TRENDING ON ONEINDIA
-
ಪುಲ್ವಾಮಾ ದಾಳಿ: ಪ್ರಧಾನಿ ಅಧ್ಯಕ್ಷತೆಯಲ್ಲಿ ಇಂದು ಭದ್ರತಾ ಸಭೆ
-
ಆಕರ್ಷಕ ಬೆಲೆಗಳಲ್ಲಿ ಬಿಡುಗಡೆಯಾದ ಮಹೀಂದ್ರಾ ಎಕ್ಸ್ಯುವಿ300
-
ಕಡಿಮೆ ಮೆಮೊರಿ ಮತ್ತು ರ್ಯಾಮ್ ಇರುವ ಫೋನನ್ನು ಖರೀದಿಸಲೇಬಾರದು ಏಕೆ?
-
ಡಾಲಿ ಫಸ್ಟ್ ಲುಕ್: ಮತ್ತೆ ನಟರಾಕ್ಷಸನ ಆಗಮನ
-
ಪ್ರಧಾನ ಮಂತ್ರಿ ಶ್ರಮಯೋಗಿ ಮಾನ್ಧನ್ ಯೋಜನೆ: ತಿಂಗಳಿಗೆ 3000 ಪಿಂಚಣಿ
-
ಪುರುಷರಲ್ಲಿ ಫಲವತ್ತತೆ ಹೆಚ್ಚಿಸಲು ಕೆಲವು ಸಲಹೆಗಳು
-
ಐಸಿಸಿ ವಿಶ್ವಕಪ್ ಕ್ರಿಕೆಟ್ 2019 ವೇಳಾಪಟ್ಟಿ ಪ್ರಕಟ
-
ಕೋಲಾರ ಜಿಲ್ಲಾ ನ್ಯಾಯಾಲಯದಲ್ಲಿ ಶೀಘ್ರಲಿಪಿಗಾರ ಹುದ್ದೆಗಳಿಗೆ ಅರ್ಜಿ ಹಾಕಿ
ಹೆಕ್ಸಾ ಕಾರಿನ ಮತ್ತೊಂದು ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ ಟಾಟಾ ಮೋಟಾರ್ಸ್
ದೇಶಿಯ ವಾಹನ ತಯಾರಕ ಸಂಸ್ಥೆಯಾದ ಟಾಟಾ ಮೋಟಾರ್ಸ್ ತಮ್ಮ ಜನಪ್ರಿಯ ಫ್ಲ್ಯಾಗ್‍ಶಿಪ್ ಹೆಕ್ಸಾ ಎಸ್‍ಯುವಿ ಕಾರಿನ ಹೊಸ ವೇರಿಯಂಟ್ ಅನ್ನು ಇಂದು ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಿದ್ದು, ದೆಹಲಿಯ ಎಕ್ಸ್ ಶೋರಂ ಪ್ರಕಾರ ಹೊಸ ಎಕ್ಸ್ಎಮ್+ ವೇರಿಯಂಟ್ ಕಾರಿಗೆ ರೂ.15.27 ಲಕ್ಷದ ಮಾರಾಟದ ಬೆಲೆಯನ್ನು ನಿಗದಿ ಮಾಡಲಾಗಿದೆ.
ಟಾಟಾ ಹೆಕ್ಸಾ ಕಾರಿನ ಹೊಸ ಎಕ್ಸ್ಎಮ್+ ವೇರಿಯಂಟ್ ಸಾಧಾರಣ ಎಕ್ಸ್ಎಮ್ ಮಾಡಲ್‍ಗಿಂತಾ 16 ಹೊಸ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದ್ದು, ಮಹೀಂದ್ರಾ ಸಂಸ್ಥೆಯಲ್ಲಿನ ಡಬ್ಲ್ಯೂ9 ವೇರಿಯಂಟ್ ಎಸ್‍ಯುವಿ ಕಾರುಗಳಿಗೆ ಮಾರುಕಟ್ಟೆಯಲ್ಲಿ ನೇರ ಪೈಪೋಟಿ ನೀಡಲಿದೆ.
