ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

Written By:

ದೇಶಾದ್ಯಂತ ಪ್ರತಿದಿನ ಹತ್ತಾರು ಭೀಕರ ಅಪಘಾತ ಪ್ರಕರಣಗಳು ನಡೆಯುತ್ತಲೇ ಇವೆ. ಇದರಲ್ಲಿ ಬಹುತೇಕ ಪ್ರಕರಣಗಳು ರಸ್ತೆ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದ ಹಿನ್ನೆಲೆಯೇ ನಡೆದ ದುರಂತಗಳಾಗಿವೆ. ಅದರಲ್ಲೂ ರಾತ್ರಿ ವೇಳೆ ವಾಹನ ಚಾಲನೆ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಬೇಕು. ಇಲ್ಲವಾದ್ರೆ ಭೀಕರ ಅಪಘಾತ ಕಟ್ಟಿಟ್ಟ ಬುತ್ತಿ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಇದೀಗ ಇಂತದ್ದೇ ಒಂದು ಭೀಕರ ಅಪಘಾತ ನಡೆದಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದರುವ ಪ್ರಾಣಪಾಯದಿಂದ ಪಾರಾಗಿದ್ದಾರೆ. ಟಾಟಾ ನೆಕ್ಸಾನ್ ಎಸ್‌ಯುವಿ ಹೊಸ ಕಾರೊಂದು ಹೆದ್ದಾರಿಯಲ್ಲಿ ಚಲಿಸುತ್ತಿದ್ದಾಗ ಅಪರಿಚಿತ ವಾಹನವೊಂದು ಹಿಂಬದಿಯಿಂದ ಗುದ್ದಿದೆ. ಪರಿಣಾಮ ಕಾರು ನಿಯಂತ್ರಣ ತಪ್ಪಿದ್ದಲ್ಲದೇ ಮೂರು ನಾಲ್ಕು ಬಾರಿ ಪಲ್ಟಿ ಹೊಡೆದಿದೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಅಂದಹಾಗೆ ಈ ಘಟನೆ ನಡೆದಿರುವುದು ದೆಹಲಿ ಮತ್ತು ಅಮೃತಸರ್ ನಡುವಿನ ರಾಷ್ಟ್ರೀಯ ಹೆದ್ದಾರಿಯಲ್ಲಿ. ಕರ್ನೂಲ್ ಬಳಿ ಬೆಳಗಿನ ಜಾವ 2 ಗಂಟೆಗೆ ಈ ಘಟನೆ ನಡಿದ್ದು, ಹಿಂಬದಿಯಿಂದ ಬಂದ ಅಪರಿಚಿತ ವಾಹನವೊಂದು ಗುದ್ದಿ ಪರಾರಿಯಾಗಿದೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಅಪಘಾತದಲ್ಲಿ ಟಾಟಾ ನೆಕ್ಸನ್ ಕಾರು ಸಂಪೂರ್ಣ ಜಖಂಗೊಂಡಿದ್ದರು ಅದೃಷ್ಟವಶಾತ್ ಕಾರಿನಲ್ಲಿದ್ದ ಮೂವರಿಗೆ ಸಣ್ಣಪುಟ್ಟ ಗಾಯಗಳನ್ನು ಹೊರತುಪಡಿಸಿ ಯಾವುದೇ ಪ್ರಾಣಹಾನಿಯಾಗಿಲ್ಲ ಎಂಬುವುದೇ ಸಮಾಧಾನಕರ ಸಂಗತಿ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿವರವನ್ನು ಹಂಚಿಕೊಂಡಿರುವ ನೆಕ್ಸಾನ್ ಕಾರು ಮಾಲೀಕ ಗುರುಮನ್ ಸಿಂಗ್, ಕಡಿದಾದ ಮಾರ್ಗದಲ್ಲಿ ಕಾರು ಚಾಲನೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಹಿಂಬದಿಯಿಂದ ದೊಡ್ಡ ಗಾತ್ರದ ವಾಹನವೊಂದು ಡಿಕ್ಕಿ ಹೊಡೆಯಿತು. ಈ ವೇಳೆ ಕಾರಿನ ನಿಯಂತ್ರಣ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಇದೇ ವೇಳೆ ನಿಯಂತ್ರಣ ತಪ್ಪಿದ ನೆಕ್ಸಾನ್ ಕಾರು ಸಿಮೆಂಟ್‌ನಿಂದ ಕಟ್ಟಲಾಗಿದ್ದ ತಡೆಗೊಡೆಗೆ ಡಿಕ್ಕಿ ಹೊಡೆದಿದ್ದು, ಆಗ ಕಾರು ಮೂರು ನಾಲ್ಕು ಬಾರಿ ಪಲ್ಟಿ ಹೊಡೆದು ರಸ್ತೆ ಬದಿಯಲ್ಲಿದ್ದ ಖಾಲಿ ಜಾಗಕ್ಕೆ ಬಿದ್ದಿದೆ. ಹೀಗಾಗಿ ಕಾರಿನ ಕಿಟಕಿಗಳು ಮತ್ತು ವಿಂಡ್‌ಸ್ಕ್ರೀನ್‌ಗಳು ಪುಡಿ ಪುಡಿಯಾಗಿವೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಆದ್ರೆ ಟಾಟಾ ಮೋಟಾರ್ಸ್ ನಿರ್ಮಾಣದ ನೆಕ್ಸಾನ್ ಕಾರುಗಳಲ್ಲಿನ ಸುರಕ್ಷತೆಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಗುರುಮನ್ ಸಿಂಗ್, ನೆಕ್ಸಾನ್ ಕಾರಿನಲ್ಲಿ ನೀಡಲಾಗಿರುವ ಅತ್ಯತ್ತಮ ಸುರಕ್ಷಾ ಸಾಧನಗಳು ಮತ್ತು ಗಟ್ಟಿಮುಟ್ಟಾದ ಕವಚ ನಿರ್ಮಾಣವೇ ನಮ್ಮ ಜೀವ ಉಳಿಯಲು ಕಾರಣ ಎಂದಿದ್ದಾರೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಇನ್ನು ಅಪಘಾತದ ವೇಳೆ ಕಾರಿನ ಎಲ್ಲ ಏರ್‌ಬ್ಯಾಗ್‌ಗಳು ಸರಿಯಾದ ಸಮಯಕ್ಕೆ ಕಾರ್ಯನಿರ್ವಹಣೆಯಾಗಿದ್ದು, ಕಾರಿನ ಹಿಂಭಾಗವು ಸಂಪೂರ್ಣ ಜಖಂಗೊಂಡಿದ್ದರು ಕಾರಿನಲ್ಲಿದ್ದ ಮೂವರಿಗೂ ಯಾವುದೇ ರೀತಿಯ ತೊಂದರೆ ಆಗಿಲ್ಲ ಎನ್ನುವುದೇ ಗಮನಿಸಬೇಕಾದ ಅಂಶವಾಗಿದೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಕಳೆದ ಸೆಪ್ಟಂಬರ್‌ನಲ್ಲಿ ಟಾಟಾ ನೆಕ್ಸಾನ್ ಕಾರುಗಳು ಭಾರತದಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಿದ್ದು, ಕೈಗೆಟುವ ದರಗಳಲ್ಲಿ ಅತ್ಯುತ್ತಮ ಕಂಪ್ಯಾಕ್ಟ್ ಎಸ್‌ಯುವಿ ಕಾರುಗಳಲ್ಲಿ ನೆಕ್ಸನ್ ಆವೃತ್ತಿಗಳು ಉತ್ತಮ ಬೇಡಿಕೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿವೆ.

