20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಯೂ 20 ವರ್ಷಗಳ ಸುಮಾರು ನಂತರ ತಮ್ಮ 8 ಸಿರೀಸ್ ಕಾರನ್ನು ಪರಿಚಯಿಸುವ ಯೋಜೆನೆಯಲಿದ್ದು, ಇದೀಗ ತಮ್ಮ 8 ಎಮ್850ಐ ಸಿರೀಸ್ ಕೌಪ್ ಕಾರನ್ನು ಅನಾವರಣಗೊಳಿಸಿದೆ.

By Rahul Ts

ಜರ್ಮನ್ ಮೂಲದ ವಾಹನ ತಯಾರಕ ಸಂಸ್ಥೆಯಾದ ಬಿಎಮ್‍ಡಬ್ಯೂ 20 ವರ್ಷಗಳ ಸುಮಾರು ನಂತರ ತಮ್ಮ 8 ಸಿರೀಸ್ ಕಾರನ್ನು ಪರಿಚಯಿಸುವ ಯೋಜೆನೆಯಲಿದ್ದು, ಇದೀಗ ತಮ್ಮ 8 ಎಮ್850ಐ ಸಿರೀಸ್ ಕೌಪ್ ಕಾರನ್ನು ಅನಾವರಣಗೊಳಿಸಿದೆ. ಇತ್ತೀಚಿನ ದಿನಗಳಲ್ಲಿ ಎಮ್850ಐ ಟ್ರಿಮ್ ಕೌಪ್ ಕಾರಿನ ಸಂಪೂರ್ಣ ಕಾರ್ಯರೂಪದ ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಉತ್ಪಾದನಾ ಮಾದರಿಯ ಎಮ್850ಐ ಕೌಪ್ ಟೂರರ್ ಕಾರು ಹಲವಾರು ವೈಶಿಷ್ಟ್ಯತೆಗಳನ್ನು ಪಡೆದಿದ್ದು, ವಿನೂತನವಾದ ಕಿಡ್ನಿ ಗ್ರಿಲ್ ಹಾಗು ಬಿಎಮ್‍ಡಬ್ಯೂ ಇನ್ನಿತರೆ ಕಾರುಗಳಲ್ಲಿ ಬಳಸಿರುವ ಹಾಗೆಯೆ ಶಾರ್ಪ್ ಡಿ‍ಆರ್‍ಎಲ್ ಕ್ಲಸ್ಟರ್, ಅಗಲವಾದ ಏರ್ ಡ್ಯಾಮ್ಸ್, ಬಂಪರ್ ತ್ತು ಏರೊಡೈನಾಮಿಕ್ ಬೊನೆಟ್‍ ಅನ್ನು ಪಡೆದುಕೊಂಡಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಗ್ರ್ಯಾಂಡ್ ಟೂರರ್ ಬಿಎಮ್‍ಡಬ್ಲ್ಯೂ 8 ಸಿರೀಸ್ ಉದ್ದವಾದ ಕೌಪ್ ಕಾರಾಗಿದ್ದು, ಮುಂಭಾಗದಲ್ಲಿ ಇಬ್ಬರು ಹಾಗು ಹಿಂಭಾದಲ್ಲಿ ಇಬ್ಬರು ಕಿರಿಯರು ಕೂರಬಹುದಾಗಿದೆ. ಇನ್ನು ಈ ಕಾರು 19 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದಿದ್ದು, 20 ಇಂಚಿನ ಲಾಯ್ ವ್ಹೀಲ್‍‍ಗಳನ್ನು ಕೂಡಾ ಆಯ್ಕೆಯಾಗಿ ಪಡೆಯಬಹುದಾಗಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಕಾರಿನ ಹಿಂಭಾಗದಲ್ಲಿ ಅಗಲವಾದ ಎಲ್ಇಡಿ ಟೈಲ್ ಲ್ಯಾಂಪ್, ರಿಯರ್ ಬೋಲ್ಡ್ ಬಂಪರ್‍‍ನ ಮೇಲೆ ಏರ್ ವೆಂಟ್ಸ್ ಅನ್ನು ಅಳವಡಿಸಲಾಗಿದ್ದು, ರೋಂಬಿಕ್ ಎಕ್ಸಾಸ್ಟ್ ಅನ್ನು ಅಳವಡಿಸಲಾಗಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಇನ್ನು ಕಾರಿನ ಒಳಭಾಗದಲ್ಲಿ ಗ್ರಾಹಕರಿಗೆ ಅನುಗುಣವಾಗಿ ಒಳ್ಳೆಯ ಗುಣಮಟ್ಟದ ಲೆದರ್, ಕ್ರೋಮ್ ಮತ್ತು ಸಿಲ್ವರ್ ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಇನ್ನಿತರೆ ವೈಶಿಷ್ಟ್ಯತೆಗಳನ್ನು ಬಳಸಲಾಗಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಎಮ್850ಐ ಕಾರು ಪೂರ್ಣ ಡಿಜಿಟಲ್ ಇಸ್ಟ್ರೂಮೆಂಟ್ ಕ್ಲಸ್ಟರ್, ಹೆಡ್ಸ್-ಅಪ್ ಡಿಸ್ಪ್ಲೇ, ಹ್ಯಾಪ್ತಿಕ್ ಫೀಡ್‍‍ಬ್ಯಾಕ್ ಬಟನ್ಸ್, ಆಯ್ಕೆಯಾಗಿ 1375 ವ್ಯಾಟ್ಸ್ ಬೋವರ್ಸ್ ಮತ್ತು ವಿಲ್ಹ್ಕಿನ್ಸ್ ಸೌಂಡ್ ಸಿಸ್ಟಮ್ ಹಾಗು ನಿಯರ್ ಫೀಲ್ಡ್ ಕಮ್ಯೂನಿಕೇಷನ್ ಅನ್ನು ಅಳವಡಿಸಲಾಗಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

2019ರ ಬಿಎಮ್ಡಬ್ಲ್ಯೂ 8 ಸಿರೀಸ್ ಕೌಪ್ ಕಾರು 4.4 ಲೀಟರ್ ಟ್ವಿನ್ ಟರ್ಬೊ ವಿ8 ಎಂಜಿನ್ ಸಹಾಯದಿಂದ 523ಬಿಹೆಚ್‍‍ಪಿ 750ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 8 ಸ್ಪಿಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

ಇನ್ನು ಈ ಕಾರು ಸಂಸ್ಥೆಯ ಎಕ್ಸ್ ಡ್ರೈವ್ ಆಲ್ ವ್ಹೀಲ್ ಡ್ರೈವ್ ಸಿಸ್ಟಮ್ ಅನ್ನು ಪಡೆದಿದ್ದು, ಗಂಟೆಗೆ 250 ಕಿಲೋಮೀಟರ್ ಸ್ಪೀಡ್‍‍ನಲ್ಲಿ ಚಲಿಸಬಲ್ಲ ಸಾಮರ್ಥ್ಯವನ್ನು ಪಡೆದಿರಲಿದೆ.

20ವರ್ಷಗಳ ನಂತರ ಮತ್ತೆ ಬರಲಿದೆ ಬಿಎಮ್‍ಡಬ್ಯೂ 8 ಸಿರೀಸ್ ಕಾರು..

20 ವರ್ಷಗಳ ನಂತರ ಅನಾವರಣಗೊಂಡ ಬಿಎಮ್‍‍ಡಬ್ಲ್ಯೂ ಸಂಸ್ಥೆಯ 8 ಸಿರೀಸ್ ಕಾರು, ಮಾರುಕಟ್ಟೆಗೆ ಒಮ್ಮೆ ಲಗ್ಗೆಯಿಟ್ಟಲ್ಲಿ ಮರ್ಸಿಡಿಸ್ ಎಸ್-ಕ್ಲಾಸ್ ಕೌಪ್, ಆಸ್ಟನ್ ಮಾರ್ಟಿನ್ ಡಿಬಿ11 ಕಾಗು ಜಿಟಿ ಕ್ಲಾಸ್ ಜೆನೆರಲ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
Read more on bmw luxury cars coupe
English summary
2019 BMW 8 Series M850i Unveiled.
Story first published: Saturday, June 16, 2018, 13:31 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X