ಹೊಸ ವೇರಿಯಂಟ್ ಟಾಟಾ ಹೆಕ್ಸಾ ಕಾರಿನಲ್ಲಿ ಲೆಧರ್‍ನಿಂದ ಸಜ್ಜುಗೊಂಡ ಸ್ಟೀರಿಂಗ್ ವ್ಹೀಲ್, ಮೃಧುವಾದ ಬಟ್ಟೆಯಿಂದ ಸಜ್ಜುಗೊಳಿಸಲಾದ ಡ್ಯಾಶ್‍ಬೋರ್ಡ್, ಡ್ಯುಯಲ್ ಜೋನ್ ಕ್ಲೈಮೇಟ್ ಕಂಟ್ರೋಲ್, ಕ್ರೂಸ್ ಕಂಟ್ರೋಲ್ ಮತ್ತು ಎಂಟು ವಿವಿಧ ಬಣ್ಣಗಳ ಆಯ್ಕೆಯನ್ನು ಒಳಾಗೊಂಡ ಏಂಬಿಯಂಟ್ ಲೈಟಿಂಗ್ ಫೀಚರ್‍ಗಳನ್ನು ಪಡೆದುಕೊಂಡಿದೆ.
ಅಷ್ಟೆ ಅಲ್ಲದೇ 16 ಇಂಚಿನ ಅಲಾಯ್ ಚಕ್ರಗಳು, ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ಫ್ರಂಟ್ ಫಾಗ್ ಲ್ಯಾಂಪ್ಸ್, ರೈನ್-ಸೆನ್ಸೀಂಗ್ ವೈಪರ್ಸ್, ವಿದ್ಯುತ್‍ನಿಂದ ಅಡ್ಜಸ್ಟ್ ಮಾಡಬಹುದಾದ ರೀಯರ್ ವ್ಯೂ ಮಿರರ್ಸ್ ಹಾಗು ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಪಾರ್ಕಿಂಗ್ ಸೆನ್ಸಾರ್‍ಗಳನ್ನು ನೀಡಲಾಗಿದೆ.
ಎಂಜಿನ್ ಸಾಮರ್ಥ್ಯ
ಟಾಟಾ ಹೆಕ್ಸಾ ಕಾರಿನ ಹೊಸ ಎಕ್ಸ್ಎಮ್+ ವೇರಿಯಂಟ್ ಕಾರುಗಳು 2.2 ಲೀಟರ್ 4 ಸಿಲೆಂಡರ್ ಟರ್ಬೋಚಾರ್ಜ್ಡ್ ಡಿಸೆಲ್ ಎಂಜಿನ್ ಸಹಾಯದಿಂದ 154ಬಿಹೆಚ್‍ಪಿ ಮತ್ತು 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 6 ಸ್ಪೀಡ್ ಮ್ಯಾನುವಲ್ ಗೇರ್‍ಬಾಕ್ಸ್ ನೊಂದಿಜೆ ಜೋಡಿಸಲಾಗಿದೆ.
ಟಾಟಾ ಹೆಕ್ಸಾ ಕಾರಿನ ಇನ್ನಿತರೆ ವೇರಿಯಂಟ್‍ನಂತೆಯೆ ಎಕ್ಸ್ಎಮ್+ ವೇರಿಯಂಟ್ ಕಾರಿನ ಜೊತೆಗೆ 2 ವರ್ಷದ ವಾರಂಟಿಯನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗುತ್ತಿದ್ದು, ಇದಲ್ಲದೇ ಟಾಟಾ ಮೋಟಾರ್ಸ್ ಅಧಿಕೃತ ಡೀಲರ್‍ಗಳ ಬಳಿ ಕಾರಿಗೆ ಸನ್‍ರೂಫ್ ಅನ್ನು ಕೂಡಾ ಗ್ರಾಹಕರು ಪಡೆಯಬಹುದಾಗಿದೆ.
ಡ್ರೈವ್‍ಸ್ಪಾರ್ಕ್ ಅಭಿಪ್ರಾಯ
ಟಾಟಾ ಮೋಟಾರ್ಸ್ ತಮ್ಮ ಹೆಕ್ಸಾ ಕಾರಿನ ಹೊಸ ವೇರಿಯಂಟ್ ಅನ್ನು ಪರಿಚಯಿಸಿದ್ದು, ಹಲವಾರು ಹೊಸ ವೈಶಿಷ್ಟ್ಯತೆಗಳೊಂದಿಗೆ ಬಿಡುಗಡೆಗೊಂಡಿದೆ. ಹಬ್ಬದ ಋತುವಿನಲ್ಲಿ ಟಾಟಾ ಮೋಟಾರ್ಸ್ ಹೆಕ್ಸಾ ಕಾರಿನ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ಗ್ರಾಹಕರು ಈ ಕಾರನ್ನು ಯಾವ ರೀತಿಯಲ್ಲಿ ಮೆಚ್ಚಿಕೊಳ್ಳುತ್ತಾರೆ ಎಂಬುದು ಕಾಯ್ದು ನೋಡಬೇಕಿದೆ.