ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ವೊಲ್ವೊ ಕಾರ್ಸ್ ಇಂಡಿಯಾ ತಮ್ಮ ಫ್ಲ್ಯಾಗ್‍‍ಶಿಪ್ ಸೆಡಾನ್ ಎಸ್90 ಕಾರಿನ ಹೊಸ ವೇರಿಯಂಟ್ ಅನ್ನು ಬಿಡುಗಡೆಗೊಳಿಸಿದ್ದು, ವೊಲ್ವೊ ಎಸ್90 ಮೊಮೆಂಟಮ್ ಕಾರಿನ ಬೆಲೆಯನ್ನು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ. 51.90 ಲಕ್ಷಕ್ಕೆ ನಿಗದಿ ಪಡಿಸಲಾಗಿದೆ. ಈ ಕಾರು ಪ್ರಸ್ಥುತ ವೋವ್ಲೊ ಎಸ್90 ಕಾರಿನ ಡಿ4 ಇಂಸ್ಕ್ರಿಪ್ಷನ್ ಮಾಡಲ್‍ನ ಅಡಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಹೊಸ ವೊಲ್ವೊ ಎಸ್90 ಮೊಮೆಂಟಮ್ ವೇರಿಯಂಟ್ ಕಾರು ಟಾಪ್ ಎಂಡ್ ವೇರಿಯಂಟ್‍‍ಗಿಂತಲೂ 7 ಲಕ್ಷ ಕಡಿಮೆ ಇದ್ದು, ಟಾಪ್ ಎಂಡ್ ಇಂಸ್ಕ್ರಿಪ್ಷನ್ ವೇರಿಯಂಟ್ ಕಾರು ದೆಹಲಿಯ ಎಕ್ಸ್ ಶೋರಂ ಪ್ರಕಾರ ರೂ.58.54 ಲಕ್ಷಕ್ಕೆ ಮಾರಾಟಗೊಳ್ಳುತ್ತಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಹೊಸದಾಗಿ ಬಿಡುಗಡೆಗೊಂಡ ಎಸ್90 ಮೊಮೆಂಟಮ್ ಕಾರಿನ ಮುಂಭಾಗದಲ್ಲಿ ಫ್ರಂಟ್ ಗ್ರಿಲ್ ಅನ್ನು ಪಿಯಾನೊ ಬ್ಲಾಕ್ ಶೇಡ್‍‍ನಿಂದ ಸಜ್ಜುಗೊಳಿಸಲಾಗಿದ್ದು, ವೃತ್ತಾಕಾರದ ಎಕ್ಸಾಸ್ಟ್ ಟಿಪ್ಸ್ ಮತ್ತು 18 ಇಂಚಿನ ಅಲಾಯ್ ವ್ಹೀಲ್‍‍ಗಳನ್ನು ಪಡೆದುಕೊಂಡಿದೆ. ಆದರೆ ಮೊಂಟಮ್ ವೇರಿಯಂಟ್ ಕಾರು ಇಂಸ್ಕ್ರಿಪ್ಷನ್ ವೇರಿಯಂಟ್ ಪಡೆದುಕೊಂಡ ಡೈಮಂಡ್ ಕಟ್ ಫಿನಿಶ್ ಅನ್ನು ಪಡೆದುಕೊಂಡಿರುವುದಿಲ್ಲ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಎಸ್90 ಕಾರಿನ ಹೊಸ ವೇರಿಯಂಟ್ ಫ್ರಂಟ್ ಸೀಟ್ ವೆಂಟಿಲೇಷನ್ ಮತ್ತು ಮಸಾಗ್ ಫಂಕ್ಷನ್‍‍ಗಳನ್ನು ಕೂಡಾ ಕಳೆದುಕೊಳ್ಳಲಿದ್ದು, ಇದರ ಜೊತೆಗೆ ಫೋಲ್ಡಬಲ್ ರಿಯರ್ ಸೀಟ್ಸ್, ರಿಯರ್ ಸನ್-ಶೇಡ್ಸ್, ಬೋವರ್ಸ್ ಆಂಡ್ ವಿಕ್ಕಿಂಗ್ಸ್ ಸೌಂಡ್ ಸಿಸ್ಟಮ್, ಹ್ಯಾಂಡ್ಸ್-ಫ್ರೀ ಟೈಲ್‍‍ಗೇಟ್ ಒಪೆನಿಂಗ್, 360 ಡಿಗ್ರಿ ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ಹೆಡ್ಸ್ ಅಪ್ ಡಿಸ್ಪ್ಲೇ ಎಂಬ ವೈಶಿಷ್ಟ್ಯತೆಗಳು ಕಾಣೆಯಾಗಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಅದಾಗ್ಯು ವೊಲ್ವೊ ಎಸ್90 ಮೊಮೆಂಟಮ್ ವೇರಿಯಂಟ್ ಕಾರಿನಲ್ಲಿ 9 ಇಂಚಿನ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ. ಡಿಜಿಟಲ್ ಅನಾಲಾಗ್, ಆಟೋ ಪಾರ್ಕಿಂಗ್ ಸಿಸ್ಟಂ, ಫ್ರಂಟ್ ಆಂಡ್ ರಿಯರ್ ಪಾರ್ಕಿಂಗ್ ಸೆನ್ಸಾರ್ಸ್ ಮತ್ತು ರಿಯರ್ ಕ್ಯಾಮೆರಾವನ್ನು ಸ್ಟ್ಯಾಂಡರ್ಡ್ ಆಗಿ ಒದಗಿಸಲಾಗಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ವೊಲ್ವೊ ಎಸ್90 ಮೊಮೆಂಟಮ್ ವೇರಿಯಂಟ್ ಕಾರಿನಲ್ಲಿ -ಪ್ರಯಾಣಿಕರ ಸುರಕ್ಷಣೆಗಾಗಿ 6 ಏರ್‍‍ಬ್ಯಾಗ್‍‍ಗಳು, ಎಬಿಎಸ್‍‍ನೊಂದಿಗೆ ಇಬಿಡಿ, ಬ್ರೇಕ್ ಅಸಿಸ್ಟ್, ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್ಸ್ ಮತ್ತು ಪೈಲೊಟ್ ಅಸ್ಸಿಸ್ಟ್ ನೊಂದಿಗೆ ಅಡಾಪ್ಟಿವ್ ಕ್ರೂಸ್ ಕಂಟ್ರೋಲ್ ಎಂಬ ವೈಶಿಷ್ಟ್ಯತೆಗಳನ್ನು ಪಡೆದುಕೊಂಡಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಎಂಜಿನ್ ಸಾಮರ್ಥ್ಯ

ವೋಲ್ವೊ ಎಸ್90 ಮೊಮೆಂಟಮ್ ವೇರಿಯಂಟ್ 2.0 ಲೀಟರ್ ಡಿ4 ಡೀಸೆಲ್ ಎಂಜಿನ್ ಸಹಾಯದಿಂದ 190ಬಿಹೆಚ್‍‍ಪಿ 400ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿದ್ದು, ಎಂಜಿನ್ ಅನ್ನು 8 ಸ್ಪೀಡ್ ಗೇರ್‍‍ಬಾಕ್ಸ್ ನೊಂದಿಗೆ ಜೋಡಿಸಲಾಗಿದೆ.

ಬಿಡುಗಡೆಗೊಂಡ ವೊಲ್ವೊ ಎಸ್90 ಕಾರಿನ ಮೊಮೆಂಟಮ್ ವೇರಿಯಂಟ್

ಡ್ರೈವ್‍‍ಸ್ಪಾರ್ಕ್ ಅಭಿಪ್ರಾಯ

ವೊಲ್ವೊ ಸಂಸ್ಥೆಯು ತಮ್ಮ ಎಸ್90 ಸೆಡಾನ್ ಕಾರಿನ ಲೋವರ್ ಸ್ಪೆಕ್ ವೇರಿಯಂಟ್ ಅನ್ನು ದೇಶಿಯ ಮಾರುಕಟ್ಟೆಯಲ್ಲಿ ಬಿಡಗಡೆಗೊಳಿಸಿದ್ದು, ಎಸ್90 ಕಾರಿನ ಟಾಪ್ ವೇರಿಯಂಟ್‍‍ಗಿಂತಾ ಬೆಲೆಯಲ್ಲಿ 7 ಲಕ್ಷ ಕಡಿಮೆ ಇದೆ. ಈ ಕಾರು ಪ್ರಸ್ಥುತ ಮಾರುಕಟ್ಟೆಯಲ್ಲಿರುವ ಮರ್ಸಿಡೀಸ್ ಬೆಂಝ್ ಇ-ಕ್ಲಾಸ್, ಬಿಎಂಡಬ್ಲ್ಯೂ 5 ಸಿರೀಸ್, ಆಡಿ ಅ6 ಮತ್ತು ಜಾಗ್ವಾರ್ ಎಕ್ಸ್ಎಫ್ ಕಾರುಗಳಿಗೆ ಪೈಪೋಟಿ ನೀಡಲಿದೆ.

Most Read Articles

Kannada
English summary
Volvo S90 Momentum Variant Launched In India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X