ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

Written By: Rahul TS

ದಿನಕಳೆಯುತ್ತಿದ್ದಂತೆ ವಾಹನಗಳಿಂದ ಆಗುತ್ತಿರುವ ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ವಿಜ್ಞಾನಿಗಳು ಹರಸಾಹಸ ಪಡುತ್ತಿದ್ದು, ಜೊತೆಗೆ ವಾಹನ ತಯಾರಕ ಸಂಸ್ಥೆಗಳು ಕೂಡಾ ಇದೇ ನಿಟ್ಟಿನಲ್ಲಿ ಹಲವಾರು ಸಂಶೋಧನೆಗಳನ್ನು ನಡೆಸುತ್ತಿವೆ. ಈ ಮಧ್ಯೆ ಸ್ವಿಡನ್‍‍ನ ಸ್ಟೋಕ್‍ ಹೋಲ್ಮ್ ಪ್ರದೇಶದದ ಹತ್ತಿರ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ಮಾರ್ಗವನ್ನು ಅಭಿವೃದ್ಧಿಪಡಿಸಲಾಗಿದೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಹೌದು, ಸ್ವಿಡನ್‌ನಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ವಿಶೇಷ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, 2030 ರ ವೇಳೆಗೆ ಪೆಟ್ರೋಲ್ ಹಾಗೂ ಡೀಸೆಲ್‍ ಎಂಜಿನ್ ಪ್ರೇರಿತ ವಾಹನಗಳನ್ನು ತಗ್ಗಿಸಲು ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಜೊತೆಗೆ ರಸ್ಥೆಯಲ್ಲಿಯೇ ವಾಹನವನ್ನು ಚಾರ್ಜಿಂಗ್ ಮಾಡಿಕೊಳ್ಳಬಹುದಾದ ಪ್ರಯೋಗವನ್ನು ಮಾಡಿದೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಸ್ಟಾಕ್‍ಹೋಲ್ಮ್ ಏರ್‍‌ಲ್ಯಾಂಡ್‌ನಿಂದ ಲಾಜಿಸ್ಟಿಕ್ ಸೆಂಟರ್‍‍ಗೆ ಹೋಗುವ ಪೋಸ್ಟ್ ನಾರ್ಡ್ ಎಂಬುವ ಪ್ರದೇಶದ ಸಮೀಪದಲ್ಲಿ ಈ ಎಲೆಕ್ಟ್ರಿಕ್ ಚಾರ್ಜಿಂಗ್ ಮಾರ್ಗವನ್ನು ನಿರ್ಮಾಣ ಮಾಡಲಾಗಿದ್ದು, ಕೇವಲ ಎರಡು ಕಿಲೋ ಮೀಟರ್ ಉದ್ದವಿದೆ. ಇಲ್ಲಿ 50 ವಿಭಾಗಗಳನ್ನಾಗಿ ವಿಭಜಿಸಲಾಗಿದ್ದು, ಪ್ರಯಾಣಿಕರು ತಮ್ಮ ವಾಹನವನ್ನು ಈ ರಸ್ತೆಯ ಮೇಲೆ ಚಲಾಯಿಸಿದರೆ ಸಾಕಂತೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ವಾಹನವು ನಿಂತಲ್ಲೇ ಚಾರ್ಜಿಗ್ ಪ್ರಕ್ರಿಯೆ ಕೂಡಾ ನಡೆಯಲಿದ್ದು, ವಾಹನವು ಎಷ್ಟು ಚಾರ್ಜಿಂಗ್‍ ಪಡೆದುಕೊಂಡಿದೆಯೋ ಅದರ ಆಧಾರ ಮೇಲೆ ವಾಹನ ಮಾಲೀಕನ ಮನೆಯ ವಿದ್ಯುತ್ ಬಿಲ್‍‍ನಲ್ಲಿ ಸೇರಿಸಲಾಗುವುದಂತೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಡೈನಾಮಿಕ್ ಚಾರ್ಜಿಂಗ್ ಪ್ರಕ್ರಿಯೆಯು ಸಾಮಾನ್ಯ ರಸ್ತೆಬದಿಯ ಚಾರ್ಜಿಂಗ್ ಪಾಯಿಂಟ್‍‍ಗಿಂತ ಹೆಚ್ಚು ಅನುಕೂಲಕರವಾಗಿದ್ದು, ವ್ಯಾಪಕವಾಗಿ ಜಾರಿಗೊಳಿಸಿದರೆ ಸಣ್ಣ ಬ್ಯಾಟರಿ-ಪ್ಯಾಕ್‍‍ಗಳ ಬಳಕೆಗೆ ಇದು ಅನುಮತಿಸುತ್ತದೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಈ ಯೋಜನೆಯನ್ನು ಸಾಮಾನ್ಯ ರಸ್ತೆಗಳಲ್ಲಿ ಅಳವಡಿಸಲಾಗಿದ್ದು, ಭವಿಷ್ಯದಲ್ಲಿ ಇದನ್ನು ಇನ್ನೂ ವಿಸ್ತರಿಸುವ ಯೋಜನೆಯಲ್ಲಿದೆ. ಸ್ವಿಡಿಷ್ ಸರ್ಕಾರವು ವಾಯು ಮಾಲಿನ್ಯ ತಗ್ಗಿಸಲು ಬೃಹತ್ ಯೋಜನೆಯನ್ನೇ ಯೋಜಿಸಿದ್ದು, ಅಂಕಿಅಂಶಗಳ ಪ್ರಕಾರ ಶೇಕಡಾ 70ರಷ್ಟು ಉತ್ಪತ್ತಿಯಾಗುತ್ತಿರುವ ವಾಯು ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಗ್ಗಿಸುವ ಯೋಜನೆಯಲ್ಲಿದೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಇನ್ನು ಎಲೆಕ್ಟ್ರಿಕ್ ವಾಹನಗಳಿಗೆ ವಿದ್ಯುತ್ ರವಾನಿಸಲು ಎರಡು ರೈಲು ಟ್ರ್ಯಾಕ್‍‍ಗಳನ್ನು ಬಳಸಲಾಗಿದ್ದು, ಚಲಿಸಬಲ್ಲ ಆರ್ಮ್ ಅನ್ನು ವಾಹನದ ಕೆಳಭಾಗದಲ್ಲಿ ಜೋಡಿಸಲಾಗಿರುತ್ತದೆ. ಈ ವ್ಯವಸ್ಥೆಯು ಸ್ಲಾಟ್ ಕಾರ್ ರೇಸಿಂಗ್ ಟಾಯ್‍‍ನಂತೆಯೇ ಕಾರ್ಯನಿರ್ವಹಿಸಲಿದ್ದರೂ ವಾಹನವು ಓವರ್ ಟೆಕ್ ಮಾಡಿದಲ್ಲಿ ಚಾರ್ಜಿಂಗ್ ನಿಲ್ಲಲಿದೆಯಂತೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಈ ಯೋಜನೆಯನ್ನು ಇರೋಡ್‍ಏರ್‌ಲ್ಯಾಂಡ್ ತಂಡವೇ ನಿರ್ಮಿಸಿದ್ದು, ಈ ಬಗ್ಗ ಮುಖ್ಯ ಕಾರ್ಯ ನಿರ್ವಾಹಕ ಹ್ಯಾನ್ಸ್ ಸಾಲ್ ಮಾತನಾಡಿದ್ದಾರೆ. ಈ ಆವಿಷ್ಕಾರವು ವಿದ್ಯುತ್ ವಾಹನಗಳನ್ನು ಪ್ರೋತ್ಸಾಹಿಸುವುದರ ಜೊತೆ ಜೊತೆಗೆ ವಾಹನ ಮಾಲೀಕರ ವೆಚ್ಚವನ್ನು ಕಡಿತಗೊಳಿಸಲು ಸಹಾಯ ಮಾಡಲಿದೆ ಎಂದಿದ್ದಾರೆ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಜೊತೆಗೆ ಚಾರ್ಜಿಂಗ್ ಟ್ರ್ಯಾಕ್ ಮೇಲ್ಮೈನಲ್ಲಿ ಯಾವುದೇ ವಿದ್ಯುತ್ ಇಲ್ಲದಿದ್ದರೂ ಗೋಡೆಯ ಮೇಲಿನ ಔಟ್‍‍ಲೆಟ್‍‍ನಂತೆಯೇ ಕಾರ್ಯನಿರ್ವಹಿಸುವ ಎರಡು ಟ್ರ್ಯಾಕ್‍‍ಗಳನ್ನು ಅಳವಡಿಸಲಾಗಿದ್ದು, ರಸ್ಥೆಗಿಂತ ಐದರಿಂದ ಆರು ಇಂಚಿನಷ್ಟು ಕೆಳಗೆ ವಿದ್ಯುತ್ ಹರಿಯಲಿದೆ. ಹೀಗಾಗಿ ಈ ರಸ್ತೆಗಳ ಮೇಲೆ ಬರಿಗಾಲಿನಲ್ಲಿಯೂ ಕೂಡಾ ನಡೆದಾಡಬಹುದಾಗಿದ್ದು, ಸ್ಥಳೀಯರಿಗೆ ಯಾವುದೇ ತೊಂದರೆ ಕೂಡಾ ಆಗುವುದಿಲ್ಲ.

