ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಪ್ಯಾಸೆಂಜರ್ ವಾಹನಗಳ ಮಾರಾಟದಲ್ಲಿ ಅಧಿಕವಾಗಿ ಜನಪ್ರಿಯತೆಯನ್ನು ಪಡೆದುಕೊಂಡಿರುವ ಮಾರುತಿ ಸುಜುಕಿ ಸಂಸ್ಥೆಯು ಇದೇ ಜನವರಿ 23ರಂದು ತಮ್ಮ ಹೊಸ ವ್ಯಾಗನ್ ಆರ್ ಕಾರನ್ನು ಬಿಡಗಡೆಗೊಳಿಸಲಿದೆ. ಈ ಬಾರಿ ಹೊಸ ವ್ಯಾಗನಾರ್ ಕಾರು ಹೊಸ ವಿನ್ಯಾಸ ಮತ್ತು ಹಲವು ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರಲಿದ್ದು, ಇದೀಗ ಈ ಕಾರಿನ ಕುರಿತಾದ ಬ್ರೋಷರ್ ಬಹಿರಂಗಗೊಂಡಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಪೆಟ್ರೋಲ್, ಸಿಎನ್‍ಜಿ ಮತ್ತು ಎಲ್‍ಪಿಜಿ ಮಾದರಿಯಲ್ಲಿ ಬಿಡುಗಡೆಯಾಗಲಿರುವ ಹೊಸ ವ್ಯಾಗನ್ ಆರ್ ಕಾರು ಈಗಾಗಲೆ ಹಲವಾರು ಬಾರಿ ಸ್ಪಾಟ್ ಟೆಸ್ಟಿಂಗ್ ವೇಳೆ ಕಾಣಿಸಿಕೊಂಡಿದ್ದು, ಹೊಸ ತಲೆಮಾರಿನ ಹ್ಯುಂಡೈ ಸ್ಯಾಂಟ್ರೋ ಕಾರಿಗೆ ಟಕ್ಕರ್ ನೀಡಲು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ. ಹಾಗಾದರೆ ಇಂದಿನ ಲೇಖನದಲ್ಲಿ ಹೊಸ ವ್ಯಾಗನ್ ಆರ್ ಕಾರಿನ ಬಗ್ಗೆ ಹೆಚ್ಚು ಮಾಹಿತಿಯನ್ನು ತಿಳಿಯಿರಿ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಹೊಸ ಕಾರಿನ ವಿನ್ಯಾಸ

ಈಗಾಗಲೆ ಹೊಸ ವ್ಯಾಗನ್ ಆರ್ ಕಾರು ಜಪಾನ್ ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಭಾರತೀಯ ಮಾರುಕಟ್ಟೆಗೆ ಲಗಗ್ಗೆಯಿಡಿವ ಕಾರು ಈ ಬಾರಿ ಉದ್ದನೆಯ ಆಕಾರವನ್ನು ಪಡೆದುಕೊಂಡಿದ್ದು, ಅಗಲವಾದ ಹೆಡ್‍ಲ್ಯಾಂಪ್, ಹೊಸ ಬಂಪರ್, ಫಾಗ್‍ಲೈಟ್, ಮುಂಭಾಗದಲ್ಲಿ ರೆಕ್ಟಾಂಗ್ಯುಲರ್ ಗ್ರಿಲ್, ಆಕರ್ಷಕವಾಗಿ ಕಾಣಲು ಕ್ರೋಮ್ ಸ್ಟ್ರಿಪ್ ಅನ್ನು ಒದಗಿಸಲಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಕಾರಿನ ಹಿಂಭಾಗದಲ್ಲಿ ಸಾಧಾರಣವಾದ ಬಂಪರ್, ಎಕ್ಸ್-ಮಾಸ್ ಟ್ರೀ ಆಕಾರದಲ್ಲಿರುವ ಟೈಲ್‍ಲೈಟ್ಸ್, ನಂಬರ್ ಪ್ಲೇಟ್ ನೀಡುವ ಜಾಗದಲ್ಲಿ ಕೂಡಾ ಕ್ರೋಮ್ ಅನ್ನು ಬಳಸಲಾಗಿದ್ದು, ಒಳಭಾಗದಲ್ಲಿ ಡ್ರೈವರ್‍‍ಗೆ ಸೈಡ್ ಏರ್‍‍ಬ್ಯಾಗ್ಸ್ ಮತ್ತು ರಿಯರ್ ಪಾರ್ಕಿಂಗ್ ವಿಂಡೋಗಳನ್ನು ನೀಡಲಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಸ್ಪೈ ಚಿತ್ರಗಳಲ್ಲಿ ಗಮನಿಸುವುದಾದರೆ ಕಾರಿನ ಒಳಭಾಗದಲ್ಲಿ ಡ್ಯುಯಲ್ ಟೊನ್ ಬಣ್ಣ ಮತ್ತು ಕಂದು ಬಣ್ಣದಿಂದ ಸಜ್ಜುಗೊಳಿಸಲಾಗಿದ್ದು, ಇನ್ಸ್ಟ್ರೂಮೆಂಟ್ ಕ್ಲಸ್ಟರ್ ಅನ್ನು ಕೂಡ ಹೊಸದಾಗಿ ನೀಡಲಾಗಿದೆ. ಕಾರಿನ ಟಾಪ್ ಎಂಡ್ ವೇರಿಯಂಟ್ ಸ್ಮಾರ್ಟ್‍‍ಪ್ಲೇ ಟಚ್‍‍ಸ್ಕ್ರೀನ್ ಇನ್ಫೋಟೈನ್ಮೆಂಟ್ ಸಿಸ್ಟಂ, 12 ವೋಲ್ಟ್ಸ್ ಫೋನ್ ಚಾರ್ಜಿಂಗ್ ಸಾಕೆಟ್, ಎಲೆಕ್ಟ್ರಿಕ್ ಒಆರ್‍‍‍ವಿಎಂ, ಪವರ್ ವಿಂಡೋಸ್ ಮತ್ತು ಹಲವಾರು ಕಂಟ್ರೋಲ್ ಬಟನ್‍‍ಗಳನ್ನು ಪಡೆದ ಸ್ಟೀರಿಂಗ್ ವ್ಹೀಲ್ ಅನ್ನು ನೀಡಲಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಕಾರಿನ ಸುತ್ತಳತೆ

ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು 3655ಎಂಎಂ ಉದ್ದ, 1620ಎಂಎಂ ಅಗಲ, 1675ಎಂಎಂ ಎತ್ತರ, 2435ಎಂಎಂ ವ್ಹೀಲ್‍‍ಬೇಸ್ ಮತ್ತು 4.7 ಮೀಟರ್‍‍ನ ಟರ್ನ್ ರೇಡಿಯಸ್ ಅನ್ನು ಪಡೆದುಕೊಂಡಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ವೇರಿಯಂಟ್‍‍ಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಹ್ಯಾಚ್‍‍ಬ್ಯಾಕ್ ಕಾರು ಎಲ್ಎಕ್ಸ್ಐ, ವಿಎಕ್ಸ್ಐ ಮತ್ತು ಜೆಡ್ಎಕ್ಸ್ಐ ಎಂಬ ಮೂರು ಸಾಧಾರಣ ವೇರಿಯಂಟ್ ಮತ್ತು ಆಟೋಮ್ಯಾಟಿಕ್ ಗೇರ್‍‍ಬಾಕ್ಸ್ ಆಯ್ಕೆಯಲ್ಲಿ ವಿಎಕ್ಸ್ಐ ಹಾಗು ಜೆಡ್ಎಕ್ಸ್ಐ ಎಂಬ ವೇರಿಯಂಟ್‍‍ಗಳಲ್ಲಿ ಖರೀದಿಗೆ ಲಭ್ಯವಿರಲಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಎಂಜಿನ್ ಸಾಮರ್ಥ್ಯ

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರು ಈ ಬಾರಿ 1.0 ಲೀಟರ್ ಮತ್ತು 1.2 ಲೀಟರ್ ಪೆಟ್ರೋಲ್ ಎರಡು ಎಂಜಿನ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರಲಿದ್ದು, ಎಂಜಿನ್ ಅನ್ನು ಮ್ಯಾನುವಲ್ ಅಥವಾ ಆತೋಮ್ಯಾಟಿಕ್ ಗೇರ್‍‍‍ಬಾಕ್ಸ್ ಆಯ್ಕೆಗಳಲ್ಲಿ ದೊರೆಯಲಿದೆ. ಇದಲ್ಲದೇ ಸಿಎನ್‍ಜಿ ಮತ್ತು ಎಲ್‍ಪಿಜಿ ಆಯ್ಕೆಯಲ್ಲಿ ಕೂಡಾ ಬಿಡುಗಡೆಯಾಗಲಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಮಿಡ್ ಮತ್ತು ಟಾಪ್ ಎಂಡ್ ವೇರಿಯಂಟ್‍‍ಗಳು 1.2 ಲೀಟರ್ ಎಂಜಿನ್‍ ಅನ್ನು ಪಡೆಯಲಿದ್ದು, ಇದನ್ನು ಸ್ವಿಫ್ಟ್ ಕಾರಿನಿಂದ ಪಡೆಯಲಾಗಿದೆ. 1.0 ಲೀಟರ್ ಪೆಟ್ರೋಲ್ ಎಂಜಿನ್ 63ಬಿಹೆಚ್‍ಪಿ ಮತ್ತು 90ಎನ್ಎಂ ಟಾರ್ಕ್ ಉತ್ಪಾದಿಸಿದ್ದಲ್ಲಿ ಇನ್ನು 1.2 ಲೀಟರ್ ಪೆಟ್ರೋಲ್ ಎಂಜಿನ್ 83ಬಿಹೆಚ್‍ಪಿ ಮತ್ತು 113ಎನ್ಎಮ್ ಟಾರ್ಕ್ ಅನ್ನು ಉತ್ಪಾದಿಸುವ ಶಕ್ತಿಯನ್ನು ಪಡೆದುಕೊಂಡಿರಲಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಸುರಕ್ಷಾ ವೈಶಿಷ್ಟ್ಯತೆಗಳು

ಅಷ್ಟೆ ಅಲ್ಲದೋ ಕೀ ಲೆಸ್ ಎಂಟ್ರಿ, ಟಿಲ್ಟ್ ಟೆಲಿಸ್ಕೋಪಿಕ್ ಅಡೆಸ್ಟೆಬಲ್ ಸ್ಟೀರಿಂಗ್ ವ್ಹೀಲ್, ಆಟೋಮ್ಯಾಟಿಕ್ ಕಂಟ್ರೋಲ್ ಮತ್ತು ಕ್ಯಾಮೆರಾದೊಂದಿಗೆ ಪಾರ್ಕಿಂಗ್ ಸೆನ್ಸಾರ್‍‍ಗಳನ್ನು ಪಡೆದುಕೊಳ್ಳಲಿದ್ದು, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಏರ್‍‍ಬ್ಯಾಗ್ಸ್, ಎಬಿಎಸ್, ಇಬಿಡಿ ಮತ್ತು ಐಎಸ್ಒಫಿಕ್ಸ್ ಚೈಲ್ಡ್ ಸೀಟ್ ಮೌಂಟ್‍‍ಗಳನ್ನು ನೀಡಲಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಲಭ್ಯವಿರುವ ಬಣ್ಣಗಳು

ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರುಗಳನ್ನು ಗ್ರಾಹಕರು ಈ ಬಾರಿ ವೈಟ್, ಸಿಲ್ವರ್, ಆರೆಂಜ್, ಬ್ರೌನ್, ಗ್ರೇ ಮತ್ತು ನೀಲಿ ಎಂಬ ಆರು ಬಣ್ಣಗಳ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಮೈಲೇಜ್

ಹೊಸ ವ್ಯಾಗನ್ ಆರ್ ಕಾರು ಪ್ರತಿ ಲೀಟರ್‍ ಪೆಟ್ರೋಲ್‌ಗೆ ನಗರ ಪ್ರದೇಶದಲ್ಲಿ 16 ರಿಂದ 18 ಕಿಲೋಮೀಟರ್ ಮತ್ತು ಹೆದ್ದಾರಿಗಳಲ್ಲಿ 22 ಕಿಲೋಮೀಟರ್ ಮೈಲೇಜ್ ಅನ್ನು ನೀಡಲಿದೆ ಎಂದು ಹೇಳಲಾಗಿದೆ.

ಜ.23ರಂದು ಬಿಡುಗಡೆಯಾಗಲಿರುವ ಹೊಸ ಮಾರುತಿ ಸುಜುಕಿ ವ್ಯಾಗನ್ ಆರ್ ಕಾರಿನ ಬಗ್ಗೆ ಫುಲ್ ಡೀಟೆಲ್ಸ್..

ಕಾರಿನ ಬೆಲೆ ಮತ್ತು ಬಿಡುಗಡೆ

ಮಾಹಿತಿಗಳ ಪ್ರಕಾರ ನೆಕ್ಸ್ಟ್ ಜನರೇಷನ್ ವ್ಯಾಗನ್ ಆರ್ ಕಾರು ಇದೇ ತಿಂಗಳು 23ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗಿದ್ದು, ಹಳೆಯ ವರ್ಷನ್ ಕಾರಿಗಳಿಂತ ಹೊಸ ಕಾರಿನ ಬೆಲೆಯು ರೂ.1.50 ಲಕ್ಷದಿಂದ ರೂ.2 ಲಕ್ಷ ಹೆಚ್ಚುವರಿ ಬೆಲೆ ಪಡೆದುಕೊಳ್ಳುವುದು ಖಚಿತವಾಗಿದೆ. ಒಟ್ಟಿನಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆಗೆ ಅನುಗುಣವಾಗಿ ವಿಶೇಷ ವಿನ್ಯಾಸದೊಂದಿಗೆ ಸುಧಾರಿತ ಮಾದರಿಯ ಸೌಲಭ್ಯಗಳನ್ನು ಹೊತ್ತುಬಂದಿರುವ ವ್ಯಾಗನ್ ಆರ್ ಕಾರು ಹ್ಯುಂಡೈ ನ್ಯೂ ಸ್ಯಾಂಟ್ರೋ ಕಾರಿಗೆ ತೀವ್ರ ಪೈಪೋಟಿ ನೀಡಲಿದೆ.

Source: Team BHP

Most Read Articles

Kannada
English summary
2019 Maruti WagonR brochure. Read In Kannada
Story first published: Friday, January 4, 2019, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X