ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

By Praveen Sannamani

ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿ ಬದಲಾಗುತ್ತಿದ್ದು, ಎಸ್‌ಯುವಿ ಕಾರುಗಳ ಮಾರಾಟ ವಿಭಾಗದಲ್ಲಿ ಭಾರೀ ಬೇಡಿಕೆ ಸೃಷ್ಠಿಯಾಗುತ್ತಿದೆ. ಹೀಗಾಗಿ ಪ್ರಮುಖ ಕಾರು ಉತ್ಪಾದನಾ ಸಂಸ್ಥೆಗಳು ಹೊಸ ಮಾದರಿಯ ಎಸ್‌ಯುವಿ ಉತ್ಪನ್ನಗಳನ್ನ ಪರಿಚಯಿಸುತ್ತಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಗಾಗಿ ಸಿದ್ದವಾಗಿರುವ ಹೊಸ ಕಾರುಗಳ ಮಾಹಿತಿ ಇಲ್ಲಿದೆ ನೋಡಿ..

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ದಟ್ಸನ್ ಕ್ರಾಸ್

ಸದ್ಯ ವಾಣಿಜ್ಯ ಬಳಕೆಯ ಉದ್ದೇಶಕ್ಕಾಗಿ 7 ಸೀಟರ್ ಕಾರುಗಳಿಗೆ ಭಾರತದಲ್ಲಿ ಉತ್ತಮ ಬೇಡಿಕೆಯಿದ್ದು, ಟೊಯೊಟಾ ಇನೋವಾ ಹೊರತು ಪಡಿಸಿ ಉಳಿದ ಕಾರು ಮಾದರಿಗಳು ಅಷ್ಟೇನು ಯಶಸ್ವಿಯಾಗುತ್ತಿಲ್ಲ. ಹೀಗಾಗಿ ಗ್ರಾಹಕರ ಬೇಡಿಕೆಗೆ ತಕ್ಕಂತೆ ದಟ್ಸನ್ ಕ್ರಾಸ್ ಹೊರತರಲಾಗುತ್ತಿದ್ದು, ಭಾರೀ ನೀರಿಕ್ಷೆ ಹುಟ್ಟುಹಾಕಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ದಟ್ಸನ್ ಬಿಡುಗಡೆ ಮಾಡಿರುವ ಮಾಹಿತಿಗಳ ಪ್ರಕಾರ ಬರಲಿರುವ ದಟ್ಸನ್ ಕ್ರಾಸ್ ಕಾರುಗಳು ಸಿಎಂಎಫ್-ಎ ಚಾರ್ಸಿ ಆಧಾರದ ಮೇಲೆ ನಿರ್ಮಾಣವಾಗಿದ್ದು, ದೊಡ್ಡದಾದ ಒಳ ವಿನ್ಯಾಸವನ್ನು ಪಡೆದುಕೊಂಡಿದೆ. ಜೊತೆಗೆ 1.2-ಲೀಟರ್ ತ್ರಿ ಸಿಲಿಂಡರ್ ಪೆಟ್ರೋಲ್ ಎಂಜಿನ್ ಹೊಂದಲಿವೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಈ ಬಗ್ಗೆ ಮಾತನಾಡಿರುವ ನಿಸ್ಸಾನ್ ಇಂಡಿಯಾ ಮಾರುಕಟ್ಟೆ ವಿಭಾಗದ ಅಧ್ಯಕ್ಷ ಥಾಮಸ್ ಕೂಹಲ್ ಅವರು, ದಟ್ಸನ್ ಕಾರುಗಳನ್ನ ಭಾರತದಲ್ಲಿ ಜನಪ್ರಿಯ ಬ್ರಾಂಡ್ ಕಾರುಗಳಿಂತಲೂ ಅತಿ ಕಡಿಮೆ ಬೆಲೆಯಲ್ಲಿ ಖರೀದಿ ಲಭ್ಯವಿರಲಿದ್ದು, 10 ಲಕ್ಷದೊಳಗೆ ದಟ್ಸನ್ ಕ್ರಾಸ್ ಲಭ್ಯವಾಗುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದಿದ್ದಾರೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಹ್ಯುಂಡೈ ಕಾರ್ಲಿನೋ

ಕ್ರೇಟಾ ಮತ್ತು ಕೋನಾ ಎಸ್‍‍ಯುವಿ ಕಾರುಗಳ ಭರ್ಜರಿ ಯಶಸ್ಸಿನ ನಂತರ ಹ್ಯುಂಡೈ ಸಂಸ್ಥೆಯು ಇದೀಗ ಕಂಪ್ಯಾಕ್ಟ್ ಎಸ್‍‍ಯುವಿ ಕಾರನ್ನು ಪರಿಚಯಿಸಲು ಮುಂದಾಗಿದ್ದು, ಹೊಸ ಕಾರಿನ ಬಿಡುಗಡೆ ಕುರಿತಂತೆ ಹ್ಯುಂಡೈ ಲ್ಯಾಟಿನ್ ತಂಡದ ಅರ್ಮಾಂಡೊ ಕಾರ್ಡೊಸೊ ಅವರು ಮಹತ್ವದ ಮಾಹಿತಿಯೊಂದನ್ನ ಬಹಿರಂಗ ಪಡಿಸಿದ್ದಾರೆ. ಸದ್ಯ ಉತ್ಪಾದನೆ ಹಂತದಲ್ಲಿರುವ ಕಾರ್ಲಿನೋ ಕಾರುಗಳು ಭಾರತೀಯ ಮಾರುಕಟ್ಟೆಗಾಗಿ ಉತ್ಪಾದನೆಯಾಗುತ್ತಿದೆ ಎಂಬುವುದಾಗಿ ಹೇಳಿಕೊಂಡಿದ್ದಾರೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಹೀಗಾಗಿ ಬಿಡುಗಡೆಗಾಗಿ ಸಜ್ಜುಗೊಳ್ಳುತ್ತಿರುವ ಹ್ಯುಂಡೈ ಹೊಸ ಕಂಪ್ಯಾಕ್ಟ್ ಎಸ್‍‍ಯುವಿ ಅರ್ಬನ್ ಕಮ್ಯೂಟರ್ ವಿಭಾಗಕ್ಕಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಿರುವ ಬಗ್ಗೆ ಮಾಹಿತಿಯಿದ್ದು, ಕ್ರಾಸ್‍ಓವರ್ ವಿನ್ಯಾಸದೊಂದಿಗೆ ಕ್ರೇಟಾ ಹಾಗೂ ಕೊನಾ ಕಾರುಗಳ ಮಧ್ಯದ ಕಾರು ಮಾದರಿಯಾಗಿ ಮಾರಾಟಗೊಳ್ಳಲಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಬಿಡುಗಡೆಯ ಅವಧಿ ಮತ್ತು ಕಾರಿನ ಬೆಲೆಗಳು(ಅಂದಾಜು)

2019ರ ಆರಂಭದಲ್ಲಿ ಯುಎಸ್ಎ ಮಾರುಕಟ್ಟೆಯಲ್ಲಿ ಬಿಡುಗಡೆಯಾಗುವ ಹೊಸ ಕಾರ್ಲಿನೋ ಕಾರುಗಳು 2019ರ ಎರಡನೇ ತ್ರೈಮಾಸಿಕ ಅವಧಿಯಲ್ಲಿ ಭಾರತದಲ್ಲಿ ಬಿಡುಗಡೆಯಾಗುವ ನೀರಿಕ್ಷೆಗಳಿದ್ದು, ಕಾರಿನ ಬೆಲೆಯು ರೂ.7 ಲಕ್ಷದಿಂದ ರೂ.10 ಲಕ್ಷ ತನಕ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಟಾಟಾ ಹ್ಯಾರಿಯರ್

