ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಸ್ಕೋಡಾ ಇಂಡಿಯಾ ತನ್ನ 2020ರ ರ‍್ಯಾಪಿಡ್ ಕಾರಿನ ಟೀಸರ್ ಅನ್ನು ಬಿಡುಗಡೆಗೊಳಿಸಿದೆ. 2020ರ ರ‍್ಯಾಪಿಡ್ ಕಾರ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಬಿಡುಗಡೆಗೊಳಿಸಲಾಗುವುದು. ಸ್ಕೋಡಾ ಕಂಪನಿಯು ಮೊದಲ ಬಾರಿಗೆ 2011ರಲ್ಲಿ ರ‍್ಯಾಪಿಡ್ ಕಾರ್ ಅನ್ನು ಬಿಡುಗಡೆಗೊಳಿಸಿತ್ತು.

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಇದೀಗ ಎರಡನೇ ತಲೆಮಾರಿನ ಫ್ಯಾಬಿಯಾದಂತೆಯೇ ಸ್ಟೈಲಿಂಗ್ ಹೊಂದಿದ್ದರೂ, ಹೊಸ ರ‍್ಯಾಪಿಡ್ ಕಾರು ಫೋಕ್ಸ್ ವ್ಯಾಗನ್ ವೆಂಟೊ ಕಾರಿನಂತಿರಲಿದೆ. ಈ ಹೊಸ ಕಾರು ಫೋಕ್ಸ್ ವ್ಯಾಗನ್ ಗ್ರೂಪ್‍‍ನ ಪಿಕ್ಯೂ25 ಪ್ಲಾಟ್‍‍ಫಾರಂ ಅನ್ನು ಆಧರಿಸಿದೆ.

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ರ‍್ಯಾಪಿಡ್ ಕಾರ್ ಅನ್ನು ಸಣ್ಣ ಮಟ್ಟದಲ್ಲಿ ನವೀಕರಿಸಲಾಗಿದ್ದು, ಆದರೆ ಹೆಚ್ಚಿನ ಬದಲಾವಣೆಗಳನ್ನು ಮಾಡಲಾಗಿಲ್ಲ. ರ‍್ಯಾಪಿಡ್ ಕಾರು ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್, ಹ್ಯುಂಡೈ ವರ್ನಾ, ಟೊಯೊಟಾ ಯಾರಿಸ್ ಮತ್ತು ಫೋಕ್ಸ್‌ವ್ಯಾಗನ್ ವೆಂಟೊ ಕಾರುಗಳಿಗೆ ಪೈಪೋಟಿಯನ್ನು ನೀಡುತ್ತದೆ.

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಇತ್ತೀಚಿನ ವರ್ಷಗಳಲ್ಲಿ ಸ್ಕೋಡಾ ಕಾರುಗಳ ಜನಪ್ರಿಯತೆಯು ಕಡಿಮೆಯಾಗುತ್ತಿದೆ. ಸ್ಕೋಡಾ ಕಳೆದ ಮೂರು ವರ್ಷಗಳಿಂದ ಎಸ್‍ಯುವಿ ಬಿಡುಗಡೆಗೊಳಿಸುವುದರ ಬಗ್ಗೆ ಹೆಚ್ಚು ಗಮನಹರಿಸಿದೆ. ಯುರೋಪಿನಲ್ಲಿ ಸ್ಕೋಡಾ ಎಸ್‍‍ಯುವಿಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿದೆ.

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಯುರೋಪಿನ ಮಾರುಕಟ್ಟೆಯಲ್ಲಿ ಸ್ಕೋಡಾ ಆಕ್ಟೀವಿಯಾ ಮತ್ತು ಸುಪರ್ಬ್ ಎಸ್‍ಯುವಿಗಳು ಉತ್ತಮವಾಗಿ ಮಾರಾಟವಾಗುತ್ತಿದೆ. ಟೀಸರ್‍‍ನಲ್ಲಿ ಕಂಡುಬಂದ ರೀತಿಯಲ್ಲಿ 2020ರ ಸ್ಕೋಡಾ ರ‍್ಯಾಪಿಡ್‍ ಕಾರು ತನ್ನ ಕಂಪನಿಯ ಸರಣಿಯಲ್ಲಿರುವ ಆಕ್ಟೀವಿಯಾ ಕಾರಿನ ಮಾದರಿಯಲ್ಲಿದೆ.

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಹೊಸ ಸ್ಕೋಡಾ ರ‍್ಯಾಪಿಡ್ ಪ್ರೀಮಿಯಂ ಲುಕ್ ಅನ್ನು ಹೊಂದಲಿದೆ. ಎರಡನೇ ತಲೆಮಾರಿನ ರ‍್ಯಾಪಿಡ್ ಕಾರಿನಲ್ಲಿ ಸಿಲೂಯೆಟ್ ಒಂದೇ ಆಗಿರುತ್ತದೆ. ಆದರೆ ಸ್ಪ್ಲಿಟ್ ಹೆಡ್‍‍ಲ್ಯಾಂಪ್ ಕ್ಲಸ್ಟರ್ ಅನ್ನು ಹೊಂದಿರಲಿದೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಮರುವಿನ್ಯಾಸಗೊಳಿಸಲಾದ ಮುಂಭಾಗದ ಬಂಪರ್ ಹೊಸದಾಗಿ ವಿನ್ಯಾಸಗೊಳಿಸಲಾದ ಮಲ್ಟಿ-ಸ್ಪೋಕ್ ಅಲಾಯ್ ವ್ಹೀಲ್‍‍ಗಳ ಜೊತೆಗೆ ಫಾಗ್ ಲ್ಯಾಂಪ್‍ಗಳನ್ನು ಹೊಂದಿರಲಿದೆ. ಈ ಕಾರು ಸಿ-ಆಕಾರದ ಟೇಲ್ ಲ್ಯಾಂಪ್‍ ಮತ್ತು ನವೀಕರಿಸಿದ ಬಂಪರ್‍‍ನೊಂದಿಗೆ ಬೂಮರಾಂಗ್ ಶೈಲಿಯ ಎಲ್‍ಇಡಿ ಟೇಲ್ ಲ್ಯಾಂಪ್‍‍ಗಳನ್ನು ಹೊಂದಿದೆ.

MOST READ: ಬೈಕ್ ಚಲಾಯಿಸಿದ್ದು ಮಗ, ದಂಡ ಬಿದ್ದಿದ್ದು ಅಪ್ಪನಿಗೆ..!

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಇಂಟಿರಿಯರ್‍‍ನಲ್ಲಿ ಮಾಡಿದ ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲ. ಈ ಹೊಸ ಕಾರಿನಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್, ಎಬಿಎಸ್ ಜೊತೆ ಇಬಿಡಿ, ರೇರ್ ಪಾರ್ಕಿಂಗ್ ಸೆನ್ಸಾರ್, ಆ್ಯಂಟಿ-ಗ್ಲೆರ್ ವ್ಯೂ‍‍ಮಿರರ್ ಗಳನ್ನು ಅಳವಡಿಸಿರುವ ಸಾಧ್ಯತೆಗಳಿದೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಬಿಡುಗಡೆಯಾಯ್ತು ಸ್ಕೋಡಾ ರ‍್ಯಾಪಿಡ್ ಕಾರಿನ ಟೀಸರ್

ಸ್ಕೋಡಾ ಮುಂದಿನ ವರ್ಷದಲ್ಲಿ ಹೆಚ್ಚಿನ ಸ್ಥಳೀಕರಣದೊಂದಿಗೆ ಎಂಕ್ಯೂಬಿ ಎಒ ಐಎನ್ ಆಧರಿಸಿ ಹೊಚ್ಚ ಹೊಸ ರ‍್ಯಾಪಿಡ್ ಅನ್ನು ಬಿಡುಗಡೆಗೊಳಿಸುವ ನಿರೀಕ್ಷೆಯಿದೆ. ರ‍್ಯಾಪಿಡ್ ಕಾರು ಸಣ್ಣ ಮಟ್ಟದ ನವೀಕರಣಗಳೊಂದಿಗೆ ಬಿಡುಗಡೆಯಾಗಲಿದೆ. ಇದಲ್ಲದೇ ಸ್ಕೋಡಾ ಕಂಪನಿಯು ಮುಂದಿನ ವರ್ಷ ಭಾರತದಲ್ಲಿ ಆರು ಮಾದರಿಗಳನ್ನು ಬಿಡುಗಡೆಗೊಳಿಸಲಿದೆ.

Most Read Articles

Kannada
Read more on ಸ್ಕೋಡಾ skoda
English summary
India-Bound 2020 Skoda Rapid Teased Ahead Of Launch - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X