ಹಬ್ಬಕ್ಕೆ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ದೇಶಿಯ ವಾಹನ ತಯಾರಕ ಸಂಸ್ಥೆಯಾದ ಮಾರುತಿ ಸುಜುಕಿಯ ಜನಪ್ರಿಯ ಡಿಜೈರ್ ಸೆಡಾನ್ ಕಾರು ಬಿಡುಗಡೆಗೊಂಡಾಗಿನೊಂದಲೂ ಹೆಚ್ಚು ಮಾರಾಟವನ್ನು ಪಡೆದುಕೊಳ್ಳುತ್ತಲೇ ಬಂದಿದೆ. ಮಾರಾಟದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಮೊದಲನೆಯ ಸ್ಥಾನದಲಿದ್ದ ಈ ಕಾರು ಈಗ ಎರಡನೆಯ ಸ್ಥಾನಕ್ಕೆ ತಲುಪಿದ್ದು, ಮೊದಲನೆಯ ಸ್ಥಾನವನ್ನು ಮಾರುತಿ ಆಲ್ಟೋ ಪಡೆದಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಮಾರುತಿ ಡಿಜೈರ್ ಕಾರು ಮಾರಿಕಟ್ಟೆಯಲ್ಲಿ ಪ್ರತೀ ತಿಂಗಳಿಗೆ ಸುಮಾರು 9,000 ಮಾರಾಟಗೊಳ್ಳುತ್ತಿರುವ ಹೋಂಡಾ ಅಮೇಜ್ ಕಾರುಗಳಿಗೆ ಪೈಪೋಟಿ ನೀಡುತ್ತಿದೆ. ಪ್ರಸ್ಥುತ ಈ ಎರಡು ಕಾರುಗಳ ನಡುವೆ ಪೈಪೋಟಿ ಭಿಗಿಯಾಗಿದ್ದು, ಮಾರುತಿ ಸುಜುಕಿ ಡಿಜೈರ್ ಕಾರಿನ ಮೇಲೆ ಸಂಸ್ಥೆಯು ರೂ.30,000 ರಿಂದ 50,000 ಸಾವಿರದ ವರೆಗೆ ರಿಯಾಯಿತಿಯನ್ನು ನೀಡಲು ಮುಂದಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಡಿಜೈರ್ ಕಾರುಗಳು ಸ್ವಂತ ಬಳಕೆಗೆ ಮಾತ್ರವಲ್ಲದೆ ಕ್ಯಾಬ್ ಆಪರೇಟರ್‍‍ಗಳು ಕೂಡಾ ಹೆಚ್ಚು ಬಳಸುವ ಕಾರಾಗಿದ್ದು, ಓಲಾ ಮತ್ತು ಊಬರ್ ಕ್ಯಾಬ್ ಸರ್ವಿಸ್‍‍ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಸಂಸ್ಥೆಯು ಕೆಲ ದಿನಗಳ ನಂತರ ಎರಡನೆಯ ತಲೆಮಾರಿನ ಡಿಜೈರ್ ಟೂರ್ ಕಾರನ್ನು ಬಿಡುಗಡೆಗೊಳಿಸಿ ಕೇವಲ ಕ್ಯಾಬ್ ಚಾಲಕರಿಗೆ ಸಹಾಯವಾಗುವಂತೆ ತಯಾರು ಮಾಡಲಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಇದಲ್ಲದೆ ಸಂಸ್ಥೆಯು ಮೂರನೆಯ ತಲೆಮಾರಿನ ಡಿಜೈರ್ ಕಾರುಗಳನ್ನು ಕೂಡ ಬಿಡುಗಡೆಗೊಳಿಸಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಮಾದರಿಗಳಲ್ಲಿ ಲಭ್ಯವಿದೆ. ಮೂರನೆಯ ತಲೆಮಾರಿನ ಡಿಜೈರ್ ಕಾರುಗಳು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ 5.56 ಲಕ್ಷಕ್ಕೆ ಪ್ರಾರಂಭಿಕ ಬೆಲೆಯನ್ನು ಪಡೆದುಕೊಂಡಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಮೂರನೆಯ ತಲೆಮಾರಿನ ಡಿಸೈರ್ ಕಾರುಗಳು 1.2 ಲೀಟರ್ ಕೇ ಸಿರೀಸ್ ಪೆಟ್ರೋಲ್ ಎಂಜಿನ್ ಸಹಾಯದಿಂದ 82 ಬಿಹೆಚ್‍ಪಿ ಮತ್ತು 113ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, 5 ಸ್ಪೀಡ್ ಮ್ಯಾನುವಲ್ ಮತ್ತು ಎಎಂಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಇನ್ನು ಡೀಸೆಲ್ ಮಾದರಿಯ ಡಿಜೈರ್ ಕಾರುಗಳು 1.3 ಲೀಟರ್ ಫಿಯೆಟ್ ಮಲ್ಟಿಜೆಟ್ ಎಂಜಿನ್ ಸಹಾಯದಿಂದ 74ಬಿಹೆಚ್‍ಪಿ ಮತ್ತು 190ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದಿದ್ದು, ಪೆಟ್ರೋಲ್ ಮಾದರಿಗಳಂತೆಯೆ 5 ಸ್ಪೀಡ್ ಮ್ಯಾನುವಲ್ ಅಥವಾ ಎಎಮ್‍ಟಿ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನ ಖರೀದಿ ಮೇಲೆ ರಿಯಾಯಿತಿ

ಡಿಜೈರ್ ಕಾರಿನ ಎಲ್ಲಾ ವೇರಿಯಂಟ್‍‍ಗಳಲ್ಲಿಯು ಟ್ವಿನ್ ಏರ್‍‍ಬ್ಯಾಗ್ಸ್ ಮತ್ತು ಎಬಿಎಸ್ ಅನ್ನು ಅಳವಡಿಸಲಾಗಿದ್ದು, ಟಾಪ್ ಎಂಡ್ ವೇರಿಯಂಟ್ ಕಾರುಗಳು ಮಾರುತಿ ಸುಜುಕಿ ಸಂಸ್ಥೆಯ ಸ್ಮಾರ್ಟ್‍ ಫೋನ್ ಕನೆಕ್ಟಿವಿಯನ್ನು ಹೊಂದಿರುವ ಸ್ಮಾರ್ಟ್‍‍‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ ಅನ್ನು ಪಡೆದುಕೊಂಡಿರಲಿದೆ.

Most Read Articles

Kannada
Read more on maruti suzuki discount
English summary
New Maruti DZire being offered at discount price for the first time since launch.
Story first published: Wednesday, October 3, 2018, 9:56 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X