ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಮಾರುತಿ ಸ್ವಿಫ್ಟ್ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಕಂಡ ಕಾರ್ ಬ್ರ್ಯಾಂಡ್‌ನಲ್ಲಿ ಒಂದಾಗಿದ್ದು, ಇತ್ತೀಚೆಗೆ ಮಾರುತಿ ತನ್ನ ಮೂರನೇ ತಲೆಮಾರಿನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ.

By Rahul Ts

ಮಾರುತಿ ಸ್ವಿಫ್ಟ್ ಭಾರತದಲ್ಲಿ ಹೆಚ್ಚು ಜನಪ್ರಿಯತೆ ಕಂಡ ಕಾರ್ ಬ್ರ್ಯಾಂಡ್‌ನಲ್ಲಿ ಒಂದಾಗಿದ್ದು, ಇತ್ತೀಚೆಗೆ ಮಾರುತಿ ತನ್ನ ಮೂರನೇ ತಲೆಮಾರಿನ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಹಾಗಾದ್ರೆ ಇಷ್ಟು ಜನಪ್ರಿಯತೆಯನ್ನು ಪಡೆದ ಮಾರುತಿ ಸ್ವಿಫ್ಟ್ ಕಾರಿನ ಬಗ್ಗೆ ನಿಮಗೆ ತಿಳಿಯದ 10 ವಿಚಾರವನ್ನು ನಾವು ತಿಳಿಸಲಿದ್ದೇವೆ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಸ್ವಿಫ್ಟ್ ಕಾರಿನ ಮೊದಲನೇ ತಲೆಮಾರಿನ ಆವೃತ್ತಿಯು ಅಕ್ಟೋಬರ್ 1983ರಲ್ಲಿ ಜಪಾನ್ ಮಾರುಕಟ್ಟೆಗೆ ಲಗ್ಗೆಯಿಟ್ಟಿತ್ತು. ತದನಂತರ 2005ರಲ್ಲಿ ಕಾಣಿಸಿಕೊಂಡಿದ್ದ ಸ್ವಿಫ್ಟ್ 1990ರಲ್ಲಿ ಕಲ್ಟಸ್ ಎಂಬ ಹೆಸರಿನಲ್ಲಿ ಮರು ಬಿಡುಗಡೆಗೊಂಡಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಮತ್ತೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಅಮೆರಿಕ ಮೂಲದ ಕಾರು ತಯಾರಕ ಜನರಲ್ ಮೋಟಾರ್ಸ್ ಸಂಸ್ಥೆಯು ಸ್ವಿಫ್ಟ್ ನ ಮೊದಲ ತಲೆಮಾರಿನ ಕಾರನ್ನು ತಯಾರಿಸಲು ಮುಂದಾಗಿತ್ತು. ಆದ್ರೆ ಅದರಿಂದ ಸಂಸ್ಥೆಗೆ ಹೆಚ್ಚು ಲಾಭ ಪಡೆಯುವ ಅವಕಾಶಗಳು ಕಡಿಮೆ ಎಂದು ತಿಳಿದ ಜಿಎಂ ಕಾರಿನ ನಿರ್ಮಾಣದ ಶೇಕಡ 5% ರಷ್ಟು ಪಾಲನ್ನು ಸುಜುಕಿ ಸಂಸ್ಥೆಗೆ ಬಿಟ್ಟುಕೊಟ್ಟಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ನಂತರ ಸುಜುಕಿ ಸಂಸ್ಥೆಯೇ ಸ್ವಿಫ್ಟ್ ಕಾರಿನ ನಿರ್ಮಾಣವನ್ನು ಪೂರ್ಣಗೊಳಿಸಿದಲ್ಲದೇ ಮೊದಲ ಬಾರಿಗೆ ಜಪಾನ್ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಸುಜುಕಿ ಸಂಸ್ಥೆಯು ಮೊದಲನೇ ತಲೆಮಾರಿನ ಸ್ವಿಫ್ಟ್ ಕಾರನ್ನು ನಂತರದ ದಿನಗಳಲ್ಲಿ ಪ್ರಪಂಚದಾತ್ಯಂತ ಬಿಡುಗಡೆ ಮಾಡಿದರು, ಕೆಲ ದೇಶಗಳಲ್ಲಿ ಸ್ವಿಫ್ಟ್ ಕಾರು ಜಿಎಂ ಬ್ರಾಂಡ್ ಹೆಸರಿನಲ್ಲಿಯೇ ಮಾರಾಟಗೊಂಡಿತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಇದಲ್ಲದೆ ಸ್ವಿಫ್ಟ್ ಮೊದಲನೇ ತಲೆಮಾರಿನ ಕಾರನ್ನು ಯೂರೋಪಿನ ಮಾರುಕಟ್ಟೆಯಲ್ಲಿ 'ಇಗ್ನಿಸ್' ಎಂಬ ಹೆಸರಿನಲ್ಲಿ ಮಾರಾಟವಾಗಿದ್ದು, ಕೆಲ ದೇಶಗಳ ಅನುಕೂಲತೆಗೆ ಆಯಾ ದೇಶಗಳಲ್ಲಿ ಸ್ವಿಫ್ಟ್ ಕಾರಿನ ಹೆಸರನ್ನು ಬದಲಾಯಿಸಿ ಮಾರಾಟಗೊಳಿಸಿತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಯುಎಸ್ಎ ಮತ್ತು