ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಈ ಹಿಂದೆಯೆ ನಾವು ಮಾರುತಿ ಸುಜುಕಿ ಸಂಸ್ಥೆಯು ದೇಶಿಯ ಮಾರುಕಟ್ಟೆಗೆ ತಮ್ಮ ಹೊಸ ಸ್ವಿಫ್ಟ್ ಆರ್‍ಎಸ್ ಕಾರನ್ನು ಪರಿಚಯಿಸುವುದರ ಬಗ್ಗೆ ಮಾಹಿತಿ ನೀಡಿದ್ದೆವು. ಮಾರುತಿ ಸುಜುಕಿ ಸಂಸ್ಥೆಯು ಬಿಡುಗಡೆಗೊಳಿಸಲಿರುವ ಈ ಕಾರು ಸ್ವಿಫ್ಟ್ ನ ಸ್ಪೋರ್ಟಿ ವರ್ಷನ್ ಆಗಿರಲಿದ್ದು, ಸ್ವಿಫ್ಟ್ ಕಾರು ಪ್ರಿಯರಿಗೆ ಒಳ್ಳೆಯ ಅನುಭವವನ್ನು ನೀಡಲಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಬಲೆನೊ ಆರ್‌ಎಸ್ ಕಾರುಗಳ ಮಾದರಿಯಲ್ಲೇ ಸ್ವಿಫ್ಟ್ ಆರ್‌ಎಸ್ ಕೂಡಾ ಸ್ಪೋರ್ಟಿ ವರ್ಷನ್ ವೈಶಿಷ್ಟ್ಯತೆಗಳನ್ನು ಹೊತ್ತುಬರಲಿದ್ದು, ಬಿಡುಗಡೆಗು ಮುನ್ನವೇ ಭಾರತೀಯ ರಸ್ತೆಗಳಲ್ಲಿ ಎಂಜಿನ್ ಕಾರ್ಯಕ್ಷಮೆತೆಯನ್ನು ಪರೀಕ್ಷಿಸುವಾಗ ಸ್ಪಾಟ್ ಟೆಸ್ಟಿಂಗ್‍ ವೇಳೆ ಕಾಣಿಸಿಕೊಂಡಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಸ್ವಿಫ್ಟ್ ಆರ್‍ಎಸ್ ಕಾರು ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಸಜ್ಜುಗೊಂಡಿದ್ದು, ಜೊತೆಗೆ ಜಿ 482ಎಂಬ ವಿಶೇಷ ಸಂಖೆಯನ್ನು ಕಾರಿನ ಮೇಲೆ ನೀಡಲಾಗಿದೆ. ಈ ನಂಬರ್ ಇಂಟರ್ನಲ್ ಕೋಡ್ ನೇಮ್ ಆಗಿದ್ದು, ಕಾರಿನ ಪರೀಕ್ಷೆಯ ವೇಳೆ ನೀಡಲಾಗಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಇಷ್ಟೆ ಅಲ್ಲದೇ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡ ಕಾರಿನಲ್ಲಿ ಕಾರಿನ ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಅನ್ನು ಒದಗಿಸಲಾಗಿದ್ದು, ಸ್ಟ್ಯಾಂಡರ್ಡ್ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದೆ. ಸ್ವಿಫ್ಟ್ ಆರ್‍ಎಸ್ ಕಾರು ಡೈಮಂಡ್ ಅಲಾಯ್ ವ್ಹೀಲ್‍ಗಳನ್ನು ಪಡ್ದುಕೊಳ್ಳುವ ಸೂಚನೆಗಳಿದ್ದು, ಈ ಕಾರಿನಲ್ಲಿ ಸೈಡ್ ಸ್ಕರ್ಟ್ಸ್ ಮತು ರಿಯರ್ ಸ್ಪಾಯ್ಲರ್‍‍ಗಳನ್ನು ಪಡೆದಿಲ್ಲದಿರುವುದನ್ನು ನೀವು ಗಮನಿಸಬಹುದಾಗಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಎಂಜಿನ್ ಸಾಮರ್ಥ್ಯ

