ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಹೊಸ ವರ್ಷದ ಆರಂಭದಲ್ಲೇ ಬಹುತೇಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿ ಇರುತ್ತಾರೆ. ಹೀಗಿರುವಾಗ ಹೊಸ ವಾಹನ ಖರೀದಿ ಮಾಡ್ಬೇಕು ಎಂದುಕೊಂಡಿರುವ ಜನತೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಶಾಕಿಂಗ್ ಸುದ್ದಿ ನೀಡುತ್ತಿವೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ವಿದೇಶಿ ಮಿನಿಮಯ ಮತ್ತು ಬಿಡಿಭಾಗಗಳ ಆಮದು ಮೇಲಿನ ಆಮದು ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಜನವರಿ 1 ರಿಂದಲೇ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಮಾಹಿತಿಗಳ ಪ್ರಕಾರ, ಹೊಸ ಕಾರುಗಳ ಬೆಲೆಯಲ್ಲಿ ಶೇ. 2 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ 30 ಸಾವಿರ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ 20 ಸಾವಿರದಿಂದ 40 ಸಾವಿರ ಹಾಗೂ 30 ಲಕ್ಷಕ್ಕೂ ಮೇಲ್ಪಟ್ಟ ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 50 ಸಾವಿರದಿಂದ ರೂ. 3 ಲಕ್ಷ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು, ಹೊಸ ವರ್ಷದ ಆರಂಭದಲ್ಲಿ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿವೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಇದೀಗ ಸಂಸ್ಥೆಯು ಸಂಸ್ಥೆಯು ಕೂಡಾ ತನ್ನ ಕಾರು ಉತ್ಪನ್ನಗಳ ಬೆಲೆಯಲ್ಲಿ ಶೇ. 2.5ರಷ್ಟು ಬೆಲೆ ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್‌ನಿಂದ ಆರಂಭವಾಗುವ ಫ್ರೀಸ್ಟೈಲ್, ಆಸ್ಪೈರ್, ಫಿಗೊ, ಇಕೋ ಸ್ಪೋರ್ಟ್ ಮತ್ತು ಹೈ ಎಂಡ್ ಕಾರು ಮಾದರಿಗಳಾದ ಎಂಡೀವರ್, ಮಸ್ಟಾಂಗ್ ಬೆಲೆ ಏರಿಕೆಯಾಗಲಿದೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಜನವರಿ 1 ರಿಂದಲೇ ಹೊಸ ದರಪಟ್ಟಿಯಂತೆ ಕಾರು ಬೆಲೆಯಲ್ಲಿ ಬದಲಾವಣೆಯಾಗಲಿದ್ದು, ಬೆಲೆ ಹೆಚ್ಚಳದಿಂದಾಗಿ ಜನಪ್ರಿಯ ಫ್ರೀಸ್ಟೈಲ್ ಕಾರು ಖರೀದಿ ಮಾಡುವ ಹೆಚ್ಚಿನ ಸಂಖ್ಯೆಯ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟುವುದು ಮಾತ್ರ ಖಚಿತ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 10 ಸಾವಿರದಿಂದ 12 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 30 ಸಾವಿರದಿಂದ ರೂ. 40 ಸಾವಿರ ಬೆಲೆ ಏರಿಕೆಯಾಗಲಿದೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಡಿಜೈರ್ ಟೂರ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಸ್ವಿಫ್ಟ್ ಬೆಲೆಯಲ್ಲಿ 20 ಸಾವಿರ, ವ್ಯಾಗನ್ ಆರ್, ಬಲೆನೊ, ಇಗ್ನಿಸ್, ಸೆಲೆರಿಯೊ ಬೆಲೆಗಳಲ್ಲಿ 15 ಸಾವಿರದಿಂದ 20 ಸಾವಿರ ಮತ್ತು ಸಿಯಾಜ್ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.25 ಸಾವಿರ ಹೆಚ್ಚಳವಾಗುವುದು ಖಚಿತವಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಟೊಯೊಟಾ ಸಂಸ್ಥೆಯು ಸಹ ಕಾರಿನ ಬೆಲೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 22 ಸಾವಿರ ಹೆಚ್ಚಳವಾಗಲಿದ್ದರೇ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 3.60 ಲಕ್ಷ ಹೆಚ್ಚಳಲಾಗಲಿದೆ.

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಇದಲ್ಲದೇ ಸ್ಕೋಡಾ ಇಂಡಿಯಾ, ರೆನಾಲ್ಟ್, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಸಹ ಈಗಾಗಲೇ ಪ್ರತಿಶತ 2ರಿಂದ 4ರಷ್ಟು ಬೆಲೆ ಹೆಚ್ಚಳ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕೃತ ದರ ಪಟ್ಟಿಗಳು ನಿಗದಿಯಾಗಲಿವೆ.

MOST READ: ವಾಹನ ಸವಾರರಿಗೆ ಸಿಹಿಸುದ್ದಿ- ಟೋಲ್ ದರ ಕಡಿತಕ್ಕೆ ಕೇಂದ್ರದಿಂದ ಹೊಸ ಯೋಜನೆ..!

ಹೊಸ ವರ್ಷದ ವೇಳೆ ಕಾರು ಖರೀದಿದಾರರಿಗೆ ಬೆಲೆ ಏರಿಕೆ ಶಾಕ್ ನೀಡಿದ ಫೋರ್ಡ್

ಒಟ್ಟಿನಲ್ಲಿ ಹೊಸ ವರ್ಷದ ವೇಳೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ವರ್ಷದ ಹೊತ್ತಿಗೆ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.

Most Read Articles

Kannada
Read more on ಫೋರ್ಡ್ ford
English summary
New Ford Cars (2019): Price Hike Announced; 2.5 Per Cent Increase. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X