ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

By Praveen Sannamani

ಮಧ್ಯಮ ಕ್ರಮಾಂಕದ ಸೆಡಾನ್ ಕಾರುಗಳಲ್ಲಿ ಭಾರೀ ನೀರಿಕ್ಷೆ ಹೊಂದಿರುವ ಮಾರುತಿ ಸುಜುಕಿ ಸಿಯಾಜ್ ಫೇಸ್‌ಲಿಫ್ಟ್ ವರ್ಷನ್‌ಗಳು ಇದೇ ತಿಂಗಳು ಆಗಸ್ಟ್ 20ಕ್ಕೆ ಬಿಡುಗಡೆಯಾಗುವುದು ಖಚಿತ ಎನ್ನಲಾಗಿದ್ದು, ಇದೀಗ ಮಾರುತಿ ಸುಜುಕಿ ಅಧಿಕೃತ ಡೀಲರ್ಸ್ ನೆಕ್ಸಾದಲ್ಲಿ ಹೊಸ ಕಾರುಗಳ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಸಿಯಾಜ್ ಸೆಡಾನ್ ಫೇಸ್‍‍ಲಿಫ್ಟ್ ಕಾರುಗಳ ಖರೀದಿಗಾಗಿ ಈಗಾಗಲೇ ಸಾವಿರಾರು ಗ್ರಾಹಕರು ಮುಗಿಬಿದ್ದಿದ್ದು, ಇದಕ್ಕಾಗಿಯೇ ನೆಕ್ಸಾ ಡೀಲರ್‍‍ಗಳು ಕಾರಿನ ಖರೀದಿಗಾಗಿ ಬುಕ್ಕಿಂಗ್ ಪ್ರಕ್ರಿಯೆಯನ್ನು ಕೂಡಾ ಆರಂಭಿಸಿದ್ದಾರೆ. ಹಲವು ಹೊಸ ವೈಶಿಷ್ಟ್ಯತೆಗಳನ್ನು ಹೊತ್ತುಬರುತ್ತಿರುವ ಸಿಯಾಜ್ ಫೇಸ್‌ಲಿಫ್ಟ್ ಕಾರುಗಳು ಹಳೆಯ ಮಾದರಿಗಿಂತ ಸಾಕಷ್ಟು ಬದಲಾವಣೆ ಪಡೆದುಕೊಂಡಿದ್ದು, ಹೋಂಡಾ ಸಿಟಿ ಕಾರುಗಳಿಗೆ ತ್ರೀವ ಪೈಪೋಟಿ ನೀಡುವ ತವಕದಲ್ಲಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಬಿಡುಗಡೆಗೊಳ್ಳಲಿರುವ ಸಿಯಾಜ್ ಫೇ‍‍ಸ್‍‍ಲಿಫ್ಟ್ ಕಾರು ಖರೀದಿಗಾಗಿ ಗ್ರಾಹಕರು ಹತ್ತಿರದ ನೆಕ್ಸಾ ಶೋರಂ‍‍ನಲ್ಲಿ ರೂ. 21,000 ಸಾವಿರದ ಮೊತ್ತವನ್ನು ಮುಂಗಡವಾಗಿ ಪಾವತಿಸಿ ಬುಕ್ಕಿಂಗ್ ಮಾಡಬಹುದಾಗಿದ್ದು, ಅಷ್ಟೆ ಅಲ್ಲದೇ ಸಂಸ್ಥೆಯು ತಮ್ಮ ಹಿಂದಿನ ತಲೆಮಾರಿನ ಸಿಯಾಜ್ ಕಾರುಗಳ ಮೇಲೆ ಸುಮಾರು ರೂ. 1 ಲಕ್ಷದ ವರೆಗಿನ ರಿಯಾಯಿತಿ ಕೂಡಾ ನೀಡುತ್ತಿದೆ. ಹೀಗಿದ್ದರೂ, ಗ್ರಾಹಕರು ಮಾತ್ರ ಫೇಸ್‌ಲಿಫ್ಟ್ ಸಿಯಾಜ್ ಖರೀದಿಗಾಗಿ ಎದುರುನೋಡುತ್ತಿರುವುದು ಹೊಸ ಕಾರಿನ ಮೇಲೆ ಸಾಕಷ್ಟು ನೀರಿಕ್ಷೆ ಇಟ್ಟುಕೊಳ್ಳಲಾಗಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಹೊಸ ಸಿಯಾಜ್ ಫೇಸ್‍‍ಲಿಫ್ಟ್ ಕಾರಿನ ಮುಂಭಾಗದಲ್ಲಿ ಮರು ವಿನ್ಯಾಸಗೊಳಿಸಲಾದ ಗ್ರಿಲ್, ಹೊಸದಾಗಿ ವಿನ್ಯಾಸಗೊಳಿಸಿದ ಎಲ್ಇಡಿ ಡಿಆರ್‍ಎಲ್ ಹೆಡ್‍‍ಲ್ಯಾಂಪ್ಸ್, ಸೆಂಟ್ರಲ್ ಏರ್ ಡ್ಯಾಮ್‍ ನೊಂದಿಗೆ ರಿವ್ಯಾಂಪ್ಡ್ ಫ್ರಂಟ್ ಬಂಪರ್ ಮತ್ತು ಸಿ-ಆಕಾರದ ಕ್ರೋಮ್ ಅನ್ನು ಫಾಗ್ ಲ್ಯಾಂಪ್‍‍ನಲ್ಲಿ ಅಳವಡಿಸಲಾಗಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಇದಲ್ಲದೆ ಸಿಯಾಜ್ ಫೇಸ್‍‍ಲಿಫ್ಟ್ ಕಾರುಗಳಲ್ಲಿ ಮಲ್ಟಿ ಸ್ಪೋಕ್ ಅಲಾಯ್ ವ್ಹೀಲ್ಸ್, ಕ್ರೋಮ್ ಡೋರ್ ಹ್ಯಾಂಡಲ್ಸ್ ಮತ್ತು ಒಆರ್‍‍ವಿಎಮ್ ಅನ್ನು ಇಂಟಿಗ್ರೇಟೆಡ್ ಟರ್ನ್ ಇಂಡಿಕೇಟರ್ಸ್ ಅನ್ನು ಪ್ರಸ್ತುತ ಮಾರಾಟಗೊಳ್ಳುತ್ತಿರುವ ಸಿಯಾಜ್ ಕಾರಿನಿಂದ ಆಧರಿಸಿದೆ. ಹಾಗೆಯೇ ಮರು ವಿನ್ಯಾಸಗೊಳಿಸಲಾದ ಹಿಂಭಾಗದ ಬಂಪರ್ ಅನ್ನು ಕೂಡಾ ಅಳವಡಿಸಲಾಗಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಎಂಜಿನ್ ಸಾಮರ್ಥ್ಯ

