ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಇಂಡಿಕಾ ಮತ್ತು ಇಂಡಿಗೊ ಹ್ಯಾಚ್‌ಬ್ಯಾಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಫುಲ್ ಸ್ಟಾಪ್ ಹಾಕಿದೆ.

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಜನಪ್ರಿಯಗೊಂಡಿರುವ ಇಂಡಿಕಾ ಮತ್ತು ಇಂಡಿಗೊ ಹ್ಯಾಚ್‌ಬ್ಯಾಕ್ ಕಾರುಗಳ ಉತ್ಪಾದನೆ ಮತ್ತು ಮಾರಾಟ ಪ್ರಕ್ರಿಯೆಗೆ ಫುಲ್ ಸ್ಟಾಪ್ ಹಾಕಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ನೆಚ್ಚಿನ ಗ್ರಾಹಕರಲ್ಲಿ ನಿರಾಸೆ ಮೂಡಿಸಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಈ ಹಿಂದೆ 1998ರಲ್ಲಿ ಬಿಡುಗಡೆಯಾಗಿದ್ದ ಇಂಡಿಕಾ ಹಾಗೂ 2002ರಲ್ಲಿ ಬಿಡುಗಡೆಯಾಗಿದ್ದ ಇಂಡಿಗೊ ಕಾರುಗಳು ಮೊನ್ನೆಯವರೆಗೂ ಉತ್ತಮ ಬೇಡಿಕೆ ಹೊಂದಿದ್ದಲ್ಲದೇ ಭಾರತೀಯ ಆಟೋ ಉದ್ಯಮದಲ್ಲಿ ತಮ್ಮದೇ ಅಧಿಪತ್ಯ ಸಾಧಿಸಿದ್ದವು. ಆದ್ರೆ ಬದಲಾದ ಮಾರುಕಟ್ಟೆಯಲ್ಲಿ ಸನ್ನಿವೇಶಗಳು ಇಂಡಿಕಾ ಮತ್ತು ಇಂಡಿಗೊ ಕಾರುಗಳನ್ನು ಮೂಲೆಗುಂಪಾಗುವಂತೆ ಮಾಡಿವೆ ಅಂದ್ರೆ ನೀವು ನಂಬಲೇಬೇಕು.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಹೌದು, ಇಂಡಿಕಾ ಮತ್ತು ಇಂಡಿಗೊ ಕಾರುಗಳು ಬಿಡುಗಡೆಯಾದ ನಂತರ ಇದುವರೆಗೆ ಲಕ್ಷಾಂತರ ಕಾರು ಮಾದರಿಗಳು ಮಾರಾಟಗೊಂಡಿದ್ದಲ್ಲದೇ ಪ್ಯಾಸೆಂಜರ್ ಕಾರುಗಳ ವಿಭಾಗದಲ್ಲೂ ಭಾರೀ ಸದ್ದು ಮಾಡಿತ್ತು. ಆದ್ರೆ ಕಳೆದ 2 ವರ್ಷಗಳಿಂದ ಈಚೆಗೆ ಹೊಸ ಕಾರುಗಳ ಮಾರಾಟ ಪ್ರಮಾಣ ಗಣನೀಯ ಮಟ್ಟದಲ್ಲಿ ಇಳಿಕೆಯಾಗಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಇದೇ ಕಾರಣಕ್ಕೆ ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿರುವ ಟಾಟಾ ಮೋಟಾರ್ಸ್, ಇಂಡಿಕಾ ಮತ್ತು ಇಂಡಿಗೊ ಕಾರುಗಳ ಉತ್ಪಾದನೆಗೆ ಗುಡ್ ಬೈ ಹೇಳಿದ್ದಲ್ಲದೇ ಸದ್ಯ ಮಾರುಕಟ್ಟೆಯಲ್ಲಿನ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಕಾರುಗಳ ಉತ್ಪಾದನೆ ಮತ್ತು ಮಾರಾಟದತ್ತ ಗಮಹರಿಸುವುದಾಗಿ ಹೇಳಿಕೊಂಡಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಇದಲ್ಲದೇ ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನುಪೆಕ್ಚರ್ಸ್(SIAM) ಸಂಸ್ಥೆಯು ಬಿಡುಗಡೆ ಮಾಡಿರುವ ಅಂಕಿ ಅಂಶ ಪ್ರಕಾರ, ಇಂಡಿಕಾ ಮತ್ತು ಇಂಡಿಗೊ ಕಾರುಗಳ ಮಾರಾಟ ಪ್ರಮಾಣವು ಸಹ ನೆಲಕಚ್ಚಿದ್ದು, ಇದೇ ಕಾರಣಕ್ಕೆ ಟಾಟಾ ಸಂಸ್ಥೆಯು ಮಹತ್ವದ ನಿರ್ಧಾರ ಕೈಗೊಂಡಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

2017-18ರ ಆರ್ಥಿಕ ವರ್ಷದಲ್ಲಿ 2,583 ಇಂಡಿಕಾ ಕಾರುಗಳು ಹಾಗೂ 1,756 ಇಂಡಿಗೊ ಕಾರುಗಳು ಮಾತ್ರ ಮಾರಾಟವಾಗಿದ್ದು, ಇದು ಟಾಟಾ ಮೋಟಾರ್ಸ್ ಸಂಸ್ಥೆಗೆ ತೀವ್ರ ಹಿನ್ನೆಡೆ ಅನುಭವಿಸುವಂತೆ ಮಾಡಿದ್ದಲ್ಲದೇ ಆರ್ಥಿಕ ವರ್ಷದ ಲಾಭದ ಮೇಲೂ ಪರಿಣಾಮ ಬೀರಿದ್ದವು.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಟಾಟಾ ಸಂಸ್ಥೆಯ ಇನ್ನುಳಿದ ಆವೃತ್ತಿಗಳು ಉತ್ತಮ ಬೇಡಿಕೆ ಹೊಂದಿದ್ದು, 2016-17ರ ಆರ್ಥಿಕ ವರ್ಷಕ್ಕಿಂತ 2017-18ರ ಆರ್ಥಿಕ ವರ್ಷದಲ್ಲಿ ಶೇ. 22ರಷ್ಟು ಏರಿಕೆಯೊಂದಿಗೆ 1,53,151 ಕಾರುಗಳನ್ನು ಮಾಡಿತ್ತು. ಇದರಲ್ಲಿ ಅತಿ ಕಡಿಮೆ ಮಾರಾಟವಾಗಿದ್ದು ಮಾತ್ರ ಇಂಡಿಕಾ ಹಾಗೂ ಇಂಡಿಗೊ ಹ್ಯಾಚ್‌ಬ್ಯಾಕ್‌ಗಳು.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಹೀಗಾಗಿಯೇ ಟಾಟಾ ಮೋಟಾರ್ಸ್ ಸಂಸ್ಥೆಯು ಇಂಡಿಕಾ ಮತ್ತು ಇಂಡಿಗೊ ಕಾರುಗಳ ಉತ್ಪಾದನೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದು, ಸದ್ಯ ಉತ್ಪಾದನೆಯಾಗಿರುವ ಸ್ಟಾಕ್ ಅನ್ನು ಮಾತ್ರ ಮಾರಾಟ ಮಾಡುತ್ತಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಇದಲ್ಲದೇ ಸ್ಟಾಕ್ ಮಾರಾಟ ಪೂರ್ಣಗೊಂಡ ನಂತರವೂ ಹೊಸ ಕಾರುಗಳ ಸರ್ವಿಸ್ ಮತ್ತು ಬಿಡಿಭಾಗಗಳ ಸೇವೆಯಲ್ಲಿ ಯಾವುದೇ ಬದಲಾವಣೆ ಎಂದಿರುವ ಟಾಟಾ ಸಂಸ್ಥೆಯು ಮಾರಾಟದಲ್ಲಿ ಇಳಿಕೆಯಾದ ಹಿನ್ನೆಲೆ ಉತ್ಪಾದನೆ ನಿಲ್ಲಿಸಲಾಗಿದೆ ಹೊರತು ಗ್ರಾಹಕರ ಸೇವೆಯಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂಬ ಭರವಸೆ ನೀಡಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಜೊತೆಗೆ ಮಾರುಕಟ್ಟೆಯಲ್ಲಿನ ಬೇಡಿಕೆಗೆ ಅನುಗುಣವಾಗಿ ಇವಿ(ಎಲೆಕ್ಟ್ರಿಕ್ ವೆಹಿಕಲ್) ಕಾರುಗಳ ಮೇಲೆ ಗಮನಹರಿಸುತ್ತಿರುವ ಟಾಟಾ ಸಂಸ್ಥೆಯು ಟಿಯಾಗೊ ಮತ್ತು ಟಿಗೊರ್ ಆವೃತ್ತಿಗಳನ್ನು ಎಲೆಕ್ಟ್ರಿಕ್ ಎಂಜಿನ್‌ನೊಂದಿಗೆ ಮರು ಬಿಡುಗಡೆಯ ತವಕದಲ್ಲಿದೆ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಹೀಗಿರುವಾಗ ತನ್ನ ಸಾಂಪ್ರದಾಯಿಕ ಕಾರು ಆವೃತ್ತಿಗಳಿಗೆ ಗುಡ್ ಬೈ ಹೇಳಲೇಬೇಕಾದ ಅನಿವಾರ್ಯತೆಗಳಿದ್ದು, ಸದ್ಯದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬೇಡಿಕೆ ಹೊಂದಿರುವ ನೆಕ್ಸಾನ್, ಟಿಗೋರ್, ಟಿಯಾಗೋ ಕಾರುಗಳು ಟಾಟಾ ಮೋಟಾರ್ಸ್‌‌ಗೆ ಜೀವ ತುಂಬಿವೆ ಎಂದ್ರೆ ತಪ್ಪಾಗುದಿಲ್ಲ.

ಟಾಟಾ ಇಂಡಿಕಾ ಹಾಗೂ ಇಂಡಿಗೊ ಕಾರುಗಳನ್ನು ಇನ್ಮುಂದೆ ಖರೀದಿಗೆ ಸಿಗೋದಿಲ್ಲ..!!

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಇನೋವಾ ಕ್ರಿಸ್ಟಾ ಹಿಂದಿಕ್ಕಲು ಬರಲಿದೆ 11 ಸೀಟರ್ ಕಿಯಾ ಗ್ರ್ಯಾಂಡ್ ಕಾರ್ನಿವಾಲ್

ರಾಯಲ್ ಎನ್‌ಫೀಲ್ಡ್ ಬೈಕ್‌ಗಳನ್ನು ಖರೀದಿ ಮಾಡೋದು ಲಾಭಕ್ಕಿಂತ ನಷ್ಟವೇ ಹೆಚ್ಚಂತೆ? ಇದು ನಿಜವೇ?

ಹೊಸದಾಗಿ ಎಲೆಕ್ಟ್ರಿಕ್ ಕಾರು ಖರೀದಿಸುವ ಗ್ರಾಹಕರಿಗೆ ಇಲ್ಲಿದೆ ಸಿಹಿಸುದ್ದಿ...

ಅಪ್ರಾಪ್ತರ ಕೈಗೆ ಬೈಕ್ ಕೊಟ್ಟಿದ್ದಕ್ಕೆ ಜೈಲು ಪಾಲಾದ 26 ಪೋಷಕರು

ಹೆಲ್ಮೆಟ್ ಹಾಕದ ಬೈಕ್ ಸವಾರನ ಮೇಲೆ ಶೂ ಎಸೆದ ಟ್ರಾಫಿಕ್ ಪೊಲೀಸ್....

Most Read Articles

Kannada
Read more on tata motors auto news
English summary
Tata Motors stops production of Indica and Indigo.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X