TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ತಾಂತ್ರಿಕ ದೋಷ- 7,290 ಹೊಸ ಅಮೇಜ್ ಕಾರುಗಳನ್ನ ಹಿಂಪಡೆದ ಹೋಂಡಾ
ಕಳೆದ ಮೇ ತಿಂಗಳಿನಲ್ಲಿ ಬಿಡುಗಡೆಯಾಗಿದ್ದ ನ್ಯೂ ಜನರೇಷನ್ ಹೋಂಡಾ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳು ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಗ್ರಾಹಕರ ಆಕರ್ಷಣೆಗೆ ಕಾರಣವಾಗಿದ್ದು, ಭಾರೀ ಪ್ರಮಾಣದ ಬೇಡಿಕೆ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತವೆ. ಆದ್ರೆ ಈ ಸಮಯದಲ್ಲಿ ಹೊಸ ಅಮೇಜ್ ಕಾರುಗಳಲ್ಲಿ ಕೆಲವು ತಾಂತ್ರಿಕ ದೋಷಗಳು ಕಂಡುಬಂದಿದ್ದು, ಈ ಹಿನ್ನೆಲೆಯಲ್ಲಿ ಮಾರಾಟವಾಗಿದ್ದ ಬರೋಬ್ಬರಿ 7,290 ಹೊಸ ಕಾರುಗಳನ್ನು ಹಿಂಪಡೆಯಲಾಗಿದೆ.
ಗ್ರಾಹಕರ ದೂರಿನ ಮೇಲೆ ತಾಂತ್ರಿಕ ದೋಷವನ್ನು ಪರೀಕ್ಷೆ ನಡೆಸಿದ ಹೋಂಡಾ ಸಂಸ್ಥೆಯು ಹೊಸ ಅಮೇಜ್ ಕಾರುಗಳಲ್ಲಿನ ಪವರ್ ಸ್ಟೀರಿಂಗ್ ಸೆನ್ಸಾರ್ ತೊಂದರೆ ಬಗ್ಗೆ ತಿಳಿ ಹೇಳಿದ್ದು, ಕಾರು ಉತ್ಪಾದನಾ ಸಂದರ್ಭದಲ್ಲಿ ಆದ ತಾಂತ್ರಿಕ ದೋಷವನ್ನು ಕೂಡಲೇ ಪರಿಹರಿಸಿಕೊಡುವುದಾಗಿ ಭರವಸೆ ನೀಡಿದೆ. ಈ ಸಂಬಂಧ ತಾಂತ್ರಿಕ ದೋಷವಿರುವ ಸುಮಾರು 7,290 ಕಾರು ಮಾಲೀಕರನ್ನ ಸಂಪರ್ಕಿಸಿರುವ ಹೋಂಡಾ ಸಂಸ್ಥೆಯು, ಅಧಿಕೃತ ಸರ್ವೀಸ್ ಸೆಂಟರ್‌ಗಳನ್ನು ಸಂಪರ್ಕಿಸಿ ಪವರ್ ಸ್ಟೀರಿಂಗ್ ಸೆನ್ಸಾರ್ ತೊಂದರೆಯನ್ನು ಸರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ.
ಏಪ್ರಿಲ್ 17ರಿಂದ ಮೇ 24ರ ತನಕ ಉತ್ಪಾದನೆಗೊಂಡಿರುವ ಹೊಸ ಅಮೇಜ್ ಕಾರುಗಳಲ್ಲಿ ಮಾತ್ರ ಪವರ್ ಸ್ಟೀರಿಂಗ್ ಸೆನ್ಸಾರ್ ತೊಂದರೆ ಕಂಡುಬಂದಿದ್ದು, ಇದು ಕಾರು ಚಾಲನೆಗೆ ಅಷ್ಟೇನು ತೊಂದರೆ ಅಲ್ಲದ್ದಿದ್ದರೂ ನಿರ್ಲಕ್ಷ್ಯ ವಹಿಸಿದ್ದಲ್ಲಿ ಅಪಾಯ ತಪ್ಪಿದ್ದಲ್ಲ.
ಹೀಗಾಗಿಯೇ ತಾಂತ್ರಿಕ ದೋಷವಿರುವ ನ್ಯೂ ಅಮೇಜ್ ಕಾರು ಮಾಲೀಕರನ್ನ ಸಂಪರ್ಕಿಸಿ ಆದ ತೊಂದರೆ ಬಗ್ಗೆ ಕ್ಷಮೆ ಕೋರಿರುವ ಹೋಂಡಾ ಸಂಸ್ಥೆಯು, ಅಧಿಕೃತ ಸರ್ವೀಸ್ ಸೆಂಟರ್‌ಗಳಲ್ಲಿ ಲಭ್ಯವಿರುವ ಉಚಿತ ಸೇವೆಯನ್ನು ಪಡೆದುಕೊಂಡು ತಾಂತ್ರಿಕ ದೋಷವನ್ನ ಪರಿಹರಿಸಿಕೊಳ್ಳುವಂತೆ ಮನವಿ ಮಾಡಿದೆ.
ಇನ್ನು ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿರುವ ನ್ಯೂ ಅಮೇಜ್ ಕಾರುಗಳು ಕಳೆದು ತಿಂಗಳು ಕಾರು ಮಾರಾಟದ ಪಟ್ಟಿಯಲ್ಲಿ ಟಾಪ್ 10ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದು, ದೆಹಲಿ ಎಕ್ಸ್‌ಶೋರಂ ಪ್ರಕಾರ ಆರಂಭಿಕವಾಗಿ ರೂ. 5.59 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 8.99 ಲಕ್ಷಕ್ಕೆ ಖರೀದಿಸಬಹುದಾಗಿದೆ.
ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಯು ದೇಶಿಯ ಗ್ರಾಹಕರ ಅಭಿರುಚಿಗೆ ಅನುಗುಣವಾಗಿ ನ್ಯೂ ಅಮೇಜ್ ಕಂಪ್ಯಾಕ್ಟ್ ಸೆಡಾನ್ ಕಾರುಗಳನ್ನು ಪರಿಚಯಿಸಿದ್ದು, ಗ್ರಾಹಕರ ಆಕರ್ಷಣೆಗೆ ಕಾರಣವಾಗಿರುವ ಹೊಸ ಕಾರುಗಳ ಮಾರಾಟ ಪ್ರಮಾಣದಲ್ಲೂ ಭಾರೀ ಏರಿಕೆ ಕಂಡಿರುವುದು ಹೋಂಡಾ ಸಂಸ್ಥೆಗೆ ಅಚ್ಚರಿ ತರಿಸಿದೆ.
ಅಮೇಜ್ ಕಾರುಗಳು ಒಟ್ಟು ನಾಲ್ಕು ಮಾದರಿಯಲ್ಲಿ ಖರೀದಿ ಲಭ್ಯವಿದ್ದು, ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಇ, ಎಸ್, ವಿ ಮತ್ತು ವಿಎಕ್ಸ್ ವೆರಿಯೆಂಟ್‌ಗಳನ್ನು ಆಯ್ಕೆ ಮಾಡಬಹುದಾಗಿದೆ. ಹೀಗಾಗಿ ವೆರಿಯೆಂಟ್‌ಗಳಿಗೆ ಅನುಗುಣವಾಗಿ ಕಾರಿನ ಬೆಲೆಗಳು ನಿಗದಿ ಮಾಡಲಾಗಿದೆ.
ಸ್ಪೋರ್ಟಿ ಲುಕ್ ಹೊಂದಿರುವ ಅಮೇಜ್ ಕಾರುಗಳು ಎರಡನೇ ತಲೆಮಾರಿನ ಶಾರ್ಪರ್ ಆಂಗಲ್ಸ್, ಬೋಲ್ಡರ್ ಡಿಸೈನ್ ಹಾಗೂ ಆಂಗ್ಯೂಲರ್ ಹೆಡ್‍ಲ್ಯಾಂಪ್‍ಗಳನ್ನು ಪಡೆದುಕೊಂಡಿದ್ದು, 15 ಇಂಚಿನ ಅಲಾಯ್ ವೀಲ್‍ಗಳು, ಹಿಂಭಾಗದ ವಿನ್ಯಾಸದಲ್ಲಿ ಹೊಸ ಪ್ರೇರಣೆಯ ಕ್ರೋಮ್ ಸ್ಟ್ರಿಪ್, ಸಿ ಟೈಪ್ ಟೈಲ್ ಲೈಟ್ಸ್ ಗಳನ್ನು ಪಡೆದಿದಿರುವುದು ಆಕರ್ಷಕವಾಗಿದೆ.
ಎಂಜಿನ್ ವೈಶಿಷ್ಟ್ಯತೆಗಳು
ಹೊಸ ಅಮೇಜ್ ಕಾರುಗಳು 1.2-ಲೀಟರ್ ಪೆಟ್ರೋಲ್ ಮತ್ತು 1.5-ಲೀಟರ್ ಡೀಸೆಲ್ ಎಂಜಿನ್‌ನಲ್ಲಿ ಖರೀದಿಸಬಹುದಾಗಿದ್ದು, ಪೆಟ್ರೋಲ್ ಆವೃತ್ತಿಯು 89-ಬಿಎಚ್‌ಪಿ, 110-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದಲ್ಲಿ ಡಿಸೇಲ್ ಆವೃತ್ತಿಯು 99-ಬಿಎಚ್‌ಪಿ, 200-ಎನ್ಎಂ ಉತ್ಪಾದನೆ ಮಾಡಬಲ್ಲವು.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ
ಹೊಸ ಕಾರುಗಳಲ್ಲಿ ತಾಂತ್ರಿಕ ದೋಷ ಕಂಡುಬರುವುದು ಸಾಮಾನ್ಯ ಸಂಗತಿ. ಕಾರು ಉತ್ಪಾದನೆಯ ಸಂದರ್ಭದಲ್ಲಿ ಆಗುವ ಕೆಲವು ತಾಂತ್ರಿಕ ತೊಂದರೆಗಳೇ ಇದಕ್ಕೆ ಪ್ರಮುಖ ಕಾರಣವಾಗಿರುತ್ತೆ. ಇದೀಗ ಅಮೇಜ್ ಕಾರುಗಳಲ್ಲೂ ತಾಂತ್ರಿಕ ದೋಷ ಕಂಡುಬಂದಿದ್ದು, ಒಂದು ವೇಳೆ ನೀವು ಕೂಡಾ ನ್ಯೂ ಅಮೇಜ್ ಕಾರು ಮಾಲೀಕರಾಗಿದ್ದಲ್ಲಿ ಈ ಕೂಡಲೇ ನಿಮ್ಮ ಹತ್ತಿರ ಅಧಿಕೃತ ಹೋಂಡಾ ಡೀಲರ್ಸ್ ಬಳಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಪಡೆದುಕೊಳ್ಳಬಹುದು.