ದೇಶಿಯ ಮಾರುಕಟ್ಟೆಯಲ್ಲಿ ಕಾರುಗಳ ಉತ್ಪಾದನೆಯಲ್ಲಿ ಸ್ವಾಯತ್ತತೆ ಕಾಯ್ದುಕೊಳ್ಳುತ್ತಿರುವ ಟಾಟಾ ಮೋಟಾರ್ಸ್ ಸಂಸ್ಥೆಯು ಮುಂಬರುವ ದಿನಗಳಲ್ಲಿ ಗೇಮ್ ಚೇಂಜರ್ ಕಾರುಗಳನ್ನು ಬಿಡುಗಡೆಗೊಳಿಸಲಿದ್ದು, ಹೊಸ ಬಗೆಯ ವಿನ್ಯಾಸ ಮತ್ತು ಅದ್ಭುತ ಲುಕ್ ಹೊಂದಿರುವ ಹ್ಯಾರಿಯರ್ ಕಾರುಗಳು ಟಾಟಾ ಸಂಸ್ಥೆಯನ್ನು ಮತ್ತಷ್ಟು ಜನಪ್ರಿಯಗೊಳಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಇಂಪ್ಯಾಕ್ಟ್ ಡಿಸೈನ್ 2.0 ತಂತ್ರಜ್ಞಾನ ಆಧಾರದ ಮೇಲೆ ಹ್ಯಾರಿಯರ್ ನಿರ್ಮಾಣ ಮಾಡಲಾಗಿದ್ದು, ಹೊಸ ಕಾರುಗಳಲ್ಲಿ "ಅಪ್ಟಿಮಲ್ ಮಾಡ್ಯೂಲರ್ ಎಫಿಷಿಯೆಂಟ್ ಗ್ಲೋಬಲ್ ಅಡ್ವಾನ್ಸ್ (OMEGA)" ಆರ್ಕಿಟೆಕ್ಚರ್ ಬಳಕೆ ಮಾಡಿರುವುದೇ ಹೊಸ ವಿನ್ಯಾಸಗಳು ಅದ್ಭುತವಾಗಿವೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

2.0-ಲೀಟರ್ ಪೆಟ್ರೋಲ್ ಎಂಜಿನ್ ಅಥವಾ 2.0-ಲೀಟರ್ ಮಲ್ಟಿ ಜೆಟ್ ಡೀಸೆಲ್ ಎಂಜಿನ್ ಮಾದರಿಯಲ್ಲಿ ಹೊಸ ಕಾರುಗಳು ಅಭಿವೃದ್ಧಿಯಾಗಿದ್ದು, ಕಾರಿನ ಬೆಲೆಯು ಎಕ್ಸ್‌ಶೋರಂ ಪ್ರಕಾರ ರೂ. 12 ಲಕ್ಷದಿಂದ ರೂ. 15 ಲಕ್ಷ ಇರಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಫೋರ್ಡ್ ಫೇಸ್‌ಲಿಫ್ಟ್ ಎಂಡೀವರ್

ಟೊಯೊಟಾ ಫಾರ್ಚೂನರ್ ಹಿಂದಿಕ್ಕುವ ಏಕೈಕ ಕಾರು ಮಾದರಿ ಅಂದ್ರೆ ಅದು ಫೋರ್ಡ್ ಎಂಡೀವರ್ ಮಾತ್ರ. ಯಾಕೇಂದ್ರೆ ಫಾರ್ಚೂನರ್ ಮಾದರಿಯಲ್ಲೇ ಸಿದ್ದವಾಗಿರುವ ಎಂಡೀವರ್ ಕಾರುಗಳು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಇದೀಗ ಫೇಸ್‌ಲಿಫ್ಟ್ ಸೌಲಭ್ಯದೊಂದಿಗೆ ಮತ್ತಷ್ಟು ಜನಪ್ರಿಯತೆ ಸಾಧಿಸುವ ತವಕದಲ್ಲಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ವರದಿಗಳ ಪ್ರಕಾರ ಫೇಸ್‌ಲಿಫ್ಟ್ ಎಂಡೀವರ್ ಬಿಡುಗಡೆ ಮಾಡುವ ಫೋರ್ಡ್ ಸಂಸ್ಥೆಯು ಈ ಬಾರಿ ಫಾರ್ಚೂನರ್ ಮಾರಾಟಕ್ಕೆ ಪ್ರಬಲ ಪೈಪೋಟಿ ನೀಡುವ ವಿಶ್ವಾಸ ವ್ಯಕ್ತಪಡಿಸಿಯೆಂತೆ. ಹೀಗಾಗಿ ಫೇಸ್‌ಲಿಫ್ಟ್ ಎಂಡೀವರ್ ಕಾರುಗಳು ಸದ್ಯ ಮಾರುಕಟ್ಟೆಯಲ್ಲಿ ಕಾರು ಆವೃತ್ತಿಗಿಂತ ಹೆಚ್ಚಿನ ಗುಣಮಟ್ಟದ ಎಂಜಿನ್ ಮತ್ತು ತಾಂತ್ರಿಕ ಸೌಲಭ್ಯಗಳನ್ನು ಹೊತ್ತುಬರುವುದು ಖಚಿತವಾಗಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಹೋಂಡಾ ಸಿಆರ್-ವಿ ಡೀಸೆಲ್ ವರ್ಷನ್

ಜಪಾನ್ ಮೂಲದ ಜನಪ್ರಿಯ ಮೋಟಾರ್ಸ್ ಸಂಸ್ಥೆಯಾದ ಹೋಂಡಾ ತನ್ನ ಬಹುನೀರಿಕ್ಷಿತ ಸಿಆರ್-ವಿ ಡೀಸೆಲ್ ಆವೃತ್ತಿಯನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದ್ದು, ಇದರೊಂದಿಗೆ 7-ಸೀಟರ್ ಮಾದರಿಯಲ್ಲಿ ಮಾರುಕಟ್ಟೆಗೆ ಪ್ರವೇಶ ಪಡೆಯುತ್ತಿರುವುದು ಎಸ್‌ಯುವಿ ಪ್ರಿಯರಲ್ಲಿ ಭಾರೀ ಕುತೂಹಲಕ್ಕೆ ಕಾರಣವಾಗಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ವರದಿಗಳ ಪ್ರಕಾರ, ಹೋಂಡಾ ಸಂಸ್ಥೆಯು ಡೀಸೆಲ್ ವರ್ಷನ್‌ಗಳಲ್ಲಿ 120-ಬಿಎಚ್‌ಪಿ ಪ್ರೇರಿತ ಸಿಂಗಲ್ ಟರ್ಬೋ ಎಂಜಿನ್ ಮತ್ತು 160-ಬಿಎಚ್‌ಪಿ ಪ್ರೇರಿತ ಟ್ವಿನ್ ಟರ್ಬೋ ಎಂಜಿನ್ ಪರಿಚಯಿಸುವ ಸಾಧ್ಯತೆಗಳಿದ್ದು, ಗ್ರಾಹಕರು ತಮ್ಮ ಆದ್ಯತೆ ಮೇರೆಗೆ ವಿವಿಧ ಮಾದರಿಗಳನ್ನು ಖರೀದಿಸಬಹುದಾದ ಆಯ್ಕೆ ನೀಡುತ್ತಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಕಾರಿನ ಬೆಲೆ ಮತ್ತು ಬಿಡುಗಡೆ

ಅಕ್ಟೋಬರ್ ಮೊದಲ ವಾರದಲ್ಲಿ ಬಿಡುಗಡೆಯಾಗಲಿರುವ ಸಿಆರ್-ವಿ ಡೀಸೆಲ್ ವರ್ಷನ್‌ಗಳು ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ.26 ಲಕ್ಷದಿಂದ ರೂ.30 ಲಕ್ಷ ಬೆಲೆ ಹೊಂದಬಹುದೆಂದು ಅಂದಾಜಿಸಲಾಗಿದೆ.

ಬಿಡುಗಡೆಗೆ ಸಜ್ಜಾಗಿರುವ 2018ರ ಜನಪ್ರಿಯ ಎಸ್‌ಯುವಿ ಕಾರುಗಳಿವು..

ಹ್ಯುಂಡೈ ಟಕ್ಸನ್ ಫೇಸ್‌ಲಿಫ್ಟ್

ಹ್ಯುಂಡೈ ಸಂಸ್ಥೆಯ ಬಹುನೀರಿಕ್ಷಿತ ಕಾರುಗಳಲ್ಲಿ ಟಕ್ಸನ್ ಫೇಸ್‌ಲಿಫ್ಟ್ ಎಸ್‌ಯುವಿ ಕಾರುಗಳು ಸಹ ಒಂದಾಗಿದ್ದು, ಹಲವು ಅಂತಾರಾಷ್ಟ್ರಿಯ ಗುಣಮಟ್ಟದ ಸೌಲಭ್ಯಗಳನ್ನು ಹೊತ್ತುಬರುತ್ತಿದೆ. ಮಿಡ್ ಹೈಬ್ರಿಡ್ ಎಂಜಿನ್ ಹೊಂದಿರುವ ಟಕ್ಸನ್ ಫೇಸ್‌ಲಿಫ್ಟ್ ಕಾರುಗಳು, 2.0-ಡೀಸೆಲ್ ಎಂಜಿನ್‌ನೊಂದಿಗೆ ದೆಹಲಿ ಎಕ್ಸ್‌ಶೋರಂ ಪ್ರಕಾರ ರೂ. 21 ಲಕ್ಷದಿಂದ ಆರಂಭಿಕ ಬೆಲೆ ಹೊಂದುವ ಸಾಧ್ಯತೆಗಳಿವೆ.

Most Read Articles

Kannada
English summary
Upcoming SUVs In India In 2018.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X