ಸ್ವಿಫ್ಟ್ ಆರ್‌ಎಸ್ ಕಾರುಗಳು 998ಸಿಸಿ ಬೂಸ್ಟರ್‌ಜೆಟ್ ತ್ರಿ ಸಿಲಿಂಡರ್ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿರಲಿದ್ದು, 5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್‌ನೊಂದಿಗೆ 101-ಬಿಎಚ್‌ಪಿ ಮತ್ತು 150-ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲವು.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಜೊತೆಗೆ ಸ್ವಿಫ್ಟ್ ಬ್ಯಾಡ್ಜ್‌ನೊಂದಿಗೆ ಆರ್‌ಎಸ್ ಬ್ಯಾಡ್ಜ್ ಕೂಡಾ ಇರಲಿದ್ದು, ಅತ್ಯಾರ್ಷಕ ಹೆಕ್ಷಾಗೊನಲ್ ಗ್ರಿಲ್, ಪ್ರೋಜೆಕ್ಟರ್ ಹೆಡ್‌ಲ್ಯಾಂಪ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್, ನ್ಯೂ ಫ್ರಂಟ್ ಬಂಪರ್, ಫಾಗ್ ಲ್ಯಾಂಪ್, ಎಲ್‌ಇಡಿ ಸಿಗ್ನಿಚರ್ ಟೈಲ್ ಲೈಟ್ ಕೂಡಾ ನೀಡಲಾಗಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಸ್ವಿಫ್ಟ್ ಟಾಪ್ ವೆರಿಯೆಂಟ್‌ಗಳಾದ ಜೆಡ್‍ಎಕ್ಸ್ಐ+ ಮತ್ತು ಜೆಡ್‍‍ಡಿಐ+ ಕಾರು ಮಾದರಿಗಳಂತೆ ಎಲ್ಇಡಿ ಪ್ರೊಜೆಕ್ಟರ್ ಹೆಡ್‍‍ಲ್ಯಾಂಪ್ಸ್, ಎಲ್ಇಡಿ ಡೇ ಟೈಮ್ ರನ್ನಿಂಗ್ ಲೈಟ್ಸ್ ಮತ್ತು ಆಟೋಮ್ಯಾಟಿಕ್ ಹೆಡ್‍‍ಲ್ಯಾಂಪ್‍‍ಗಳನ್ನು ರಿವರ್ಸ್ ಪಾರ್ಕಿಂಗ್ ಸೆನ್ಸಾರ್ಸ್ ಆಯ್ಕೆ ಹೊಂದಿರುವ ಆರ್‌ಎಸ್ ಕಾರುಗಳು ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಹೊಂದಿರಲಿವೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಕಾರಿನ ಬೆಲೆಗಳು

ಸ್ಪೋರ್ಟಿ ಲುಕ್ ಹೊಂದಿರುವ ಸ್ವಿಫ್ಟ್ ಆರ್‌ಎಸ್ ಕಾರುಗಳು ಸದ್ಯಕ್ಕೆ ಪೆಟ್ರೋಲ್ ವರ್ಷನ್‌ಗಳಲ್ಲಿ ಮಾತ್ರವೇ ಲಭ್ಯವಾಗಲಿದ್ದು, ಕಾರಿನ ಬೆಲೆಯು ಸಾಮಾನ್ಯ ಮಾದರಿಯ ಸ್ವಿಫ್ಟ್ ಪೆಟ್ರೋಲ್ ಮಾದರಿಯ ಬೆಲೆಗಿಂತ ಹೆಚ್ಚಿರಲಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಮೂಲಗಳ ಪ್ರಕಾರ ಕಾರಿನ ಬೆಲೆಯು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.7.80 ಲಕ್ಷ ಇಲ್ಲವೇ ರೂ.8.50 ಲಕ್ಷ ಬೆಲೆ ಹೊಂದಿರಬಹುದು ಎನ್ನಲಾಗಿದ್ದು, ಇದು ಬಲೆನೊ ಆರ್‌ಎಸ್ ಮಾದರಿಗಿಂತಲೂ ಕಡಿಮೆ ದರ್ಜೆಯ ಕಾರು ಮಾದರಿಯಾಗಿ ಮಾರಾಟವಾಗಲಿದೆ.

ಹೇಗಿರಲಿದೆ ಗೊತ್ತಾ ಮಾರುತಿ ಸುಜುಕಿ ಸ್ವಿಫ್ಟ್ ಆರ್‍ಎಸ್ ಕಾರು.?

ಒಟ್ಟಿನಲ್ಲಿ ಸ್ಪೋರ್ಟಿ ಸ್ವಿಫ್ಟ್ ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದ ಮಾರುತಿ ಸುಜುಕಿ ಸಂಸ್ಥೆಯು ಸದ್ಯ ಸ್ವಿಫ್ಟ್ ಆರ್‌ಎಸ್ ಮಾದರಿಯನ್ನು ಬಿಡುಗಡೆಗೊಳಿಸಲು ಮುಂದಾಗಿರುವುದು ಸ್ಪೋರ್ಟಿ ಕಾರು ಪ್ರಿಯರಿಗೆ ಉತ್ತಮ ಆಯ್ಕೆಯಾಗಲಿದ್ದು, ಹ್ಯಾಚ್‌ಬ್ಯಾಕ್ ಕಾರುಗಳಲ್ಲೇ ಇದು ಉತ್ತಮ ಬೇಡಿಕೆ ದಾಖಲಿಸುವ ನೀರಿಕ್ಷೆಯಲ್ಲಿದೆ.

Source: Gaadiwaadi

Most Read Articles

Kannada
English summary
New Maruti Swift RS Spotted In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X