ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಭಾರತೀಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರಿನ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ಸಂಸ್ಥೆಗಳು ಎಸ್‍‍ಯುವಿ ಕಾರುಗಳ ನಿರ್ಮಾಣದಲ್ಲಿ ಬ್ಯುಸಿಯಾಗಿವೆ.ಸುಜುಕಿ ಸಂಸ್ಥೆ ಕೂಡ ಭಾರತದಲ್ಲಿ ತಮ್ಮ ಸಣ್ಣ ಗಾತ್ರದ ಜಿಮ್ನಿ ಎಸ್‍‍ಯುವಿ ಕಾರನ್ನು ಬ

By Rahul Ts

ಭಾರತೀಯ ಮಾರುಕಟ್ಟೆಯಲ್ಲಿ ಎಸ್‍‍ಯುವಿ ಕಾರಿನ ಬೇಡಿಕೆಯು ಹೆಚ್ಚುತ್ತಿದ್ದು, ಹಲವಾರು ವಾಹನ ಸಂಸ್ಥೆಗಳು ಎಸ್‍‍ಯುವಿ ಕಾರುಗಳ ನಿರ್ಮಾಣದಲ್ಲಿ ಬ್ಯುಸಿಯಾಗಿವೆ. ಸುಜುಕಿ ಸಂಸ್ಥೆ ಕೂಡ ಭಾರತದಲ್ಲಿ ತಮ್ಮ ಸಣ್ಣ ಗಾತ್ರದ ಜಿಮ್ನಿ ಎಸ್‍‍ಯುವಿ ಕಾರನ್ನು ಬಿಡುಗಡೆಗೊಳಿಸುವುದರ ಬಗ್ಗೆ ಸುಳಿವು ನೀಡಿತ್ತು. ಆದರೇ ಸುಜುಕಿ ಸಂಸ್ಥೆಯು ಜಿಮ್ನಿ ಕಾರಿನ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಮಾಹಿತಿಗಳ ಪ್ರಕಾರ ಜಪಾನ್ ಮೂಲದ ವಾಹನ ತಯಾರ ಸಂಸ್ಥೆಯಾದ ಸುಜುಕಿ, ತಮ್ಮ ಸ್ಮಾಲ್ ಸೈಜ್ 3 ಡೋರ್ ಜಿಮ್ನಿ ಕಾರನ್ನು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲ್ವಂತೆ. ಕೇವಲ ಜಿಮ್ನಿ ಮಾತ್ರವಲ್ಲದೇ ತಮ್ಮ ಬಹುನಿರೀಕ್ಷಿತ ಸ್ವಿಫ್ಟ್ ಸ್ಪೋರ್ಟ್ ಹ್ಯಾಚ್‍‍ಬ್ಯಾಕ್ ಕಾರನ್ನು ಕೂಡಾ ಬಿಡುಗಡೆಗೊಳಿಸಲು ನಿರಾಕರಿಸಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಜಿಮ್ನಿ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಂಡಿದ್ದರೆ ಜಿಪ್ಸಿ ಎಸ್‍‍ಯುವಿ ಕಾರಿನ ಉತ್ತರಾಧಿಕಾರಿಯಾಗುತ್ತಿತ್ತು. ಆದರೇ ದೇಶಿಯ ಮಾರುಕಟ್ಟೆಯಲ್ಲಿ 3 ಡೋರ್ ಎಸ್‍‍ಯುವಿ ಕಾರುಗಳ ಸರಣಿಯಲ್ಲಿ ಬೇಡಿಕೆಯು ಮತ್ತು ಮಾರಾಟವು ಕಡಿಮೆ ಆಗುತ್ತಿರುವ ಕಾರಣ ಸುಜುಕಿ ಸಂಸ್ಥೆಯು ಜಿಮ್ನಿ ಕಾರನ್ನು ಬಿಡುಗಡೆಗೊಳಿಸಲು ನಿರಾಕರಿಸಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ವಿವಿಧ ದೇಶಗಳ ಮಾರುಕಟ್ಟೆ ಬೇರೆ ಬೇರೆ ಹೆಸರಿನೊಂದಿಗೆ ಮಾರಾಟವಾಗುತ್ತಿರುವ ಜಿಮ್ನಿ ಕಾರುಗಳು ಕಾಲ ಕ್ರಮೇಣ ಹಲವಾರು ಬದಲಾಣೆಗಳೊಂದಿಗೆ ಮಾರಾಟದಲ್ಲಿ ಸ್ಥಿರತೆ ಕಾಯ್ದುಕೊಂಡು ಬಂದಿದ್ದು, ಆಪ್ ರೋಡ್ ಪ್ರದರ್ಶನದಲ್ಲಿ ಈ ಕಾರುಗಳ ಗತ್ತು ನೋಡಿದವರಿಗಷ್ಟೇ ಗೊತ್ತು.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

4x4 ಡ್ರೈವ್ ಟೆಕ್ನಾಲಜಿ ಅಳವಡಿಕೆ ಹೊಂದಿರುವ ಜಿಮ್ನಿ ಕಾರುಗಳು ವಿದೇಶದ ಮಾರುಕಟ್ಟೆಯಲ್ಲಿ ಪ್ರಮುಖವಾಗಿ ಎರಡು ವೆರಿಯೆಂಟ್‌ಗಳಲ್ಲಿ ಲಭ್ಯವಾಗಲಿದ್ದು, ಒಂದು ಸ್ಟ್ಯಾಂಡರ್ಡ್ ವರ್ಷನ್ ಮತ್ತು ಟಾಪ್ ಎಂಡ್ ಮಾದರಿಯಾಗಿ ಸಿಯೈರಾ ಎನ್ನುವ ಕಾರು ಮಾದರಿಯು ಸಿದ್ದಗೊಂಡಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಇವುಗಳಲ್ಲಿ ಗ್ರಾಹಕರು ತಮ್ಮ ಬೇಡಿಕೆಗೆ ಅನುಗುಣವಾಗಿ ಎಕ್ಸ್‌ಜಿ, ಎಕ್ಸ್ಎಲ್ ಮತ್ತು ಎಕ್ಸ್‌ಸಿ ಎನ್ನುವ ಮಾದರಿಗಳು ಖರೀದಿಗೆ ಲಭ್ಯವಾಗಿದ್ದು, ಕೇಲವೇ ಕೆಲವು ತಾಂತ್ರಿಕ ಅಂಶಗಳನ್ನು ಹೊರತುಪಡಿಸಿ ಉಳಿದಂತೆ ಎಲ್ಲಾ ಸೌಲಭ್ಯಗಳು ಪ್ರತಿ ಮಾದರಿಯಲ್ಲೂ ಕಾಣಬಹುದಾಗಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಜಪಾನ್ ಮಾರುಕಟ್ಟೆಯಲ್ಲಿ ಲಭ್ಯವಿರುವ ಜಿಮ್ನಿ ಕಾರುಗಳು 660ಸಿಸಿ ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಟಾಪ್ ಎಂಡ್ ಮಾದರಿಯಲ್ಲಿ 1.5-ಲೀಟರ್(1500 ಸಿಸಿ) ಪೆಟ್ರೋಲ್ ಎಂಜಿನ್ ಜೊತೆಗೆ 63-ಬಿಎಚ್‌ಪಿ ಉತ್ಪಾದನೆ ಮಾಡಿದಲ್ಲಿ ಟಾಪ್ ಮಾದರಿಯು 100-ಬಿಎಚ್‌ಪಿ ಉತ್ಪಾದನಾ ಗುಣಹೊಂದಿವೆ. ಇದರೊಂದಿಗೆ ಪ್ರತಿ ಕಾರು ಮಾದರಿಯಲ್ಲೂ 5-ಸ್ಪೀಡ್ ಮ್ಯಾನುವಲ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಒದಗಿಸಲಾಗಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಜಿಮ್ನಿ ಕಾರುಗಳಲ್ಲಿ ಮಾರ್ಡನ್ ಲುಕ್‌ನೊಂದಿಗೆ ಸ್ಮಾರ್ಟ್ ಕನೆಕ್ಟಿವಿಗಳ ಸೌಲಭ್ಯವಿದ್ದು, 7-ಇಂಚಿನ ಟಚ್ ಸ್ಕ್ರೀನ್ ಇನ್ಪೋಟೈನ್‌ಮೆಂಟ್, ಆಟೋಮ್ಯಾಟಿಕ್ ಕ್ಲೈಮೆಟ್ ಕಂಟ್ರೊಲರ್, ಪುಶ್ ಬಟನ್ ಸ್ಮಾರ್ಟ್, ಆಟೋಮ್ಯಾಟಿಕ್ ಹೆಡ್‌ಲ್ಯಾಂಪ್, ಕ್ರೂಸ್ ಕಂಟ್ರೋಲರ್ ಮತ್ತು ಸ್ಟಿರಿಂಗ್ ಮೌಟೆಂಡ್ ಕಂಟ್ರೋಲ್ ಅಳವಡಿಸಲಾಗಿದೆ.

ಭಾರತದಲ್ಲಿ ಬಿಡುಗಡೆ ಆಗೋದಿಲ್ವಂತೆ ಸುಜುಕಿ ಜಿಮ್ನಿ ಕಾರು..

ಜೊತೆಗೆ ಆಪ್ ರೋಡ್, ಸರ್ವಿಯಲ್ ಮತ್ತು ರೆವಿವಲ್ ಎನ್ನುವ ವಿವಿಧ ಚಾಲನಾ ಕಿಟ್ ಒದಗಿಸಲಾಗಿದ್ದು, ಬಾಡಿ ಡಿಕಾಲ್ಸ್, ಲೆದರ್ ಕವರ್ ಪ್ರೇರಿತ ಡೋರ್ ಹ್ಯಾಂಡಲ್, ಕಾರಿನ ಸ್ಟೈಲಿಶ್ ಹೆಚ್ಚಿಸಲು ರೂಫ್ ಟಾಪ್ ಕ್ಯಾರಿಯರ್, ಅಲಾಯ್ ವೀಲ್ಹ್‌ಗಳು ಮತ್ತು ಕಾರಿನ ಕೆಳ ಭಾಗದಲ್ಲಿ ಹೆಚ್ಚುವರಿ ಟೈರ್ ಕ್ಯಾರಿ ಮಾಡುವ ಸೌಲಭ್ಯವಿದೆ.

Most Read Articles

Kannada
Read more on suzuki jimny suv off road
English summary
Sad news: Maruti rules out Jimny for India.
Story first published: Thursday, August 23, 2018, 11:46 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X