ಕೆನಡಾ ದೇಶಗಳಲ್ಲಿ 'ಎಯ್ರೋ' ಎಂದು, ಪಾಕಿಸ್ಥಾನದಲ್ಲಿ 'ಸೆಲೆರಿಯೊ' ಎಂದು ಮತ್ತು ಜಪಾನ್ ಮಾರುಕಟ್ಟೆಯಲ್ಲಿ ಇದನ್ನು 'ಕಲ್ಟಸ್ ಕ್ರೆಸೆಂಟ್' ಕಾರೇಂದು ಕರೆಯಲಾಯಿತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಭಾರತದ ಮಾರುಕಟ್ಟೆಯಲ್ಲಿ ಮಾರಾಟಗೊಂಡ ಎಸ್ಟೀಮ್ ಕಾರಿನ ಹೆಸರನ್ನು ಷೆವರ್ಲೆ ಸಂಸ್ಥೆಯು ಪುನರ್ಜೀವನಗೊಳಿಸಿ ಸ್ವಿಫ್ಟ್ ಎಂಬ ಹೆಸರಿನಲ್ಲಿ ಹಲವಾರು ದೇಶಗಳಲ್ಲಿ ಮಾರಾಟಗೊಳಿಸಲಾಯಿತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಮಾರುತಿ ಸುಜುಕಿ ಸಂಸ್ಥೆಯು 2005 ಯಿಂದ 1.8 ಮಿಲಿಯನ್ ಸ್ವಿಫ್ಟ್ ಕಾರುಗಳನ್ನು ಮಾರಾಟ ಮಾಡಿದ್ದು, ಮೊದಲು ಬಿಡುಗಡೆಗೊಂಡಾಗ ಈ ಕಾರಿಗೆ ಮೂವರು ಸ್ಪರ್ಧಿಗಳಿದ್ದರೆಂದು ಹೇಳಲಾಗಿದ್ದು, 13 ವರ್ಷಗಳ ನಂತರ 10 ಸ್ಪರ್ಧಿಗಳನ್ನು ಸೋಲಿಸಿ ಇಂದಿಗೂ ಕೂಡ ಟಾಪ್ ಲಿಸ್ಟ್ ನಲ್ಲಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಮಾರುತಿ ಸ್ವಿಫ್ಟ್ ಕಾರಿನ ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಸುಜುಕಿಯ ಹಯಾಬುಝಾ ಕಂಸೋಲ್ ನಿಂದ ಸ್ಪೂರ್ತಿಗೊಂಡಿದ್ದು, ಟಾಚೋಮೀಟರ್ ನ 6'O ಕ್ಲಾಕ್ ಸ್ಥಳ, ಫಾಂಟ್ ಲೇಔಟ್ ರೂಪವು ಸುಜುಕಿಯ ಫ್ಲಾಗ್ ಶಿಪ್ ಮೋಟರ್ ಸೈಕಲ್ ರೂಪವನ್ನು ಹೋಲುತ್ತದೆ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಸುಜುಕಿಯು ವಿವಿಧ ಹೈಬ್ರಿಡ್ ಮತ್ತು ವಿದ್ಯುತ್ ಕಾಂಸೆಪ್ಟ್ ಕಾರುಗಳನ್ನು ಪ್ರದರ್ಶನಗೊಳಿಸಿದ್ದು, ಅದರಲ್ಲಿ ಒಂದು ಪ್ರಮುಖ ಮಾದರಿಯು 2009ರ ಟೊಕಿಯೊ ಮೋಟರ್ ಶೋನಲ್ಲಿ ಪ್ರದರ್ಶನಗೊಂಡಿತ್ತು. ನಂತರ ಅದೇ ಕಾರನ್ನು ಬದಲಾಯಿಸಿ 2011ರ ಟೊಕಿಯೊ ಶೋನಲ್ಲಿ ಪ್ರದರ್ಶನಗೊಳಿಸಿದ್ದ ಸುಜುಕಿ ಸಂಸ್ಥೆಯು, ಇವಿ ಹೈಬ್ರಿಡ್ ಕಾರು 660 ಸಿಸಿ ಪೆಟ್ರೋಲ್ ಎಂಜಿನನ್ನು ಪದೆದಿತ್ತು.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಹಾಗೆಯೆ 54ಕಿಲೋ ವ್ಯಾಟ್ಸ್ ಮೋಟರ್ ಬ್ಯಾಟರಿ ಚಾರ್ಜ್ ಕಮ್ಮಿಯಾದಲ್ಲಿ ಪೆಟ್ರೋಲ್ ಎಂಜಿನ್ ಕಾರಿನ ಚಲಾವಣೆಯನ್ನು ಮುಂದುವರೆಸಬಲ್ಲ ಶಕ್ತಿಯನ್ನು ಹೊಂದಿದ್ದು, ಆದರೇ ಈ ಕಾರು ಇನ್ನು ಉತ್ಪಾದನೆಗೆ ಮುಂದಾಗಲಿಲ್ಲ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಪ್ರಸ್ತುತ ಸುಜುಕಿ ಸ್ವಿಫ್ಟ್ ಕಾರನ್ನು 140 ದೇಶಗಳಲ್ಲಿ ಮಾರಾಟಗೊಳ್ಳುತಿದ್ದು, ಭಾರತವನ್ನು ಒಳಗೊಂಡು 7 ದೇಶಗಳಲ್ಲಿ ಕಾರು ಉತ್ಪಾದನಾ ಫ್ಯಾಕ್ಟರಿಯನ್ನು ಹೊಂದಿದೆ. ಭಾರತದ ಮಾರುಕಟ್ಟೆಯು ಸ್ವಿಫ್ಟ್ ಕಾರಿನ ಪ್ರಮುಖ ಮುಕಟ್ಟೆಯಾಗಿದ್ದು, ಇದು ಪ್ರಪಂಚಾದ್ಯಂತ ಸುಮಾರು 5 ಬಿಲಿಯನ್ ಕಾರುಗಳನ್ನು ಮಾರಾಟ ಮಾಡಿದೆ. ಅದರಲ್ಲಿ ಭಾರತವು 1.8 ಬಿಲಿಯನ್ ಪ್ರತಿಗಳನ್ನು ಹೊಂದಿದೆ.

ಮಾರುತಿ ಸುಜುಕಿ ಸ್ವಿಫ್ಟ್ ಬಗ್ಗೆ ನಿಮಗೆ ತಿಳಿಯದ 10 ವಿಚಾರಗಳಿವು...

ಸ್ವಿಫ್ಟ್ ಕಾರಿನ ಪೆಟ್ರೋಲ್ ಆವೃತ್ತಿಯು ಮೊದಲಿಗೆ ಮಾರುಕಟ್ಟೆಯಲ್ಲಿ ಸದ್ದು ಮಾಡಿಲ್ಲದ ಕಾರಣದಿಂದ ಎರಡು ವರ್ಷಗಳ ನಂತರ ಡಿಸೇಲ್ ಎಂಜಿನ್ ಮಾದರಿಯನ್ನು ಪರಿಚಯಿಸಿದ್ದು, ಫಿಯೆಟ್ ಕಾರಿನ ಡೀಸೆಲ್ ಆವೃತ್ತಿಯು ಕೊಂಚ ಕಾಲದಲ್ಲೇ ಹೆಚ್ಚು ಮಾರಾಟಗೊಂಡು ಮತ್ತೆ ಜನಪ್ರಿಯತೆಯನ್ನು ಗಳಿಸಿದ್ದು ಇದೀಗ ಇತಿಹಾಸವೇ ಸರಿ.

News source : Cartoq

Most Read Articles

Kannada
Read more on suzuki
English summary
Maruti Suzuki Swift: 10 things you don’t about.
Story first published: Thursday, February 22, 2018, 11:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X