ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

2019ರ ಹೊಸ ವರ್ಷಾಚರಣೆಯ ಸಂಭ್ರಮದಲ್ಲಿರುವ ಬಹುತೇಕರು ತಮ್ಮ ಇಷ್ಟದ ವಸ್ತುಗಳನ್ನು ಖರೀದಿಸುವ ಯೋಜನೆಯಲ್ಲಿ ಇರುತ್ತಾರೆ. ಹೀಗಿರುವಾಗ ಹೊಸ ವಾಹನ ಖರೀದಿ ಮಾಡ್ಬೇಕು ಎಂದುಕೊಂಡಿರುವ ಜನತೆಗೆ ವಾಹನ ಉತ್ಪಾದನಾ ಸಂಸ್ಥೆಗಳು ಶಾಕಿಂಗ್ ಸುದ್ದಿ ನೀಡುತ್ತಿವೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಹೌದು, ವಿದೇಶಿ ಮಿನಿಮಯ ಮತ್ತು ಬಿಡಿಭಾಗಗಳ ಆಮದು ಮೇಲಿನ ಆಮದು ಸುಂಕಗಳು ಹೆಚ್ಚಳಗೊಂಡಿರುವ ಹಿನ್ನೆಲೆಯಲ್ಲಿ ಬಹುತೇಕ ವಾಹನ ಉತ್ಪಾದನಾ ಸಂಸ್ಥೆಗಳು ತಮ್ಮ ಉತ್ಪನ್ನಗಳ ಮೇಲಿನ ಬೆಲೆ ಏರಿಕೆಗೆ ನಿರ್ಧರಿಸಿದ್ದು, ಜನವರಿ 1 ರಿಂದಲೇ ಬೆಲೆ ಹೆಚ್ಚಳವಾಗುವುದು ಬಹುತೇಕ ಖಚಿತವಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಮಾಹಿತಿಗಳ ಪ್ರಕಾರ, ಹೊಸ ಕಾರುಗಳ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರುಗಳ ಬೆಲೆಯಲ್ಲಿ ರೂ. 10 ಸಾವಿರದಿಂದ 30 ಸಾವಿರ ಮತ್ತು ಮಧ್ಯಮ ಗಾತ್ರದ ಕಾರುಗಳ ಬೆಲೆಯಲ್ಲಿ 20 ಸಾವಿರದಿಂದ 40 ಸಾವಿರ ಹಾಗೂ 30 ಲಕ್ಷಕ್ಕೂ ಮೇಲ್ಪಟ್ಟ ಐಷಾರಾಮಿ ಕಾರುಗಳ ಬೆಲೆಯಲ್ಲಿ ರೂ. 50 ಸಾವಿರದಿಂದ ರೂ. 3 ಲಕ್ಷ ಬೆಲೆ ಹೆಚ್ಚಳವಾಗುವ ಸಾಧ್ಯತೆಗಳಿವೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚುತ್ತಿರುವ ಖರ್ಚುಗಳನ್ನು ನಿಭಾಯಿಸಲು ಬೆಲೆ ಏರಿಕೆ ಅನಿವಾರ್ಯ ಎಂದಿರುವ ಬಹುತೇಕ ಆಟೋ ಉತ್ಪಾದನಾ ಸಂಸ್ಥೆಗಳು, ಹೊಸ ವರ್ಷದ ಆರಂಭದಲ್ಲಿ ವಾಹನ ಖರೀದಿಯ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್ ನೀಡುತ್ತಿವೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಹ್ಯುಂಡೈ ಸಂಸ್ಥೆಯು ಸಹ ಕಾರುಗಳ ಬೆಲೆ ಹೆಚ್ಚಳ ಕುರಿತಂತೆ ಮಾಹಿತಿ ನೀಡಿದ್ದು, ಪ್ರತಿ ಕಾರಿನ ಮೇಲೂ ಸರಾಸರಿಯಾಗಿ ರೂ.30 ಸಾವಿರ ಏರಿಕೆ ಮಾಡುತ್ತಿರುವುದಾಗಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಹೀಗಾಗಿ ಎಂಟ್ರಿ ಲೆವೆಲ್‌ ಮಾದರಿಯಾದ ಸ್ಯಾಂಟ್ರೋದಿಂದ ಹಿಡಿದು ಗ್ರಾಂಡ್ ಐ10, ಐ20, ಎಕ್ಸ್‌ಸೆಂಟ್, ಕ್ರೆಟಾ, ವೆರ್ನಾ, ಎಲಾಂಟ್ರಾ ಮತ್ತು ಟಕ್ಸನ್ ಕಾರುಗಳ ಮೇಲೆ ಸರಾಸರಿಯಾಗಿ ರೂ.30 ಸಾವಿರ ಬೆಲೆ ಹೆಚ್ಚಳವಾಗಲಿವೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಇನ್ನು ಮಾರುತಿ ಸುಜುಕಿ ಸಂಸ್ಥೆಯು ಕಾರಿನ ಬೆಲೆಯಲ್ಲಿ ಶೇ. 3 ರಿಂದ ಶೇ.4 ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯಾದ ಆಲ್ಟೋ 800 ಬೆಲೆಯಲ್ಲಿ ರೂ. 10 ಸಾವಿರದಿಂದ 12 ಸಾವಿರ ಮತ್ತು ಟಾಪ್ ಎಂಡ್ ಮಾದರಿಯಾದ ಎಸ್-ಕ್ರಾಸ್ ಎಸ್‌ಯುವಿ ಬೆಲೆಯಲ್ಲಿ ರೂ. 30 ಸಾವಿರದಿಂದ ರೂ. 40 ಸಾವಿರ ಬೆಲೆ ಏರಿಕೆಯಾಗಲಿದೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಹಾಗೆಯೇ ಕ್ಯಾಬ್ ಸೇವೆಗಳಿಗಾಗಿ ಹೆಚ್ಚಾಗಿ ಬಳಕೆಯಾಗುವ ಡಿಜೈರ್ ಟೂರ್ ಕಾರುಗಳ ಬೆಲೆಯು ರೂ. 25 ಸಾವಿರ ಹೆಚ್ಚಳವಾಗಲಿದ್ದರೆ, ಸ್ವಿಫ್ಟ್ ಬೆಲೆಯಲ್ಲಿ 20 ಸಾವಿರ, ವ್ಯಾಗನ್ ಆರ್, ಬಲೆನೊ, ಇಗ್ನಿಸ್, ಸೆಲೆರಿಯೊ ಬೆಲೆಗಳಲ್ಲಿ 15 ಸಾವಿರದಿಂದ 20 ಸಾವಿರ ಮತ್ತು ಸಿಯಾಜ್ ಕಾರುಗಳ ಬೆಲೆಯಲ್ಲಿ ರೂ.20 ಸಾವಿರದಿಂದ ರೂ.25 ಸಾವಿರ ಹೆಚ್ಚಳವಾಗುವುದು ಖಚಿತವಾಗಿದೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಟೊಯೊಟಾ ಸಂಸ್ಥೆಯು ಸಹ ಕಾರಿನ ಬೆಲೆಯಲ್ಲಿ ಶೇ. 4ರಷ್ಟು ಹೆಚ್ಚಳ ಮಾಡುವ ಸುಳಿವು ನೀಡಿದ್ದು, ಎಂಟ್ರಿ ಲೆವಲ್ ಕಾರು ಮಾದರಿಯ ಇಟಿಯಾಸ್ ಲಿವಾ ಬೆಲೆಯಲ್ಲಿ ರೂ. 22 ಸಾವಿರ ಹೆಚ್ಚಳವಾಗಲಿದ್ದರೇ, ಹೈ ಎಂಡ್ ಮಾದರಿಯಾದ ಲ್ಯಾಂಡ್ ಕ್ರೂಸರ್ ಪ್ರಾಡೋ ಮಾದರಿಯ ಬೆಲೆಯಲ್ಲಿ ರೂ. 3.60 ಲಕ್ಷ ಹೆಚ್ಚಳಲಾಗಲಿದೆ.

MOST READ: ಶಾಕಿಂಗ್ ಸುದ್ದಿ- ಭಾರತದಲ್ಲಿ ಬ್ಯಾನ್ ಆಗಲಿವೆ ಈ ಒಂಬತ್ತು ಜನಪ್ರಿಯ ಕಾರುಗಳು..!

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಇದಲ್ಲದೇ, ಟಾಟಾ ಮೋಟಾರ್ಸ್, ಸ್ಕೋಡಾ ಇಂಡಿಯಾ, ರೆನಾಲ್ಟ್, ನಿನ್ಸಾನ್, ಬಿಎಂಡಬ್ಲ್ಯು, ಇಸುಝು ಮೋಟಾರ್ಸ್ ಸಂಸ್ಥೆಗಳು ಸಹ ಈಗಾಗಲೇ ಪ್ರತಿಶತ 3ರಿಂದ 4ರಷ್ಟು ಬೆಲೆ ಹೆಚ್ಚಳ ಮಾಡುವ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡಿದ್ದು, ಕಾರಿನ ಬೆಲೆಗಳಿಗೆ ಅನುಗುಣವಾಗಿ ಪರಿಷ್ಕೃತ ದರ ಪಟ್ಟಿಗಳು ನಿಗದಿಯಾಗಲಿವೆ.

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಆದ್ರೆ ಕಾರುಗಳ ಬೆಲೆ ಹೆಚ್ಚಳ ಕುರಿತಂತೆ ಮಹೀಂದ್ರಾ, ಹೋಂಡಾ ಮತ್ತು ಫೋರ್ಕ್ಸ್‌ವ್ಯಾಗನ್‌ಗಳು ಯಾವುದೇ ಮಾಹಿತಿ ನೀಡಿಲ್ಲವಾದರೂ ಮುಂಬರುವ ದಿನಗಳಲ್ಲಿ ಬೆಲೆ ಹೆಚ್ಚಳ ಮಾಡುವ ಸಾಧ್ಯತೆಗಳಿದ್ದು, ಸರಾಸರಿಯಾಗಿ 20 ಸಾವಿರದಿಂದ ರೂ.40 ಸಾವಿರ ಹೆಚ್ಚಳವಾಗಬಹುದು.

MOST READ: ಹೊಸ ನಿಯಮ ಜಾರಿಯಾದ್ರೆ ರಾಜ್ಯದಲ್ಲಿ ಗುಜುರಿ ಸೇರಲಿವೆ 45 ಲಕ್ಷ ಹಳೆಯ ವಾಹನಗಳು..!

ಹೊಸ ವರ್ಷಕ್ಕೆ ಹ್ಯುಂಡೈನಿಂದ ಗ್ರಾಹಕರಿಗೆ ಬೆಲೆ ಏರಿಕೆಯ ಶಾಕ್

ಒಟ್ಟಿನಲ್ಲಿ ಹೊಸ ವರ್ಷದ ವೇಳೆ ಕಾರು ಖರೀದಿ ಯೋಜನೆಯಲ್ಲಿರುವ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟುವುದು ಖಚಿತವಾಗಿದ್ದು, ಒಂದು ವೇಳೆ ನೀವು ಕೂಡಾ ಹೊಸ ವರ್ಷದ ಹೊತ್ತಿಗೆ ಕಾರು ಖರೀದಿಸುವ ಯೋಜನೆಯಲ್ಲಿದ್ದರೆ ಈಗಲೇ ಖರೀದಿ ಮಾಡಿ ಬೆಲೆ ಹೆಚ್ಚಳ ಹೊಡೆತದಿಂದ ತಪ್ಪಿಸಿಕೊಳ್ಳಬಹುದು.

Most Read Articles

Kannada
English summary
New Hyundai Cars (2019 Models) Get A Price Hike Of Rs 30,000. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X