ಸ್ವಿಡನ್‍‍ನಲ್ಲಿ ಪ್ರಪಂಚದ ಮೊದಲ ಎಲೆಕ್ಟ್ರಿಕ್ ಚಾರ್ಜಿಂಗ್ ರಸ್ತೆ..!!

ಒಟ್ಟಿನಲ್ಲಿ ಸುಧಾರಿತ ಮಾದರಿಯ ಈ ಯೋಜನೆಯು ತುಸು ದುಬಾರಿಯಾಗಿದ್ದು, ಎಲೆಕ್ಟ್ರಿಕ್ ಚಾರ್ಜಿಂಗ್ ಮಾರ್ಗದ ನಿರ್ಮಿಸಲು ಪ್ರತಿ ಕಿ.ಮೀ ಗೆ ಒಂದು ಮಿಲಿಯನ್ ಯುರೋ ಹಣ ಖರ್ಚಾಗಲಿದೆಯಂತೆ. ಆದರೂ ಭವಿಷ್ಯ ದ ದೃಷ್ಠಿಯಿಂದ ಈ ಯೋಜನೆ ಮತ್ತಷ್ಟು ಜನಪ್ರಿಯತೆ ಪಡೆಯಬಹುದಾದ ಸಾಧ್ಯತೆಗಳಿವೆ.

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ಜೀವರಕ್ಷಕ ಏರ್ ಬ್ಯಾಗ್ ಕಾರ್ಯನಿರ್ವಹಿಸುವ ವಿಧಾನ ಹೇಗೆ?

ಇಲ್ಲಿ ಇದ್ದವರಿಗೆ ಒಂದು ಕಾನೂನು.. ಇಲ್ಲದವರಿಗೆ ಇನ್ನೊಂದು ಕಾನೂನು..

ನಟ ಹೃತಿಕ್ ರೋಷನ್‍ ಖರೀದಿ ಮಾಡಿದ ಹೊಸ ಐಷಾರಾಮಿ ಕಾರು ಯಾವುದು ಗೊತ್ತಾ?

ನಾಪತ್ತೆಯಾಗಿದ್ದ ಕಾರು ಸ್ವಿಮ್ಮಿಂಗ್ ಪೂಲ್‌ನಲ್ಲಿ ಪತ್ತೆಯಾಯ್ತು..!!

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

English summary
World’s First Electric Car Charging-Road Opens In Sweden.
Story first published: Monday, April 16, 2018, 11:08 [IST]

Latest Photos

ತಕ್ಷಣದ ಆಟೊ ಸುದ್ದಿಗಳನ್ನು ಡ್ರೈವ್ಸ್ಪಾರ್ಕ್ನಲ್ಲಿ ಪಡೆದುಕೊಳ್ಳಿ- Kannada DriveSpark