ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಸೆಡಾನ್ ಕಾರು ಮಾದರಿಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಟೊಯೊಟಾ ಸಂಸ್ಥೆಯು ಇದೀಗ ವಿನೂತನ ಯಾರಿಸ್ ಕಾರನ್ನು ಪರಿಚಯಿಸಲು ಮುಂದಾಗಿದೆ.

By Praveen Sannamani

ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಸೆಡಾನ್ ಕಾರು ಮಾದರಿಗಳಿಗೆ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದ್ದು, ಟೊಯೊಟಾ ಸಂಸ್ಥೆಯು ಇದೀಗ ವಿನೂತನ ಯಾರಿಸ್ ಕಾರನ್ನು ಪರಿಚಯಿಸಲು ಮುಂದಾಗಿದೆ. ಈ ಮೂಲಕ ಜನಪ್ರಿಯ ಹೋಂಡಾ ಸಿಟಿ ಕಾರುಗಳಿಗೆ ತೀವ್ರ ಸ್ಪರ್ಧಿಯಾಗುವ ಸುಳಿವು ನೀಡಿದ್ದು, ಹೋಂಡಾ ಸಿಟಿ ಕಾರ್‌ಗಿಂತ ಯಾರಿಸ್ ಹೇಗೆ ಭಿನ್ನವಾಗಿದೆ ಎನ್ನುವ ಬಗ್ಗೆ ಇಲ್ಲಿ ಚರ್ಚಿಸಿದ್ದೇವೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಹೋಂಡಾ ಸಿಟಿ ಕಾರುಗಳು ಈಗಾಗಲೇ ಭಾರತೀಯ ಗ್ರಾಹಕರಿಂದ ಮೆಚ್ಚುಗೆ ಗಳಿಸಿದ್ದು, ನೂತನ ಸೆಡಾನ್ ವೈಶಿಷ್ಟ್ಯತೆಗಳೊಂದಿಗೆ ಕಾರು ಪ್ರಯಾಣವನ್ನು ಸುಖಕರವಾಗಿಸಿವೆ. ಇದೇ ನಿಟ್ಟಿನಲ್ಲಿ ಭಾರತೀಯ ಗ್ರಾಹಕರನ್ನು ಸೆಳೆಯಲು ಮುಂದಾಗಿರುವ ಟೊಯೊಟಾ ಕೂಡಾ ಯಾರಿಸ್ ಎನ್ನುವ ಸೆಡಾನ್ ಮಾದರಿಯನ್ನು ಸಿದ್ದಗೊಳಿಸಿದೆ.

Recommended Video

[Kannada] Maruti Swift 2018 - Full Specifications, Features, Price, Mileage, Colours - DriveSpark
ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಕಳೆದ ವಾರವಷ್ಟೇ ಮುಕ್ತಾಯಗೊಂಡ ದೆಹಲಿ ಆಟೋ ಎಕ್ಸ್‌ಪೋದಲ್ಲಿ ಯಾರಿಸ್ ಅನಾವರಣಗೊಳಿಸಲಾಗಿದ್ದು, ಟೊಯೋಟಾ ತನ್ನ ತತ್ವವಾದ ಕ್ಯೂಡಿಆರ್ (ಗುಣಮಟ್ಟ, ದೀರ್ಘಬಾಳಿಕೆ ಮತ್ತು ನಂಬಿಕಾರ್ಹತೆ) ಗಳನ್ನು ಆಧರಿಸಿ ನಿರ್ಮಿಸಲಾದ ಈ ಕಾರು ಐಷಾರಾಮಿತನಕ್ಕೆ ಹೇಳಿ ಮಾಡಿಸಿದಂತಿದೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಗುಣಮಟ್ಟ, ನಿಶ್ಯಬ್ದತೆ, ದಕ್ಷ ಕಾರ್ಯಕ್ಷಮತೆಗೆ ಹೆಚ್ಚು ಆದ್ಯತೆ ನೀಡಲಾಗಿದ್ದು, ಪವರ್ ಡ್ರೈವರ್ ಸೀಟ್, 7 ಎಸ್‌ಆರ್‌ಎಸ್ ಏರ್‌ಬ್ಯಾಗ್‌ಗಳು, ರೂಫ್ ಮೌಂಟೆಡ್ ಏರ್ ವೆಂಟ್‌ಗಳು, ಟಿಪಿಎಂಎಸ್, ಫ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು, ಎಲ್ಲಾ ಚಕ್ರಗಳಲ್ಲಿ ಡಿಸ್ಕ್ ಬ್ರೇಕ್‌ಗಳನ್ನು ಒಳಗೊಂಡಿದೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಎಂಜಿನ್ ಸಾಮರ್ಥ್ಯ

ಯಾರಿಸ್ ಕಾರು ಮಾದರಿಗಳು 1.5-ಲೀಟರ್ ಪೆಟ್ರೋಲ್ ಎಂಜಿನ್ ಪರಿಚಯಿಸಲಿರುವ ಟೊಯೊಟಾ, ಸದ್ಯ ಮಾರುಕಟ್ಟೆಯಲ್ಲಿರುವ ಅತ್ಯುತ್ತಮ ಸೆಡಾನ್ ಆವೃತ್ತಿಗಳಿಂತಲೂ ಕಡಿಮೆ ಬೆಲೆಗೆ ಈ ಹೊಸ ಕಾರು ಪರಿಚಯಿಸುವ ಸಾಧ್ಯತೆಗಳಿವೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಇನ್ನು ಕಳೆದ 20 ವರ್ಷಗಳ ಹಿಂದೆ ಬಿಡುಗಡೆಯಾಗಿರುವ ಹೋಂಡಾ ಸಿಟಿ ಇದುವರೆಗೆ ಹತ್ತಾರು ಬದವಾವಣೆಯೊಂದಿಗೆ ಭಾರತೀಯ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕಳೆದ ವರ್ಷವಷ್ಟೇ ಫೇಸ್ ಲಿಫ್ಟ್ ಹೋಂಡಾ ಸಿಟಿ ಕಾರನ್ನು ಬಿಡುಗಡೆ ಮಾಡಲಾಗಿತ್ತು.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದ್ದು, ಹೊಸ ವಿನ್ಯಾಸದೊಂದಿಗೆ ಸಿಟಿ ಕಾರು ಮಧುಮಗಳಂತೆ ಕಂಗೊಳಿಸುತ್ತಿದ್ದು, ಆರಂಭಿಕ ಬೆಲೆ 8.7 ಲಕ್ಷ ರೂಪಾಯಿ(ದೆಹಲಿ ಎಕ್ಸ್ ಶೋ ರೂಂ) ನಿಗದಿಪಡಿಸಲಾಗಿದೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

2014ರ ನಂತರ ಇದೇ ಮೊದಲ ಬಾರಿಗೆ ಆಧುನಿಕಗೊಳಿಸಿರುವ ಹೋಂಡಾ ಸಿಟಿಯ ಆವೃತಿಯ ಕಾರು ರಸ್ತೆಗಿಳಿದಿದ್ದು, ಇನ್ನು ಮೈಲೇಜ್ ವಿಚಾರಕ್ಕೆ ಬರುವುದಾದರೆ ಈ ಫೇಸ್ ಲಿಫ್ಟ್ ಕಾರು ಪ್ರತಿ ಲೀಟರ್ ಗೆ 17.4(ಪೆಟ್ರೋಲ್) ಕಿಲೋಮೀಟರ್ ಮತ್ತು 25.6(ಡೀಸೆಲ್) ಕಿಲೋಮೀಟರ್ ಮೈಲೇಜ್ ನೀಡಲಿದೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಹಾಗೆಯೇ ಯಾರಿಸ್ ಕೂಡಾ ಹೋಂಡಾ ಭಿನ್ನವಾಗಿದ್ದರು ತಾಂತ್ರಿಕವಾಗಿ ಸರಿಸಮನಾಗಲಿದ್ದು, ಕಾರಿನ ಬೆಲೆಗಳು ಸಹ ಆರಂಭಿಕ 8.5 ಲಕ್ಷದಿಂದ ಉನ್ನತ ಮಾದರಿಯು 13.75ಲಕ್ಷಕ್ಕೆ ನಿಗದಿಯಾಗುವ ಸಾಧ್ಯತೆಗಳಿವೆ.

ಹೋಂಡಾ ಸಿಟಿ v/s ಟೊಯೊಟಾ ಯಾರಿಸ್.... ಯಾವುದು ಬೆಸ್ಟ್?

ಒಟ್ಟಾರೆ ಕಾರಿನ ವಿನ್ಯಾಸಗಳ ವಿಭಾಗದಲ್ಲಿ 10 ಅಂಕಗಳಿಗೆ ಟೊಯೊಟಾ ಯಾರಿಸ್ 8 ಹಾಗೂ ಹೋಂಡಾ 7.5 ರೇಟಿಂಗ್ ಹೊಂದಿರಲಿದ್ದು, ಸುರಕ್ಷಾ ವಿಧಾನಗಳಲ್ಲಿ ಯಾರಿಸ್ 8 ಮತ್ತು ಹೋಂಡಾ ಸಿಟಿ 7.5 ಹಾಗೆಯೇ ಎಂಜಿನ್ ಸಾಮರ್ಥ್ಯದಲ್ಲಿ ಯಾರಿಸ್ 8 , ಹೋಂಡಾ ಸಿಟಿ 8 ರೇಟಿಂಗ್ ಹೊಂದಿರಲಿವೆ.

Most Read Articles

Kannada
Read more on comparison honda toyota
English summary
Toyota Yaris Vs. Honda City Comparison: Design, Specifications, Features & Mileage.
Story first published: Thursday, March 1, 2018, 11:09 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X