ಭೀಕರ ಅಪಘಾತದಲ್ಲಿ ಟಾಟಾ ನೆಕ್ಸಾನ್ ಸಂಪೂರ್ಣ ಜಖಂ- ಕಾರಿನಲ್ಲಿದ್ದವರು ಅದೃಷ್ಟವಶಾತ್ ಪಾರು..!!

ಹೀಗಾಗಿ ಗ್ರಾಹಕರ ನೀಡುವ ದರಗಳಿಗೆ ಟಾಟಾ ನೆಕ್ಸಾನ್ ಕಾರುಗಳು ಉತ್ತಮ ಮಾದರಿಯಾಗಿದ್ದು, ಅಪಘಾತಗಳ ಸಂದರ್ಭದಲ್ಲಿ ನಿರ್ದಿಷ್ಟ ಮಟ್ಟದ ಸುರಕ್ಷೆ ನೀಡುವಲ್ಲಿ ಟಾಟಾ ಕಾರುಗಳು ಉತ್ತಮ ಭರವಸೆ ಹೊಂದಿವೆ ಅಂದರೇ ತಪ್ಪಾಗಲಾರದು.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನ್ಮುಂದೆ ರಾಂಗ್ ರೂಟ್‌ನಲ್ಲಿ ಹೋದ್ರೆ ನಿಮ್ಮ ವಾಹನಗಳ ಕಥೆ ಅಷ್ಟೇ...

ಗ್ರಾಹಕರೇ ಎಚ್ಚರ- ಬೈಕ್ ಖರೀದಿಸುವ ಪ್ಲ್ಯಾನ್ ಇದ್ರೆ ಇತ್ತ ಗಮನಹರಿಸಿ...

ಟ್ರಾಫಿಕ್ ರೂಲ್ಸ್ ಬ್ರೇಕ್- ಮಗನನ್ನೇ ಹಿಡಿದು ದಂಡ ವಸೂಲಿ ಮಾಡಿದ ಪೊಲೀಸ್..

ನಟ ಸುದೀಪ್ ಹೊಸ ಜೀಪ್ ಕಂಪಾಸ್ ಖರೀದಿಸಿದ್ದು ಯಾರಿಗಾಗಿ ಗೊತ್ತಾ?

30 ಕೋಟಿಗೂ ಹೆಚ್ಚು ಬೆಲೆಬಾಳುವ ಈ ಐಷಾರಾಮಿ ಎಸ್‌ಯುವಿ ಕಾರಿನ ವಿಶೇಷತೆ ಏನು?

Read more on accident tata motors
English summary
Tata Nexon Involved In An Accident; Driver Safe.

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark