ಬದಲಾಗಿ ವಿನೂತನ ಮಾದರಿಯ ನೆಕ್ಸಾ ಬ್ಲೂ ಎಂಬ ಬಣ್ಣವನ್ನು ಹೊಂದಿರುವ ಇಗ್ನಿಸ್ ಕಾರುಗಳನ್ನು ಬಿಡುಗಡೆ ಮಾಡಲಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಇನ್ನು ಮಾರುತಿ ಇಗ್ನಿಸ್ ಕಾರುಗಳು ಸಿಗ್ಮಾ, ಡೆಲ್ಟಾ, ಜೆಟಾ ಹಾಗು ಆಲ್ಫಾ ಎಂಬ ನಾಲ್ಕು ವೇರಿಯಂಟ್‍‍ಗಳಲ್ಲಿ ಲಭ್ಯವಿದ್ದು, ಸಿಗ್ಮಾ ವೇರಿಯೆಂಟ್ ಅನ್ನು ಹೊರತು ಪಡಿಸಿ ಇನ್ನುಳಿದ ಮೂರು ವೇರಿಯೆಂಟ್‍ಗಳಲ್ಲಿ ಅರ್ಬನ್ ಬ್ಲೂ ಬಣ್ಣದ ಆಯ್ಕೆ ನೀಡಲಾಗಿತ್ತು.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಆದರೇ ಗ್ರಾಹಕರ ಬೇಡಿಕೆ ಕಡಿಮೆಯಾದ ಹಿನ್ನೆಲೆ ನೆಕ್ಸಾ ಬ್ಲೂ ಪರಿಚಯಿಸಲಾಗುತ್ತಿದ್ದು, ಇದರ ಜೊತೆಗೆ ಪರ್ಲ್ ಆರ್ಕ್ಟಿಕ್ ವೈಟ್, ಗ್ಲಿಸ್ಟೆನಿಂಗ್ ಗ್ರೇ, ಸಿಲ್ಕಿ ಸಿಲ್ವರ್, ಅಪ್‍ಟೌನ್ ರೆಡ್ ಹಾಗು ಟಿನ್‍ಸೆಲ್ ಬ್ಲೂ ಬಣ್ಣಗಳಲ್ಲೂ ಸಹ ಇಗ್ನಿಸ್ ಖರೀದಿಗೆ ಲಭ್ಯವಿರಲಿವೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಇಗ್ನಿಸ್ ಕಾರಿನ ಟಾಪ್ ವೇರಿಯೆಂಟ್‍‍ಗಳಾದ ಜೆಟಾ ಹಾಗು ಆಲ್ಫಾ ಕಾರುಗಳು ಡ್ಯುಯಲ್ ಟೋನ್ ಬಣ್ಣಗಳ ಆಯ್ಕೆಯನ್ನು ಪಡೆದಿದ್ದು, ಅಪ್‍ಟೌನ್ ರೆಡ್ ಹಾಗು ಬ್ಲೂ ವೇರಿಯೆಂಟ್ ಮತ್ತು ಮಿಡ್‍ನೈಟ್ ಬ್ಲಾಕ್ ರೂಫ್, ಇದಲ್ಲದೆ ಆಯ್ಕೆಯಾಗಿ ಟಿನ್ಸೆಲ್ ಬ್ಲೂ ಮತ್ತು ಪರ್ಲ್ ಆರ್ಕ್ಟಿಕ್ ವೈಟ್ ರೂಫ್ ಬಣ್ಣಗಳನ್ನು ಪಡೆದಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಇಗ್ನಿಸ್ ಕಾರುಗಳಲ್ಲದೆೇ ಮಾರುತಿ ಸುಜುಕಿ ಸಂಸ್ಥೆಯ ಮತ್ತೊಂದು ಜನಪ್ರಿಯ ಕಾರು ಮಾದರಿಯಾದ ಬಲೆನೊ ಕಾರು ಕೂಡ ಹೊಸದಾಗಿ ನೆಕ್ಸಾ ಬ್ಲೂ ಬಣ್ಣವನ್ನು ಪಡೆದಿದ್ದು, ಈಗಾಗಲೇ ದೊರೆಯುತ್ತಿರುವ ಅರ್ಬನ್ ಬ್ಲೂ ಬಣ್ಣಗಳ ಬಲೆನೊ ಕಾರುಗಳನ್ನು ಬದಲಿಸಲಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಹೊಸ ಮಾದರಿಯ ಇಗ್ನಿಸ್ ಕಾರುಗಳು ಈ ಹಿಂದೆ 2017ರಲ್ಲೇ ಬಿಡುಗಡೆಗೊಂಡಿದ್ದು, ಪೆಟ್ರೋಲ್ ಹಾಗು ಡೀಸೆಲ್ ವೇರಿಯೆಂಟ್‍‍ಗಳಲ್ಲಿ ಲಭ್ಯವಿದೆ. ಇದರ 1.2 ಲೀಟರ್ ಪೆಟ್ರೋಲ್ ಎಂಜಿನ್ ಸಹಾಯದಿಂದ 81-ಬಿಹೆಚ್‍ಪಿ ಹಾಗು 113-ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಹಾಗೆಯೇ 1.3 ಲೀಟರ್ ಡೀಸೆಲ್ ಎಂಜಿನ್ ಸಹಾಯದಿಂದ 74-ಬೆಹೆಚ್‍ಪಿ ಹಾಗು 190-ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಹಾಗು ಡೀಸೆಲ್ ಎಂಜಿನ್‍‍ಗಳನ್ನು 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ಗೆ ಜೋಡಿಸಲಾಗಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಒಟ್ಟಿನಲ್ಲಿ ಹೊಸ ಬಣ್ಣಗಳನ್ನು ಪಡೆದಿರುವ ಇಗ್ನಿಸ್ ಹಾಗು ಬಲೆನೊ ಕಾರುಗಳು ಗ್ರಾಹಕರಿಗೆ ಹೊಸ ರೂಪವನ್ನು ಸವಿಯುವ ಆಯ್ಕೆಯನ್ನು ನೀಡುವುದರಿಂದ ಮಾರುಕಟ್ಟೆಯಲ್ಲಿ ಮತ್ತೆ ಸದ್ದು ಮಾಡುವ ನೀರಿಕ್ಷೆಯಿದ್ದು, ಹೊಸ ಬಣ್ಣದ ಆಯ್ಕೆಯು ಗ್ರಾಹಕರನ್ನು ಯಾವ ರೀತಿ ಸೆಳೆಯಲಿವೆ ಎಂಬುದನ್ನು ಕಾಯ್ದು ನೋಡಬೇಕಿದೆ.

ಹೊಸ ಬಣ್ಣ ಪಡೆದ ಮಾರುತಿ ಸುಜುಕಿ ಇಗ್ನಿಸ್ ಮತ್ತು ಬಲೆನೊ ಕಾರುಗಳು..

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

1. ಸದ್ಯದಲ್ಲೇ ನಿರ್ಮಾಣವಾಗಲಿದೆ ದೇಶದ ಮೊದಲ ಸೂಪರ್ ಎಕ್ಸ್‌ಪ್ರೆಸ್ ವೇ..

2. ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

3. ವಾಹನ ಸವಾರರ ಜೀವಕ್ಕೆ ಕುತ್ತು ತರುತಂತೆ ಟೈರ್ ಕಿಲ್ಲರ್ ಹಂಪ್?

4. 30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

5. ರಾತ್ರಿ ವೇಳೆ ಹೈವೇ ಡ್ರೈವಿಂಗ್ ಮಾಡುವ ಮುನ್ನ ಇರಲಿ ಎಚ್ಚರ...

Read more on maruti
English summary
Maruti Ignis And Baleno To Feature A New Colour.
Story first published: Wednesday, April 4, 2018, 17:52 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark