ಫಿಯೆಟ್ ಪುಂಟೊ ಸ್ಪೋರ್ಟ್ ಆವೃತ್ತಿಗೆ ಕ್ಷಣಗಣನೆ

Posted By:

ಆಕರ್ಷಕ ವಿನ್ಯಾಸ, ಕಾರ್ಯಕ್ಷಮತೆ ಮತ್ತು ಡೈನಾಮಿಕ್ ಡ್ರೈವಿಂಗ್ ಅನುಭವದಲ್ಲಿ ಫಿಯೆಟ್ ಪುಂಟೊ ಜನಪ್ರಿಯವಾಗಿದೆ. ಇದೀಗ ಫಿಯೆಟ್ ಕಂಪನಿಯು ಪುಂಟೊ ಸ್ಪೋರ್ಟ್ಸ್ ಆವೃತ್ತಿಯನ್ನು ಇಂದು(ಮೇ 18) ಪರಿಚಯಿಸಲು ಯೋಜಿಸಿದೆ.

To Follow DriveSpark On Facebook, Click The Like Button

ಫಿಯೆಟ್ ಪುಂಟೊ ಸ್ಪೋರ್ಟ್ಸ್ ಲಿಮಿಟೆಡ್ ಆವೃತ್ತಿಯನ್ನು ಮೇ 18ರಂದು ಪರಿಚಯಿಸುವುದಾಗಿ ಫಿಯೆಟ್ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ. ಈ ಕಾರು 90 ಅಶ್ವಶಕ್ತಿ ಹೊಂದಿರಲಿದೆ. ನೂತನ ಪುಂಟೊ ಕಾರು ಬಾಡಿ ಡಿಕಾಲ್ಸ್, ಕ್ರೊಮ್ ಎಗ್ಸಾಟ್ ಮತ್ತು ಡ್ಯಾಷ್‌ಬೋರ್ಡ್‌ನಲ್ಲಿ ಕ್ರೋಮ್ ಲೈನಿಂಗ್ ಇತ್ಯಾದಿ ನೂತನ ಹೆಚ್ಚುವರಿ ಫೀಚರುಗಳಿರಲಿವೆ.

ನೂತನ ಫಿಯೆಟ್ ಪುಂಟೊ ಸ್ಪೋರ್ಟ್ಸ್ ಕಾರು ಕಪ್ಪು, ಬಿಳಿ ಮತ್ತು ಕೆಂಪು ಬಣ್ಣದ ಬಾಡಿ ಆಯ್ಕೆಯಲ್ಲಿ ದೊರಕಲಿದೆ. ಈ ಕಾರಿನ ದರದ ಕುರಿತು ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ಹಳೆಯ ಪುಂಟೊ ಆವೃತ್ತಿಗಿಂತ ಸುಮಾರು 30-60 ಸಾವಿರ ರು. ದುಬಾರಿಯಿರುವ ನಿರೀಕ್ಷೆಯಿದೆ.

ಇತ್ತೀಚೆಗೆ ಫಿಯೆಟ್ ಇಂಡಿಯಾ ಕಂಪನಿಯು ಟಾಟಾ ಮೋಟರ್ಸ್ ಜೊತೆಗಿದ್ದ ವಿತರಣೆ ಒಪ್ಪಂದವನ್ನು ಕೊನೆಗೊಳಿಸಿದೆ. ಇಲ್ಲಿವರೆಗೆ ಟಾಟಾ ಶೋರೂಂಗಳಲ್ಲಿ ಫಿಯೆಟ್ ಕಾರುಗಳನ್ನು ಮಾರಾಟ ಮಾಡಲಾಗುತ್ತಿತ್ತು. ಇನ್ಮುಂದೆ ಫಿಯೆಟ್ ಸ್ವಂತ ಡೀಲರ್ಷಿಪ್ ನೆಟ್ವರ್ಕ್‌ಗಳಲ್ಲಿ ಕಾರುಗಳನ್ನು ಮಾರಾಟ ಮಾಡಲಿದೆ.

English summary
Fiat has announced the launch of a limited edition Punto 90HP Sports on May 18 (today). The Sports variant will get additional features like body decals, chrome exhaust tip and chrome lining on dashboard.
Story first published: Friday, May 18, 2012, 12:24 [IST]
Please Wait while comments are loading...

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark