ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಸತತವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲೂ ಅದರ ಪರಿಣಾಮ ಕಂಡುಬರುತ್ತಿದ್ದು, ಪೆಟ್ರೋಲ್‌ ಮತ್ತು ಡೀಸೆಲ್ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಿವೆ.

By Praveen Sannamani

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯು ಸತತವಾಗಿ ಏರಿಕೆ ಆಗುತ್ತಿರುವುದರಿಂದ ದೇಶಿ ಮಾರುಕಟ್ಟೆಯಲ್ಲೂ ಅದರ ಪರಿಣಾಮ ಕಂಡುಬರುತ್ತಿದ್ದು, ಪೆಟ್ರೋಲ್‌ ಮತ್ತು ಡೀಸೆಲ್ ಬೆಲೆಯಲ್ಲಿ ದಿನದಿಂದ ದಿನಕ್ಕೆ ತುಟ್ಟಿಯಾಗುತ್ತಲೇ ಇದೆ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಪೆಟ್ರೋಲ್‌ ದರವು ರಾಜಧಾನಿ ದೆಹಲಿಯಲ್ಲಿ ಭಾನುವಾರದಂದು ಪ್ರತಿ ಲೀಟರ್‌ಗೆ ರೂ.73.73ಕ್ಕೆ ಏರಿಕೆಯಾಗಿದ್ದು, ಇದು ಕಳೆದ ನಾಲ್ಕು ವರ್ಷಗಳಲ್ಲಿಯೇ ಗರಿಷ್ಠ ದರ ಎನ್ನಲಾಗಿದೆ. ಇತ್ತ ಡೀಸೆಲ್‌ ದರದಲ್ಲೂ ಕೂಡಾ ದಾಖಲೆಯ ಏರಿಕೆ ಕಂಡುಬಂದಿದ್ದು, ಪ್ರತಿ ಲೀಟರ್‌ಗೆ ರೂ. 64.58 ಗರಿಷ್ಠ ಬೆಲೆ ಹೊಂದಿದೆ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಈ ಹಿಂದೆ ಸೆಪ್ಟೆಂಬರ್‌ 2014ರಲ್ಲಿ ದೆಹಲಿಯಲ್ಲಿ ಒಂದು ಲೀಟರ್‌ ಪೆಟ್ರೋಲ್‌‌ಗೆ ರೂ. 76.06 ರೂಪಾಯಿ ತಲುಪುವ ಮೂಲಕ ಗರಿಷ್ಠ ಬೆಲೆ ಎಂದು ದಾಖಲಾಗಿತ್ತು. ತದನಂತರ ಇದೇ ಮೊದಲ ಬಾರಿಗೆ ಗರಿಷ್ಠ ಏರಿಕೆಯಾಗಿದ್ದು, ಪೆಟ್ರೋಲ್‌ ಬೆಲೆಯಲ್ಲಿ ಒಂದೇ ದಿನಕ್ಕೆ 18 ಪೈಸೆ ಹೆಚ್ಚಳವಾಗಿದೆ. ಹಾಗೆಯೇ ಡೀಸೆಲ್‌ ಬೆಲೆಯಲ್ಲೂ 18 ಪೈಸೆ ಏರಿಕೆಯಾಗಿದೆ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಇನ್ನು ಕಳೆದ ವರ್ಷ ಜೂನ್‌ ತಿಂಗಳಿನಿಂದಲೇ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯು ಪ್ರತಿ ದಿನವೂ ಪರಿಷ್ಕರಣೆಯಾಗುತ್ತಿದ್ದು, ಇಂಧನ ದರಗಳು ಏರುಗತಿಯ ಹಾದಿಯಲ್ಲಿಯೇ ಸಾಗಿವೆ ಎಂಬುವುದು ಗಮನಿಸಬೇಕಾದ ವಿಚಾರ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಇದಲ್ಲದೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ದರಗಳು ಸಹ ಏರಿಕೆಯಲ್ಲಿಯೇ ಇದ್ದು, ಪರಿಣಾಮ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿಂದಾಗಿಯೇ ಜನಸಾಮಾನ್ಯರಿಗೆ ತಲೆ ಬಿಸಿಯಾಗಿರುವ ದರ ಏರಿಕೆಯನ್ನು ತುಸು ತಗ್ಗಿಸುವ ನಿಟ್ಟಿನಲ್ಲಿ ಅಬಕಾರಿ ಸುಂಕವನ್ನು ಕಡಿತಗೊಳಿಸಬೇಕು ಎನ್ನುವ ಬೇಡಿಕೆಗಳು ಹೆಚ್ಚಳವಾಗುತ್ತಿವೆ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಇದೇ ಕಾರಣಕ್ಕೆ ದರ ಏರಿಕೆ ಬಿಸಿ ತಗ್ಗಿಸಲು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಎಕ್ಸೈಸ್‌ ಸುಂಕ ಕಡಿಮೆ ಮಾಡುವಂತೆ ಪೆಟ್ರೋಲಿಯಂ ಸಚಿವಾಲಯವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ 2018-19ನೇ ಆರ್ಥಿಕ ವರ್ಷದ ಬಜೆಟ್‌ನಲ್ಲಿ ಕೇಂದ್ರ ಸರ್ಕಾರವು ಅಂತಹ ಯಾವುದೇ ನಿರ್ಧಾರ ಪ್ರಕಟಿಸಿಲ್ಲ.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಇದರ ಮಧ್ಯೆ ಪೆಟ್ರೋಲ್‌, ಡೀಸೆಲ್‌ ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕೆಂಬ ಬಗ್ಗೆಯೂ ಚರ್ಚೆ ನಡೆದಿದ್ದರೂ ಅದರ ಬಗ್ಗೆ ಒಮ್ಮತ ಅಭಿಪ್ರಾಯ ಇಲ್ಲದಿರುವುದು ಮಹತ್ವದ ನಿರ್ಧಾರಕ್ಕೆ ಹಿನ್ನಡೆಯಾಗುತ್ತಿದೆ. ಹೀಗಾಗಿ ಅಬಕಾರಿ ಸುಂಕದಲ್ಲಿ ಮಹತ್ತರ ಬದಲಾವಣೆ ಒಂದೇ ಬೆಲೆ ಏರಿಕೆಯ ಸಮಸ್ಯೆಗೆ ಮೂಲ ಪರಿಹಾರ ಎನ್ನಬಹುದು.

ಕಚ್ಚಾ ತೈಲಕ್ಕೆ ಹೆಚ್ಚಿದ ಬೇಡಿಕೆ- ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ

ಒಟ್ಟಿನಲ್ಲಿ ದಕ್ಷಿಣ ಏಷ್ಯಾದ ಇತರೆ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್‌ ಚಿಲ್ಲರೆ ಮಾರಾಟ ದರವು ಅತ್ಯಂತ ಗರಿಷ್ಠ ಮಟ್ಟದಲ್ಲಿದ್ದು, ಮಧ್ಯಮ ವರ್ಗದ ಗ್ರಾಹಕರು ಬೆಲೆ ಏರಿಕೆಯ ಬಿಸಿಗೆ ಬೇಸತ್ತು ಹೋಗಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಟೊಯೊಟಾ ಪರಿಚಯಿಸಲಿದೆ 7 ಸೀಟರ್ ಲಗ್ಷುರಿ ಎಂಪಿವಿ ಅಲ್ಫಾರ್ಡ್ ವ್ಯಾನ್...

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ಯಾಕ್ರಿ ಲಂಚ ಕೊಡ್ತಿರಾ? ಇನ್ಮುಂದೆ ಸುಲಭದಲ್ಲೇ ಸಿಗಲಿದೆ ಡ್ರೈವಿಂಗ್ ಲೈಸೆನ್ಸ್..!!

ಹಾಥಿ ಮತ್ ಪಾಲೊ ಜಾಹೀರಾತಿನಲ್ಲಿ ಆರ್‌ಇ ಬೈಕ್‌ಗಳಿಗೆ ಮತ್ತೊಂದು ಟಾಂಗ್..

More from DriveSpark

Article Published On: Monday, April 2, 2018, 19:47 [IST]
English summary
Petrol surges to four-year peak, diesel at all-time high.
Read more on petrol diesel
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+