ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಆ್ಯಪ್‌ ಆಧಾರಿತ ಟ್ಯಾಕ್ಸಿ ಸೇವೆಗಳನ್ನು ಒದಗಿಸುವಲ್ಲಿ ಭಾರೀ ಜನಪ್ರಿಯತೆ ಪಡೆದಿರುವ ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ದೇಶಾದ್ಯಂತ ಕ್ಯಾಬ್ ಚಾಲಕರು ಪ್ರತಿಭಟನೆ ನಡೆಸುತ್ತಿದ್ದು, ದೇಶದ ಪ್ರಮುಖ ನಗರಗಳಲ್ಲಿ ಕ್ಯಾಬ್ ಸೇವೆಗಳ ಸ್ಥಗಿತ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವಂತಾಗಿದೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಕ್ಯಾಬ್ ಸೇವೆಗಳನ್ನು ಒದಗಿಸುವಲ್ಲಿ ಮುಂಚೂಣಿಯಲ್ಲಿ ಓಲಾ ಮತ್ತು ಉಬರ್ ಸಂಸ್ಥೆಗಳು ಸದ್ಯ ಲಾಭದ ಹಾದಿಯಲ್ಲಿದ್ದರೂ, ಕ್ಯಾಬ್ ಮಾಲೀಕರ ಕಷ್ಟ ಹೇಳತಿರದು. ಇಂಧನಗಳ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಕ್ಯಾಬ್ ಮಾಲೀಕರು ಓಲಾ ಮತ್ತು ಉಬರ್ ಸಂಸ್ಥೆಯ ಕಠಿಣ ನಿಲುವಿನ ವಿರುದ್ಧ ತಿರುಗಿಬಿದ್ದಿದ್ದಾರೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಮೊದಮೊದಲು ಕ್ಯಾಬ್ ಸೇವೆಗಳ ಮೂಲಕ ಕೈತುಂಬ ಹಣ ಸಂಪಾದನೆ ಮಾಡುತ್ತಿದ್ದ ಚಾಲಕರು ಇಂದು ದುಡಿದ ಹಣವನ್ನು ಓಲಾ ಮತ್ತು ಉಬರ್ ಸಂಸ್ಥೆಗಳನ್ನು ಉದ್ಧಾರ ಮಾಡಲು ಹೆಣಗಾಡುವಂತಾಗಿದ್ದು, ಬಂದ ಲಾಭಾಂಶದಲ್ಲಿ ಸಮಪಾಲು ನೀಡುವಂತೆ ಕ್ಯಾಬ್ ಚಾಲಕರು ಬೀದಿಗಿಳಿದಿದ್ದಾರೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಕೆಳೆದ 2016ರ ಹಿಂದಷ್ಟೇ ಓಲಾ ಮತ್ತು ಉಬರ್ ಕ್ಯಾಬ್ ಸೇವೆಗಳಲ್ಲಿ ಪ್ರತಿ ಕಿಲೋ ಮೀಟರ್‌ಗೆ ರೂ.15ರಿಂದ ರೂ.20 ಆದಾಯ ಗಳಿಸುತ್ತಿದ್ದ ಚಾಲಕರು ಇಂದು ಪ್ರತಿ ಕಿಲೋ ಮೀಟರ್‌ಗೆ ರೂ. 4.30 ಪೈಸೆಯಿಂದ ರೂ. 6 ತನಕ ಮಾತ್ರವೇ ಲಾಭಂಶ ತೆಗದುಕೊಳ್ಳುತ್ತಿದ್ದಾರೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಕೇವಲ 2 ವರ್ಷಗಳ ಅಂತರದಲ್ಲಿ ಶೇ. 50 ರಿಂದ ಶೇ.80 ರಷ್ಟು ಲಾಭಾಂಶ ಕಡಿತಗೊಂಡಿದ್ದು, ಇದರ ಮಧ್ಯೆ ಇಂಧನಗಳ ಬೆಲೆ ಏರಿಕೆ, ಹೆಚ್ಚಿರುವ ವಿಮಾ ಮೊತ್ತಗಳು ಮತ್ತು ಸಾರಿಗೆ ಸಂಸ್ಥೆಯ ತೆರಿಗೆಗಳು ಸೇರಿ ಕ್ಯಾಬ್ ಚಾಲಕರನ್ನು ಮತ್ತಷ್ಟು ಹೈರಾಣಾಗಿಸಿವೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಇದರೊಂದಿಗೆ ಪ್ರೋತ್ಸಾಹಧನದ ಮೇಲೂ ಹಲವು ಕಠಿಣ ನಿಯಮಗಳನ್ನು ಜಾರಿ ತರುತ್ತಿರುವ ಓಲಾ ಮತ್ತು ಉಬರ್ ಸಂಸ್ಥೆಗಳು ಕ್ಯಾಬ್ ಚಾಲಕರ ಆದಾಯದ ಮೇಲೆ ವ್ಯತರಿಕ್ತ ಪರಿಣಾಮ ಬೀರಲು ಕಾರಣವಾಗಿದ್ದು, ಇದನ್ನು ಸರಿಪಡಿಸುವಂತೆ ಕ್ಯಾಬ್ ಚಾಲಕರು ಕಳೆದ ಎರಡು ದಿನಗಳಿಂದ ದೇಶದ ಪ್ರಮುಖ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಲಾಭಾಂಶಕ್ಕೆ ಹೊಡೆತ ನೀಡುತ್ತಿರುವ ಕೆಲವು ಚಾಲಕರ ವಿರೋಧಿ ನಿಯಮಗಳನ್ನು ತಿದ್ದುಪಡಿ ತರುವಂತೆ ನಡೆಸುತ್ತಿರುವ ಕ್ಯಾಬ್ ಚಾಲಕರ ಪ್ರತಿಭಟನೆ ನಿನ್ನೆಯಿಂದ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಮುಂಬೈ ಮತ್ತು ದೆಹಲಿಯಲ್ಲಿ ಶೇ.80ರಷ್ಟು ಕ್ಯಾಬ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಿವೆ.