ಪೆಟ್ರೋಲ್ ವರ್ಷನ್‌ಗಳು 1.5-ಲೀಟರ್ ಕೆ15ಬಿ ಎಂಜಿನ್ ಹೊಂದಿದ್ದು, ಡೀಸೆಲ್ ವರ್ಷನ್‌ಗಳಲ್ಲಿ 1.3-ಲೀಟರ್ ಮೈಲ್ಡ್ ಹೈಬ್ರಿಡ್ ಎಂಜಿನ್ ಪಡೆದಿವೆ. ಇವುಗಳಲ್ಲಿ ಪೆಟ್ರೋಲ್ ಕಾರುಗಳು 91-ಬಿಎಚ್‌ಪಿ, 130-ಎನ್ಎಂ ಟಾರ್ಕ್ ಉತ್ಪಾದನೆ ಮಾಡಿದ್ದಲ್ಲಿ ಡಿಸೇಲ್ ಕಾರುಗಳು 89-ಬಿಎಚ್‌ಪಿ, 200ಎನ್ಎಂ ಟಾರ್ಕ್ ಉತ್ಪಾದಿಸಬಲ್ಲವು.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಇನ್ನು ಟ್ರಾನ್ಸ್ ಮಿಷನ್ ಬಗ್ಗೆ ಹೇಳುವುದಾದರೇ, ಎಂಜಿನ್ ಅನ್ನು 5 ಸ್ಪೀಡ್ ಮ್ಯಾನುವಲ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದ್ದು, ಸದ್ಯ ಖರೀದಿಗಿರುವ 4 ಸ್ಪೀಡ್ ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಅನ್ನು ಭರ್ತಿ ಮಾಡಲಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಸಿಯಾಜ್ ಫೇಸ್‍ಲಿಫ್ಟ್ ಕಾರಿನ ಒಳಭಾಗದಲ್ಲಿ ಅಪ್‍ ಮಾರ್ಕೆಟ್ ಡ್ಯಾಶ್‍‍ಬೋರ್ಡ್, ಸೀಟ್ ಮತ್ತು ಹೊಸ ವೈಶಿಷ್ಟ್ಯತೆಗಳನ್ನು ಪಡೆದಿರಲಿದೆ ಎನ್ನಲಾಗಿದ್ದು, ಇನ್ನು ಹೊಸದಾಗಿ ಬಿಡುಗಡೆಗೊಳ್ಳುವ ಕಾರುಗಳು ಎಲೆಕ್ಟ್ರಿಕ್ ಸನ್‍ರೂಫ್, ಅಡಿಷನಲ್ ಸೇಫ್ಟಿ ಫೀಚರ್ಸ್ ಹಾಗು ಇನ್ನಿತರೆ ಆಯ್ಕೆಗಳನ್ನು ಪಡೆಯಲಿದೆ.

ಸಿಯಾಜ್ ಫೇಸ್‌ಲಿಫ್ಟ್ ಬಿಡುಗಡೆಗೆ ದಿನಗಣನೆ- ಖರೀದಿಗಾಗಿ ನೆಕ್ಸಾದಿಂದ ಅಧಿಕೃತ ಬುಕ್ಕಿಂಗ್ ಆರಂಭ...

ಇನ್ನು ಕಾರಿನ ಬೆಲೆಯ ಬಗ್ಗೆ ಯಾವುದೆ ಖಚಿತ ಮಾಹಿತಿಯು ಲಭ್ಯವಾಗಿಲ್ಲವಾದರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 8 ರಿಂದ 12 ಲಕ್ಷದ ವರೆಗು ಇರಬಹುದೆಂದು ಅಂದಾಜಿಸಲಾಗಿದ್ದು, ಹೋಂಡಾ ಸಿಟಿ, ಹ್ಯುಂಡೈ ವೆರ್ನಾ, ಫೋಕ್ಸ್‌ವ್ಯಾಗನ್ ವೆಂಟೊ ಮತ್ತು ಸ್ಕೋಡಾ ರ್‍ಯಾಪಿಡ್ ಕಾರುಗಳಿಗೆ ಇದು ಪೈಪೋಟಿಯನ್ನು ನೀಡಲಿದೆ.

Most Read Articles

Kannada
Read more on maruti suzuki sedan
English summary
2018 Maruti Ciaz Facelift Bookings Open — To Be Launched Soon.
Story first published: Monday, August 6, 2018, 13:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X