MOST READ: ಅತಿ ಕಡಿಮೆ ಬೆಲೆಯಲ್ಲಿ ಬಿಡುಗಡೆಯಾದ ಹ್ಯುಂಡೈ ಹೊಸ ಸ್ಯಾಂಟ್ರೋ

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಇದಲ್ಲದೆ ಓಲಾ ಮತ್ತು ಉಬರ್ ಸಂಸ್ಥೆಗಳು ಕ್ಯಾಬ್ ಚಾಲಕರ ಬೇಡಿಕೆಗೆ ಮಣಿಹಾಕದಿರುವುದು ಕ್ಯಾಬ್ ಚಾಲಕರ ಆಕ್ರೋಶವನ್ನ ಹೆಚ್ಚಿಸುವಂತೆ ಮಾಡಿದ್ದು, ಕ್ಯಾಬ್ ಸೇವೆಗಳನ್ನು ನೆಚ್ಚಿಕೊಂಡ ಪ್ರಯಾಣಿಕರು ಪರದಾಡುವಂತಾಗಿದೆ.

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಇನ್ನು ಉಬರ್ ಸಂಸ್ಥೆ ಮಾತ್ರವೇ ಕ್ಯಾಬ್ ಚಾಲಕರ ಪ್ರತಿಭಟನೆ ಬಗ್ಗೆ ಮಾತನಾಡಿದ್ದು, ಚಾಲಕ ಸಮುದಾಯದ ಬೇಡಿಕೆಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಸುಳಿವು ನೀಡಿದ್ದರೂ ಸಹ ಯಾವುದೇ ಲಿಖಿತ ಹೇಳಿಕೆ ನೀಡದಿರುವುದು ಕ್ಯಾಬ್ ಚಾಲಕರ ಅಸಮಾಧಾನಕ್ಕೆ ಕಾರಣವಾಗಿದೆ.

MOST READ: ಇನ್ಮುಂದೆ ಬೇರೆಯವರ ಕೈಗೆ ನಿಮ್ಮ ವಾಹನಗಳನ್ನು ನೀಡುವುದಕ್ಕೂ ಮುನ್ನ ಹತ್ತು ಬಾರಿ ಯೋಚಿಸಿ..!

ಓಲಾ ಮತ್ತು ಉಬರ್ ಸಂಸ್ಥೆಗಳ ವಿರುದ್ಧ ತಿರುಗಿಬಿದ್ದ ಕ್ಯಾಬ್ ಚಾಲಕರು

ಮಾಹಿತಿಗಳ ಪ್ರಕಾರ, ಇಂದು ಕೂಡಾ ಕ್ಯಾಬ್ ಚಾಲಕರ ಪ್ರತಿಭಟನೆ ಮುಂದುವರಿಯಲಿದೆ ಎಂದು ಹೇಳಲಾಗಿದ್ದು, ಮುಂಬೈ, ದೆಹಲಿ ಮತ್ತು ದೆಹಲಿ ಎನ್‌ಸಿಆರ್‌‌ನಲ್ಲಿರುವ ಕ್ಯಾಬ್ ಸೇವೆಗಳ ಸ್ಥಗಿತದಿಂದಾಗಿ ಪ್ರಯಾಣಿಕರಿಗೂ ಇದರ ಬಿಸಿ ತಟ್ಟಿದೆ.

Most Read Articles

ಹ್ಯುಂಡೈ ಹೊಸ ಸ್ಯಾಂಟ್ರೋ ಕಾರಿನ ಫೋಟೋ ಗ್ಯಾಲರಿ..!

Kannada
English summary
Uber, Ola strike hits Delhi and Mumbai riders.
Story first published: Wednesday, October 24, 2018, 10:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X